ನಟಿ ಸಮಂತ ರುತು ಪ್ರಭು ಅವರು ಸದ್ಯಕ್ಕೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ನಟಿಸುತ್ತಾ ಬಹಳ ಬಿಝಿ ಆಗಿರುವ ನಟಿ. ನಟಿ ಸಮಂತ ಋತು ಪ್ರಭು ಅವರು ಮೂಲತಃ ತಮಿಳುನಾಡಿನವರು. ತಮಿಳುನಾಡಿನಲ್ಲಿಯೇ ಬೆಳೆದರೂ ಸಹಾ ಇವರು ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳು ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಿದ್ದರು. 1987 ರಲ್ಲಿ ಜನಿಸಿರುವ ಈ ನಟಿಯ ವಯಸ್ಸು ಈಗ 35 ವರ್ಷಗಳಾಗಿದ್ದರೂ ಸಹ 20ರ ಆಸುಪಾಸು ಯುವತಿಯಂತೆ ಕಾಣುವ ಈಕೆ ಸಹಜ ಸುಂದರಿ ಎಂದರೆ ತಪ್ಪೇನಿಲ್ಲ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಮೇಕಪ್ ಇಲ್ಲದೆಯೂ ಸಹ ಬಹಳ ಸುಂದರವಾಗಿ ಕಾಣಿಸಿಕೊಳ್ಳುವ ಸಮಂತಾ ಋತು ಪ್ರಭು ಅವರು ಕೆಲವು ವರ್ಷಗಳ ಹಿಂದೆ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಕಾರಣಕ್ಕಾಗಿ ಒಮ್ಮೆ ಸರ್ಜರಿ ಕೂಡ ಮಾಡಿಸಿಕೊಂಡಿದ್ದರು ಎನ್ನುವ ಮಾತುಗಳು ಕೂಡ ಇವೆ. ಏ ಮಾಯ ಚೇಸಾವೆ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಇವರು ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು ಅಕ್ಕಿನೇನಿ ನಾಗ ಚೈತನ್ಯ ಅವರ ಜೊತೆಯಲ್ಲಿ ಆನಂತರ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದರು.
ಕನ್ನಡದ ಸುದೀಪ್ ಅವರು ತೆಲುಗಿನಲ್ಲಿ ನೆಗಟಿವ್ ನಲ್ಲಿ ಕಾಣಿಸಿಕೊಂಡಿದ್ದ ಈಗ ಎನ್ನುವ ಸಿನಿಮಾದಲ್ಲಿ ನಾಣಿ ಅವರು ನಾಯಕನಾಗಿದ್ದರು. ಈ ಸಿನಿಮಾದಲ್ಲಿ ಸಮಂತ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು ಇವರು ನಿರ್ವಹಿಸಿದ ಪಾತ್ರ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಸಿನಿಮಾದಲ್ಲಿನ ಬಿಂದು ಪಾತ್ರ ಅವರನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಯಿತು ಎಂದೇ ಹೇಳಬಹುದು. ತದನಂತರ ಒಂದರ ಹಿಂದೆ ಒಂದರಂತೆ ಹಲವು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ನಟಿ ಸಮಂತಾ ಋತು ಪ್ರಭು ಅವರು ಹಿಂತಿರುಗಿ ನೋಡಲೇ ಇಲ್ಲ. ಚಿತ್ರರಂಗದಲ್ಲಿ ಸ್ವಲ್ಪಸ್ವಲ್ಪವಾಗಿ ಬೆಳೆಯುತ್ತಾ ಬಂದರು.
ದೂಕುಡು ಮನಂ ಅತ್ತಾರಿಂಟಿಕಿ ದಾರೇದಿ ಬೃಂದಾವನಂ ಮಜಿಲಿ ರಂಗಸ್ಥಳ ಇನ್ನು ಮುಂತಾದ ಅನೇಕ ಸುಪರ್ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಸಮಂತ ಅವರದ್ದು. ಸಮಂತ ಅವರಿಗೆ ಅವರ ಪ್ರತಿಭೆ ಜೊತೆಯಲ್ಲಿ ಗ್ಲಾಮರಸ್ ಲುಕ್ ಇಂದಲೇ ಹೆಚ್ಚಾಗಿ ಅವಕಾಶಗಳು ಸಿಗುತ್ತಿದೆ ಎಂದರೆ ಸುಳ್ಳಾಗುವುದಿಲ್ಲ.
ಏಕೆಂದರೆ ಈಗಿನ ಕಾಲದ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಇಚ್ಚಿಸುವವರು ಈ ರೀತಿ ಸ್ವಲ್ಪ ಬೋಲ್ಡ್ ಆಗಿ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲೇಬೇಕು. ಈಗ ಈ ರೀತಿ ನಾಯಕಿಯರನ್ನು ಸಿನಿಮಾಗಳಲ್ಲಿ ತೋರಿಸುವುದು ಅನಿವಾರ್ಯ ಎನ್ನುವ ಮನಸ್ಥಿತಿಯಲ್ಲಿ ನಿರ್ದೇಶಕರುಗಳು ಇದ್ದಾರೆ. ಮೊದಮೊದಲು ಸಮಂತ ಋತು ಪ್ರಭು ಅವರು ಕೆಲವೊಂದಿಷ್ಟು ಸಿನಿಮಾಗಳಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.
ಹೆಚ್ಚಾಗಿ ಎಲ್ಲೂ ಎಕ್ಸ್ಪೋಸ್ ಇಲ್ಲದ ರೀತಿ ಪಾತ್ರಗಳನ್ನು ಒಪ್ಪಿಕೊಂಡು ನಿರ್ವಹಿಸುತ್ತಿದ್ದರು. ಆದರೆ ಬೆಳೆಯುತ್ತಾ ಹೋದಂತೆ ಈಗ ಕೆಲವು ವರ್ಷಗಳಿಂದ ಸಮಂತ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಹಾಗೂ ಪಾತ್ರಗಳಲ್ಲಿ ತುಂಬಾ ಬದಲಾಗಿ ಹೋಗಿದ್ದಾರೆ. ಇತ್ತೀಚೆಗೆ ಸಮಂತ ಅವರು ಒಪ್ಪಿಕೊಳ್ಳುತ್ತಿರುವ ಎಲ್ಲಾ ಪಾತ್ರಗಳಲ್ಲಿ ಕೂಡ ತುಂಬಾ ಬೋಲ್ಡ್ ಆಗಿ ಹಾಗೂ ಎಕ್ಸ್ಪೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳು ಅವಾರ್ಡ್ ಫಂಕ್ಷನ್ ಗಳು ಹೀಗೆ ಎಲ್ಲಾ ಕಡೆಗೂ ಕೂಡ ತುಂಡು ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮದುವೆಗೆ ಮುಂಚೆ ಈ ರೀತಿ ಇದ್ದ ಸಮಂತ ಅವರು ನಾಗಚೈತನ್ಯ ಅವರನ್ನು ವಿವಾಹವಾದ ಬಳಿಕ ಕೂಡ ಇದನ್ನೇ ಮುಂದುವರಿಸಿದ್ದಾರೆ. ನಾಗಚೈತನ್ಯ ಹಾಗೂ ಸಮಂತ ಅವರು ಪ್ರೀತಿಸಿ ವಿವಾಹವಾಗಿದ್ದರು. ಮೊದಮೊದಲು ಅಕ್ಕಿನೇನಿ ಕುಟುಂಬದಲ್ಲಿ ಈ ಸಂಬಂಧದ ಬಗ್ಗೆ ಸ್ವಲ್ಪ ಅಸಮಾಧಾನ ಇದ್ದರೂ ಕೂಡ ನಂತರ ನಾಗಚೈತನ್ಯ ಸಂತೋಷಕ್ಕಾಗಿ ಅವರಿಬ್ಬರ ಮದುವೆಯನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು. 2017ರಲ್ಲಿ ಮದುವೆಯಾಗಿದ್ದ ಈ ಜೋಡಿಯು ಹಲವು ವರ್ಷಗಳವರೆಗೆ ತುಂಬಾ ಚೆನ್ನಾಗಿ ಇದ್ದರು.
ಎಲ್ಲೇ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಾಗ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಇವರು ಪೋಸ್ಟ್ ಮಾಡುತ್ತಿದ್ದ ಫೋಟೋಗಳನ್ನು ಕಂಡಾಗ ಎಲ್ಲರೂ ಕೂಡ ಜೋಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ಯಾವಾಗ ಮದುವೆಯ ನಂತರವೂ ಸಮಂತ ಅವರು ತುಂಬಾ ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳಲು ಶುರುಮಾಡಿದರು ಆಗ ಅಕ್ಕಿನೇನಿ ಕುಟುಂಬದಿಂದ ಸ್ವಲ್ಪ ವಿರೋಧ ವ್ಯಕ್ತವಾಗಿತ್ತು. ನಾಗಾರ್ಜುನ ಹಾಗೂ ನಾಗಚೈತನ್ಯ ಅವರು ಕೂಡ ಸಿನಿಮಾರಂಗದಲ್ಲಿ ಇದ್ದರೂ ಕುಟುಂಬದ ವಿಚಾರದಲ್ಲಿ ಸ್ವಲ್ಪ ಸಂಪ್ರದಾಯ ಪಾಲನೆಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.
ಆದರೆ ಸಮಂತ ಅವರಿಗೆ ಅವರ ಕೆರಿಯರ್ ಅನ್ನು ಹಾಳು ಮಾಡಿಕೊಳ್ಳಲು ಇಷ್ಟವಿರಲಿಲ್ಲ ಹೀಗಾಗಿ ಅವರು ಕುಟುಂಬದ ವಿರೋಧದ ನಡುವೆಯೂ ಈ ರೀತಿ ಪಾತ್ರಗಳಲ್ಲಿ ಅಭಿನಯಿಸಲು ಶುರುಮಾಡಿದರು. ಅದರಲ್ಲೊಂದು ಫ್ಯಾಮಿಲಿ ಮ್ಯಾನ್ ಸೀಕ್ವೆನ್ಸ್ ಟು ಎನ್ನುವ ವೆಬ್ ಸೀರಿಸ್ ನಲ್ಲಿ ಸಮಂತಾ ಅವರು ಅಭಿನಯ ಮಾಡುವುದು ಅವರ ಕುಟುಂಬಸ್ಥರಲ್ಲಿ ಯಾರಿಗೂ ಇಷ್ಟವೇ ಇರಲಿಲ್ಲ. ಈ ಒಂದು ಕಾರಣವೇ ಇವರಿಬ್ಬರ ನಡುವಿನ ವಿ-ಚ್ಛೇ-ದ-ನಕ್ಕೆ ನೆಪವಾಗಿ ಇಬ್ಬರೂ ಕೂಡ ಈಗ ದೂರವಾಗಿದ್ದಾರೆ. ವಿ-ಚ್ಛೇ-ದ-ನ ಪಡೆದ ಬಳಿಕವೂ ಕೂಡ ನಟಿ ಸಮಂತಾ ಋತು ಪ್ರಭು ಅವರು ತುಂಬ ಬೋಲ್ಡ್ ಆಗಿ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಪುಷ್ಪ ಸಿನಿಮಾದಲ್ಲಿ ಹುಂ ಅಂಟಾವಾ ಎನ್ನುವ ಐಟಂ ಹಾಡಿನಲ್ಲಿ ಕೂಡ ಈ ರೀತಿಯಾಗಿ ಕಾಣಿಸಿಕೊಂಡಿದ್ದರು. ಸಮಂತ ಅವರು ