Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ...

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.

 

ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ಇದ್ದು ಫಿನಾಲೆ ಅಂತಕ್ಕೆ ಬಂದು ನಾಲ್ಕನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದಂತಹ ರೂಪೇಶ್ ರಾಜಣ್ಣ ಅವರು ದರ್ಶನ್ ಮೇಲೆ ಚಪ್ಪಲಿ ಎಸೆದ ವಿಚಾರ ತಿಳಿದು ತಕ್ಷಣವೇ ಲೈವ್ ಬಂದು ದರ್ಶನ್ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದರ್ಶನ್ ಅವರ ತೇಜೋವಧೆ ಮಾಡುವುದಕ್ಕೆ ಕಾದು ಕುಳಿತಿದ್ದೀರಾ ದರ್ಶನ್ ಒಬ್ಬರನ್ನೇ ನೀವು ಟಾರ್ಗೆಟ್ ಮಾಡ್ತಾ ಇದ್ದೀರಾ.? ಒಂದು ಹೇಳ್ತೀನಿ ಕೇಳಿ ಒಬ್ಬ ಲೈಟ್ ಬಾಯ್ ಆಗಿದ್ದಾಗಲೇ ಅವರನ್ನು ಯಾರು ಏನು ಮಾಡಲಿಕ್ಕೆ ಆಗಲಿಲ್ಲ ಇನ್ನು ಈಗ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ ಹಾಗಾಗಿ ದರ್ಶನ್ ಅನ್ನು ಯಾರು ಏನು ಮಾಡಕ್ಕೆ ಸಾಧ್ಯ ಇಲ್ಲ ಎಂದಿದ್ದಾರೆ.

ಇದರ ಜೊತೆಗೆ ರೂಪೇಶ್ ರಾಜಣ್ಣ ಅವರು ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಮಾಡುತ್ತಾರೆ ಆ ಸಮಯದಲ್ಲಿ ಕನ್ನಡದ ಸಾಕಷ್ಟು ನಟ ನಟಿಯರು ರಾಜಣ್ಣ ಅವರಿಗೆ ಸಾತ್ ಕೊಡುತ್ತಾರೆ ಸಪೋರ್ಟ್ ಮಾಡುತ್ತಾರೆ. ಇದರ ಜೊತೆಗೆ ರಾಜಣ್ಣ ಅವರು ದರ್ಶನ್ ಆಪ್ತರಿಗೊಬ್ಬರು ಕರೆ ಮಾಡಿ ದಯವಿಟ್ಟು ದರ್ಶನ್ ಸರ್ ಅವರ ಕಡೆಯಿಂದ ಒಂದು ಸ್ಟೇಟ್ಮೆಂಟ್ ಕೊಡಿಸಿ ಕನ್ನಡ ಪರ ಹೋರಾಟಗಾರರ ಪರ ನಿಲ್ಲಲಿ ಎಂದು ಹೇಳುತ್ತಾರೆ. ರಾಜಣ್ಣ ಹಾಗೆ ಹೇಳಿದ ಕೆಲವೇ ಗಂಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸ್ಟೇಟ್ಮೆಂಟ್ ಕೊಡುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಮೊದಲ ಭಾಷೆ ಕನ್ನಡವೇ ಆಗಿರುತ್ತದೆ ಬೇರೆ ಭಾಷೆಗಳಿಗೆ ನಾವು ವಿರೋಧ ಮಾಡುವುದಿಲ್ಲ. ಆದರೆ ನಮ್ಮ ಭಾಷೆಯನ್ನು ಖಂಡನಿಯವಾಗಿ ನೋಡಿದರೆ ನಾವು ಅದನ್ನು ನೋಡುತ್ತಾ ಸುಮ್ಮನೆ ಕೂರುವ ಮಕ್ಕಳೇ ಅಲ್ಲ ಎಂದು ಕಡಕ್ ಎಚ್ಚರಿಕೆ ನೀಡುತ್ತಾರೆ. ಇದಕ್ಕೋಸ್ಕರ ಆದರೂ ನಾನು ದರ್ಶನ್ ಅವರಿಗೆ ಸಪೋರ್ಟ್ ಮಾಡಲೇಬೇಕು, ದರ್ಶನ್ ಇದೇ ಮೊದಲೇನಲ್ಲ ಕನ್ನಡ ಭಾಷೆಯ ಬಗ್ಗೆ ನಾಡಿನ ಬಗ್ಗೆ ಮತ್ತು ಜಲದ ಬಗ್ಗೆ ಮಾತನಾಡಿರುವುದು ಸಾಕಷ್ಟು ಬಾರಿ ಮಾತನಾಡಿದ್ದಾರೆ.

