ದಿನ ದಿನಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದ ಬಿಗ್ ಬಾಸ್ ಸೀಸನ್ 9 ರ ಕಾರ್ಯಕ್ರಮ ಮುಗಿದಿದ್ದು, ಅಂತಿಮವಾಗಿ ರೂಪೇಶ್ ಶೆಟ್ಟಿ ಅವರು ಈ ಸೀಸನ್ ನ ವಿನ್ನರ್ ಆಗುವ ಮೂಲಕ ಬಿಗ್ ಆಟಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಓ ಟಿ ಟಿ ಕಾರ್ಯಕ್ರಮ ಶುರುವಾದ ದಿನದಿಂದಲೂ ರೂಪೇಶ್ ಶೆಟ್ಟಿ ಅವರ ಬಗ್ಗೆ ಪ್ರೇಕ್ಷಕರಿಗೆ ಬಹಳ ಹೋಪ್ ಇತ್ತು, ಈಗ ಅದು ನಿಜ ಆಗಿದ್ದು ಸೀಸನ್ 9ರ ಬಿಗ್ ಮನೆ ಆಟದಲ್ಲೂ ತಮ್ಮ ಅತ್ಯುತ್ತಮ ಆಟದಿಂದ ರೂಪೇಶ್ ಶೆಟ್ಟಿ ಅವರೇ ವಿನ್ ಆಗಿದ್ದಾರೆ.
ಇಷ್ಟು ದಿನಗಳ ಬಿಗ್ ಬಾಸ್ ಆಟದ ಕುರಿತು ಆಟದಲ್ಲಿನ ಏಳು ದಿನಗಳು ಮತ್ತು ಮನೆಯಲ್ಲಿನ ಇತರ ಅನುಭವಗಳ ಜೊತೆಗೆ ತಮ್ಮ ಸೀಕ್ರೆಟ್ ಆಫ್ ಸಕ್ಸಸ್ ಏನು ಎನ್ನುವುದನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಕೊರಗಜ್ಜನ ಕಾರ್ಣಿಕದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕರಾವಳಿ ಭಾಗದ ನಂಬಿಕೆ ದೈವ ಆಗಿರುವ ಕೊರಗಜ್ಜ ಭಕ್ತಿಯಿಂದ ಕೈ ಮುಗಿದು ಕೇಳಿಕೊಂಡವರಿಗೆ ಬೇಡಿದ್ದನ್ನು ಕೊಡುವ ದೈವ.
ರಕ್ಷಿತಾ ಅವರ ಸಲಹೆ ಮೇರೆಗೆ ವೇದ ಸಿನಿಮಾ ರಿಲೀಸ್ ಮುನ್ನ ದಿನ ಶಿವ ರಾಜ್ ಕುಮಾರ್ ಅವರು ಈ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಕಟ್ಟಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೇ ಸಾಕಷ್ಟು ಉದಾಹರಣೆಗಳು ಕೊರಗಜ್ಜನ ಮಹಿಮೆ ಬಗ್ಗೆ ಸಿಗುತ್ತದೆ. ಅಂತಹದೇ ಮತ್ತೊಂದು ಉದಾಹರಣೆಯನ್ನು ತಮ್ಮ ಜೀವನದಲ್ಲಿ ನಡೆದ ಕಥೆಯನ್ನು ವಿವರಿಸಿ ಹೇಳಿದ್ದಾರೆ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು.
ರೂಪೇಶ್ ಶೆಟ್ಟಿ ಅವರನ್ನು ಈಗ ಹಲವು ಮಾಧ್ಯಮಗಳು ಸಂದರ್ಶನ ಮಾಡುತ್ತಿದೆ. ಅದರಲ್ಲಿ ಒಂದು ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಗೆಲುವಿನ ನಿರೀಕ್ಷೆ ಇತ್ತಾ ಎಂದು ಅವರನ್ನು ಪ್ರಶ್ನಿಸಲಾಗಿದೆ. ಅದಕ್ಕೆ ರೂಪೇಶ್ ಅವರು ಈ ರೀತಿ ಉತ್ತರಿಸಿದ್ದಾರೆ. ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ನಾನು ಬಹಳ ಚಟುವಟಿಕೆಯಿಂದ ಪಾಲ್ಗೊಳ್ಳುತ್ತಿದ್ದೆ. ಆದರೆ ದೊಡ್ಡ ಪರದೆಯ ಬಿಗ್ ಬಾಸ್ ಗೆ ಬಂದ ಮೇಲೆ ಮಧ್ಯದಲ್ಲಿ ಸ್ವಲ್ಪ ದಿನ ನಾನು ತುಂಬಾ ಡಲ್ ಆಗಿ ಹೋದೆ.
