Sunday, June 4, 2023
HomeEntertainmentನಾನೇನು ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ, ದರ್ಶನ್ ಬಿಟ್ಟರೆ ನೆಕ್ಸ್ಟ್ ನನ್ನೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು...

ನಾನೇನು ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ, ದರ್ಶನ್ ಬಿಟ್ಟರೆ ನೆಕ್ಸ್ಟ್ ನನ್ನೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ತಿರುಗಿ ಬಿದ್ದ ರಚಿತಾ ರಾಮ್.

 

ರಚಿತಾ ರಾಮ್ ಅವರು ಕ್ರಾಂತಿ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಅದೇನೆಂದರೆ ಪ್ರತಿವರ್ಷ ಕೂಡ ಜನವರಿ 26 ಎಂದರೆ ಅದು ಗಣರಾಜ್ಯೋತ್ಸವ ಎಂದೇ ಹೇಳಲಾಗುತ್ತಿತ್ತು ಅದರ ಆಚರಣೆ ಇತ್ತು ಆದರೆ ಈ ವರ್ಷ ಗಣರಾಜ್ಯೋತ್ಸವ ಮರೆತು ಎಲ್ಲರು ಕ್ರಾಂತಿ ಉತ್ಸವ ಮಾಡೋಣ ಎಂದಿದ್ದರು.

ಅವರ ಆ ಹೇಳಿಕೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆರಂಭವಾಗಿ ಸಾಕಷ್ಟು ಜನ ರಚಿತಾ ರಾಮ್ ಅವರನ್ನು ದೇಶಕ್ಕಿಂತ ನಿನಗೆ ನಿನ್ನ ಸಿನಿಮಾವೇ ಹೆಚ್ಚಾಯ್ತಾ ಎಂದು ಕಮೆಂಟ್ ಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಮತ್ತು ಇದೇ ವಿಷಯದ ಕುರಿತಾಗಿ ಅವರ ವಿರುದ್ಧ ಹಲವು ಮಂದಿ ಸಿಡಿದೆದ್ದು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಲಾಯಿತು.

ಇದಾದ ಬಳಿಕ ಮೊದಲ ಬಾರಿ ರಚಿತಾರಾಮ್ ಅವರು ಅಂದು ಅವರು ಹೇಳಿದ ಆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ರಚಿತಾ ರಾಮ್ ಅವರು ಮಾತನಾಡಿದ್ದಾರೆ. ಹೊಸಪೇಟೆಯಲ್ಲಿ ಆಡಿಯೋ ರಿಲೀಸ್ ವೇಳೆ ದರ್ಶನ್ ಅವರ ಮೇಲೆ ಆದ ಚಪ್ಪಲಿ ಎಸೆತ, ಮೈಸೂರಿನ ಹೋಟೆಲ್ ಅಲ್ಲಿ ಆದ ಮಾತಿನ ಚಕಮಕಿಯ ಆಡಿಯೋ ಗಲಾಟೆ ಮತ್ತು ಕ್ರಾಂತಿ ಸಿನಿಮಾಗೆ ಎದುರಾಗಿರುವ ಚಾಲೆಂಜ್ ಗಳು ಎಲ್ಲದರ ಕುರಿತು ಮಾತಿಗಿಳಿದ ರಚಿತಾ ರಾಮ್ ಅವರು.

ಅಂದು ಟ್ರೈಲರ್ ರಿಲೀಸ್ ದಿನ ಅವರು ಹೇಳಿದ ಹೇಳಿಕೆ ಕುರಿತು ಕೂಡ ಮಾತನಾಡಿದ್ದಾರೆ. ನಾನು ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದೇನೆ ಎಂದು ಸುಮ್ಮನೆ ಬಂದು ಪ್ರಚಾರ ಮಾಡಿ ಹೋಗುತ್ತಿಲ್ಲ ನಾನು ನನ್ನ ಸಿನಿಮಾ ಎಂದು ಸಿನಿಮಾವನ್ನು ನೋಡುತ್ತಿದ್ದೇನೆ. ಬಿಡುವಿಲ್ಲದಂತೆ ಸಾಕಷ್ಟು ಪ್ರಚಾರಗಳಲ್ಲಿ ಓಡಾಡುತ್ತಿದ್ದೇನೆ. ಯಾಕೆಂದರೆ ದರ್ಶನ್ ಅವರ ಜೊತೆಗೆ ನನಗೆ ಇದು ಮೂರನೇ ಸಿನಿಮಾ. ಅಲ್ಲದೆ ಅವರನ್ನು ತುಂಬಾ ಹತ್ತಿರದಿಂದ ಬಲ್ಲೆ ಇದುವರೆಗೆ ನಾನು ನೋಡಿರದ ವಿಷಯಗಳನ್ನು ಕ್ರಾಂತಿ ಸಿನಿಮಾದಲ್ಲಿ ನೋಡಿದೆ.

