Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮದುವೆಯಾದ ಒಂದೇ ವಾರಕ್ಕೆ ಪತ್ನಿಗೆ ದುಬಾರಿ ಬೆಲೆ ಗಿಫ್ಟ್ ಕೊಟ್ಟ ನಿರ್ಮಾಪಕ, ಪ್ರೀತಿ ಅಂದ್ರೆ ಹೀಗರಬೇಕಪ್ಪ...

ಮದುವೆಯಾದ ಒಂದೇ ವಾರಕ್ಕೆ ಪತ್ನಿಗೆ ದುಬಾರಿ ಬೆಲೆ ಗಿಫ್ಟ್ ಕೊಟ್ಟ ನಿರ್ಮಾಪಕ, ಪ್ರೀತಿ ಅಂದ್ರೆ ಹೀಗರಬೇಕಪ್ಪ ಎಂದ ನೆಟ್ಟಿಗರು.

ಸದ್ಯದಲ್ಲಿ ಟ್ರೆಂಡಿಂಗ್ ಕಪಲ್ಸ್ ಆಗಿರುವ ತಮಿಳಿನ ಖ್ಯಾತ ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಹಾಸ್ಯ ರೀತಿಯಲ್ಲಿ ಟ್ರೋಲ್ ಆಗುವ ಮೂಲಕ ಟ್ರೆಂಡಿಂಗ್ ನಲ್ಲಿದ್ದಾರೆ. 38 ರ ದಶಕದ ಸನಿಹದಲ್ಲಿರುವ ತುಂಬಾ ಬೊಜ್ಜು ದೇಹವುಳ್ಳ ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಚೆಂದದ 32 ರ ಯುವತಿ ಖ್ಯಾತ ನಿರೂಪಕಿ ಹಾಗೂ ಧಾರವಾಹಿ ನಟಿ ಆದ ಮಹಾಲಕ್ಷ್ಮಿ ಅವರು ಪ್ರೀತಿಸಿ ವಿವಾಹವಾದ ಫೋಟೋಗಳು ವೈರಲ್ ಆಗಿ ನೆಟ್ಟಿಗರನ್ನು ಹಾಸ್ಯವಾಗಿ, ಅಚ್ಚರಿಗೊಳ್ಳುವಂತೆಯೂ ಹಾಗೂ ನೋಡಿದ ತಕ್ಷಣ ಎಲ್ಲಾ ದುಡ್ಡಿನ ಮಹಿಮೆ ಎಂದುಕೊಳ್ಳುವಂತೆಯೂ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಹಸಮಣೆ ಏರಿರುವ ಫೋಟೋಗಳು ನೆಟ್ಟಿಗರ ಹಾಸ್ಯದ ಟ್ರೋಲ್ ಗೆ ಕಾರಣ ಆಗಿದೆ.

ಇವರಿಬ್ಬರು ಕಳೆದ ಸೆಪ್ಟೆಂಬರ್ 1 ರಂದು ತಿರುಪತಿಯಲ್ಲಿ ಸರಳ ರೀತಿಯಲ್ಲಿ ಕುಟುಂಬ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದು ಈ ಫೋಟೋಗಳನ್ನು ಮಹಾಲಕ್ಷ್ಮಿ ಹಾಗೂ ರವೀಂದರ್ ಇಬ್ಬರೂ ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಮನದಾಳದ ಮಾತುಗಳ ಉಲ್ಲೇಖದೊಂದಿಗೆ ಹಂಚಿಕೊಂಡಿದ್ದಾರೆ. ರವೀಂದರ್ ಚಂದ್ರಶೇಖರನ್ ಅವರು ತಮಿಳಿನ ಹೈ ಬಜೆಟ್ ಚಿತ್ರಗಳ ನಿರ್ಮಾಣಕ್ಕೆ 2013 ರಿಂದಲೇ ಕೈ ಹಾಕಿ ಯಶಸ್ಸು ಕಂಡಿದ್ದಾರೆ ಅಲ್ಲದೇ ಇವರು ಹಿಂದೆ ಶಾಂತಿ ಎಂಬುವವರನ್ನು ವಿವಾಹವಾಗಿ ಕಾರಣಾಂತರಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು.

