ಇಂಡಸ್ಟ್ರಿಯಲ್ಲಿ ಇಷ್ಟೊಂದು ಸ್ಟಾರ್ ಗಳು ಇದ್ದರೂ ಸುದೀಪ್ ಅವರನ್ನೇ ತಮ್ಮ ದೊಡ್ಡ ಮಗ ಎಂದು ರವಿಚಂದ್ರನ್ ಅವರು ಹೇಳುವುದು ಯಾಕೆ ಗೊತ್ತಾ.? ರವಿಚಂದ್ರನ್ (Ravichandran) ಎನ್ನುವ ಹೆಸರೇ ಒಂದು ವಿಶೇಷ ಶಕ್ತಿ ಹೊಂದಿದೆ. ರವಿಚಂದ್ರನ್ ಎಂದರೆ ಸಿನಿಮಾ, ಸಿನಿಮಾ ಎಂದರೆ ರವಿಚಂದ್ರನ್ ಎಂದು ಹೇಳಬಹುದು. ಕರ್ನಾಟಕದ ಮಂದಿಗೆ ರವಿಚಂದ್ರನ್ ಅವರು ಸಿನಿಮಾ ವಿಷಯದಲ್ಲಿ ಬಹಳ ಹತ್ತಿರವಾಗಿದ್ದಾರೆ. ರವಿಚಂದ್ರನ್ ಅವರು ಸೋಲೊ ಹೀರೋ ಆಗಿ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರುವುದು ಮಾತ್ರ ಅಲ್ಲದೆ ಮಲ್ಟಿಸ್ಟಾರ್ ಸಿನಿಮಾ ಮಾಡಿ ಕೂಡ ಗೆದ್ದಿದ್ದಾರೆ.
ಡಾ.ವಿಷ್ಣುವರ್ಧನ್, ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ರಮೇಶ್ ಅರವಿಂದ್, ನವರಸ ನಾಯಕ ಜಗ್ಗೇಶ್, ಶಶಿಕುಮಾರ್ ಇಂದ ಹಿಡಿದು ಈಗಿನ ಸ್ಟಾರ್ಗಳಾದ ದರ್ಶನ್ ಸುದೀಪ್ ತನಕ ಅನೇಕ ಹೀರೋಗಳ ಜೊತೆ ರವಿಚಂದ್ರನ್ ಅವರ ತೆರೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲಾ ಇಂಡಸ್ಟ್ರಿಯಲ್ಲಿದೆ ರವಿಚಂದ್ರನ್ ಅವರಿಗೆ ಗೌರವ ಪ್ರೀತಿ ಹಲವರ ಕಡೆಯಿಂದ ಸಿಗುತ್ತಿದ್ದರು ಸುದೀಪ್ (Sudeep) ಅವರ ಮೇಲೆ ವಿಶೇಷ ಒಲವು ಹೊಂದಿ ಅವರನ್ನು ತಮ್ಮ ಹಿರಿಯ ಮಗ ಎಂದು ಹೇಳುತ್ತಾರೆ.
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಕನ್ನಡದ ಖಾಸಗಿ ಸುದ್ದಿ ಮಾಧ್ಯಮದ ನಿರೂಪಕರು ಒಬ್ಬರು ಇದೇ ಪ್ರಶ್ನೆಯನ್ನು ರವಿಚಂದ್ರನ್ ಅವರಿಗೆ ಕೇಳಿದಾಗ ಅವರು ಹೇಳಿದ ಉತ್ತರ ಈ ರೀತಿ ಇತ್ತು. ಸುದೀಪ್ ಮತ್ತು ನನ್ನ ಬಾಂಧವ್ಯ ನಾವು ಒಟ್ಟಿಗೆ ಸಿನಿಮಾ ಮಾಡುವುದಕ್ಕಿಂತ ಮುಂಚೆಯಿಂದಲೂ ಬಹಳ ಚೆನ್ನಾಗಿದೆ. ಸುದೀಪ್ ಅವರೇ ಹೇಳುತ್ತಾರೆ ಎಷ್ಟೋ ವಿಚಾರವನ್ನು ನನ್ನಿಂದ ಫಾಲೋ ಮಾಡಿದ್ದೇನೆ ಅಂತ. ಅವರು ಕಪ್ಪು ಬಟ್ಟೆ ಹಾಕಿರುವುದು ಇರಬಹುದು ಅಥವಾ ಸಿನಿಮಾ ಅನ್ನು ಇಷ್ಟ ಪಡುವುದು ಇರಬಹುದು ನಮ್ಮಿಬ್ಬರ ಥಂಕಿಂಗ್ ಒಂದೇ ರೀತಿ ಇದೆ.
