ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ರವಿಶಂಕರ್ ಅದ್ಭುತ ಕಲಾವಿದ ವಾಯ್ಸ್ ಓವರ್ ಡಬ್ಬಿಂಗ್ ಆರ್ಟಿಸ್ಟ್, ಅಸಿಸ್ಟೆಂಟ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಹಲವಾರು ಸಿನಿಮಾದಲ್ಲಿ ವಿಲನ್ ಆಗಿ ಹಾಸ್ಯಗಾರ ಪಾತ್ರದಲ್ಲಿ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕಿಂತ ಮುಂಚೆ ರವಿಶಂಕರ್ ಅವರ ಬದುಕು ಹೇಗಿತ್ತು ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೌದು ನಟ ರವಿಶಂಕರ್ ಅವರು ಮೂಲತಃ ತೆಲುಗು ನೆವರು ಇವರ ತಂದೆ ತಾಯಿ ಇಬ್ಬರು ಕೂಡ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡವರೇ. ಇನ್ನು ಇವರ ಅಣ್ಣ ಸಾಯಿ ಕುಮಾರ್ ಹಾಗೂ ತಮ್ಮ ಅಯ್ಯಪ್ಪ ಚಿತ್ರರಂಗದಲ್ಲಿ ಕಾರ್ಯನಿರತರಾಗಿದ್ದವರು ಸಾಯಿ ಕುಮಾರ್ ಒಂದು ಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ತುಂಬೆಲ್ಲ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.
ಆದರೆ ನಟ ರವಿಶಂಕರ್ ಅವರು ಮೊಟ್ಟಮೊದಲ ಬಾರಿಗೆ 1986ರಲ್ಲಿ ನಾಯಕ ನಟರಾಗಿ ಕಾರ್ಯಸಿ ಕೊಂಡರೂ ಕೂಡ ಇವರಿಗೆ ಅದೃಷ್ಟ ಎಂಬುದು ಕೈಹಿಡಿಯಲಿಲ್ಲ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗ ಇವರನ್ನು ನಟನಾಗಿ ಬೆಳೆಯುವುದಕ್ಕೆ ಬಿಡಲಿಲ್ಲ ಅದ್ಬುತ ಕಂಠವನ್ನು ಹೊಂದಿದ್ದ ಕಾರಣ ಇವರನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸಕ್ಕೆ ಹಾಕಿಕೊಳ್ಳುತ್ತಾರೆ. ಇಲ್ಲಿಯವರೆಗೂ ಕೂಡ ನಟ ರವಿಶಂಕರ್ ಅವರು ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ವಾಯ್ಸ್ ಓವರ್ ಡಬ್ಬಿಂಗ್ ಕೊಟ್ಟಿದ್ದಾರೆ. ಪ್ರಕಾಶ್ ರಾಜ್, ಸೋನು ಸೂದ್, ದೇವರಾಜ್, ಚರಣ್ ರಾಜ್ ಹೀಗೆ ಕನ್ನಡದ ನಟರು ತಮಿಳು, ತೆಲುಗು, ಮಲಯಾಳಂನಲ್ಲಿ ನಟನೆ ಮಾಡಿದರೆ ಅವರಿಗೆ ತೆಲುಗಿನಲ್ಲಿ ವಾಯ್ಸ್ ಡಬ್ಬಿಂಗ್ ಕೊಡುತ್ತಿದ್ದ ಏಕೈಕ ನಟ ಅಂದರೆ ಅದು ರವಿಶಂಕರ್ ಮಾತ್ರ.
ಇನ್ನು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಹೇಳುವ ಹಾಗೆಯೇ ಇಲ್ಲ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕೊಟ್ಟು ಅವರಿಗೆ ಆಸರೆಯಾಗುವುದೇ ಇವರ ಮೂಲ ಉದ್ದೇಶ. ಈ ಕಾರಣಕ್ಕಾಗಿ ಸುದೀಪ ಅವರ ಸಿನಿಮಾದಲ್ಲಿ ಬಹುತೇಕ ಹೊಸಬರ ಇರುತ್ತಾರೆ ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾ ಆಗಿದ್ದಂತಹ ಸಿಂಗಂ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಬೇಕು ಅಂತ ಸುದೀಪ್ ಅಂದುಕೊಳ್ಳುತ್ತಾರೆ. ಆ ಸಮಯದಲ್ಲಿ ತಮಿಳುನಲ್ಲಿ ಪ್ರಕಾಶ್ ರಾಜ್ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಆ ಪಾತ್ರಕ್ಕೆ ಹೊಸ ಪ್ರತಿಭೆಯನ್ನು ಕರೆತರಬೇಕು ಎಂಬುವುದು ಕಿಚ್ಚ ಸುದೀಪ್ ಅವರ ಆಶಯವಾಗಿರುತ್ತದೆ. ಹಾಗಾಗಿ ಹೊಸ ವಿಲ್ಲನ್ ಅನ್ನು ಹುಡುಕುವಂತಹ ಕಾರ್ಯದಲ್ಲಿ ನಿರತರಾಗಿರುತ್ತಾರೆ.
