ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನಕ್ಕೆ ಗೌರವ ಕೊಡದೆ ಬಾಲಿಷ ಹೇಳಿಕೆ ಕೊಟ್ಟ ಕಾರಣದಿಂದಾಗಿ ನಟಿ ಮೇಲೆ ಕಂಪ್ಲೇಂಟ್ ದಾಖಲಾಗಿದೆ.
ಇದಕ್ಕೆಲ್ಲಾ ಕಾರಣ ಏನು ಎಂದರೆ ಜನವರಿ 26ರಂದು ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆ ಆಗುತ್ತಿದೆ. ಕ್ರಾಂತಿ ಸಿನಿಮಾದ ನಾಯಕಿ ಆಗಿರುವ ರಚಿತರಾಮ್ ಅವರು ತಂಡದೊಂದಿಗೆ ತಾವು ಸಹ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಿನಿಮಾದ ಟ್ರೈಲರ್ ಲಾಂಚ್ ಆದ ದಿನ ವೇದಿಕೆ ಮೇಲೆ ಮಾತನಾಡುವ ಉತ್ಸಾಹದಲ್ಲಿ ರಚಿತಾರಾಮ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ರಾಂತಿ ಸಿನಿಮಾವನ್ನು ಮೊದಲ ದಿನವೇ ನೋಡುವಂತೆ ಕೇಳಿಕೊಂಡಿದ್ದಾರೆ.
ಆದರೆ ಅವರು ಆಡುವ ಮಾತ್ನಲ್ಲಿ ಕಂಟ್ರೋಲ್ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ ಮೊದಲ ದಿನವೇ ಸಿನಿಮಾ ನೋಡಿ ಎನ್ನುವ ಮಾತಿನ ಭರದಲ್ಲಿ ಪ್ರತಿವರ್ಷ ಜನವರಿ 26 ಎಂದರೆ ಗಣರಾಜ್ಯೋತ್ಸವ ಎಂದೇ ಹೇಳಲಾಗುತ್ತಿತ್ತು. ಆದರೆ ಈ ವರ್ಷ ಗಣರಾಜ್ಯೋತ್ಸವ ಎಲ್ಲವನ್ನು ಮರೆತುಬಿಡಿ ಬರಿ ಕ್ರಾಂತಿಯೋತ್ಸವ ಮಾಡಿ ಎಂದು ಹೇಳಿಕೆ ಕೊಟ್ಟಿದ್ದಾರೆ.
ಈ ಹೇಳಿಕೆ ಕೊಟ್ಟ ದಿನದಿಂದಲೇ ಆಕೆಯ ಮೇಲೆ ಸಾಕಷ್ಟು ಟ್ರೋಲ್ ಗಳು ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಭಾರಿ ಖಂಡಿಸಲಾಗಿದೆ. ಯಾಕೆಂದರೆ ಒಬ್ಬ ಜವಾಬ್ದಾರಿಯುತ್ತ ಸ್ಥಾನದಲ್ಲಿ ಇದ್ದುಕೊಂಡು ಸೆಲೆಬ್ರೆಟಿ ಎಂದು ಕರೆಸಿಕೊಂಡಿರುವ ಈಕೆಯೇ ಈ ರೀತಿ ಅನಕ್ಷರಸ್ಥೆಯಂತೆ ಮಾತನಾಡಿದರೆ, ದೇಶದ ನಾಗರಿಕಳಾಗಿ ದೇಶಕ್ಕೆ ಕೊಡಬೇಕಾದ ಗೌರವ ಕೊಡದೆ ತನ್ನ ಕರ್ತವ್ಯವನ್ನು ಸಹ ಮರೆತು ಈ ರೀತಿ ಬೇಜವಾಬ್ದಾರಿ ಹೇಳಿಕೆಯನ್ನು ಕೊಟ್ಟರೆ ಜನಸಾಮಾನ್ಯರು ಇನ್ನೇನು ಪಾಲಿಸುತ್ತಾರೆ ಎನ್ನುವ ಆ.ಕ್ರೋ.ಶ ಎಲ್ಲೆಡೆ ಕೇಳಿ ಬರುತ್ತಿದೆ.
ಸಂವಿಧಾನವನ್ನು ಭಾರತ ಅಂಗೀಕರಿಸಿಕೊಂಡ ದಿನವಾದ ಈ ದಿನವನ್ನು ಮರೆತು ಬಿಡಿ ಎಂದು ಹೇಳಿರುವ ರಚಿತಾ ರಾಮ್ ಅವರ ಹೇಳಿಕೆಯ ಇಂದ ಸಾಕಷ್ಟು ಜನ ಕೋಪಗೊಂಡಿದ್ದಾರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ್ರೋಹಿ ಹೇಳಿಕೆ ಕೊಟ್ಟಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ ಶಿವಲಿಂಗಯ್ಯ ಅವರು ಒತ್ತಾಯಿಸಿದ್ದಾರೆ.
ನಂತರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಸಿ. ಶಿವಲಿಂಗಯ್ಯ ಅವರು ಎಲ್ಲರೂ ಸಂವಿಧಾನ ಹಾಗೂ ಗಣರಾಜ್ಯ ದಿನಕ್ಕೆ ಗೌರವ ಕೊಟ್ಟರೆ ಈಕೆ ಅದನ್ನೇ ಮರೆತು ಬಿಡಿ ಎಂದು ಅವಮಾನ ಆಗೋ ರೀತಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಇವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆಕೆ ಹೇಳಿಕೆಯ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದಂತೆ ರಚಿತಾ ರಾಮ್ ಅವರು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟು ನನ್ನ ಉದ್ದೇಶ ಯಾವುದೇ ಕಾರಣಕ್ಕೂ ಭಾರತಕ್ಕೆ ಅಥವಾ ಸಂವಿಧಾನ ಮತ್ತು ಗಣರಾಜ್ಯ ದಿನಕ್ಕೆ ಅವಮಾನ ಮಾಡಬೇಕು ಎಂಬುದಲ್ಲ. ಇದುವರೆಗೆ ಎಂದು ಕೂಡ ನಾನು ನನ್ನ ದೇಶ ಭಾಷೆ ಗಡಿ ರಾಜ್ಯ ಸಂಸ್ಕೃತಿ ಸಂಪ್ರದಾಯ ಇವನ್ನೆಲ್ಲ ಮೀರಿ ಹೋದವಳಲ್ಲ.
ಅದು ಫಂಬಲ್ ಆಗಿ ಆಗಿರುವ ಮಿಸ್ಟೇಕ್ ಹೌದು ನಾನು ಆ ಹೇಳಿಕೆಗಳನ್ನು ಹೇಳಿ ಬಿಟ್ಟೆ ಆದರೆ ಅದು ಮಾತಿನ ಭರದಲ್ಲಿ ಆಗಿದ್ದು ಉದ್ದೇಶ ಪೂರ್ವಕವಾಗಿ ಅವಮಾನಿಸಲು ಮಾಡಿದ್ದಲ್ಲ ಎಂದು ಸಹ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಮುಂದೆ ಇವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.