Friday, June 9, 2023
HomeEntertainmentಅಮಿತಾ ಬಚ್ಚನ್ ಮನೆಯಲ್ಲಿ ಬಿರುಕು. ಸೊಸೆ & ಮಗಳ ನಡುವೆ ಜಗಳ ಮನನೊಂದ...

ಅಮಿತಾ ಬಚ್ಚನ್ ಮನೆಯಲ್ಲಿ ಬಿರುಕು. ಸೊಸೆ & ಮಗಳ ನಡುವೆ ಜಗಳ ಮನನೊಂದ ಅಮಿತಾ ಬಚ್ಚನ್ ಆಸ್ತಿ ಪಾಲು ಮಾಡಿದ್ದಾರೆ ಯಾರ್ಯಾರಿಗೆ ಎಷ್ಟೆಷ್ಟು ಆಸ್ತಿ ಸಿಗಲಿದೆ ಗೊತ್ತ.?

 

ಸಂಬಂಧಗಳು ಎನ್ನುವುದು ಎಲ್ಲರ ಬದುಕಿನಲ್ಲೂ ಕೂಡ ಒಂದೇ ರೀತಿ. ಅದು ಸಾಮಾನ್ಯರ ಕುಟುಂಬದಲ್ಲಿ ಆಗಲಿ ಸೆಲೆಬ್ರೆಟಿಗಳ ಕುಟುಂಬದಲ್ಲೇ ಆಗಲಿ ಸಣ್ಣ ಪುಟ್ಟ ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಎಲ್ಲಾ ಸಂಬಂಧಗಳ ನಡುವೆ ಇದ್ದೇ ಇರುತ್ತದೆ. ಕೆಲವರು ಇದನ್ನು ನಾಜುಕಾಗಿ ಮ್ಯಾನೇಜ್ ಮಾಡಿಕೊಂಡು ಹೋರಗೆ ಗೊತ್ತಾಗದಂತೆ ಮುಚ್ಚಿಟ್ಟುಕೊಂಡು ಬದುಕಿದ್ದರೆ ಕೆಲವರು ಇದ್ದದ್ದನ್ನು ಇದ್ದಹಾಗೆ ಹೊರ ಜಗತ್ತಿಗೆ ತೋರಿಸಿಕೊಳ್ಳುತ್ತಾರೆ.

ಇದರಿಂದ ಸಾಬೀತಾಗುವುದು ಏನೆಂದರೆ ಭಾವನೆಗಳು ಎಲ್ಲಾ ಕಡೆ ಒಂದೇ ಎಲ್ಲರೂ ಸಹ ಮನುಷ್ಯರೇ ಆಗಿರುವುದರಿಂದ ಕೆಲವು ರೀತಿಯ ಮನುಷ್ಯ ಸಹಜ ಗುಣಗಳು ಸೆಲೆಬ್ರೆಟಿಗಳ ಬದುಕಿನಲ್ಲಿ ಸಹ ಇರುತ್ತದೆ, ಅವರೇನು ಸಾಮಾನ್ಯಗಿಂತ ಹೊರತೇನೆಲ್ಲ ಎನ್ನುವುದು. ಅಂದಹಾಗೆ ಈ ವಿಷಯ ಈಗ ಸಂಬಂಧಪಟ್ಟಿರುವುದು ಬಾಲಿವುಡ್ನ ಬಿಗ್ ಬಿ ಕುಟುಂಬದ ವಿಷಯದ ಸಲುವಾಗಿ.

ಹಿಂದಿಯ ನಂಬರ್ ಒನ್ ಸೂಪರ್ ಸ್ಟಾರ್ ಎನಿಸಿಕೊಂಡ ಅಮಿತಾ ಬಚ್ಚನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಆನೇಕ ದಶಕಗಳು ಆಗಿವೆ. ಹಿಂದಿಯ ಬಹುತೇಕ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿದ್ದಾರೆ. 80 ಹರೆಯದಲ್ಲೂ ಸಹ ಬಹಳ ಬೇಡಿಕೆ ನಟನಾಗಿರುವ ಇವರು ಕಿರುತೆರೆ ಕಾರ್ಯಕ್ರಮಗಳಿಗೂ ಹೋಸ್ಟ್ ಆಗಿದ್ದಾರೆ ಮತ್ತು ಕೆಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಾರೆ.

ಜೊತೆಗೆ ಹಲವು ಕಂಪನಿಗಳ ಜಾಹೀರಾತುಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅಮಿತಾ ಬಚ್ಚನ್ ಅವರು ಹಲವು ವಿಷಯಗಳಲ್ಲಿ ಎಲ್ಲರಿಗೂ ಆದರ್ಶವಾಗಿದ್ದಾರೆ. ಆದರೆ ಸಂಸಾರದ ವಿಷಯದಲ್ಲಿ ಇವರು ಸಹ ಹಲವು ವಿವಾದಗಳನ್ನು ಎದುರಿಸಿದ್ದಾರೆ. ಇದೀಗ ಮಕ್ಕಳ ಮೊಮ್ಮಕ್ಕಳ ಜೊತೆ ಸುಖೀ ಕುಟುಂಬದಲ್ಲಿದ್ದ ಇವರ ದೊಡ್ಡ ಮನೆಯಲ್ಲಿ ಸಣ್ಣ ಬಿರುಕೊಂದು ಮೂಡಿ ಈಗ ಪರಸ್ಪರ ಬೇರೆ ಆಗಿ ಬದುಕು ನಡೆಸುವ ನಿರ್ಧಾರ ತೆಗೆದುಕೊಳ್ಳುವಷ್ಟರ ಮಟ್ಟಿಗೆ ವಿಷಯ ಬಂದು ನಿಂತಿದೆ.

