Sunday, June 4, 2023
HomeEntertainmentಕಿರಿಕ್ ಪಾರ್ಟಿ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೆ, ನಟಿಸಲು ಆಶಕ್ತಿ ಇರಲಿಲ್ಲ, ಆದ್ರೆ ನನ್ನ ಗುರು...

ಕಿರಿಕ್ ಪಾರ್ಟಿ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೆ, ನಟಿಸಲು ಆಶಕ್ತಿ ಇರಲಿಲ್ಲ, ಆದ್ರೆ ನನ್ನ ಗುರು ಒತ್ತಯ ಮಾಡಿದ್ರು ಅಂತ ಆಕ್ಟ್ ಮಾಡ್ದೆ ಅಷ್ಟೇ. ಸಂದರ್ಶನದಲ್ಲಿ ರಶ್ಮಿಕಾ ಹೇಳಿದ ಮಾತಿದು.

ಕೊಡಗಿನ ಕುವರಿ ನ್ಯಾಚುರಲ್ ಬೆಡಗಿ ರಶ್ಮಿಕ ಮಂದಣ್ಣ ಅವರು ಇಂದು ಇಡೀ ದೇಶಕ್ಕೆ ನ್ಯಾಷನಲ್ ಕ್ರಶ್ ಆಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕೆರಿಯರ್ ಶುರು ಮಾಡಿದ ಇವರು ನಂತರ ಟಾಲಿವುಡ್ ಅಂಗಳಕ್ಕೆ ಜಿಗಿದು ಅದೃಷ್ಟವನ್ನು ಬೆಳಗಿಸಿ ಕೊಂಡವರು. ಸದ್ಯಕ್ಕೆ ಇವರನ್ನು ಕನ್ನಡದವರ ಅಥವಾ ತೆಲುಗು ಅವರ ಎಂದು ಆಶ್ಚರ್ಯ ಪಡುವಷ್ಟು ಹೆಚ್ಚಿನ ಸಿನಿಮಾಗಳನ್ನು ಇವರು ತೆಲುಗಿನಲ್ಲಿಯೇ ಮಾಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಕಾಲಿವುಡ್ ಹಾಗೂ ಮಾಲಿವುಡ್ ಅಲ್ಲೂ ಕೂಡ ಹೆಸರು ಮಾಡಿರುವ ರಶ್ಮಿಕ ಮಂದಣ್ಣ ಅವರು ಬಾಲಿವುಡ್ ಕಡೆಗೂ ಮುಖ ಮಾಡಿದ್ದು ಈಗಷ್ಟೇ ಅಮಿತಾಬ್ ಅವರ ಜೊತೆ ಗುಡ್ ಬೈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಪಡೆದ ನಟಿಯರಲ್ಲಿ ರಶ್ಮಿಕ ಮಂದಣ್ಣ ಮೊದಲ ಸಾಲಿಗೆ ಬರುತ್ತಾರೆ.

ಈಕೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ ಆ ಸಮಯದಲ್ಲಿ ಯಾರು ಕೂಡ ಇವರು ಇಷ್ಟೊಂದು ದೇಶವೇ ಗುರುತಿಸುವಷ್ಟು ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಊಹಿಸಿಯೂ ಇರಲಿಲ್ಲ. ಇಷ್ಟಕ್ಕೆಲ್ಲ ಕಾರಣ ಆಗಿದ್ದು ಕಿರಿಕ್ ಪಾರ್ಟಿ ಎನ್ನುವ ಆ ಒಂದು ಸಿನಿಮಾ. ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಮತ್ತು ನಾಯಕತ್ವದಲ್ಲಿ ತಯಾರಾದ ಈ ಸಿನಿಮಾ ಅನೇಕರಿಗೆ ಜೀವನ ಕೊಟ್ಟಿತ್ತು.

ರಿಷಬ್ ಶೆಟ್ಟಿ ಎನ್ನುವ ಯಶಸ್ವಿ ನಿರ್ದೇಶಕ ಈ ಸಿನಿಮಾ ಮೂಲಕ ಕನ್ನಡಕ್ಕೆ ಒಬ್ಬ ಭರವಸೆಯ ನಿರ್ದೇಶಕರಾದರು. ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಬ್ರೇಕ್ ಪಡೆದುಕೊಂಡ ಸಿನಿಮಾ ಇದು. ಇದಲ್ಲದೆ ಸಂಯುಕ್ತ ಹೆಗಡೆ, ರಶ್ಮಿಕ ಮಂದಣ್ಣ ಈ ಎರಡು ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಕಿರಿಕ್ ಪಾರ್ಟಿ. ಯಾರೇ ಆದರೂ ಕೂಡ ತಮ್ಮ ಮೊದಲ ಅವಕಾಶದ ಬಗ್ಗೆ ಕೊನೆಯವರೆಗೂ ಚಿರಋಣಿ ಆಗಿರುತ್ತಾರೆ ಮತ್ತು ನಾವು ಎಲ್ಲಿಂದ ಬೆಳೆದವು ಆ ಬೇರಿನ ಬಗ್ಗೆ ಗೌರವ ಹೊಂದಿರುತ್ತಾರೆ.

