ಕನ್ನಡದ ಚಿರ ಯುವಕ ಎಂದೇ ಕರೆಯಬಹುದಾದಂತಹ ರಮೇಶ್ ಅರವಿಂದ್ ಅವರು ಸದ್ದಿಲ್ಲದ 100 ಸಿನಿಮಾಗಳನ್ನು ಮುಗಿಸಿದ್ದಾರೆ. ಕನ್ನಡದಲ್ಲಿ ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್ ಅವರ ಕಾಲದಿಂದ ಹಿಡಿದು ಶಿವಣ್ಣ, ಉಪೇಂದ್ರ ಅವರ ಸಮಯದಲ್ಲೂ ಮತ್ತು ಈಗ ದರ್ಶನ್, ಸುದೀಪ್, ಯಶ್ ಅವರ ಸಮಯದಲ್ಲೂ ನಾಯಕ ನಟನಾಗಿ ಮಿಂಚುತ್ತಿರುವ ಈ ಎವರ್ಗ್ರೀನ್ ಹೀರೋ ಈಗ ಹೊಸ ಸಿನಿಮಾದ ರಿಲೀಸ್ ಖುಷಿಯಲ್ಲಿದ್ದಾರೆ.
ಸದಾ ಕನ್ನಡದಲ್ಲಿ ಒಂದಲ್ಲ ಒಂದು ಪ್ರಯೋಗಾತ್ಮಕ ಸಿನಿಮಾಗಳ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಮೇಶ್ ಅರವಿಂದ್ ಅವರ ವೃತ್ತಿ ಬದುಕಿನಲ್ಲಿ ಮತ್ತೊಂದು ಗ್ರೇಟ್ ರೋಲ್ ಎಂದರೆ ಅದು ಶಿವಾಜಿ ಸೂರತ್ಕಲ್. ಈಗ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟ ಅವರು ತಮಿಳು ಸಿನಿಮಾ ಇಂಡಸ್ಟ್ರಿಯಲ್ ಇದ್ದ ಸಮಯದ ಬಗ್ಗೆ ಮಾತನಾಡಿದ್ದಾರೆ.
ರಮೇಶ್ ಅರವಿಂದ್ ಅವರು ಮೂಲತಃ ತಮಿಳುನಾಡಿರವರು, ಆದರೆ ಅವರು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ. ಆದರೆ ಇವರು ಆರಂಭದ ದಿನಗಳಲ್ಲಿಯೇ ತಮಿಳು ಇಂಡಸ್ಟ್ರಿಗೆ ಹೋಗಿ ತಮ್ಮ ಛಾಪು ಮೂಡಿಸಿ ಬಂದಿದ್ದವರು. ತೆಲುಗು ಇಂಡಸ್ಟ್ರಿಯಲ್ಲೂ ಕೂಡ ಕಾಣಿಸಿಕೊಂಡಿದ್ದ ಇವರಿಗೆ ತಮಿಳು ಚಿತ್ರರಂಗ ಮಣೆ ಹಾಕಿತ್ತು. ಕನ್ನಡದಿಂದ ಹೋದ ಅನೇಕ ಜನ ಅಲ್ಲಿ ನೆಲೆ ಕಟ್ಟಿಕೊಂಡು ಇಂದು ಅಲ್ಲಿ ಸ್ಟಾರ್ ಹೀರೋಗಳಾಗಿ ಮೆರೆದಿದ್ದಾರೆ
ಈ ಸಾರಿನಲ್ಲಿ ರಜನಿಕಾಂತ್, ಜಯಲಲಿತ, ಅರ್ಜುನ್ ಸರ್ಜಾ, ಪ್ರಕಾಶ್ ರಾಜ್ ಇನ್ನು ಮುಂತಾದವರನ್ನು ಹೆಸರಿಸಬಹುದು. ಅದೇ ಕಾಲಘಟ್ಟದಲ್ಲಿ ಅಲ್ಲಿಗೆ ಹೋಗಿದ್ದ ರಮೇಶ್ ಅರವಿಂದ್ ಅವರು ಮರಳಿ ಕನ್ನಡಕ್ಕೆ ಬಂದರು. ಮತ್ತೆ ಹಿಂತುರುಗಿ ಆಕಡೆ ನೋಡಿದವರೇ ಅಲ್ಲ. ಈ ವಿಷಯದ ಬಗ್ಗೆ ಅವರನ್ನು ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ ಈ ರೀತಿ ಇತ್ತು.
