Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು...

ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್

.

ನೆನ್ನೆ ಅಪ್ಪು ಹುಟ್ಟಿದ ದಿನ, ಇಡೀ ಕರ್ನಾಟಕಕ್ಕೆ ಈ ದಿನ ಇನ್ಸ್ಪಿರೇಷನ್ ಡೇ. ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಘಣ್ಣ ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊದಲಿಗೆ ಅಪ್ಪು ಇನ್ಸ್ಪಿರೇಷನ್ ದಿನದ ಬಗ್ಗೆ ಮಾತನಾಡಿದ ಅವರು ಅಪ್ಪು ಅವನು ಇಲ್ಲದಿದ್ದರೂ ಕೂಡ ಹುಟ್ಟು ಹಬ್ಬವನ್ನು ಮಾಡಿಸಿಕೊಳ್ಳುವಂತಹ ವ್ಯಕ್ತಿತ್ವದವನು, ಅಪ್ಪುಗೆ ಎರಡು ಹುಟ್ಟಿದಬ್ಬ ಮಾರ್ಚ್ 17 ಹಾಗೂ ಅಕ್ಟೋಬರ್ 29.
ನಾವು ಅಪ್ಪುವನ್ನು ಹೂತಿಲ್ಲ, ಬಿತ್ತಿದ್ದೇವೆ.

ಅದಕ್ಕಾಗಿ ಇಂದು ಅಪ್ಪುನಂತೆ ಸ್ಪೂರ್ತಿ ಪಡೆದು ಇಡೀ ದೇಶದಾದ್ಯಂತ ಅನೇಕ ಅಪ್ಪುಗಳು ಹುಟ್ಟುಕೊಂಡು ಅವನ ಆದರ್ಶದಂತೆ ಅವನ ದಾರಿಯಂತೆ ನಡೆದು ನೊಂದವರಿಗೆ ನೆರವಾಗುತ್ತಿದ್ದಾರೆ. ಈ ಸ್ಪೂರ್ತಿ ಪಡೆದಿದ್ದಕ್ಕಾಗಿ ಯುವಜನತೆ ಸ್ಪೂರ್ತಿ ದಿನವಾಗಿ ಆಚರಿಸುತ್ತಿದ್ದಾರೆ. ನನ್ನ ತಮ್ಮನಾಗಿದ್ದರೂ ಕೂಡ ಜನರ ಜೊತೆ ಹೇಗಿರಬೇಕು, ಜನರಿಗೆ ಏನು ಮಾಡಬೇಕು ಎನ್ನುವ ಸ್ಫೂರ್ತಿ ನನ್ನಲ್ಲಿಯೂ ತುಂಬಿದ್ದಾನೆ.

ಅಪ್ಪುವನ್ನು ಸುಮ್ಮನೆ ಪವರ್ ಸ್ಟಾರ್ ಎನ್ನಲಿಲ್ಲ ಎನಿಸುತ್ತದೆ. ಯಾಕೆಂದರೆ ತಾನು ಮಾಡಿದ ಅಷ್ಟು ಸಿನಿಮಾಗಳಲ್ಲಿ ಕೊನೆ ಸಿನಿಮಾವನ್ನು ಮಾತ್ರ ಅದು ಯಾವ ಸೂಚನೆಯಿಂದ ಮಾಡಿದ್ದನೋ ಏನೋ ಅದರಲ್ಲಿಯೂ ಸಹ ವನ್ಯ ಪ್ರಾಣಿಗಳ ರಕ್ಷಣೆ, ವನ್ಯ ಸಂಪತ್ತಿನ ರಕ್ಷಣೆ, ಹೆಣ್ಣು ಮಕ್ಕಳ ಶಿಕ್ಷಣ, ಪ್ಲಾಸ್ಟಿಕ್ ಮುಕ್ತ ಪ್ರಪಂಚ, ನದಿಗಳ ರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ಸ್ಪೂರ್ತಿ ತುಂಬಿ ಮುಂದಿನ ಭವಿಷ್ಯದ ಬಗ್ಗೆ ಎಚ್ಚರಿಸಿ ಹೋಗಿದ್ದಾನೆ. ಅದಕ್ಕೆ ಅವನನ್ನು ಶಕ್ತಿ ಎನ್ನುವುದು ಪವರ್ ಸ್ಟಾರ್ ಆಗಿದ್ದ ಅವನು ಸ್ಟಾರ್ ಆಗಿ ಮೇಲೆ ಹೋಗಿದ್ದಾನೆ ಆದರೆ ಆ ಪವರ್ ಮಾತ್ರ ಇನ್ನು ಹಾಗೆ ಇದೆ.