ಅಲ್ಲದೆ ಪ್ರತಿಯೊಬ್ಬರೂ ಕೂಡ ನನ್ನನ್ನು ಸಿನಿಮಾ ಕಾರ್ಯಕ್ರಮಗಳಿಗೆ ಮುಹೂರ್ತಕ್ಕೆ ಕರೆಯುತ್ತಾರೆ. ಆದರೆ ಸುದೀಪ್ ಕರೆಯುವಾಗ ಅವನ ಮಾತಿನಲ್ಲಿ ಒಂದು ಕಾನ್ಫಿಡೆಂಟ್ ಇರುತ್ತದೆ. ಮನೆಯ ಫ್ಯಾಮಿಲಿ ಮೆಂಬರ್ ಅನ್ನು ಕರೆದ ರೀತಿ ಕರೆಯುತ್ತಾನೆ. ಅವನು ಕರೆಯುವಾಗಲೇ ಇವರು ಕನ್ಫರ್ಮ್ ಆಗಿ ಬರುತ್ತಾರೆ ಎಂದುಕೊಂಡು ಕರೆಯುತ್ತಾನೆ ಎನ್ನುವ ಭಾವನೆ ಬಂದು ಬಿಡುತ್ತದೆ ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಒಂದು ಹೇಳಲಾಗದ ನಂಬಿಕೆ ಹುಟ್ಟಿಕೊಂಡಿದೆ.
ಒಟ್ಟಿಗೆ ಸಿನಿಮಾ ಮಾಡುವ ಸಮಯದಲ್ಲೂ ಸಹ ಮಾಣಿಕ್ಯ (Manikya) ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಪೋಷಕ ಪಾತ್ರದಲ್ಲಿ ನಟಿಸಿದ್ದು. ಆಗ ಮಾತ್ರ ಅವನಿಗೆ ಸ್ವಲ್ಪ ಗೊಂದಲ ಇತ್ತು. ಆದರೆ ಆತ ಒಂದೇ ಮಾತು ಹೇಳಿದ್ದು, ನೀವು ಈ ಪಾತ್ರ ಮಾಡಿದರೆ ಮಾತ್ರ ಮಾಣಿಕ್ಯ ಒಪ್ಪಿಕೊಳ್ಳುತ್ತೇನೆ ಇಲ್ಲ ಕೈ ಬಿಡುತ್ತೇನೆ ಎಂದು. ನನ್ನಿಂದ ಅವನ ಡ್ರೀಮ್ ಯಾಕೆ ಹಾಳಾಗಬೇಕು ಅಂತ ಮಾಡಿದೆ. ಆದರೆ ಅಲ್ಲಿ ಅವನ ಜೊತೆ ಅಪ್ಪನಾಗಿ ನಟಿಸಿದ ಮೇಲೆ ಆ ಫೀಲ್ ನಿಜವಾಗಿಯೂ ಬಂದು ಬಿಟ್ಟಿತ್ತು.
ಅದಕ್ಕಾಗಿ ಅಂದಿನಿಂದ ನಾನು ಸುದೀಪ್ ನನ್ನ ಹಿರಿ ಮಗ ಎಂದು ಹೇಳುತ್ತೇನೆ. ಅದಾದ ಮೇಲೆ ಸಹ ಅನೇಕ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದೇವೆ ಹೆಬ್ಬುಲಿ (Hebbuli) ಅಲ್ಲೂ ಅಣ್ಣ ತಮ್ಮ ಆಗಿ ನಟಿಸಿದೆವು, ಈಗ ನನ್ನ ಸಿನಿಮಾ ರವಿ ಬೋಪಣ್ಣದಲ್ಲೂ (Ravi Bopanna) ಸಹ ಒಂದು ಅತಿಥಿ ಪಾತ್ರದಲ್ಲಿ ಸುದೀಪ್ ಅವರ ನಟಿಸಿದ್ದಾರೆ. ಸುದೀಪ್ ಈ ಪಾತ್ರ ಮಾಡಬೇಕು ಎಂದು ನನಗೆ ಆಸೆ ಇತ್ತು ನಮ್ಮ ನಿರ್ಮಾಪಕರಿಗೆ ಹೇಳಿದಾಗ ಅವರಿಗೆ ನಂಬಿಕೆ ಇರಲಿಲ್ಲ.
ಇದನ್ನು ಅವರು ಒಪ್ಪುವುದಿಲ್ಲ ಎಂದು ಹಠ ಮಾಡುತ್ತಿದ್ದರು. ನಾನು ಒಂದೇ ಒಂದು ಕರೆ ಮಾಡಿದೆ ಅವನು ಕಥೆ ಏನು ಪಾತ್ರ ಏನು ಯಾವುದು ಕೇಳಲಿಲ್ಲ ಆಯ್ತು ಯಾವಾಗ ಬರಬೇಕು ಹೇಳಿ ಎಂದು ಇಷ್ಟೆ ಕೇಳಿ ಬಂದು ಮಾಡಿಕೊಟ್ಟ. ಈ ರೀತಿ ನನ್ನ ಅವನ ಸಂಬಂಧ ಇದೆ ಜೊತೆಗೆ ಇಂಡಸ್ಟ್ರಿಯ ಬಹುತೇಕ ಎಲ್ಲಾ ಹಿರಿಯ ಮತ್ತು ಕಿರಿಯ ಕಲಾವಿದರು ಸಹ ನನಗೆ ಇಷ್ಟೇ ಪ್ರೀತಿ ವಿಶ್ವಾಸ ತೋರಿದ್ದಾರೆ ಎಂದು ಅದನ್ನು ಸಹ ಹೇಳಿದ್ದಾರೆ.