Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ...

ಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಇವರೆ ಎಂದು ಭಾವುಕರಾದ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾವನ್ನೇ ತನ್ನ ಜೀವನ ಅಂತ ಅಂದುಕೊಂಡಿದ್ದಾರೆ ಸಿನಿಮಾರಂಗಕ್ಕೆ ಎಂಟ್ರಿಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ವಿಭಿನ್ನ ಮಾದರಿಯ ಸಿನಿಮಾಗಳನ್ನು ತೆಗೆಯಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದರೆ. ಈ ಕಾರಣಕ್ಕಾಗಿ ರವಿಚಂದ್ರನ್ ಅವರು ನಟನೆ ಮಾಡಿದ ಇವರಿಗಿನ ಎಲ್ಲಾ ಸಿನಿಮಾವು ಕೂಡ ತುಂಬಾ ವಿಭಿನ್ನವಾದ ಕಥೆಯನ್ನು ಒಳಗೊಂಡಿದೆ. ರವಿಚಂದ್ರನ್ ಸಿನಿಮಾ ಅಂದರೆ ಅಲ್ಲಿ ಹೆಣ್ಣು ಮತ್ತು ಹೂವಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಬಹಳ ರೋಮ್ಯಾಂಟಿಕ್ ಆಗಿ ಕಾಣುವಂತಹ ರವಿಚಂದ್ರನ್ ಅವರು ಈ ಸಿನಿಮಾದ ಮೂಲಕ ಜನರಿಗೆ ಮನರಂಜನೆಯನ್ನು ನೀಡಬೇಕು ಎಂಬ ಉದ್ದೇಶವನ್ನಷ್ಟೇ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಿನಿಮಾದ ಮೇಕಿಂಗ್ ಮತ್ತು ವಿಜುವಲ್ ಎಫೆಕ್ಟ್ ಚೆನ್ನಾಗಿ ಬರಬೇಕು ಅಂತ ಕೋಟಿ ಕೋಟಿ ಹಣವನ್ನು ಲೆಕ್ಕವಿಲ್ಲದಂತೆ ಖರ್ಚು ಮಾಡುತ್ತಾರೆ.

ಕೆಲವೊಮ್ಮೆ ಸಿನಿಮಾ ಚೆನ್ನಾಗಿ ಓಡಿದಾಗ ಇವರು ಹಾಕಿದಂತಹ ಬಂಡವಾಳ ಹಿಂತಿರುಗಿ ಬರುತ್ತದೆ ಆದರೆ ರವಿಚಂದ್ರನ್ ಅವರ ಬಹುತೇಕ ಎಲ್ಲಾ ಸಿನಿಮಾ ಅದ್ದೂರಿಯಾಗಿ ಕೂಡಿರುವುದರಿಂದ ಕೆಲವು ಸಿನಿಮಾ ಹಿಟ್ಟಾಗಿದೆ ಇನ್ನು ಕೆಲವು ಸಿನಿಮಾ ಪ್ಲಾಫ್ ಆಗಿದೆ. ಈ ಸಿನಿಮಾ ಸೋತ ಕಾರಣ ರವಿಚಂದ್ರನ್ ಅವರು ಸಾಕಷ್ಟು ಆರ್ಥಿಕ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಶಾಂತಿ ಕ್ರಾಂತಿ, ಏಕಾಂಗಿ, ಅಪರ್ಣ, ಕ್ರೇಜಿ ಲೋಕ ಹೀಗೆ ಸಾಲು ಸಾಲು ಸಿನಿಮಾಗಳು ಬಹಳ ನಷ್ಟವನ್ನು ಎದುರಿಸುತ್ತದೆ. ಈ ಹೊಡೆತವನ್ನು ರವಿಚಂದ್ರನ್ ಅವರು ತಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ತಮ್ಮಲ್ಲಿ ಇರುವಂತಹ ಆಸ್ತಿಪಾಸ್ತಿ ಎಲ್ಲವನ್ನು ಕೂಡ ಮಾರಿಕೊಳ್ಳುತ್ತಾರೆ.