ನಿಮ್ಮೆಲ್ಲರಿಗೂ ಒಂದು ವಿಚಾರ ತಿಳಿದಿಲ್ಲ ನಮ್ಮ ಕನ್ನಡ ಅಭಿಮಾನ ದರ್ಶನ್ ಅವರಿಗೆ ಎಷ್ಟಿದೆ ಅಂದರೆ ಒಮ್ಮೆ ಆಂಧ್ರಪ್ರದೇಶಕ್ಕೆ ಶೂಟಿಂಗ್ ಗೆ ತೆರಳಿದ್ದಾಗ ಅಲ್ಲಿ ಕನ್ನಡ ಚಾನೆಲ್ ಬರುವುದಿಲ್ಲ ಅಂತ ಹೇಳಿದ್ದಕ್ಕೆ ಗಲಾಟೆ ಮಾಡಿ ಶೂಟಿಂಗ್ ಸೆಟ್ ನಿಂದ ಆಚೆ ಬಂದಿದ್ದರು. ಬೇರೆ ರಾಜ್ಯದಲ್ಲೂ ಕೂಡ ನಮ್ಮ ರಾಜ್ಯ ಅಭಿಮಾನವನ್ನು ತೋರಿದ್ದಾರೆ ಕನ್ನಡದ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಹಾಗಾಗಿ ನಟ ದರ್ಶನ್ ಅವರ ಮೇಲೆ ಈ ರೀತಿಯಾದಂತಹ ಕೃತ್ಯವನ್ನು ಎಸೆಗಿರುವುದು ನಿಜಕ್ಕೂ ತಪ್ಪು ಅದೇನೇ ಆಗಲಿ ಒಂದು ಮಾತನ್ನು ಹೇಳ್ತೀನಿ ಕೇಳಿ.

ಯಾವಾಗಲೂ ಮಾವಿನ ಮರಕ್ಕೆ ಕಲ್ಲು ಹೊಡೆಯುತ್ತಾರೆ, ಬೇವಿನ ಮರಕ್ಕೆ ಕಲ್ಲು ಹೊಡೆಯುವುದಿಲ್ಲ ಯಾಕೆ ಹೇಳಿ ಮಾವಿನ ಹಣ್ಣು ಎಲ್ಲರಿಗೂ ಸಿಹಿಯನ್ನು ನೀಡುತ್ತದೆ. ಯಾರಿಗೂ ಕೂಡ ಕೆಟ್ಟದ್ದು ಬಯಸುವುದಿಲ್ಲ ಯಾರ ಬಗ್ಗೆಯೂ ಕೂಡ ಕೆಟ್ಟ ಯೋಚನೆ ಮಾಡುವುದಿಲ್ಲ ಹೀಗಾಗಿಯೇ ದರ್ಶನ್ ಅವರಿಗೆ ಚಪ್ಪಲಿ ಎಸೆದಿದ್ದಾರೆ ಎಂದು ರೂಪೇಶ್ ರಾಜಣ್ಣ ಅವರು ಭಾವುಕರಾಗಿದ್ದಾರೆ. ದರ್ಶನ್ ಕೇವಲ ಕನ್ನಡ ನಾಡು ನುಡಿ ಬಗ್ಗೆ ಮಾತ್ರವಲ್ಲದೆ ಇಲ್ಲಿನ ವನ್ಯ ಜೀವಿಗಳ ಬಗ್ಗೆಯೂ ಕೂಡ ಅತೀವ ಆಸಕ್ತಿಯನ್ನು ಹೊಂದಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಜನರು ಸಾಕಷ್ಟು ಸಂಕಷ್ಟವನ್ನು ಎದುರಿಸಿದರು ಸಹಾಯ ಮಾಡಿ ಅಂತ ಮನವಿ ಕೋರಿದ್ದರು ಶ್ರೀಮಂತರು ಬಡ ಸಹಾಯ ಮಾಡಿದ್ದಾರೆ. ಆದರೆ ಪ್ರಾಣಿಗಳಲ್ಲಿ ಶ್ರೀಮಂತರು ಬಡವರು ಎಂಬ ಭೇದಭಾವ ಇಲ್ಲ ಆ ಸಮಯದಲ್ಲಿ ಮೃಗಾಲಯ ಬಹಳ ನಷ್ಟದಲ್ಲಿತ್ತು. ಆ ಸಮಯದಲ್ಲಿ ದರ್ಶನ್ ಇಡೀ ಕರ್ನಾಟಕದ ಜನತೆಗೆ ಒಂದು ಕರೆ ಕೊಡುತ್ತಾರೆ ದಯವಿಟ್ಟು ಎಲ್ಲರೂ ಕೂಡ ಒಂದೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳಿ ಅಂತ.

ದರ್ಶನ್ ಅವರ ಕರೆಗೆ ಒಗ್ಗೂಡಿದಂತಹ ಕರ್ನಾಟಕದ ಜನರು ಮೃಗಾಲಯದಲ್ಲಿ ಇರುವಂತಹ ಪ್ರಾಣಿಗಳನ್ನು ದತ್ತು ಪಡೆಯುತ್ತಾರೆ ಇದರಿಂದ ಮೃಗಾಲಯಕ್ಕೆ ಸುಮಾರು ಮೂರು ಕೋಟಿ ಹಣ ಸಂಗ್ರಹವಾಗುತ್ತದೆ. ಇದರಿಂದಲೇ ತಿಳಿಯುತ್ತದೆ ಪ್ರಾಣಿಗಳ ಮೇಲೆ ಎಷ್ಟು ಒಲವು ಇತ್ತು ಅಂತ ಇಂತಹ ಮನುಷ್ಯನಿಗೆ ಚಪ್ಪಲಿಯಲ್ಲಿ ಒಡೆದು ಅವಮಾನ ಮಾಡಿದ್ದೀರಲ್ಲ ನಿಜಕ್ಕೂ ನಿಮಗೆ ಒಳ್ಳೆಯದು ಆಗಲ್ಲ ಎಂದು ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಬಂದ ಕೆಲವೇ ಗಂಟೆಯಲ್ಲಿ ಲೈವ್ ಬಂದು ದರ್ಶನ್ ವಿರುದ್ಧ ಇಂತಹ ಷಡ್ಯಂತ ಮಾಡಿರುವ ಅವರ ಬಗ್ಗೆ ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ.