Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainment55 ವರ್ಷದ ರಮ್ಯಕೃಷ್ಣಗೆ ಈಗಲೂ ಈ ನಟನ ಮೇಲೆ ಕ್ರಶ್ ಇದಿಯಂತೆ, ನಾಚಿಕೆ ಬಿಟ್ಟು ವೇದಿಕೆ...

55 ವರ್ಷದ ರಮ್ಯಕೃಷ್ಣಗೆ ಈಗಲೂ ಈ ನಟನ ಮೇಲೆ ಕ್ರಶ್ ಇದಿಯಂತೆ, ನಾಚಿಕೆ ಬಿಟ್ಟು ವೇದಿಕೆ ಬಹಿರಂಗ ಪಡಿಸಿದ ರಮ್ಯಕೃಷ್ಣ. ಆ ಲಕ್ಕಿಮ್ಯಾನ್ ಯಾರು ಗೊತ್ತ.?

ಎವರ್ ಗ್ರೀನ್ ಚೆಲುವೆ ರಮ್ಯಕೃಷ್ಣ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಸ್ನೇಹ ಮಾಂಗಲ್ಯಂ ತಂತುನಾನೇನ, ಗಡಿಬಿಡಿ ಗಂಡ, ಮಾಣಿಕ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಖ್ಯಾತಿ ರಮ್ಯಕೃಷ್ಣ ಅವರದ್ದು.

ಇದರಲ್ಲೂ ಕನ್ನಡದಲ್ಲಿ ಅವರ ರಕ್ತ ಕಣ್ಣೀರು ಸಿನಿಮಾದ ಕಾಂತ ಪಾತ್ರವನಂತು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ತಾವು ಅಭಿನಯಿಸಿದ ಎಲ್ಲಾ ಸಿನಿಮಾಗಳನ್ನು ತಮ್ಮ ಪಾತ್ರಕ್ಕೆ ಮಹತ್ವ ಇರುವಂತಹ ಘನತೆಯುಳ್ಳ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಮೋಡಿ ಮಾಡಿದವರು ರಮ್ಯಕೃಷ್ಣ ಅವರು ಕನ್ನಡ ತಮಿಳು ತೆಲುಗು ಹಿಂದಿ ಮತ್ತು ಮಲಯಾಳಂ ಹೀಗೆ ಪಂಚಭಾಷೆಗಳಲ್ಲಿ ಅಭಿನಯಿಸಿಕೊಂಡಿರುವ ರಮ್ಯಕೃಷ್ಣ ಅವರು 55 ರ ಆಸು ಪಾಸಿನಲ್ಲಿ ಇದ್ದರು ಈಗಲೂ ಯಾವ ನಟಿಗಿಂತ ಕಡಿಮೆ ಏನಿಲ್ಲ.

ಅಲ್ಲದೆ ಭಾರತ ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡದ ಸಾಹಸಸಿಂಹ ಡಾ ವಿಷ್ಣುವರ್ಧನ್ ಇವರ ಎದುರು ವಿಲನ್ ನಲ್ಲಿ ಕಾಣಿಸಿಕೊಂಡು ಗರ್ಜಿಸಿದ ಲೇಡಿ ವಿಲನ್ ಈ ಗಟ್ಟಿಗಿತ್ತಿ. ಇವರ ಅಭಿನಯಕ್ಕೆ ಮತ್ತೊಂದು ಮಟ್ಟದ ಗರಿಮೆ ಏರಿಸಿದ್ದು ರಾಜ ಮೌಳಿ ಅವರ ನಿರ್ದೇಶನದ ಬಾಹುಬಲಿ ಸಿನಿಮಾ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ವೃತ್ತಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಇರುವ ಅದ್ಭುತ ಪಾತ್ರ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಮ್ಯಾ ಕೃಷ್ಣ ಅವರು ಸುದೀಪ್, ಪುನೀತ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ವಾರ ಬಿಡುಗಡೆ ಆದ ಲೈಗರ್ ಸಿನಿಮಾದಲ್ಲೂ ಕೂಡ ವಿಜಯ್ ದೇವರಕೊಂಡ ಅವರಿಗೆ ತಾಯಿಯಾಗಿ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ ರಮ್ಯಕೃಷ್ಣ ಅವರು. 90ರ ದಶಕದಲ್ಲಿ ಹಲವರಿಗೆ ಫೇವರೆಟ್ ಹೀರೋಯಿನ್ ಆಗಿದ್ದ ರಮ್ಯಕೃಷ್ಣ ಅವರು ತೆಲುಗಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ತಮ್ಮ ಕ್ರಶ್ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರಿಗೆ ಜೋಡಿಯಾಗಿ ಅಕ್ಕಿನೇನಿ ನಾಗಾರ್ಜುನ್ ಅವರ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾಗಾರ್ಜುನ್ ಅವರಿಗೆ ನಿಮ್ಮ ಫೇವರೆಟ್ ಹೀರೋಯಿನ್ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು.

