Sunday, June 4, 2023
HomeEntertainmentಸ್ಟಾರ್ ನಟಿ ಆಗಿದ್ರು ನಟಿ ಸುಧಾರಾಣಿ ಮನೆಯಲ್ಲಿ ಎಷ್ಟು ಸರಳವಾಗಿ ಸಮಾನ್ಯರಂತೆ ತುಳಸಿ ಪೂಜೆ ಮಾಡ್ತಾ...

ಸ್ಟಾರ್ ನಟಿ ಆಗಿದ್ರು ನಟಿ ಸುಧಾರಾಣಿ ಮನೆಯಲ್ಲಿ ಎಷ್ಟು ಸರಳವಾಗಿ ಸಮಾನ್ಯರಂತೆ ತುಳಸಿ ಪೂಜೆ ಮಾಡ್ತಾ ಇದ್ದಾರೆ ನೋಡಿ, ಈಗಿನ ನಟಿಯರಿಗೆ ಮಾದರಿ ಇವರು.

 

ದೀಪಾವಳಿ ಹಬ್ಬ ಮುಗಿಯುತಿದ್ದಂತೆ ಬರುವ ಮತ್ತೊಂದು ಹಬ್ಬ ತುಳಸಿ ಹಬ್ಬ. ಈ ಹಬ್ಬ ಹಿಂದುಗಳ ಪಾಲಿಗೆ ತುಂಬಾ ವಿಶೇಷ. ಯಾಕೆಂದರೆ ಪ್ರತಿ ಹಿಂದೂವಿನ ಮನೆಯಲ್ಲಿ ಕೂಡ ಒಂದು ತುಳಸಿ ಗಿಡ ಇರುತ್ತದೆ. ಮನೆ ಮುಂದೆ ತುಳಸಿ ಕಟ್ಟೆಯಲ್ಲಿ ತುಳಸಿ ಗಿಡವನ್ನು ಬೆಳೆಸಿ ಹಿಂದುಗಳು ಪೂಜಿಸುತ್ತಾರೆ. ನಮ್ಮ ಗೃಹಿಣಿಯರು ಬೆಳಗ್ಗೆ ಎದ್ದ ತಕ್ಷಣ ಮನೆಯನ್ನು ಸ್ವಚ್ಛಗೊಳಿಸು ಸ್ನಾನ ಮಾಡಿಕೊಂಡು ತುಳಸಿ ಗಿಡದ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿ ನಂತರ ಗೃಹ ಕಾರ್ಯಗಳನ್ನು ಆರಂಭಿಸುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಹೀಗಾಗಿ ತುಳಸಿ ಎನ್ನುವುದು ನಮ್ಮ ನಂಬಿಕೆಗಳ ಪ್ರಕಾರ ಪೂಜ್ಯನೀಯ ಸ್ಥಾನ ಪಡೆದುಕೊಂಡಿದೆ. ಪುರಾಣಗಳಲ್ಲೂ ಕೂಡ ತುಳಸಿ ಗಿಡದ ಮಹತ್ವವನ್ನು ವಿವರವಾಗಿ ವಿವರಿಸಿದ್ದಾರೆ. ಹಿಂದೂಗಳ ಭಾವನಾತ್ಮಕ ಅನೇಕ ಸಂಗತಿಗಳಲ್ಲಿ ತುಳಸಿ ಗಿಡದ ಪೂಜೆಯ ವಿಷಯವೂ ಕೂಡ ಒಂದು. ಪ್ರತಿ ದಿನ ತುಳಸಿ ಗಿಡದ ಪೂಜೆ ಮಾಡುವುದರ ಜೊತೆಗೆ ತುಳಸಿ ಹಬ್ಬದಂದು ತುಳಸಿ ಗಿಡದ ಪೂಜೆ ಮಾಡುವುದು ಮತ್ತಷ್ಟು ವಿಶೇಷ. ಈ ದಿನ ತುಳಸಿ ಮಾತೆಯನ್ನು ಮಹಾ ವಿಷ್ಣು ಮದುವೆ ಆದ ದಿನ.