ನಾನು ಆರಂಭದ ದಿನಗಳಲ್ಲಿ ಅವಕಾಶಗಳಿಗಾಗಿ ಹುಡುಕುತ್ತಿದ್ದೆ. ಆಗ ತಮಿಳಿನಲ್ಲಿ ನನಗೆ ಚಾನ್ಸ್ ಸಿಗುತ್ತಿತ್ತು. ನಾನು ತಮಿಳು ಸಿನಿಮಾ ರಂಗ ಬಿಟ್ಟು ಬಂದಾಗ ಎರಡು ಸೂಪರ್ ಹಿಟ್ ಸಿನಿಮಾಗಳು ಸಿಕ್ಕಿತ್ತು . ಸತ್ಯಲೀಲಾವತಿ ಮತ್ತು ಡೂ ಇಟ್ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ನನಗೆ ಸಾಲು ಸಾಲು ಅವಕಾಶಗಳು ಕೂಡ ಬರುತ್ತಿತ್ತು ಒಂದು ವೇಳೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರದೆ ಅಲ್ಲೇ ಉಳಿದುಕೊಂಡಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು.
ಮಾನಿಟರ್ ಆಗಿ ನಾನು ಬೇರೆ ರೀತಿ ಇರುತ್ತಿದ್ದೆ, ಅದು ಬೇರೆ ವಿಷಯ ಆದರೆ ನಾನು ಇಲ್ಲಿ ಬಂದದ್ದಕ್ಕಾಗಿ ನನಗೆ ಲಾಸ್ ಏನು ಆಗಿಲ್ಲ. ನಾನು ಮರಳಿ ಮನೆಗೆ ಬಂದ ಖುಷಿ ಸಿಕ್ಕಿತು. ಆ ಖುಷಿ ಮುಂದೆ ಬೇರೆ ಯಾವುದು ಏನು ಅಲ್ಲ. ಕನ್ನಡಿಗರ ಜೊತೆ ನನಗೆ ಬೆರೆತು ಹೋದ ನೆನಪು ಬಹಳ ಸಿಹಿಯಾಗಿತ್ತು ಅದಕ್ಕೆ ನಾನು ಮರಳಿ ಆ ಕಡೆ ಹೋಗುವ ಮನಸ್ಸು ಮಾಡಲಿಲ್ಲ.
ನನ್ನ ಮನೆ ಇದು, ನನ್ನ ನೆಲ ಎನ್ನುವ ಫೀಲ್ ಕೊಡುತ್ತದೆ ಇಲ್ಲಿ ಸಿಗುವ ಪ್ರೀತಿ ವಿಶ್ವಾಸ ಮತ್ತೆಲ್ಲೂ ಸಿಗುವುದಿಲ್ಲ, ಹಾಗಾಗಿ ಇಲ್ಲೇ ಉಳಿದುಕೊಂಡೆ. ಅದೇ ಸಮಯಕ್ಕೆ ಇಲ್ಲಿ ನನ್ನ 9 ಸಿನಿಮಾಗಳು ಒಟ್ಟಿಗೆ ಹಿಟ್ ಆದವು. ಆಗಾಗ ಕಮಲ್ ಹಾಸನ್ ಅವರ ಸ್ನೇಹಕ್ಕಾಗಿ ಅವರ ಜೊತೆ ಒಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದೆ ಹೊರತು ಫುಲ್ ಟೈಮ್ ನಾನು ತಮಿಳು ಸಿನಿಮಾದಲ್ಲಿ ನಟಿಸಲು ಹೋಗಲೇ ಇಲ್ಲ. ಇಲ್ಲೇ ನಾನು ಉಳಿದುಕೊಂಡು ನೆಲೆ ಕಂಡುಕೊಂಡಿದ್ದಕ್ಕಾಗಿ ನನಗೆ ಬಹಳ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.