ಈ ಸಮಯದಲ್ಲಿ ಸುದೀಪ್ ಅವರ ಕಣ್ಣಿಗೆ ಬಿದ್ದಂತಹ ನಟ ಅಂದರೆ ಅದು ರವಿಶಂಕರ್ ಅರುಂಧತಿ ಎಂಬ ಸಿನಿಮಾದಲ್ಲಿ ನಟ ಸೋನು ಸುದ್ ಅವರಿಗೆ ರವಿಶಂಕರ್ ಅವರು ವಾಯ್ಸ್ ಓವರ್ ನೀಡಿದರು ಇವರ ಧ್ವನಿಗೆ ಮಾರು ಹೋದಂತಹ ಸುದೀಪ್ ಅವರು ಹೇಗಾದರೂ ಮಾಡಿ ಅದ್ಭುತ ನಟನನ್ನೇ ಕನ್ನಡಕ್ಕೆ ಪರಿಚಯಿಸಬೇಕು ಅವರಿಗೆ ವಿಲನ್ ಪಾತ್ರದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಕೊಡಬೇಕು ಅಂತ ಅಂದುಕೊಳ್ಳುತ್ತಾರೆ. ತದನಂತರ ಕಿಚ್ಚ ಸುದೀಪ್ ರವಿಶಂಕರ್ ಗೆ ಕರೆ ಮಾಡಿ ಇಂತಹದೊಂದು ಪಾತ್ರದಲ್ಲಿ ನೀವು ನಟನೆ ಮಾಡಬೇಕು ಅಂತ ಹೇಳುತ್ತಾರೆ. ಆ ಸಮಯದಲ್ಲಿ ರವಿಶಂಕರ್ ಅವರು ಒಪ್ಪಿಕೊಳ್ಳುತ್ತಾರೆ ಈ ಸಿನಿಮಾದಲ್ಲಿ ರವಿಶಂಕರ್ ಹೇಗೆ ನಟನೆ ಮಾಡಿದರು ಅಂದರೆ ಅದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ.
ಕೆಂಪೇಗೌಡ ಸಿನಿಮಾದಲ್ಲಿ ಸಿಕ್ಕ ಯಶಸ್ಸಿನಿಂದಾಗಿ ಇಂದು ರವಿಶಂಕರ್ ಅವರು ಅದ್ಭುತ ನಟನಾಗಿ ಹೊರಹೊಮ್ಮಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ ಒಂದು ಕಾಲದಲ್ಲಿ ಅವಕಾಶ ಇಲ್ಲದೆ ಮೂಲೆ ಗುಂಪಾಗಿದ್ದಂತಹ ರವಿಶಂಕರ್ ಅವರಿಗಾಗಿ ಇದೀಗ ನಿರ್ಮಾಪಕರು ನಿರ್ದೇಶಕರೇ ಕಾದು ಕುಳಿತಿದ್ದಾರೆ ಅಷ್ಟರ ಮಟ್ಟಿಗೆ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಎಷ್ಟು ಪ್ರಸಿದ್ಧಿಯನ್ನು ಪಡೆದಿತ್ತೋ ಅಷ್ಟೇ ಪ್ರಸಿದ್ಧಿಯನ್ನು ತೆಲುಗಿನ ಆಲಿತೋ ಎಂಬ ಕಾರ್ಯಕ್ರಮ ಅಷ್ಟೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಕಳೆದ ವಾರವಷ್ಟೇ ನಟ ರವಿಶಂಕರ್ ಅಲಿತೋ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಟ ರವಿಶಂಕರ್ ಕೊಟ್ಟ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕನ್ನಡಿಗರ ಹೃದಯವಂತಿಕೆ ಎಷ್ಟು ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಹೌದು ಈ ಒಂದು ಕಾರ್ಯಕ್ರಮಕ್ಕೆ ಭಾಗವಹಿಸಿದಂತಹ ರವಿಶಂಕರ್ ಅವರು ತೆಲುಗು ಸಿನಿಮಾ ಇಂಡಸ್ಟ್ರಿ ನನ್ನ ಯೌವನವನ್ನು ಹಾಳು ಮಾಡಿತು ಅಷ್ಟೇ ಅಲ್ಲದೆ ನನ್ನ ಬದುಕನ್ನೇ ನಾಶ ಮಾಡಿತು ಅಂತ ಹೇಳಿದರು ಕೂಡ ತಪ್ಪಾಗಲಾರದು. ಈ ಸಮಯದಲ್ಲಿ ನನಗೆ ಬದುಕು ಕಟ್ಟಿಕೊಟ್ಟಿದ್ದು ನನಗೆ ಅನ್ನ ನೀಡಿದ್ದು ಜಾಗ ನೀಡಿದ್ದು ಎಲ್ಲವೂ ಕೂಡ ಕನ್ನಡ ಇಂಡಸ್ಟ್ರಿ. ಮುಖ್ಯವಾಗಿ ಸುದೀಪ ಅವರು ಒಬ್ಬರು ಇಲ್ಲ ಅಂದಿದ್ದರೆ ಇಂದು ನಾನು ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಕನ್ನಡ ಅಭಿಮಾನವನ್ನು ಹೊರಹಾಕಿದ್ದಾರೆ.