ಸಾಮಾನ್ಯವಾಗಿ ನಾವೆಲ್ಲರೂ ಕೂಡ ನಟ ನಟಿಯರು ಅಂದರೆ ಉನ್ನತ ಜೀವನ ಶೈಲಿಯನ್ನು ನಡೆಸುತ್ತಾರೆ ಅವರ ಬಳಿ ಸಾಕಷ್ಟು ಹಣ ಆಸ್ತಿ ಸಂಪತ್ತು ಇರುತ್ತದೆ ಅಂತ ಅಂದುಕೊಳ್ಳುತ್ತೇವೆ. ಆದರೆ ನಟ ರವಿಚಂದ್ರನ್ ಮಾತ್ರ ಇಲ್ಲಿಯವರೆಗೂ ಸಿನಿಮಾದಿಂದ ಏನು ಸಂಪಾದನೆ ಮಾಡಿಲ್ಲ. ಬದಲಿಗೆ ತಮ್ಮ ತಂದೆ ಸಂಪಾದನೆ ಮಾಡಿದಂತಹ ಆಸ್ತಿ ಹಣವೆಲ್ಲವನ್ನು ಕೂಡ ಸಿನಿಮಾಗಾಗಿಯೇ ಕಳೆದುಕೊಂಡಿದ್ದಾರೆ ಈ ವಿಚಾರವನ್ನು ರವಿಚಂದ್ರನ್ ಅವರ ಸಾಕಷ್ಟು ಬಾರಿ ಕೆಲವು ಸಂದರ್ಶನದಲ್ಲಿ ಮಾಧ್ಯಮದಲ್ಲಿ ಮತ್ತು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ಈ ಬಾರಿಯೂ ಕೂಡ ರವಿಚಂದ್ರನ್ ಅವರು ತಮ್ಮ ಜೀವನದಲ್ಲಿ ಉಂಟಾದಂತಹ ಆರ್ಥಿಕ ಬಿಕ್ಕಟ್ಟಿನಲ್ಲಿ ತನ್ನ ಬೆನ್ನೆಲುಬಾಗಿ ನಿಂತಂತಹ ವ್ಯಕ್ತಿಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ 2019 ರಲ್ಲಿ ರವಿಚಂದ್ರನ್ ಅವರ ಮಗಳ ಗೀತಾಂಜಲಿ ಮದುವೆ ಉದ್ಯಮಿ ಆದಂತಹ ವಿಜಯ್ ಜೊತೆ ನಡೆಯುತ್ತದೆ.

ಈ ಸಮಯದಲ್ಲಿ ಮಗಳ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಇಲ್ಲಿಯವರೆಗೂ ಕೂಡ ಯಾರು ಈ ರೀತಿ ಮದುವೆ ಮಾಡಿರಬಾರದು ಎಂಬ ಕಾರಣಕ್ಕಾಗಿ ಬೆಂಗಳೂರಿನ ಅರಮನೆಯ ಮುಂದೆ ಅದ್ದೂರಿ ಸೆಟ್ಟನ್ನು ಹಾಕಿಸಿ ಮಗಳ ಮದುವೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಆದರೆ ತನ್ನ ಮಗಳ ಮದುವೆ ಮಾಡಲು ರವಿಚಂದ್ರನ್ ಅವರು ಎಷ್ಟು ಕಷ್ಟ ಪಟ್ಟರು ಎಂಬ ವಿಚಾರ ಇಲ್ಲಿಯವರೆಗೂ ಕೂಡ ಯಾರಿಗೂ ತಿಳಿದಿಲ್ಲ. ಈ ವಿಚಾರವನ್ನು ರವಿಚಂದ್ರನ್ ಅವರು ಇದೀಗ ಬಿರಂಗ ಪಡಿಸಿದ್ದಾರೆ ಮಗಳ ಮದುವೆಯ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಪರಿಸ್ಥಿತಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಮಗಳ ಮದುವೆ ಖರ್ಚಿಗು ಕೂಡ ಹಣ ಇರುವುದಿಲ್ಲ ಒಡವೆಗಳಿಗೂ ಕೂಡ ಹಣ ಇರುವುದಿಲ್ಲ. ಆ ಸಮಯದಲ್ಲಿ ರವಿಚಂದ್ರನ್ ಅವರ ಸ್ನೇಹಿತರು ಆದ ಸರ್ಜನ್ ವೆಂಕಟೇಶ್ ರಮೇಶ್ ಈ ಮೂರು ವ್ಯಕ್ತಿಗಳು ಕೂಡ ಬಹಳ ಸಹಾಯ ಮಾಡುತ್ತಾರೆ.

