ರಚಿತಾ ರಾಮ್ ಈಗ ಕನ್ನಡದ ನಂಬರ್ ನಟಿ, ಗುಳಿಕೆನ್ನೆ ಚೆಲುವೆಯಾದ ಈಕೆಯನ್ನು ನೋಡಿ ಮೆಚ್ಚದವರೇ ಇಲ್ಲ. ಸದ್ಯಕ್ಕೆ ಕನ್ನಡದ ಬಹುಬೇಡಿಕೆ ನಟಿ ಆಗಿರುವ ಇವರು ಭರತನಾಟ್ಯ ಹಾಗೂ ಕಥಕ್ ಪ್ರವೀಣೆಯೂ ಹೌದು. ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್ ಆಗಿತ್ತು. ಈಗಾಗಲೇ ಕನ್ನಡದಲ್ಲಿ ಮತ್ತೊಬ್ಬ ನಟಿ ಬಿಂದಿಯಾ ಎನ್ನುವ ಹೆಸರಿನವರು ಇದ್ದದ್ದರಿಂದ ಇವರ ಹೆಸರನ್ನು ಸಿನಿಮಾಗಾಗಿ ರಚಿತಾ ರಾಮ್ ಎಂದು ಬದಲಾಯಿಸಲಾಯಿತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಈಗ ಇಲ್ಲೇ ನೆಲೆ ಕಂಡುಕೊಂಡಿರುವ ರಚಿತಾ ರಾಮ್ ಅವರು ಮೂಲತಃ ಮಧ್ಯಪ್ರದೇಶದ ಭೂಪಾಲ್ ಕಡೆಯವರು. ಇವರ ತಂದೆ ಕೂಡ ಖ್ಯಾತ ಭರತನಾಟ್ಯ ಕಲಾವಿದ, ತಂದೆಯಿಂದಲೇ ರಚಿತಾ ರಾಮ್ ಅವರು ಕೂಡ ನೃತ್ಯದ ಕಡೆ ಆಕರ್ಷಿತರಾದರು. ರಚಿತಾ ರಾಮ್ ಅವರಿಗೆ ನಿತ್ಯ ರಾಮ್ ಎನ್ನುವ ಹೆಸರಿನ ಸಹೋದರಿ ಕೂಡ ಇದ್ದಾರೆ ಇವರು ಕೂಡ ಕಲಾವಿದೆಯೇ.
ರಚಿತಾ ರಾಮ್ ಅವರ ಸಹೋದರಿ ನಿತ್ಯ ರಾಮ್ ಅವರು ಕನ್ನಡ ಕಿರುತೆರೆ ಜನರಿಗೆ ಬಹು ಪರಿಚಿತರು ಯಾಕೆಂದರೆ ಇವರು ಸಿನಿಮಾಗಳಿಗಿಂತ ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು ಎನ್ನುವ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಇವರು ನಂತರ ರಮೇಶ್ ಅರವಿಂದ್ ಅವರ ನಿರ್ಮಾಣದ ನಂದಿನಿ ಎನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಹೋದರಿಯ ಬೆಂಕಿಯಲ್ಲಿ ಅರಳಿದ ಹೂವು ಎನ್ನುವ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಚಿತಾರಾಮ್ ಅವರು ನಂತರ ಜೀ ಕನ್ನಡ ವಾಹಿನಿಯಲ್ಲಿ ಅರಸಿ ಎನ್ನುವ ಧಾರಾವಾಹಿಗೆ ನೆಗೆಟಿವ್ ರೋಲ್ ಗೆ ಸೆಲೆಕ್ಟ್ ಆದರು. ನಂತರ ಅವರ ಬದುಕಿನ ದಿಕ್ಕು ಮತ್ತೊಂದು ರೀತಿಯಲ್ಲಿ ತೆರೆದುಕೊಂಡಿತು ಎಂದು ಹೇಳಬಹುದು.