ಅಮಿತಾಭ್ ಅವರ ಮನೆಯಲ್ಲಿ ಪತ್ನಿ ಮಗ ಸೊಸೆ ಮೊಮ್ಮಗಳು ಹಾಗೂ ಪುತ್ರಿ ಎಲ್ಲರ ಸಹ ಒಟ್ಟಾಗಿ ಜೀವಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಮಗಳು ಶ್ವೇತ ಬಚ್ಚನ್ ಅಮಿತಾಭ್ ಅವರಿಗೆ ಎರಡು ಕಣ್ಣುಗಳಿದ್ದಾಗೆ. ಸೊಸೆಯಾಗಿ ಬಂದಿರುವ ಐಶ್ವರ್ಯ ಅವರನ್ನು ಸಹ ಅಮಿತಾಭ್ ಮಗಳಂತೆ ಕಾಣುತ್ತಾರೆ. ಆದರೆ ಇಲ್ಲಿ ಸಮಸ್ಯೆ ಇರುವುದು ಅತ್ತಿಗೆ ಐಶ್ವರ್ಯ ರೈ ಹಾಗೂ ನಾದಿನಿ ಶ್ವೇತಾ ಬಚ್ಚನ್ ಅವರ ನಡುವೆ. ಅನೇಕ ಬಾರಿ ಇವರಿಬ್ಬರ ನಡುವೆ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ.

ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲಿ ಶ್ವೇತ ಬಚ್ಚನ್ ಬಳಿ ಐಶ್ವರ್ಯ ರೈ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು ಐಶ್ವರ್ಯ ರೈ ಅವರ ಯಾವ ವಿಷಯ ನಿಮಗೆ ಇಷ್ಟ ಆಗೋದಿಲ್ಲ ಎನ್ನುವ ಪ್ರಶ್ನೆಗೆ ಅವರಿಗೆ ಟೈಮ್ ಮ್ಯಾನೇಜ್ಮೆಂಟ್ ಮಾಡಲು ಬರುವುದಿಲ್ಲ. ಅವರು ಶೀಘ್ರವಾಗಿ ಕಾಲ್ ಬ್ಯಾಕ್ ಮಾಡುವುದಿಲ್ಲ ಆ ವಿಷಯ ನನಗೆ ಹಿಡಿಸುವುದಿಲ್ಲ ಎಂದು ಶ್ವೇತಾ ನೇರವಾಗಿ ಹೇಳಿ ಬಿಟ್ಟಿದ್ದರು.

ಇನ್ನು ಕಾರ್ಯಕ್ರಮ ಒಂದರಲ್ಲಿ ಮಾಧ್ಯಮದವರ ಎದುರಿಗೆ ಐಶ್ವರ್ಯ ರೈ ಹಾಗೂ ಶ್ವೇತಾ ಇಬ್ಬರು ಎದುರ ಬದುರಾದರು ಮುಗುಳ್ನಗೆ ಸಹ ಬೀರದೆ ನಿರ್ಲಕ್ಷಿಸಿ ನಡೆದಿದ್ದು ಕಂಡ ಮೇಲಂತೂ ಇದು ಜಗಜ್ಜಾಹೀರಾಯಿತು. ಈಗ ಇದು ಆಸ್ತಿ ಪಾಲು ಮಾಡಿಕೊಂಡು ಪರಸ್ಪರ ಬೇರಾಗಿ ಬದುಕು ಮಟ್ಟಕ್ಕೆ ತಲುಪಿದೆ ಎನ್ನುವ ಮಾಹಿತಿ ಬಲವಾದ ಮೂಲಗಳಿಂದ ತಿಳಿದು ಬಂದಿದೆ.

ಇದರ ಪ್ರಕಾರ ಅಮಿತಾ ಬಚ್ಚನ್ ಅವರ ಒಟ್ಟು 2800 ಕೋಟಿ ಮೌಲ್ಯದ ಆಸ್ತಿಯಲ್ಲಿ ಅಭಿಷೇಕ್ ಒಬ್ಬರಿಗೆ ಹಕ್ಕಿರುವುದಿಲ್ಲ ಶ್ವೇತ ಬಚ್ಚನ್ ಅವರಿಗೂ ಸಹ 1400 ಕೋಟಿಗಳ ಸಮಪಾಲು ಆಸ್ತಿ ಹೋಗಲಿದೆ ಎನ್ನುವ ವಿಷಯ ತಿಳಿದು ಬಂದಿದೆ. ಆದರೆ ಅವರ ಕುಟುಂಬದವರು ಮಾತ್ರ ಇನ್ನು ಈ ವಿಷಯಗಳ ಕುರಿತು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.