ಆ ಕಾರಣದಿಂದ ತುಳಸಿ ಗಿಡದ ಜೊತೆ ಬೆಟ್ಟದ ನೆಲ್ಲಿ ಕಾಯಿ ಗಿಡವನ್ನು ಅಲಂಕರಿಸಿ ಅದರ ಮುಂದೆ ದೀಪಗಳನ್ನು ಜೋಡಿಸಿಟ್ಟು ಪೂಜೆ ಮಾಡಿ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಿದರೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ವಿಷ್ಣು ರೂಪ ಅಥವಾ ಸಾಲಿಗ್ರಾಮ ಎಂದು ನಂಬಲಾಗುತ್ತದೆ. ಎಲ್ಲರ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ಹಾಗೂ ವಾಟ್ಸಪ್ ಸ್ಟೇಟಸ್ ಗಳಲ್ಲಿ ತುಳಸಿ ಗಿಡ ಪೂಜೆ ಮಾಡುವ ಅನೇಕ ಫೋಟೋಗಳು ಈಗಾಗಲೇ ಶೇರ್ ಆಗಿರುತ್ತವೆ.

ಇನ್ನು ಸೆಲೆಬ್ರಿಟಿಗಳ ಪಾಲಿಗಂತೂ ಎಲ್ಲರೂ ಕೂಡ ಈ ರೀತಿ ತಮ್ಮ ಶೂಟಿಂಗ್ ಕೆಲಸಗಳ ನಡುವೆ ಹಿಂದೂ ಸಂಪ್ರದಾಯಗಳಿಗೆ ಬೆಲೆ ಕೊಟ್ಟು ಎಲ್ಲಾ ಹಬ್ಬವನ್ನು ತಪ್ಪದೇ ಆಚರಿಸುತ್ತಾರೆ ಎಂದು ಹೇಳುವುದು ಕಷ್ಟ. ಸಮಯದ ಅಭಾವದಿಂದಲೂ ಅಥವಾ ಮತ್ತೆ ಯಾವುದೋ ಕಾರಣದಿಂದ ನೆಪ ಹೇಳಿ ಜಾರಿಕೊಳ್ಳುವವರೇ ಹೆಚ್ಚು ಅಥವಾ ಇದು ಗೃಹಿಣಿಯರಿಗೆ ಮಾತ್ರ ನಮ್ಮಗಲ್ಲ ಎಂದುಕೊಳ್ಳುವವರು ಇದ್ದಾರೆ. ಆದರೆ ನಮ್ಮ ಹಿರಿಯ ಕಲಾವಿದೆ ಸುಧಾರಾಣಿ ಮಾತ್ರ ಆಗಲ್ಲ.

ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿ ಹಬ್ಬವನ್ನು ಕೂಡ ಅರ್ಥಪೂರ್ಣವಾಗಿ ಆಚರಿಸುವ ಇವರು ಈ ವರ್ಷ ಗೌರಿ ಹಬ್ಬದ ಸಮಯದಲ್ಲಿ ತಮ್ಮ ಸಹಕಲಾವಿದರನ್ನು ಮನೆಗೆ ಆಹ್ವಾನ ಮಾಡಿ ಗೌರಿ ಬಾಗಿನವನ್ನು ನೀಡಿದ್ದರು. ಇದೀಗ ತುಳಸಿ ಹಬ್ಬವನ್ನು ಕೂಡ ಅಷ್ಟೇ ಭಕ್ತಿ ಭಾವದಿಂದ ನಮ್ಮ ಬಿಝಿ ಶೆಡ್ಯೂಲ್ ನಡುವೆಯೂ ಆಚರಣೆ ಮಾಡಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿವೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೊದಲಿಗೆ ಈ ಫೋಟೋವನ್ನು ಇವರು ಹಂಚಿಕೊಂಡಿದ್ದರು.

ಅದರಲ್ಲಿ ಅವರು ಮಾಡುವ ಪೂಜಾ ವಿಧಾನಗಳಿಂದಲೇ ಅವರಿಗೆ ಅದರಲ್ಲಿ ಎಷ್ಟು ನಂಬಿಕೆ ಇದೆ ಎಷ್ಟು ತಿಳಿದುಕೊಂಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಜೊತೆ ಜೊತೆಯಲಿ ಎನ್ನುವ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಈಗ ಜೀ ಕನ್ನಡದ ಮತ್ತೊಂದು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತು ಎನ್ನುವ ಧಾರವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ಉತ್ತಮ ಸೊಸೆಯಾಗಿ ಅತ್ಯುತ್ತಮವಾಗಿ ಅಮ್ಮನಾಗಿ ಹಾಗೂ ಪ್ರೀತಿಯ ಅತ್ತೆಯಾಗಿ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಇವರ ಇನ್ಸ್ಟಾ ವಿಡಿಯೋ ನೋಡಿರುವ ಅಭಿಮಾನಿಗಳು ಸುಧಾರಾಣಿ ಅವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಧಾರಾವಾಹಿಯ ಬಗ್ಗೆ ಕೂಡ ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