ರಚಿತಾ ರಾಮ್ ಅವರು ಮೊದಲಿಗೆ ದರ್ಶನ್ ಅವರ ರಿಮೇಕ್ ಸಿನಿಮಾವಾದ ಬುಲ್ ಬುಲ್ ಸಿನಿಮಾದಲ್ಲಿ 2013ರಲ್ಲಿ ನಾಯಕ ನಟಿಯಾಗಿ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ದಿನಕರ್ ತೂಗುದೀಪ್ ಅವರು ನಿರ್ದೇಶಕರಾಗಿ ತೂಗುದೀಪ್ ಪ್ರೊಡಕ್ಷನ್ ಇಂದ ಮೂಡಿ ಬಂದ ಈ ಸಿನಿಮಾ ಗಾಗಿ ಇನ್ನೂರು ನಾಯಕಿಯರಿಗಿಂತ ಹೆಚ್ಚಾಗಿ ಜನರನ್ನು ಆಡಿಷನ್ ಮಾಡಲಾಗಿತ್ತು. ಆದರೆ ಈ ಅದೃಷ್ಟ ಒಲಿದಿದ್ದು ರಚಿತಾ ರಾಮ್ ಅವರಿಗೆ. ನಂತರ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ಸಿನಿಮಾಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿರುವ ಇವರು ಸುದೀಪ್ ಅವರೊಂದಿಗೆ ರನ್ನ, ದರ್ಶನ್ ಅವರೊಂದಿಗೆ ಅಂಬರೀಶ ಮತ್ತು ಬುಲ್ ಬುಲ್, ಗಣೇಶ್ ಅವರೊಂದಿಗೆ ದಿಲ್ ರಂಗೀಲಾ ,ಉಪೇಂದ್ರ ಅವರ ಜೊತೆ ಐ ಲವ್, ಶ್ರೀ ಮುರಳಿ ಅವರ ಜೊತೆ ರಥಾವರ, ಧ್ರುವ ಸರ್ಜಾ ಅವರೊಡನೆ ಭರ್ಜರಿ, ಪುನೀತ್ ರಾಜಕುಮಾರ್ ಅವರೊಂದಿಗೆ ನಟಸಾರ್ವಭೌಮ ಮತ್ತು ಚಕ್ರವ್ಯೂಹ ಶಿವರಾಜ್ ಕುಮಾರ್ ಅವರ ಜೊತೆ ಆಯುಷ್ಮಾನುಭವ ಹಾಗೂ ರುಸ್ತುಮ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಲ್ಲದೆ ಕಿರುತೆರೆಯ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕೂಡ ಭಾಗವಹಿಸಿದ್ದಾರೆ ಈಗಲೂ ಕೂಡ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಎನ್ನುವ ರಿಯಾಲಿಟಿ ಶೋಗೆ ಇವರು ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಹೊಸ ಹೊಸ ಕಂಟೆಂಟ್ ಇಂದ ಜನರಿಗೆ ಮನೋರಂಜನೆ ನೀಡುತ್ತಿರುತ್ತಾರೆ. ಈಗ ಸದ್ಯಕ್ಕೆ ಅವರ ಖಾತೆಯಿಂದ ಅವರು ಮಿನಿ ಬ್ಲಾಕ್ ಸ್ಕರ್ಟ್ ಹಾಗೂ ಕೂಲಿಂಗ್ ಗ್ಲಾಸ್ ಕವರ್ ಟೋಪಿ ಧರಿಸಿ ಅರೇಬಿಕ್ ಶೈಲಿಯ ಮ್ಯೂಸಿಕ್ ಒಂದಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಎಲ್ಲರೂ ಇದನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ಈ ವಿಡಿಯೋ ನೋಡಿದರೆ ನಿಮಗೆನನಿಸುತ್ತದೆ.? ತಪ್ಪದೆ ಕಾಮೆಂಟ್ ಮಾಡಿ.