ಅಪ್ಪು ಈ ಹೆಸರು ಕೇಳಿದರೆ ಸಾಕು ಎಲ್ಲರ ಮನಸ್ಸು ಹಾಗೂ ಸಮಯ ಸ್ತಬ್ಧವಾಗಿ ಬಿಡುತ್ತದೆ. ಅಪ್ಪು ಎನ್ನುವ ಆಕಾಶದ ಎತ್ತರದ ವ್ಯಕ್ತಿತ್ವಕ್ಕೆ ಗೌರವ ಸಂಧಿಸಲು ಕಣ್ಣಂಚಿನಿಂದ ನೀರು ಸದ್ದಿಲ್ಲದೆ ಹರಿಯುತ್ತಾ ಬರುತ್ತದೆ. ಅಪ್ಪು ಎನ್ನುವ ಇಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ದುಃಖ ಎಂದೆಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಕಳೆಯುವುದಿಲ್ಲ. ಅಪ್ಪು ಅವರು ಒಬ್ಬ ನಟ ಎನ್ನುವುದು ಇದಕ್ಕೆಲ್ಲ ಕಾರಣ ಅಲ್ಲ ಅದಕ್ಕೆಲ್ಲಕ್ಕಿಂತ ಮಿಗಿಲಾಗಿ ಅವರು ಮಾಡುತ್ತಿದ್ದ ಸಮಾಜ ಸೇವೆ ಮತ್ತು ಅವರ ಗುಣ ವ್ಯಕ್ತಿತ್ವಗಳು ಇಂದು ನಾವು ಅವರನ್ನು ಕಳೆದುಕೊಂಡು ದುಃಖಿಸಲು ಕಾರಣವಾಗಿವೆ. ತಾವು ಇಲ್ಲದಿದ್ದರೂ ಕೂಡ ತಮ್ಮಂತೆ ಬದುಕಲು ಲಕ್ಷಾಂತರ ಜನತೆಗೆ ಸ್ಪೂರ್ತಿ ಆಗಿ ಹೋದ ಅಪ್ಪು ಅವರ ಬದುಕು ನಿಜಕ್ಕೂ ಆದರ್ಶಮಯ. ಈಗಾಗಲೇ ಸಾವಿರಾರು ಉದಾಹರಣೆಗಳು ಕೇಳಿದ್ದೇವೆ ಅಂತದೇ ಮತ್ತೊಂದು ಸನ್ನಿವೇಶ ಇಲ್ಲಿದೆ ನೋಡಿ.
ಗಾರ್ಗಿ ಸಿನಿಮಾದ ಸಂದರ್ಶನಕ್ಕೆ ಬಂದಿದ್ದ ಸಾಯಿ ಪಲ್ಲವಿ ಅವರು ಮಾಧ್ಯಮ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಅವರೊಂದು ಪ್ರಶ್ನೆಯನ್ನು ಕೇಳಿದರು. ಸಾಯಿ ಪಲ್ಲವಿ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ ಮೊದಲು ಪರಿಚಯವಾಗಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ ಅವರು ಅಪ್ಪು ಅವರ ಹೆಸರನ್ನು ಹೇಳಿದ್ದಾರೆ, ಮತ್ತು ಆ ಸನ್ನಿವೇಶವನ್ನು ಕೂಡ ನೆನೆಸಿಕೊಂಡಿದ್ದಾರೆ. ನಾನು ನನ್ನ ಮೊದಲ ಸಿನಿಮಾವಾದ ಪ್ರೇಮಂ ಚಿತ್ರದ ಕಡೆಯಿಂದ ಫಿಲಂ ಫೇರ್ ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದೆ ನಾನು ನನ್ನ ಪ್ರಶಸ್ತಿಯನ್ನು ಸ್ವೀಕರಿಸಿ ಹೋಗುತ್ತಿದ್ದೆ ಆಗ ನನ್ನನ್ನು ನೋಡಿ ತಡೆದು ಮಾತಾಡಿಸಿದ ಅಪ್ಪು ಅವರು ಈ ಸಿನಿಮಾದಲ್ಲಿ ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು ಎಂದು ನನ್ನ ಅಭಿನಯವನ್ನು ಮೆಚ್ಚಿ ಮನಸಾರೆ ಹೊಗಳಿದರು.
ಆಗ ಅವರು ಒಬ್ಬ ಸೂಪರ್ ಸ್ಟಾರ್, ಕನ್ನಡದ ಸ್ಟಾರ್ ನಟ ಆದರೂ ಕೂಡ ನನ್ನ ಮೊದಲ ಪ್ರಯತ್ನವನ್ನೇ ಆ ಸಮಯದಲ್ಲಿ ನಾನು ಏನು ಕೂಡ ಆಗಿರಲಿಲ್ಲ ಅಂತಹ ನನ್ನ ಪ್ರತಿಭೆಯನ್ನೇ ಅವರು ಹೊಗಳಿದರು ಎಂದರೆ ನಿಜಕ್ಕೂ ನಾನು ಅದೃಷ್ಟವಂತೆ. ನಾನು ಮತ್ತೆ ಅವರನ್ನು ಭೇಟಿಯಾಗಿ ಅವರ ಮಾತುಗಳಿಂದ ನಾನು ಎಷ್ಟು ಸ್ಪೂರ್ತಿ ತೆಗೆದುಕೊಂಡೆ ಎನ್ನುವುದನ್ನು ಅವರಿಗೆ ವಿವರಿಸಬೇಕು ಎಂದಿದ್ದೆ. ಆದರೆ ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಅವರು ಈಗ ಇಲ್ಲ ಎನ್ನುವ ದುಃಖ ನನಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಮೊದಲು ಮಾತನಾಡಿಸಿದ್ದು ಅಪ್ಪು ಅವರೇ ನನಗೆ ಮೊದಲ ಪರಿಚಯ ಆಗಿದ್ದು ಕೂಡ ಅವರೇ ಆದರೆ ಈಗ ಸುಮಾರು ಜನ ನನಗೆ ಕನ್ನಡದಲ್ಲಿ ಗೊತ್ತಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಗಾರ್ಗಿ ಸಿನಿಮಾ ಮಿಂಚಲು ತಯಾರಾಗಿದ್ದು ಈ ಸಿನಿಮಾದ ಮೂಲಕ ಸಾಯಿ ಪಲ್ಲವಿ ಅವರು ಕನ್ನಡದ ಪರದೆಗಳ ಮೇಲು ಕೂಡ ಮಿಂಚಲಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅವರು ಅವರ ಪರಮಂವ ಸ್ಟುಡಿಯೋಸ್ ಇಂದ ಈ ಸಿನಿಮಾವನ್ನು ಅರ್ಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಹಾಗೂ ಗಾರ್ಗಿ ಅನ್ನುವುದು ಒಂದು ನೈಜ ಕತೆ ಆಧಾರಿತ ಸಿನಿಮಾ ವಾಗಿದ್ದು ಈ ಸಿನಿಮಾವನ್ನು ಅಷ್ಟೇ ನೈಜವಾಗಿ ಸಾಯಿ ಪಲ್ಲವಿ ಅವರು ಕೂಡ ಅಭಿನಯಿಸಿ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಧೈರ್ಯ ಸಾಹಸ ಹಾಗೂ ಅವರ ಕಷ್ಟ ಸುಖಗಳು ಎಲ್ಲಾ ಮಹಿಳೆಯರಿಗೆ ಸ್ಪೂರ್ತಿ ಆಗುವಂತದ್ದು ಹಾಗಾಗಿ ಈ ಸಿನಿಮಾವನ್ನು ಕನ್ನಡದ ಜನರಿಗೂ ತಲುಪಿಸಲು ನಾನು ಒಪ್ಪಿಕೊಂಡಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.