Friday, June 9, 2023
HomeEntertainmentರಿಷಬ್ ಶೆಟ್ಟಿಗಿಂತ ಅದ್ಭುತವಾಗಿ ಕಾಂತರಾ ಸಿನಿಮಾದ ಕ್ಲೈಮಾಕ್ಸ್ ದೃಶ್ಯ ಮಾಡಿದ ನೂಕುಲು ರಾಜು ಈ ವೈರಲ್...

ರಿಷಬ್ ಶೆಟ್ಟಿಗಿಂತ ಅದ್ಭುತವಾಗಿ ಕಾಂತರಾ ಸಿನಿಮಾದ ಕ್ಲೈಮಾಕ್ಸ್ ದೃಶ್ಯ ಮಾಡಿದ ನೂಕುಲು ರಾಜು ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೆರಗಾಗುತ್ತೀರಾ.! ಮೈ ಝುಮ್ ಅನ್ನುತ್ತೆ.

 

ಕಾಂತರಾ ಸಿನಿಮಾ ಇದಾಗಲೇ ಕನ್ನಡದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿದೆ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ದಿನದಿಂದ ದಿನಕ್ಕೆ ಒಂದದು ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ ಅಂತಾನೇ ಹೇಳಬಹುದು. ಕಾಂತರಾ ಸಿನಿಮಾವನ್ನು ಕೇವಲ ಕನ್ನಡ ಮಾತ್ರವಲ್ಲದೆ ಇಡಿ ಭಾರತೀಯ ಚಿತ್ರರಂಗ ಹಾಡಿ ಹೊಗಳುತ್ತಿದೆ ನಿಜಕ್ಕೂ ಕೂಡ ಇವರ ಅದ್ಭುತ ಅಭಿನಯವನ್ನು ಎಲ್ಲರೂ ಮೆಚ್ಚಲೇಬೇಕು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಮೀರಿಸುವಂತಹ ವ್ಯಕ್ತಿಯ ಅಭಿನಯದ ವಿಡಿಯೋ ಒಂದು ವೈರಲ್ ಆಗಿದೆ.

ಕಾಂತಾರ ಕೇವಲ 14 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಇಂದು 400 ಕೋಟಿ ಅನ್ನು ತಲುಪಿದೆ ಹೌದು ಇದು ನಿಜಕ್ಕೂ ಕೂಡ ಹೆಮ್ಮೆಯ ಸಂಗತಿ ಹೊಂಬಾಳೆ ಫಿಲಂ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಸಿನಿಮಾ ಇದೀಗ ಎಲ್ಲರ ಮನೆ ಮಾತಾಗಿದೆ. ಅದರಲ್ಲಿಯೂ ಕೂಡ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ತುಳುನಾಡು, ಭೂತಕೋಲ, ಪಂಜುರ್ಲಿ ದೈವ ಹೀಗೆ ನಮ್ಮ ಸಂಸ್ಕೃತಿ ಹಾಗೂ ಹಿಂದೂ ಧರ್ಮಕ್ಕೆ ಸಂಬಂಧ ಪಟ್ಟಂತಹ ಸಾಕಷ್ಟು ವಿಚಾರವನ್ನು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅದರಲ್ಲಿಯೂ ಪ್ರಕೃತಿ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ ಕೇವಲ ಬುದ್ದಿ ಬಲ ಇದ್ದರೆ ಸಾಲದು ದೈವ ಬಲವು ಇರಬೇಕು ಎಂಬುದನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ರಿಷಬ್ ಶೆಟ್ಟಿ ಅವರು ಮೂಲತಃ ಕುಂದಾಪುರದವರೇ ಹಾಗಾಗಿ ಅಲ್ಲಿನ ಆಚರಣೆಯ ವಿಚಾರಣೆ ಇದೆಲ್ಲದರ ಬಗ್ಗೆ ಅವರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಯಾವ ರೀತಿಯ ನಟನೆ ಮಾಡಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದರು.

ರಿಷಬ್ ಶೆಟ್ಟಿಯವರು ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಅದರಲ್ಲೂ ಕೊನೆಯ 20 ನಿಮಿಷಗಳು ಮಾತ್ರ ಮೈ ರೋಮಾಂಚನವಾಗುತ್ತದೆ. ಈ ಸಿನಿಮಾದಲ್ಲಿ ಇವರು ಮಾಡುದಂತಹ ಅಮೋಘ ನಟನೆಯನ್ನು ನೋಡಿದರೆ ನಿಜಕ್ಕೂ ಇವರಿಗೆ ಆಸ್ಕರ್ ಅವಾರ್ಡ್‌ ಅನ್ನೆ ಕೊಡಬೇಕು ಅಂತ ಅನಿಸುತ್ತದೆ‌ ಅಷ್ಟು ಅದ್ಭುತವಾಗಿ ನಟಿಸಿದ್ದಾರೆ‌. ರಿಷಬ್ ಶೆಟ್ಟಿ ಅವರಿಗಿಂತ ಮುಂಚೆ ಯಾರು ಕೂಡ ಇಂತಹದೊಂದು ಪಾತ್ರದಲ್ಲಿ ಅಭಿನಯಿಸಿರಲಿಲ್ಲ ಹಾಗಾಗಿ ಈ ಕೀರ್ತಿ ಗೌರವ ಪ್ರತಿಷ್ಠೆ ಎಲ್ಲವೂ ಕೂಡ ಇವರಿಗೆ ಸಲ್ಲಬೇಕು.

ಇದಿಷ್ಟು ನಿಮಗೆ ಸೇರಿದ ವಿಚಾರವಾದರೆ ಇದೀಗ ಕಾಂತರಾ ಸಿನಿಮಾದ ಕ್ಲೈಮ್ಯಾಕ್ಸ್ ಮಾದರಿಯಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ ಹೌದು ತೆಲುಗಿನ ಖ್ಯಾತ ರಿಯಾಲಿಟಿ ಶೋ ಆದಂತಹ ಶ್ರೀದೇವಿ ಡ್ರಾಮಾ ಕಂಪನಿಯಲ್ಲಿ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದಲ್ಲಿ ಮಾಡಿರುವ ಅಭಿನಯದಂತೆ ಇಲ್ಲೂ ಕೂಡ ಮಾಡಲಾಗಿದೆ. ಇದನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಏಕೆಂದರೆ ರಿಷಬ್ ಶೆಟ್ಟಿ ಮಾದರಿಯಲ್ಲೇ ಈ ನಟನು ಕೂಡ ಅದ್ಭುತವಾಗಿ ಅಭಿನಯ ಮಾಡಿದ್ದಾನೆ.

ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀದೇವಿ ಡ್ರಾಮ ಕಂಪನಿ ಶೋ ಸ್ಪರ್ಧಿ ನೂಕರಾಜು ರಿಷಬ್‌ ಶೆಟ್ಟಿಯವರಂತೆ ಅಭಿನಯ ಮಾಡಿದ್ದಾರ ಈ ವಿಡಿಯೋ ನೋಡಿದ ಮೆಚ್ಚಿಕೊಂಡು ವಾವ್ ಎಂದಿದ್ದಾರೆ ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿಯಂತೆ ಅದ್ಭುತವಾಗಿ ನಟಿಸಿದ್ದಿರಾ ಎಂದ ಹೇಳುತ್ತಿದ್ದಾರೆ. ಆದರೆ, ಈ ಒಂದು ದೃಶ್ಯಕ್ಕೆ ತನ್ನದೆಯಾದ ಮೌಲ್ಯವಿದೆ.

ಇದು ದೈವದ ವಿಚಾರ ಈ ಕುರಿತು ಸಂಪ್ರದಾಯ, ಪದ್ದತಿ, ಆಚಾರ ಇಲ್ಲದಂತೆ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿರುವ ಈ ವಿಡಿಯೋ ಮುಂದಿನ ದಿನದಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಈ ವಿಡಿಯೋಗೆ ಇದುವರೆಗೂ ಕಾಂತರಾ ಸಿನಿಮಾದ ಚಿತ್ರತಂಡ ಯಾವುದೇ ರೀತಿಯಾದಂತಹ ಅಸ್ತಕ್ಷೇಪ ಮಾಡಿಲ್ಲ ಹಾಗಾಗಿ ರಿಷಬ್ ಶೆಟ್ಟಿ ಈ ವಿಡಿಯೋ ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ನೂಕುಲು ರಾಜು ಅದ್ಭುತವಾಗಿ ಅಭಿನಯ ಮಾಡಿದಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ಹಾಗೂ ನಿಮ್ಮ ಪ್ರಕಾರ ರಿಷಬ್ ಶೆಟ್ಟಿ ಅಭಿನಯ ಉತ್ತಮವಾಗಿದೆಯೋ ಅಥವಾ ನೂಕೂಲು ರಾಜು ಅಭಿನಯ ಉತ್ತಮವಾಗಿದೆಯೋ ಎಂಬುದನ್ನು ಕಮೆಂಟ್ ಮಾಡಿ.