ಆಗ ನಾನು ಕೊರಗಜ್ಜನನ್ನು ಬೇಡಿಕೊಂಡೆ ನಾನು ಎಲ್ಲೂ ಯಾರಿಗೂ ಮೋಸ ಮಾಡಿಲ್ಲ, ಯಾರ ಭಾವನೆಗಳು ನೋವು ಮಾಡಿಲ್ಲ, ಯಾವ ಸ್ಟ್ಯಾಟರ್ಜಿ ಕೂಡ ಮಾಡಿಲ್ಲ, ನಾನು ಇದ್ದಹಾಗೆ ನಡೆದುಕೊಂಡು ನನ್ನ ಅತ್ಯುತ್ತಮವನ್ನು ಕೊಡಲು ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಇಷ್ಟು ಡಲ್ ಆಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಗೆಲ್ಲಿಸು ಎಂದು ಕೇಳಿಕೊಂಡಿದ್ದೆ ಅದಕ್ಕೆ ಕೊರಗಜ್ಜ ನನಗೆ ಆಶೀರ್ವದಿಸಿದ್ದಾರೆ.
ಅದಾದ ಬಳಿಕ ಎರಡು ಬಾರಿ ಅತ್ಯುತ್ತಮ ಹಾಗೂ ಒಂದು ಬಾರಿ ಕಿಚ್ಚನ ಚಪ್ಪಾಳೆ ಪಡೆದು ಅಂತಿಮವಾಗಿ ನಾನು ವಿನ್ನರ್ ಆಗಿದ್ದೇನೆ. ಇದಕ್ಕೆಲ್ಲ ಕೊರಗಜ್ಜನ ಆಶೀರ್ವಾದವೇ ಕಾರಣ ಕಷ್ಟಪಟ್ಟು ಕೆಲಸ ಮಾಡಿ ಕೈಮುಗಿದು ಬೇಡಿಕೊಂಡರೆ ಖಂಡಿತವಾಗಿ ಆಶೀರ್ವಾದ ಮಾಡುತ್ತಾರೆ ಎಂದು ರೂಪೇಶ್ ಶೆಟ್ಟಿ ಅವರು ಹೇಳಿದ್ದಾರೆ. ಜೊತೆಗೆ ಮನೆಯ ಬಗ್ಗೆ ಮಾತನಾಡಿ ನಮಗೆ ಕ್ಯಾಪ್ಟನ್ ಆಗಲು ಇರುವುದು ಟಾಸ್ಕ್ ಒಂದೇ ದಾರಿ.
ಆ ಕಾರಣಕ್ಕಾಗಿ ನಾವು ಚೆನ್ನಾಗಿ ಆಡಬೇಕು ಆದರೆ ನಮ್ಮ ಆಟ ಯಾವ ರೀತಿ ಇದೆ ಎಂದು ಹೊರಗಡೆಯಿಂದ ಪ್ರೇಕ್ಷಕರು ನೋಡುತ್ತಿರುತ್ತಾರೆ, ಅವರ ಅಭಿಪ್ರಾಯ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗೆ ಬಿಗ್ ಬಾಸ್ ಆಟ ಒಂದು ರೀತಿ ನಮ್ಮ ಊಹೆಗೂ ನಿಲುಕದ್ದು ಎಂದಿದ್ದಾರೆ. ಕೆಲವೊಮ್ಮೆ ಮನುಷ್ಯನ ಪ್ರಯತ್ನದ ಜೊತೆಗೆ ದೈವ ಬಲವು ಇದ್ದರೆ ಯಾವುದೇ ಸ್ಪರ್ಧೆಯಾದರೂ ಸರಿ ಬದುಕಾದರೂ ಸರಿ ಅದನ್ನು ಗೆಲ್ಲಬಹುದು ಎಂಬುದಕ್ಕೆ ಇದೀಗ ರೂಪೇಶ್ ಶೆಟ್ಟಿಯವರೇ ನೈಜ ಉದಾಹರಣೆ ಕೊರಗಜ್ಜನ ಮೇಲೆ ನಿಮಗೆ ನಂಬಿಕೆ ಇದ್ದರೆ ತಪ್ಪದೇ ಜೈ ಕೊರಗಜ್ಜ ಎಂದು ಕಮೆಂಟ್ ಮಾಡಿ.