ಮಗಳ ಮದುವೆಯ ಸಮಯದಲ್ಲಿ ಮನೆಗೆ ಬಂದಂತಹ ಈ ಮೂರು ಜನ ವ್ಯಕ್ತಿಗಳು ದೊಡ್ಡ ಮೊತ್ತದ ಹಣವನ್ನು ರವಿಚಂದ್ರನ್ ಅವರಿಗೆ ನೀಡುತ್ತಾರಂತೆ. ಅಷ್ಟೇ ಅಲ್ಲದೆ ರವಿಚಂದ್ರನ್ ಅವರು ತಮ್ಮ ಮಗಳ ಮದುವೆಗೆ ಆಭರಣವನ್ನು ಖರೀದಿ ಮಾಡಬೇಕು ಅಂತ ಅವರ ಸ್ನೇಹಿತರ ಅಂಗಡಿಗೆ ಹೋಗುತ್ತಾರಂತೆ. ಆ ಸಮಯದಲ್ಲಿ ನನ್ನ ಮಗಳು ಕೇಳಿದಷ್ಟು ಒಡವೆಯನ್ನು ಕೊಡಿ ಆದರೆ ಅದೆಲ್ಲದಕ್ಕು ಕೂಡ ಬರಿಸುವಷ್ಟು ಹಣ ನನ್ನ ಬಳಿ ಇಲ್ಲ ಸ್ವಲ್ಪ ಹಣವನ್ನು ನೀಡುತ್ತೇನೆ. ಆರು ತಿಂಗಳ ಸಮಯವಕಾಶ ನನಗೆ ನೀಡಿ ಎಲ್ಲಾ ಹಣವನ್ನು ನಾನು ಸಂಪೂರ್ಣವಾಗಿ ಹಿಂತಿರುಗಿಸುತ್ತೇನೆ ಅಂತ ಮನವಿ ಮಾಡಿಕೊಳ್ಳುತ್ತಾರಂತೆ. ಆ ಸಮಯದಲ್ಲಿ ಅಂಗಡಿಯ ಮಾಲೀಕ ರವಿಚಂದ್ರನ್ ಮಗಳು ಕೇಳಿದಷ್ಟು ಒಡವೆಯನ್ನು ಕೊಡುತ್ತಾರೆ ಆದರೆ ಅವರ ಬಳಿಯಿಂದ ಒಂದು ರೂಪಾಯಿ ಹಣವನ್ನು ಪಡೆಯುವುದಿಲ್ಲವಂತೆ ನಿಮ್ಮ ಪ್ರೀತಿ ವಿಶ್ವಾಸಕ್ಕಿಂತ ಹಣ ಹೆಚ್ಚಲ್ಲ ಅಂತ ಹೇಳಿ ಅವರನ್ನು ಹಾಗೆ ಕಳುಹಿಸುತ್ತಾರಂತೆ.

ಈ ಎಲ್ಲ ವಿಚಾರವನ್ನು ರವಿಚಂದ್ರನ್ ಅವರು ತಮ್ಮ ಸಿನಿಮಾ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ ಸಾಮಾನ್ಯವಾಗಿ ಬಹಿರಂಗವಾಗಿ ಈ ರೀತಿ ಹೇಳಿಕೊಳ್ಳುವುದಕ್ಕೂ ಕೂಡ ಧೈರ್ಯ ಇರಬೇಕು. ಏಕೆಂದರೆ ನಟ ನಟಿಯರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಕೂಡ ಬಿಟ್ಟುಕೊಡುವುದಿಲ್ಲ ಅದರಲ್ಲಿಯೂ ಕೂಡ ತಾವು ಉನ್ನತ ಜೀವನವನ್ನು ಸಾಗಿಸುತ್ತೇವೆ ಎಂಬುದರ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಾರೆ. ತಮ್ಮ ಕಷ್ಟದ ದಿನಗಳನ್ನು ಅಥವಾ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಹೇಳಿಕೊಳ್ಳುವುದಿಲ್ಲ ಆದರೆ ರವಿಚಂದ್ರನ್ ಅವರು ಮಾತ್ರ ಈ ಎಲ್ಲಾ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ನಟ ನಟಿಯರು ಅಂದರೆ ಅವರಿಗೆ ಯಾವುದೇ ಕಷ್ಟ ಇರುವುದಿಲ್ಲ ಅಂತ ಅಂದುಕೊಳ್ಳುತ್ತೇವೆ ಆದರೆ ನಿಜ ಹೇಳಬೇಕು ಅಂದರೆ ಅವರ ಜೀವನದಲ್ಲಿ ಕೂಡ ಸಾಕಷ್ಟು ಕಷ್ಟಗಳು ಇರುತ್ತದೆ. ನೀನು ರವಿಚಂದ್ರನ್ ಮಾತನಾಡಿದಂತಹ ಈ ವಿಡಿಯೋ ನೋಡಿದಂತಹ ಕೆಲವು ನಟಿಗರು ಇಷ್ಟೊಂದು ಆರ್ಥಿಕ ಪರಿಸ್ಥಿತಿ ಇರುವಾಗ ಮಗಳ ಮದುವೆಯನ್ನು ಅಷ್ಟು ಅದ್ದೂರಿಯಾಗಿ ಯಾಕೆ ಮಾಡಬೇಕಿತ್ತು ಸಿಂಪಲ್ ಆಗಿ ಮಾಡಿಕೊಳ್ಳಬಹುದಿತ್ತು ಎಂದು ಕಾಮೆಂಟ್ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಅದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.