Sunday, May 28, 2023
HomeEntertainmentಇಂಟರ್ನ್ಯಾಷನಲ್ ಸ್ಟಾರ್ ಆದ ಮೇಲೆ ಸಂಪೂರ್ಣವಾಗಿ ಬದಲಾದ ಯಶ್, ರಾಕಿ ಬಾಯ್ ವರ್ತನೆ ನೋಡಿ ಕೆಂಡಮಂಡಲವಾದ...

ಇಂಟರ್ನ್ಯಾಷನಲ್ ಸ್ಟಾರ್ ಆದ ಮೇಲೆ ಸಂಪೂರ್ಣವಾಗಿ ಬದಲಾದ ಯಶ್, ರಾಕಿ ಬಾಯ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಅಷ್ಟಕ್ಕೂ ಯಶ್ ಮಾಡಿದ್ದೇನು ಗೊತ್ತಾ.?

 

ಇಂಟರ್ನ್ಯಾಷನಲ್ ಸ್ಟಾರ್ ಆದ ಮೇಲೆ ಕನ್ನಡ ಸಿನಿಮಾ ಮರೆತರ ಯಶ್.? RRR ಸಿನಿಮಾಗೆ ಅಭಿನಂದನೆ ಸಲ್ಲಿಸಿ ಕಾಂತರಾ & ವಿಕ್ರಂತ್ ರೋಣ ಪ್ರತಿಕ್ರಿಯೆ ನೀಡಲಿಲ್ಲ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವಂತಹ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾದಲ್ಲಿ ನಟನೆ ಮಾಡಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಜೊತೆಗೆ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಇನ್ನು ಕೆಜಿಎಫ್ ಸಿನಿಮಾ ಬಿಡುಗಡೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಸುಮಾರು 1250 ಕೋಟಿ ಕಲೆಕ್ಷನ್ ಮಾಡಿದ್ದು ಆ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಇನ್ನು ಕೆಜಿಎಫ್ ಸಿನಿಮಾವನ್ನು ಹೊರತು ಪಡಿಸಿದರೆ ಎಸ್.ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಿದಂತಹ ತ್ರಿಬಲ್ ಆರ್ಸಿ(RRR)ನಿಮಾ ಕೆಜಿಎಫ್ ಸಿನಿಮಾ ಗೆ ಪೈಪೋಟಿಯಾಗಿ ನಿಂತಿತ್ತು. ಆದರೆ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಕೆಜಿಎಫ್ ಸಿನಿಮಾವನ್ನು ಮೀರಿಸಲು ಸಾಧ್ಯವಾಗದೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಇನ್ನೆರಡು ಸಿನಿಮಾಗಳಾದಂತಹ ಕಾಂತರಾ ಹಾಗೂ ವಿಕ್ರಂತ್ ರೋಣ ಸಿನಿಮಾ ಕೂಡ ಬಿಡುಗಡೆಯಾಗಿದ್ದವು.

ಈಗ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಇದೇ ಸಿನಿಮಾದ ವಿಚಾರಕ್ಕೆ ಟೀಕೆಗೆ ಒಳಗಾಗಿದ್ದಾರೆ ಹೌದು, ತ್ರಿಬಲ್ ಆರ್ ಸಿನಿಮಾದ ಸಕ್ಸಸ್ ನೋಡಿ ಹೊಗಳಿರುವಂತಹ ರಾಕಿಂಗ್ ಸ್ಟಾರ್ ಯಶ್ ಅವರು ಕಾಂತಾರ ಹಾಗೂ ವಿಕ್ರಾಂತ್ ರೋಣ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಅಷ್ಟೆಲ್ಲ ಸಾಧನೆ ಮಾಡಿದರು ಕೂಡ ಯಾವುದೇ ವಿಚಾರವಾಗಿ ಮಾತನಾಡದೆ ಇದೀಗ ಎಲ್ಲರ ಕೆಂಗಳಿಗೆ ಗುರಿಯಾಗಿದ್ದಾರೆ. ತ್ರಿಬಲ್ ಆರ್ ಸಿನಿಮಾ 2023ನೇ ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮದಲ್ಲಿ ನಾಟು ನಾಟು ಹಾಡಿಗಾಗಿ ಅತ್ಯುತ್ತಮ ವರ್ಜಿನಲ್ ಹಾಡು ಎಂಬ ಪ್ರಶಸ್ತಿಯನ್ನು ಗೆದ್ದಿದೆ.

ಈ ಕುರಿತಾಗಿ ಯಶ್ ಅವರು ಟ್ವೀಟ್ ಮಾಡಿದ್ದಾರೆ ತ್ರಿಬಲ್ ಆರ್ ಸಿನಿಮಾ ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದಿರುವುದು ನನಗೆ ಖುಷಿ ತಂದಿದೆ. ಅಷ್ಟೇ ಅಲ್ಲದೆ ಎಸ್.ಎಸ್ ರಾಜಮೌಳಿ(S.S Rajmouli) ಸರ್ ಆಸ್ಕರ್ ಗೆಲ್ಲುವಂತಹ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ನಾಟು ನಾಟು ಹಾಡಿನಲ್ಲಿ ಹೆಜ್ಜೆ ಹಾಕಿರುವಂತಹ ರಾಮ್ ಚರಣ್ ತೇಜ(Ram Charan Teja) ಹಾಗೂ ಜೂನಿಯರ್ ಎನ್ಟಿಆರ್(Junior NTR) ಅವರಿಗೂ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಟ್ವಿಟ್ ಮಾಡಿದ್ದನ್ನು ಕಂಡಂತಹ ಕನ್ನಡದ ಕೆಲವು ನೆಟ್ಟಿಗರು ಯಶ್ ವಿರುದ್ಧ ಇದೀಗ ಚಾಟಿಯನ್ನು ಬೀಸಿದ್ದಾರೆ.

ತ್ರಿಬಲ್ ಆರ್ ಸಿನಿಮಾದ ನಾಟು ನಾಟು(Naatu Naatu) ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್(Golden Glob Award) ಸಿಕ್ಕಿರುವುದಕ್ಕೆ ಹಾಗೂ ರಾಜಮೌಳಿ ಅವರನ್ನು ಆಸ್ಕರ್ ಅವಾರ್ಡ್ ಪಡೆದುಕೊಳ್ಳುವುದಕ್ಕೆ ನೀವು ಅರ್ಹರಾಗಿದ್ದೀರಿ ಎಂಬ ವಿಚಾರಕ್ಕೆ ಟ್ವೀಟ್ ಮಾಡಿರುವಂತಹ ನೀವು ಕಾಂತರಾ(Kantara) ಸಿನಿಮಾ ಹಾಗೂ ವಿಕ್ರಂತ್ ರೋಣ(Vikrant Rona) ಸಿನಿಮಾ ಆಸ್ಕರ್ ಅವಾರ್ಡ್ ಗೆ ಹೋದಾಗ ಯಾಕೆ ಸುಮ್ಮನಿದ್ರಿ.? ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಕ್ಕೆ ನಮ್ಮ ಕನ್ನಡ ಸಿನಿಮಾಗಳನ್ನೇ ಮರೆತು ಹೋದ್ರಾ ಎಂದು ಫ್ಯಾನ್ಸ್ ಗಳು ಇದೀಗ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಕೇವಲ RRR ಸಿನಿಮಾಗೆ ಮಾತ್ರ ನೀವು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದೀರಾ ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ನಮ್ಮ ಕಾಂತರಾ ಸಿನಿಮಾ ಹಾಗೂ ವಿಕ್ರಂತ್ ರೋಣ ಸಿನಿಮಾದ ಬಗ್ಗೆಯೂ ಕೂಡ ಟ್ವಿಟ್ ಮಾಡಿದ್ದರೆ ಚೆನ್ನಾಗಿರುತ್ತೆ. RRR ಸಿನಿಮಾಗೆ ಇರುವಂತಹ ಒಲವು ನಮ್ಮ ಕನ್ನಡ ಸಿನಿಮಾಗೆ ಯಾಕೆ ಇಲ್ಲ ಎಂಬುವುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆದರು ಕೂಡ ಇಂಟರ್ನ್ಯಾಷನಲ್ ಸ್ಟಾರ್ ಲೆವೆಲ್ ಗೆ ಹೋಗುವುದಕ್ಕೆ ಕಾರಣ ಆಗಿದ್ದು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿನೇ ಎಂಬುವುದನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮರೆಯಬಾರದಿತ್ತು. ಜೊತೆಗೆ ಎಲ್ಲ ಸಿನಿಮಾವನ್ನು ಕೂಡ ಸಮಾನವಾಗಿ ನೋಡಬೇಕಿತ್ತು ಪಕ್ಷಪಾತಿಯ ನಿಯಮ ಬಿಡಬೇಕಿತ್ತು.

ರಾಕಿಂಗ್ ಸ್ಟಾರ್ ಯಶ್ ಅವರು ತಿಳಿದೋ ಅಥವಾ ತಿಳಿಯದೇನೋ ಈ ರೀತಿ ತಪ್ಪು ಮಾಡಿರಬಹುದು ಆದರೆ ಇವರು ಮಾಡಿರುವಂತಹ ಈ ಕೆಲಸದಿಂದಾಗಿ ಅಭಿಮಾನಿಗಳಂತೂ ಬೇಸರ ವ್ಯಕ್ತಪಡಿಸಿರುವುದಂತೂ ಖಚಿತ. ಇನ್ನೂ ಮುಂದೆ ಆದರೂ ಯಶ್ ಅವರು ಎಚ್ಚೆತ್ತಿಕೊಳ್ಳಲಿ ಬೇರೆ ಸಿನಿಮಾಗಳನ್ನು ಹೊಗಳಲಿ ತಪ್ಪಿಲ್ಲ ಆದರೆ ಮೊದಲು ನಮ್ಮ ಇಂಡಸ್ಟ್ರಿಗೆ ಹಾಗೂ ನಮ್ಮ ಸಿನಿಮಾಗಳಿಗೆ ಆದ್ಯತೆ ಕೊಟ್ಟರೆ ಉತ್ತಮ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ. ಯಶ್ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.