ನಿಮಗೆಲ್ಲ ಗೊತ್ತೇ ಇದೆ ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಿಂದಲೇ ಅವಕಾಶವನ್ನು ಗಿಟ್ಟಿಸಿಕೊಂಡು ಕನ್ನಡದಿಂದಲೇ ಸಿನಿಮಾ ಸಿನಿಮಾರಂಗಕ್ಕೆ ಎಂಟ್ರಿ ಪಡೆದು ಪರಭಾಷೆಯಲ್ಲಿ ಸದ್ದು ಮಾಡುತ್ತಿರುವಂತಹ ಅದೆಷ್ಟು ನಟಿಯರು ಇದ್ದಾರೆ. ಆದರೆ ಎಲ್ಲಿಯೂ ಕೂಡ ಕನ್ನಡ ಅಭಿಮಾನವನ್ನು ಎತ್ತಿ ತೋರಿಸಿಲ್ಲ ಈಗಾಗಲೇ ನಿಮಗೆ ತಿಳಿದೇ ಇರಬಹುದು ಆ ನಟ ನಟಿ ಯಾರು ಅಂತ. ಹೌದು ನಟಿ ರಶ್ಮಿಕ ಮಂದ್ದಣ್ಣ ಅವರು ಕನ್ನಡದಿಂದಲೇ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದರು ಕೂಡ ಎಲ್ಲಿಯೂ ಕೂಡ ಕನ್ನಡ ಅಭಿಮಾನವನ್ನು ತೋರಿಸಿಕೊಂಡಿಲ್ಲ ಅವರ ಮಧ್ಯೆ ರವಿಶಂಕರ್ ಅವರು ಎಷ್ಟೋ ಮೇಲು ಅಂತ ಅನಿಸುತ್ತದೆ.
ಏಕೆಂದರೆ ಮೂಲತಃ ತೆಲಗಿನವರಾದರು ಕೂಡ ತೆಲುಗು ಮಾಧ್ಯಮದಲ್ಲಿ ಕನ್ನಡ ಭಾಷೆಯನ್ನು ಹಾಡಿ ಹೊಗಳಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಕನ್ನಡಿಗರು ಮಾಡಿದಂತಹ ಸಹಾಯವನ್ನು ಸ್ಮರಿಸುತ್ತಿದ್ದಾರೆ ಮ. ನಿಜಕ್ಕೂ ನಾವು ಇಲ್ಲಿ ಎರಡು ವಿಚಾರವನ್ನು ವ್ಯಕ್ತಪಡಿಸಲೇಬೇಕು ಒಂದು ರವಿಶಂಕರ್ ಅವರು ನಮ್ಮ ಕನ್ನಡದ ಮೇಲೆ ಇಟ್ಟಿರುವಂತಹ ಭಾಷಾಭಿಮಾನವನ್ನು. ಇನ್ನೊಂದು ಕಿಚ್ಚ ಸುದೀಪ್ ಅವರು ಮಾಡಿದಂತಹ ಸಹಾಯವನ್ನು ಇಂದು ರವಿಶಂಕರ್ ತಮ್ಮ ಜೀವನದಲ್ಲಿ ಏನೇ ಯಶಸ್ಸು ಸಾಧಿಸುತ್ತಿದ್ದರು ಅದಕ್ಕೆಲ್ಲ ಮೂಲ ಕಾರಣ ಕಿಚ್ಚ ಸುದೀಪ್ ಅವರೇ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.