ಯಾಕೆಂದರೆ ತೆರೆ ಹಿಂದೆ ಹಾಗೂ ತೆರೆ ಮೇಲೆ ಕೂಡ ಕ್ರಾಂತಿ ಸಿನಿಮಾಗೆ ಮೊದಲ ದಿನದಿಂದ ಎಷ್ಟೊಂದು ಅಡೆತಡೆ ಆಗಿದೆ ಎನ್ನುವುದನ್ನು ಕಂಡು ತುಂಬಾ ನೋವು ಅನುಭವಿಸಿದ್ದೇನೆ. ಈಗ ಕ್ರಾಂತಿ ಸಿನಿಮಾ ನನ್ನ ಜವಾಬ್ದಾರಿ ನಾನು ಅಂದು ಟ್ರೈಲರ್ ರಿಲೀಸ್ ಆದ ಎಕ್ಸೈಟ್ಮೆಂಟ್ ಅಲ್ಲಿ ಇದ್ದೆ ನಾನು ಖಂಡಿತವಾಗಿಯೂ ಆ ಮಾತುಗಳನ್ನು ಆಡಿದೆ ಆದರೆ ಅದು ಫಂಬಲ್ ಆಗಿ ಆದ ಮಿಸ್ಟೇಕ್ ಮಾತನಾಡುವಾಗ ಮಿಸ್ಟೇಕ್ ಮಾಡಿದ್ದಾರೆ.

ನಾನು ಅಂದು ಆಡಿದ ಆ ಮಾತು ತಪ್ಪು ಎನಿಸಿದರೆ ಎಲ್ಲಾ ಮಾಧ್ಯಮದವರು ಕೂಡ ಎದುರಿಗೆ ಇದ್ದರು ಇನ್ನೂ ಸಾಕಷ್ಟು ಜನರು ಇದ್ದರು ಯಾರಾದರೂ ಒಂದು ಮಾತು ಹೇಳಬಹುದಿತ್ತು. ಅದಾದ ಮೇಲೆ ಎಷ್ಟೋ ಸಮಯದವರೆಗೆ ನಾನು ಅಲ್ಲೇ ಇದ್ದೆ ಆಗಲು ಸಹ ಯಾರು ಮಾತನಾಡಲಿಲ್ಲ. ನಾನು ಎಂದೂ ನನ್ನ ಸಿನಿಮಾವೇ ದೊಡ್ಡದು ಎಂದು ಹೇಳಿಲ್ಲ. ಇದುವರೆಗೂ ಕೂಡ ನನ್ನ ದೇಶ, ನನ್ನ ಭಾಷೆ, ನನ್ನ ಕರ್ನಾಟಕ, ನನ್ನ ಸಂಸ್ಕೃತಿ, ನನ್ನ ಸಂಪ್ರದಾಯ ಇದರ ವಿರುದ್ಧ ಹೋದವಳು ಅಲ್ಲ.

ನಾನು ಬೇರೆ ದೇಶಕ್ಕೆ ಜೈಕಾರ ಹಾಕಲಿಲ್ಲ ಆದರೂ ಕೂಡ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅದು ಯಾಕೆ ಎಂದು ಗೊತ್ತಾಗುತ್ತಿಲ್ಲ. ನಾನು ಖಂಡಿತವಾಗಿಯೂ ಉದ್ದೇಶ ಪೂರ್ವಕವಾಗಿ ಗಣರಾಜ್ಯೋತ್ಸವಕ್ಕೆ ಅವಮಾನ ಮಾಡಲು ಈ ರೀತಿ ಮಾತನಾಡಿರಲಿಲ್ಲ ಮಾತಿನ ಭರದಲ್ಲಿ ಆ ರೀತಿ ಆಗಿದೆ ಇಂದು ಉತ್ತರ ಕೊಟ್ಟಿದ್ದಾರೆ.