ಆ ಶಕ್ತಿ ಇಂದು ಅವನ ಹುಟ್ಟುಹಬ್ಬವನ್ನು ಆಚರಿಸಲು ಸಾವಿರಾರು ಮಂದಿ ಬರುವ ರೀತಿ ಮಾಡುತ್ತಿದೆ. ಅಕ್ಟೋಬರ್ 29ರಂದು ಅಪ್ಪು ಶಕ್ತಿಯಾಗಿ ಮಾರ್ಪಾಡಾಗಿದ್ದಾನೆ. ಆ ಶಕ್ತಿ ಇಂದಿಗೂ ಸಹ ನಮ್ಮೊಂದಿಗೆ ಇದೆ ಎಂದು ಹೇಳಿದ್ದಾರೆ. ಇದರ ನಡುವೆ ಅಪ್ಪು ಅಭಿಮಾನಿಗಳು ಇತ್ತೀಚೆಗೆ ಯುವರಾಜ್ ಕುಮಾರ್ ಅಲ್ಲಿ ಅಪ್ಪುವನ್ನು ನೋಡುತ್ತೇವೆ ಎನ್ನುತ್ತಿದ್ದಾರೆ. ಜೊತೆಗೆ ಯುವರಾಜ್ ಅವರ ಮುಖ ಚಹರೆಯಲ್ಲಿ ಅಣ್ಣಾವ್ರು ಮತ್ತು ಅಪ್ಪುವಿನ ಛಾಯೆ ಎದ್ದು ಕಾಣುತ್ತಿದೆ ಹಾಗಾಗಿ ಹಲವು ಫೋಟೋಗಳಲ್ಲಿ ಇವರನ್ನು ತಾಳೆ ಹಾಕಿರುವ ಅಭಿಮಾನಿಗಳು ಅವರು ಇನ್ನು ಮುಂದೆ ನಾವೆಲ್ಲ ಯುವರಾಜ್ ಅಭಿಮಾನಿಗಳು ಎನ್ನುತ್ತಿದ್ದಾರೆ.

ಈ ಬಗ್ಗೆ ಕೂಡ ಮಾತನಾಡಿದ ರಾಘಣ್ಣ ಅಪ್ಪು ಅನ್ನು ಎಲ್ಲರೂ ಒಬ್ಬ ನಟನಾಗಿ ಅಥವಾ ವ್ಯಕ್ತಿಯಾಗಿ ಒಪ್ಪಿಕೊಂಡಿಲ್ಲ, ಅವನ ವ್ಯಕ್ತಿತ್ವದಿಂದ ಅವನು ಇಂದು ಈ ಮಟ್ಟಗಿನ ಪ್ರೀತಿ ಪಡೆಯುತ್ತಿರುವುದು. ಆ ಸ್ಥಾನದಲ್ಲಿ ಇನ್ನೊಬ್ಬರನ್ನು ತುಂಬಿ ನೋಡಲು ಸಾಧ್ಯವೇ ಇಲ್ಲ. ದಯವಿಟ್ಟು ಯಾರು ನನ್ನ ಮಗನಿಗೆ ಆ ಸ್ಥಾನ ಕೊಡಬೇಡಿ ಅವರವರ ಪರಿಶ್ರಮದಿಂದ ಜಾಗ ಗಿಟ್ಟಿಸಿಕೊಳ್ಳಬೇಕು ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನನ್ನ ಮಗ ಆ ನಿಟ್ಟಿನಲ್ಲಿ ಕಾಲಿಟ್ಟು ಇಂಡಸ್ಟ್ರಿಗೆ ಬರುತ್ತಿದ್ದಾನೆ, ಅವನನ್ನು ಹರಸಿ ಸಾಕು ಎಂದಿದ್ದಾರೆ.

ಯುವರಾಜ್ ಕುಮಾರ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಆಗಲು ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದೆ. ಯೈವ ರಾಜಕುಮಾರ್ ಅವರ ಫೋಟೋ ಹಾಗು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಅವರು ಇಂಡಸ್ಟ್ರಿಯ ಭರವಸೆಯ ನಾಯಕ ಹಾಗು ಎಲ್ಲ ಲಕ್ಷಣಗಳು ಕೂಡ ಕಾಣಿಸುತ್ತಿದೆ. ಯುವರಾಜ್ ಕುಮಾರ್ ಕೂಡ ಅಣ್ಣಾವ್ರು ಹಾಗೂ ಅಪ್ಪುವಂತೆ ಹೆಸರು ಮಾಡಲಿ ಎಂದು ನಾವು ಸಹ ಹರಸೋಣ.