ಆದರೆ ರಶ್ಮಿಕ ಮಂದಣ್ಣ ಅವರ ಪಾಲಿಗಂತೂ ಆ ಸಂಸ್ಕಾರ ಇಲ್ಲವೇ ಇಲ್ಲ. ಇಂದು ಇಡೀ ದೇಶವೇ ಆಕೆಯ ನಟನೆಯನ್ನು ಹೊಗಳುತ್ತಿರಬಹುದು ಅಥವಾ ಅದೃಷ್ಟದ ನಟಿ ಎಂದು ಹೊತ್ತು ಮರೆಸುತ್ತಿರಬಹುದು ಕನ್ನಡಿಗರು ಹಾಗೂ ಕರ್ನಾಟಕ ಪಾಲಿಗೆ ಆಕೆ ಎಂದು ಮೋಸಗಾತಿಯೇ.

ಯಾಕೆಂದರೆ ಇತ್ತೀಚಿಗೆ ಅವರು ಕನ್ನಡದ ಬಗ್ಗೆ ಕನ್ನಡಿಗರ ಸಿನಿಮಾಗಳ ಬಗ್ಗೆ ಕೊಡುತ್ತಿರುವ ಹೇಳಿಕೆಗಳು ಈ ಮಟ್ಟಿಗೆ ಅವರನ್ನು ದ್ವೇಷಿಸಲು ಕಾರಣವಾಗಿದೆ. ತನಗೆ ಲೈಫ್ ಕೊಟ್ಟ ನಿರ್ದೇಶಕ ರಿಶಬ್ ಶೆಟ್ಟಿ ಎನ್ನುವುದು ರಶ್ಮಿಕ ಮಂದಣ್ಣ ಮರೆತಿರುವಂತಿದೆ ಹಾಗಾಗಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಕ್ಯಾಮೆರಾ ಒಂದಕ್ಕೆ ಬಿದ್ದ ಇವರನ್ನು ಕಾಂತಾರ ಸಿನಿಮಾ ಬಗ್ಗೆ ಕೇಳಿದಾಗ ಇನ್ನು ನೋಡಿಲ್ಲ ಎಂದು ಸನ್ನೆ ಮಾಡಿ ಹೋದರು.

ಇಡೀ ದೇಶವೇ ಮೆಚ್ಚಿ ಕಾಂತರಾ ಸಿನಿಮಾ ಬಗ್ಗೆ ಘಟಾನುಘಟಿಗಳೆ ಅಭಿಪ್ರಾಯ ತಿಳಿಸುತ್ತಿರುವಾಗ ಕನಿಷ್ಠ ಪಕ್ಷ ಕನ್ನಡದ ಸಿನಿಮಾ ತಾನೊಬ್ಬ ಕನ್ನಡದಿಂದ ಗುರುತಿಸಿಕೊಂಡವಳು ಎನ್ನುವ ಪರಿವೇ ಇಲ್ಲದಂತೆ ಇವರು ನಡೆದುಕೊಂಡಿದ್ದಾರೆ. ಇನ್ನು ಮುಂದೆ ಹೋಗಿ ಇವರು ಕಿರಿಕ್ ಪಾರ್ಟಿ ಬಗ್ಗೆ ಕೊಟ್ಟಿರುವ ಇಂಟರ್ವ್ಯೂ ನೋಡಿದರೆ ಈಕೆ ಎಷ್ಟೊಂದು ಸುಳ್ಳುಗಾರ್ತಿ ಎನ್ನುವುದು ಗೊತ್ತಾಗುತ್ತದೆ.

ರಶ್ಮಿಕ ಮಂದಣ್ಣ ಅವರ ಕಿರಿಕ್ ಪಾರ್ಟಿ ಸಿನಿಮಾ ಸಮಯದ ವಿಡಿಯೋಗಳನ್ನು ನೋಡಿದರೆ ರಶ್ಮಿಕ ಅವಕಾಶಗಳಿಗಾಗಿ ಎಷ್ಟು ಒದ್ದಾಡಿದ್ದಾರೆ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಆಡಿಷನ್ ಅಲ್ಲಿ ಇವರನ್ನು ಆರಿಸಿಕೊಂಡಿದ್ದರು, ಆದರೆ ಈಗ ಹೇಳುತ್ತಿರುವ ಹಸಿ ಸುಳ್ಳು ಏನೆಂದರೆ ನನಗೆ ಫೇಸ್ಬುಕ್ ನೋಡಿ ಸಿನಿಮಾ ಆಫರ್ ನೀಡಿದರು.

“ನಾನು ಮೊದಲಿಗೆ ಅದನ್ನು ರಿಜೆಕ್ಟ್ ಮಾಡಿದ್ದೆ ಆದರೆ ನನ್ನ ಟೀಚರ್ ಫೋರ್ಸ್ ಮಾಡಿದ ಕಾರಣ ನಾನು ಆ ಸಿನಿಮಾದಲ್ಲಿ ಅಭಿನಯಿಸಬೇಕಾಯಿತು. ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಈಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ರಶ್ಮಿಕ ಮಂದಣ್ಣ ಮಾತನಾಡಿರುವ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.