
ಕರ್ನಾಟಕದ ಮತ್ತೊಬ್ಬ ಸ್ಟಾರ್ ಮತ್ತು ಭರವಸೆಯ ಖಳದಾಯಕ ಆಗಿ ಹೊರಹೊಮ್ಮಿರುವ ಅಭಿನಯ ರಾಕ್ಷಸ ಡಾಲಿ ಧನಂಜಯ್ ಅವರ ಸಿನಿಮಾಗಳು ಯಾವಾಗ ಚಿತ್ರೀಕರಣ ಮುಕ್ತಾಯಗೊಳ್ಳುತ್ತವೆ ಎಂದು ಊಹಿಸುವುದೇ ಅಸಾಧ್ಯ. ಕಳೆದ ವರ್ಷ ಕೂಡ ಅತಿ ಹೆಚ್ಚು ಸಿನಿಮಾದಲ್ಲಿ ನಟಿಸಿದ ಖ್ಯಾತಿ ಪಡೆದ ಈ ನಟ ಈ ವರ್ಷವೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ರಿಲೀಸ್ ಹಂತಕ್ಕೆ ತಂದಿದ್ದಾರೆ.
ಈಗಷ್ಟೇ ಅವರ ಮಾನ್ಸೂನ್ ರಾಗವನ್ನು ಎಂಜಾಯ್ ಮಾಡುತ್ತಿದ್ದ ಜನರಿಗೆ ಹೆಡ್ ಬುಷ್ ಸಿನಿಮಾ ಮೂಲಕ ಭೂಗತ ಜಗತ್ತಿನ ದೊರೆ ಒಬ್ಬನ ಕಥೆಯನ್ನು ಎಳೆಹಳೆಯಾಗಿ ಬಿಚ್ಚಿಡಲು ಬರುತ್ತಿದ್ದಾರೆ. ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಜಯರಾಜ್ ಅವರ ಜೀವನಾಧಾರಿತ ಸಿನಿಮಾ ಮಾಡಲಾಗಿದ್ದು ಡಾಲಿ ಧನಂಜಯ್ ಅವರೇ ಜಯರಾಜ್ ಪಾತ್ರದಲ್ಲಿ ಅಭಿನಯಿಸಿ ಈ ಸಿನಿಮಾಕ್ಕೆ ಹೂಡಿಕೆ ಕೂಡ ಮಾಡಿದ್ದಾರೆ.
ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಅದ್ದೂರಿಯಾಗಿ ಮಾಡಲಾಯಿತು. ದಾವಣಗೆರೆಯ ಲಕ್ಷಾಂತರ ಜನರ ನಡುವೆ ಹೆಡ್ ಬುಷ್ ಸಿನಿಮಾ ತಂಡ ಈ ಕಾರ್ಯಕ್ರಮ ನಡೆಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈ ಹಿಂದಿನ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಅವರ ಜೊತೆಗೆ ನಟಿಸಿದ್ದ ಅನೇಕ ನಾಯಕಿಯರು ಬಂದಿದ್ದರು.
ಅಮೃತ ಅಯ್ಯರ್, ಸಪ್ತಮಿ ಗೌಡ, ಪಾಯಲ್ ಮತ್ತು ರಚಿತಾ ರಾಮ್ ಹಾಗೂ ರಮ್ಯಾ ಅವರು ಕೂಡ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ವೇದಿಕೆ ಮೇಲೆ ರಚಿತರಾಮ್ ಅವರು ಬಂದಾಗ ಅಭಿಮಾನಿಗಳಿಂದ ಬಾರಿ ಶಿಳ್ಳೆ ಚಪ್ಪಾಳೆ ಕೇಕೆ ಕೇಳಿ ಬರುತ್ತಿತ್ತು. ಅಭಿಮಾನಿಗಳ ಪ್ರೀತಿಗೆ ಅಷ್ಟೇ ಹಿತವಾಗಿ ಪ್ರತಿಕ್ರಿಸುತ್ತಿದ್ದ ರಚಿತಾ ರಾಮ್ ಅವರನ್ನು ಅಭಿಮಾನಿಗಳು ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು.
ಅದಕ್ಕೆ ಮಣಿದ ರಚಿತಾ ರಾಮ್ ಅವರು ಡಾಲಿ ಹಾಗೂ ಅವರ ಮುಖ್ಯ ಭೂಮಿಯಲ್ಲಿ ಮೂಡಿ ಬಂದ ಮಾನ್ಸೂನ್ ರಾಗದ ಮ್ಯೂಸಿಕಲ್ ಹಿಟ್ ಬೀಟ್ ಒಂದಕ್ಕೆ ಸ್ಟೇಜ್ ಮೇಲೆ ಡಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ಕೆಂಪು ಬಣ್ಣದ ಸಲ್ವಾರ್ ತೊಟ್ಟು ಮಿಂಚುತ್ತಿದ್ದ ರಚಿತಾ ರಾಮ್ ಅವರು ಈ ಹಾಡಿಗೆ ಹೆಜ್ಜೆ ಹಾಕುತ್ತಾ ಅಪ್ಸರೆಯ ರೀತಿ ಕಾಣುತ್ತಿದ್ದರು. ಅವರ ಈ ನೃತ್ಯವನ್ನು ನೋಡಿ ದಾವಣಗೆರೆ ಜನರು ಫಿದಾ ಆಗಿ ಅವರು ಕೂಡ ನಿಂತಲ್ಲಿಯೇ ಕುಣಿಯುತ್ತಿದ್ದರು.
ಅಷ್ಟು ಮಾತ್ರ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ವಿಡಿಯೋ ಬಹಳ ವೈರಲ್ ಆಗಿದ್ದು ರಚ್ಚು ಅಭಿಮಾನಿಗಳೆಲ್ಲರೂ ಇದನ್ನು ಹೆಚ್ಚಾಗಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಸ್ವತಃ ರಚಿತಾ ರಾಮ್ ಅವರೇ ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಈ ಹಾಡಿಗೆ ರಚಿತಾರಾಮ್ ಅವರು ಹೆಜ್ಜೆಗಳು ಸಾಥ್ ನೀಡಿದ್ದು, ಅಷ್ಟೇ ಸುಂದರವಾಗಿ ಕೂಡ ಕಾಣುತ್ತಿದ್ದಾರೆ.
ಹೆಜ್ಜೆಗೆ ತಕ್ಕ ಹಾಗೆ, ರಾಗ ರಾಗಕ್ಕೆ ತಕ್ಕ ಹಾಗೆ ಸಂಗೀತ. ಸಿನಿಮಾದ ಆ ಹಾಡಿನ ಮೋಡಿಯೋ ಅಥವಾ ರಚಿತಾ ರಾಮ್ ಅವರ ನೃತ್ಯದ ಮೈಮಾಟವೋ ಗೊತ್ತಿಲ್ಲ ನೋಡುತ್ತಿದ್ದ ಹಾಗೆ ನೋಡುಗರೂ ಕೂಡ ಮೈಮರೆತು ತಾವು ಈ ಬೀಟ್ ಕೇಳುತ್ತಾ ಎರಡು ಹೆಜ್ಜೆ ಹಾಕಬೇಕು ಎನಿಸುವಂತಿದೆ. ರಚಿತರಾಮ್ ಅವರು ಎಷ್ಟು ಚೆನ್ನಾಗಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ ಎನ್ನುವುದನ್ನು ನೋಡಲು ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ
https://www.instagram.com/reel/Ck8YKosjXVh/?igshid=YmMyMTA2M2Y=