ನಿರೂಪಕರು ಕೇಳಿದ ಈ ಪ್ರಶ್ನೆಗೆ ನಾಗಾರ್ಜುನ ಅವರು ಉತ್ತರಿಸುವ ಮೊದಲೇ ರಮ್ಯಕೃಷ್ಣ ಅವರು ಮಧ್ಯ ಮಾತನಾಡಿ ನಾಗಾರ್ಜುನ ಅವರಿಗೆ ಫೇವರೆಟ್ ಹೀರೋಯಿನ್ ಯಾರಾದರೂ ಆಗಿರಬಹುದು ಆದರೆ ನನಗೆ ಫೇವರೆಟ್ ಹೀರೋ ಹಾಗೂ ನನ್ನ ಕ್ರಷ್ ಯಾವಾಗಲೂ ನಾಗರ್ಜುನ್ ಅವರೇ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಅವರು ಚಿರ ಯುವಕನಂತೆ ಈಗಲೂ ಕಾಣುತ್ತಿರುವುದು ಎಂದು ಹೇಳಿದ್ದಾರೆ ಈ ಮಾತನ್ನು ಕೇಳಿ ನಾಗರ್ಜುನ್ ಅವರು ಮುಗುಳ್ನಗೆ ಬೀರಿದರು ರಮ್ಯಕೃಷ್ಣ ಹಾಗೂ ನಾಗಾರ್ಜುನ್ ಅವರು ಬಂಗಾರಾಜು ಎನ್ನುವ ಸಿನಿಮಾದಲ್ಲಿ ಈ ವರ್ಷ ಒಟ್ಟಿಗೆ ಅಭಿನಯಿಸಿದ್ದಾರೆ.

ಇದಲ್ಲದೆ ತೆಲುಗಿನಲ್ಲಿ ಸಂಕೀರ್ತನ ಸೊರ್ ಅಲ್ಲಾರಿ ಅಲ್ಲುದು ಹಲೋ ಬ್ರದರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಮ್ಯಕೃಷ್ಣ ಅವರು ನಾಗಾರ್ಜುನ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯ ಹಲವು ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳು ಆಗಿದೆ ಅಲ್ಲದೆ ಬೇರೆ ಭಾಷೆಗಳಿಗೆ ರಿಮೇಕ್ ಕೂಡ ಆಗಿದೆ. ಇಂದಿಗೂ ಇವರಿಬ್ಬರ ಕಾಂಬಿನೇಷನ್ ಹಲವು ಜನರಿಗೆ ಫೇವರೆಟ್. ಒಟ್ಟಾರೆಯಾಗಿ ಹೇಳುವುದಾದರೆ ರಮ್ಯ ಕೃಷ್ಣ ಅವರ ಕ್ರಶ್ ತೆಲುಗಿನ ನಾಗಾರ್ಜುನ್ ಅಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.