ಸಾಮಾನ್ಯವಾಗಿ ಕಲಾವಿದರುಗಳು ತಮ್ಮ ಜೊತೆ ಸಿನಿಮಾಗಳಲ್ಲಿ ಜೋಡಿ ಆಗಿ ನಟಿಸುವವರನ್ನು ವಿವಾಹವಾಗುವುದು ಸರ್ವೆ ಸಾಮಾನ್ಯ. ಬಾಲಿವುಡ್ ಅಲ್ಲಿ ಈ ರೀತಿ ಜೋಡಿಗಳು ಹೆಚ್ಚು ಫೇಮಸ್ ಆದರೂ ಬೇರೆ ಇಂಡಸ್ಟ್ರಿಯಲ್ಲಿ ಏನು ಕಡಿಮೆ ಇಲ್ಲ. ಕನ್ನಡ ತಮಿಳು ತೆಲುಗು ಹೀಗೆ ಎಲ್ಲಾ ಭಾಷೆಗಳನ್ನು ಕೂಡ ಈ ರೀತಿ ತೆರೆ ಮೇಲಿನ ಜೋಡಿ ನಿಜವಾದ ಜೀವನದಲ್ಲೂ ಜೋಡಿ ಆಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ನಮ್ಮ ಕನ್ನಡದಲ್ಲೂ ಸಹ ಅನಂತ್ ನಾಗ್ ಮತ್ತು ಗಾಯತ್ರಿ ಅವರ ಜೋಡಿ, ಅಂಬರೀಷ್ ಮತ್ತು ಸುಮಲತಾ ಅವರ ಜೋಡಿ ಮಹೇಂದರ್ ಮತ್ತು ಶ್ರುತಿ ಅವರ ಜೋಡಿ ಹಾಗೂ ಇತ್ತೀಚೆಗೆ ಮಿಲನ ಕೃಷ್ಣ ಮತ್ತು ಡಾರ್ಲಿಂಗ್ ಕೃಷ್ಣ ಅವರ ಜೋಡಿ ಹಾಗೂ ಚಂದನ್ ಶೆಟ್ಟಿ ಮತ್ತು ನಿವೇದಿತ ಜೋಡಿ ಹೀಗೆ ಹಲವಾರು ಜೋಡಿಗಳು ತೆರೆ ಮೇಲೆ ಜೋಡಿಯಾಗಿ ಮೋಡಿ ಮಾಡಿರುವುದರ ಜೊತೆಗೆ ನಿಜ ಜೀವನದಲ್ಲೂ ಸಹ ಜೋಡಿಯಾಗಿದ್ದಾರೆ.
ಈ ಪಟ್ಟಿಯಲ್ಲಿ ಸೇರುವ ಮತ್ತೊಂದು ಜೋಡಿ ರಾಧಿಕಾ ಪಂಡಿತ್ ಮತ್ತು ಯಶ್. ಸದ್ಯಕ್ಕೆ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚಿನ ಮಟ್ಟದ ಹೆಸರುವಾಸಿಯಲ್ಲಿರುವ ನಟ ಎಂದರೆ ರಾಕಿಂಗ್ ಸ್ಟಾರ್ ಯಶ್ ಅವರು. ಅವರ ಜೊತೆ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ ಎನ್ನಬಹುದು. ರಾಧಿಕಾ ಪಂಡಿತ್ ಮತ್ತು ಯಶ್ ಅವರು ಮೊದಲು ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಒಂದೇ ತಂಡದಲ್ಲಿ ಇದ್ದರು ಆದರೂ ಕೂಡ ಆ ದಿನಗಳಲ್ಲಿ ಅವರಿಬ್ಬರಿಗೂ ಹೆಚ್ಚಿನ ಪರಿಚಯವಿರಲಿಲ್ಲ ನಂತರ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದದ್ದರಿಂದ ಇಬ್ಬರ ನಡುವೆ ಸ್ನೇಹವಾಯಿತು. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಆದ ಸ್ನೇಹ ಡ್ರಾಮಾ ಸಿನಿಮಾ ಶೂಟಿಂಗ್ ವೇಳೆಗೆ ಪ್ರೀತಿಗಾಗಿ ಬದಲಾಗಿತ್ತು ನಂತರ ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಈ ಸಿನಿಮಾಗಳಲ್ಲೂ ಕೂಡ ಇವರಿಬ್ಬರು ಜೋಡಿಯಾಗಿ ಮಿಂಚಿದ್ದರು.
