Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ...

ಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ ಆಯ್ಕೆ

ಫಿನಾಲೆ ವಾರಕ್ಕೆ ಸೆಲೆಕ್ಟ್ ಆದ ರೂಪೇಶ್ ರಾಜಣ್ಣ

ಕನ್ನಡದ ಬಿಗ್ ಬಾಸ್ ಸೀಸನ್ 9 ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಂತ್ಯದ ವಾರಗಳವರೆಗೂ ಬಂದು ತಲುಪು ಬಿಟ್ಟಿದೆ. ಈ ಬಾರಿ ಕಳೆದ ಎಲ್ಲಾ ಸೀಸನ್ ಗಿಂತ ಬಹಳ ವಿಶೇಷವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರಣ ಬಿಗ್ ಬಾಸ್ ಸೀಸನ್ 9 ಆರಂಭವಾಗುವುದಕ್ಕೂ ಮುಂಚೆ ಒಟಿಟಿಯಲ್ಲಿ ಒಂದು ಮಿನಿ ಬಿಗ್ ಬಾಸ್ ನಡೆಸಲಾಗಿತ್ತು. ಇದರಲ್ಲಿ ಗೆದ್ದ ನಾಲ್ಕು ಮಂದಿಯನ್ನು ಪ್ರವೀಣರ ಪಟ್ಟಿಯಲ್ಲಿ 9ನೇ ಆವೃತ್ತಿಯ ದೊಡ್ಡ ಪರದೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಕಳುಹಿಸಲಾಗಿತ್ತು.

ಮತ್ತು ಐದು ಜನ ಹಳೆಯ ಬಿಗ್ ಬಾಸ್ ಸ್ಪರ್ಧಿಗಳನ್ನು ಕೂಡ ಎರಡನೇ ಬಾರಿ ಮನೆ ಒಳಗೆ ಕಂಟೆಸ್ಟೆಂಟ್ ಆಗಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. 18 ಮಂದಿ ಬೇಕಾಗಿದ್ದ ಈ ಆಟಕ್ಕೆ ನವೀನರ ಪಟ್ಟಿಯಲ್ಲಿ 9 ಸೆಲಬ್ರೆಟಿಗಳನ್ನು ಆಟವಾಡಲು ಕಳುಹಿಸಲಾಗಿತ್ತು. ಪ್ರವೀಣರ ಹಾಗೂ ನವೀನರ ಕಾಂಬಿನೇಷನ್ ಅಲ್ಲಿ ಮನೆ ತುಂಬಾ ಕಲರವದಿಂದ ಕೂಡಿತ್ತು. ಎಲ್ಲಾ ಸೀಸನ್ ನಂತೆ ಕೋಪ, ಆಕ್ರೋಶ, ಆಟಿಟ್ಯೂಡ್, ಜಗಳ, ಗಲಾಟೆ, ನಗು, ದುಃಖ, ಕಾಮಿಡಿ, ಭಾವನಾತ್ಮಕ ಕ್ಷಣಗಳು, ಸ್ನೇಹ, ಪ್ರೀತಿ, ಫ್ಲರ್ಟ್ ಎಲ್ಲವೂ ಕೂಡ ತುಂಬಿಕೊಂಡಿತ್ತು.

ಪ್ರತಿ ವಾರ ಮನೆಯಿಂದ ಒಬ್ಬೊಬ್ಬ ಕಂಟೆಸ್ಟ್ ಆಚೆ ಹೋಗುತ್ತಿದ್ದಂತೆ ಈಗ ಮನೆ ಯಾಕೋ ಅನಿಸುತ್ತಿದೆ. ಆರಂಭದಲ್ಲಿ ಕಿಚ್ಚನ ಪಂಚಾಯಿತಿ ಕಟ್ಟೆ ಕಾರ್ಯಕ್ರಮದಲ್ಲಿ ಸೋಫಾ ಪೂರ್ತಿ ಕುಳಿತುಕೊಂಡು ತುಂಬಿದ ಕುಟುಂಬದಂತೆ ಕಾಣುತ್ತಿದ್ದ ಮನೆ ಈಗೀಗ ಮೂಲೆ ಮೂಲೆಯಲ್ಲಿ ಒಬ್ಬೊಬ್ಬರು ಕೂತು ಮುಖ ಮುಖ ನೋಡುವಷ್ಟು ಖಾಲಿ ಖಾಲಿ ಎನಿಸುತ್ತಿದೆ. ಎಲ್ಲದಕ್ಕೂ ಅಂತ್ಯ ಇರುವ ರೀತಿ ಕಾರ್ಯಕ್ರಮದ ಅಂತಿಮ ದಿನಗಳು ಕೂಡ ಹತ್ತಿರ ಆಗಿದೆ.