ಆದರೆ ಈಗ ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆ ಆಗಿರುವುದಾಗಿ ಹೇಳಿಕೊಂಡು ಸಪ್ತಪದಿ ತುಳಿದಿದ್ದಾರೆ. ಮಹಾಲಕ್ಷ್ಮಿ ಅವರು ಸಹ ಅನಿಲ್ ಎಂಬುವವರನ್ನು ವಿವಾಹವಾಗಿ ಇವರಿಗೆ ಒಬ್ಬ ಮಗನೂ ಕೂಡ ಇದ್ದಾನೆ ಎನ್ನುವುದು ಸಂಗತಿ ಆಗಿದೆ. ಹಾಗಾಗಿ ಇಬ್ಬರದು ಎರಡನೇ ಮದುವೆ ಆಗಿದ್ದು ಮಹಾಲಕ್ಷ್ಮಿ ಅವರು ಬೊಜ್ಜು ದೇಹವುಳ್ಳ ರವೀಂದರ್ ಅವರನ್ನು ಅರಿಸಿಕೊಂಡಿರುವುದರ ಬಗ್ಗೆ ನೆಟ್ಟಿಗರಲ್ಲಿ ಹಾಸ್ಯ ಮೂಡಲು ಕಾರಣ ಆಗಿರುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಇಂತಹ ಸುಂದರವಾದ ಯುವತಿಯನ್ನು ಪಟಾಯಿಸಿರುವ ರವೀಂದರ್ ಅವರನ್ನು ನೀನೆ ಪುಣ್ಯವಂತ ಗುರು ಎನ್ನುವಂತೆ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಎಲ್ಲಾ ದುಡ್ಡಿನ ಮಹಿಮೆ ಇದಾಗಿದ್ದು ದುಡ್ಡು ಖಾಲಿ ಆದರೆ ಎಲ್ಲಾ ಪ್ರೀತಿಯು ಮಾಯ ಎಂದು ವೇದಾಂತ ಹೇಳುತ್ತಿದ್ದಾರೆ. ಅದೇನೇ ಇದ್ದರೂ ಸಹ ಈ ರವೀಂದರ್ ತನ್ನ ಪ್ರೀತಿಯ ಮಡದಿಗಾಗಿ ಮಾಡಿರುವ ಅರೇಂಜ್ಮೆಂಟ್ ಕೇಳಿದರೆ ಒಂದು ಕ್ಷಣ ಶಾ-ಕ್ ಆಗುತ್ತದೆ. ಏಕೆಂದರೆ ಇವರು ಮಲಗುವ ಮಂಚಕ್ಕೆ ಬಂಗಾರದ ಲೇಪನ ಇದ್ದು ಮನೆಯಲ್ಲಿ ತನ್ನ ಮಡದಿ ಸುಂದರವಾಗಿ ಕಾಣಲಿ ಎಂದು ಸುಮಾರು 300 ರೇಷ್ಮೆ ಸೀರೆಗಳನ್ನು ತಂದು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದ್ದು ತನ್ನ ಪತ್ನಿಗಾಗಿ 75 ಲಕ್ಷದ ಮನೆಯನ್ನು ನಿರ್ಮಿಸಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಹೌದು ಈ ವಿಷಯವಾಗಿ ಸ್ವತಃ ರವೀಂದರ್ ಅವರೇ ಹೇಳಿಕೊಂಡಿದ್ದು ತಮ್ಮ ವಿವಾಹದ ಬಗ್ಗೆ ಆಗುತ್ತಿರುವ ಟ್ರೋಲ್ ಕುರಿತು ಯಾರು ಎಷ್ಟೇ ಟ್ರೋಲ್ ಮಾಡಿದರು ಸಹ ನಾವು ಈಗಲೂ ಮುಂದೆಯೂ ಚೆನ್ನಾಗಿಯೇ ಇರುತ್ತೇವೆ. ಅಲ್ಲದೇ ನನ್ನ ಪತ್ನಿಗಾಗಿ ನಾನು 75 ಲಕ್ಷದ ಮನೆಯ ನಿರ್ಮಾಣ ಮಾಡಲು ನಿರ್ಧರಿಸಿದ್ದು ಈ ಮನೆಯನ್ನು ಅವಳಿಗೆ ಗಿಫ್ಟ್ ಆಗಿ ನೀಡಳಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇವರಿಬ್ಬರು ಮಹಾಬಲಿಪುರಂ ಹನಿಮೂನ್ ನಲ್ಲಿದ್ದು ತಮ್ಮ ವಿವಾಹ ಜೀವನವನ್ನು ಶುರು ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.