ಬಳಿಕ ಎರಡು ಕುಟುಂಬದ ಒಪ್ಪಿಗೆ ಮೇಲೆ ಇಬ್ಬರು ಒಂದಾಗಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಧಿಕಾ ಪಂಡಿತ್ ಅವರಿಗೆ ಪ್ರಕೃತಿಯ ನಡುವೆ ಮದುವೆಯಾಗಬೇಕು ಎನ್ನುವ ಆಸೆ ಇತ್ತು, ಅವರ ಆಸೆ ಈಡೇರಿಸುವ ಸಲುವಾಗಿ ಪ್ರತಿಯೊಂದು ವಿಷಯದಲ್ಲೂ ಕೂಡ ಪ್ರಕೃತಿ ಬಗ್ಗೆ ಗಮನ ಕೊಟ್ಟು ಪ್ರಕೃತಿಯ ನಡುವೆ ಸೆಟ್ ಹಾಕಿಸಿ ರಾಧಿಕಾ ಪಂಡಿತ್ ಅವರನ್ನು ವರಿಸಿದರು ಯಶ್ ಹಾಗೂ ಮದುವೆಗೆ ಬಂದ ಪ್ರತಿಯೊಬ್ಬರಿಗೂ ಕೂಡ ಒಂದೊಂದು ಗಿಡವನ್ನು ಕಾಣಿಕೆ ಆಗಿ ಕೊಡುವ ಮೂಲಕ ಪರಿಸರ ಕಾಳಜಿಯನ್ನು ಮೆರೆದರು. ಈ ಜೋಡಿ ಸಿನಿಮಾವನ್ನು ಎಷ್ಟು ಇಷ್ಟಪಡುತ್ತಾರೋ ಹಾಗೇ ಸಮಾಜಸೇವೆಯಲ್ಲಿ ಅಷ್ಟೇ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ಮದುವೆಯಾಗಿ ಸಂತೋಷವಾಗಿರುವ ಇವರಿಬ್ಬರಿಗೂ ಐರಾ ಹಾಗೂ ಯಥರ್ವ ಎನ್ನುವ ಎರಡು ಮಕ್ಕಳಿದ್ದಾರೆ.
ಮತ್ತೊಂದು ವಿಷಯ ಇವರ ಮದುವೆ ಸುದ್ದಿ ಬಗ್ಗೆ ಏನೆಂದರೆ ಇವರಿಬ್ಬರೂ ಕೂಡ ತಮ್ಮ ಮದುವೆಯ ಮೊದಲನೇ ಲಗ್ನ ಪತ್ರಿಕೆಯನ್ನು ಪುನೀತ್ ರಾಜಕುಮಾರ್ ಅವರ ಕೈಗೆ ಕೊಟ್ಟು ಆಶೀರ್ವಾದ ಪಡೆದಿದ್ದಾರೆ ಎನ್ನುವುದು. ಯಾಕೆಂದರೆ ರಾಧಿಕಾ ಪಂಡಿತ್ ಅವರಿಗೆ ಸಿನಿಮಾಗೆ ಬರುವ ಮುಂಚೆಯಿಂದಲೂ ಪುನೀತ್ ರಾಜಕುಮಾರ್ ಅವರಿಂದರೆ ಬಹಳ ಇಷ್ಟವಿತ್ತು. ಅವರ ದೊಡ್ಡ ಅಭಿಮಾನಿ ಆಗಿದ್ದರು ಈ ಕಾರಣಕ್ಕಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲಿಗೆ ಅವರ ಮದುವೆ ಇನ್ವಿಟೇಶನ್ ಅನ್ನು ಪುನೀತ್ ಅವರಿಗೆ ನೀಡಿದ್ದಾರೆ ಹಾಗೂ ಪುನೀತ್ ಅವರು ಕೂಡ ಇವರ ಮದುವೆಗೆ ಬಂದು ಇಬ್ಬರಿಗೂ ಹರಸಿದ್ದರು. ಸ್ಟಾರ್ ನಟ ನಟಿ ಆದರೂ ಕೂಡ ಅಪ್ಪು ಅವರಿಗೆ ಮೊದಲ ಪತ್ರಿಕೆ ನೀಡಿದ್ದು ನಿಜಕ್ಕೂ ಆಶ್ಚರ್ಯ ಅನಿಸುತ್ತದೆ ಆದರೂ ಕೂಡ ಇವರ ಅಭಿಮಾನಕ್ಕೆ ಮೆಚ್ಚಲೇಬೇಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.