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದು ನೋಡುಗರು ತಮ್ಮ ಪ್ರಕಾರ ಯಾರು ಈ ಬಾರಿಯ ವಿನ್ನರ್ ಎನ್ನುವುದನ್ನು ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ಮೂರರಲ್ಲಿ ಶೃತಿ ಅವರು ವಿನ್ ಆಗಿದ್ದು ಬಿಟ್ಟರೆ ಬಳಿಕ ಯಾವುದೇ ಮಹಿಳಾ ಕಂಟೆಸ್ಟೆಂಟ್ ವಿನ್ ಆಗಿರಲಿಲ್ಲ. ಹಾಗಾಗಿ ಈ ಬಾರಿ ದೀಪಿಕಾ ದಾಸ್ ಅವರು ಗೆಲ್ಲಲು ಅರ್ಹಸ್ಪರ್ಧಿ ಎಂದು ಮಾತನಾಡಿಕೊಳ್ಳುತ್ತಿರುವ ನೆಟ್ಟಿಗರು ಅವರೇ ವಿನ್ನರ್ ಆಗಿರಬಹುದು ಎಂದು ಊಹಿಸುತ್ತಿದ್ದಾರೆ. ಇದು ಪ್ರವೀಣರ ಪಟ್ಟಿಯ ವಿಷಯವಾದರೆ ನವೀನರ ಪಟ್ಟಿಯಿಂದ ಈಗಾಗಲೇ ವಿನ್ನರ್ ಘೋಷಣೆ ಆಗಿದೆ.

ಯಾಕೆಂದರೆ ಈಗಾಗಲೇ ನವೀನರಾಗಿ ಮನೆ ಒಳಗೆ ಹೋಗಿದ್ದ ದರ್ಶ್, ಐಶ್ವರ್ಯ ಪಿಸ್ಸೆ, ಅಮೂಲ್ಯಗೌಡ, ಕಾವ್ಯಶ್ರೀ, ವೈರಲ್ ಹುಡುಗ ನವಾಜ್, ನೇಹ ಗೌಡ, ಮಯೂರಿ, ವಿನೋದ್ ಗೊಬ್ಬರಗಾಲ ಮತ್ತು ರೂಪೇಶ್ ರಾಜಣ್ಣ ಅವರಲ್ಲಿ ರೂಪೇಶ್ ರಾಜಣ್ಣ ಅವರನ್ನು ಬಿಟ್ಟು ಎಲ್ಲರೂ ಸಹ ಮನೆಯಿಂದ ಔಟ್ ಆಗಿ ಬಂದಿದ್ದಾರೆ. ಈಗ ಸದ್ಯಕ್ಕೆ ಮನೆ ಒಳಗಿರುವ ಆರು ಮಂದಿಯಲ್ಲಿ ರೂಪೇಶ್ ರಾಜಣ್ಣ ಮಾತ್ರ ಹೊಸ ಕಂಟೆಸ್ಟ್ಮೆಂಟ್ ಆಗಿ ಮನೆ ಒಳಗೆ ಹೋಗಿದ್ದವರಲ್ಲಿ ಉಳಿದಿರುವವರು.

ಆರ್ಯವರ್ಧನ್, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಬಂದಿದ್ದವರಾಗಿದ್ದಾರೆ ದೀಪಿಕಾ ದಾಸ್ ಹಾಗೂ ದಿವ್ಯ ಹುಡುಗ ಅವರು ಹಳೆಯ ಸೀಸನ್ ಇಂದ ಬಂದಿರುವವರು. ಅಂತಿಮ ಐದು ಸ್ಪರ್ಧಿಗಳಲ್ಲಿ ರೂಪೇಶ್ ರಾಜಣ್ಣ ಕೂಡ ಇರಲಿದ್ದಾರೆ ಎನ್ನುವ ನಂಬಿಕೆ ಹಲವರಿಗಿದೆ ಮತ್ತು ರೂಪೇಶ್ ರಾಜಣ್ಣ ಅವರು ಫಿನಾಲೆಯಲ್ಲಿ ಗೆಲ್ಲದೆ ಹೋದರು ನವೀನ ಪಟ್ಟಿಯಿಂದ ಕೊನೆವರೆಗೂ ಉಳಿದುಕೊಂಡ ಸ್ಪರ್ಧಿ ಇರುವುದರಿಂದ ಈಗ ಅವರು ಗೆದ್ದಂತೆಯೇ ಲೆಕ್ಕ. ಬಾರಿ ಕುತೂಹಲ ಸೃಷ್ಟಿಸಿರುವ ಈ ಸೀಸನ್ ವಿನ್ನರ್ ಯಾರಾಗುತ್ತಾರೆ ಕಾದು ನೋಡೋಣ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ತಪ್ಪದೇ ಕಮೆಂಟ್ ಮಾಡಿ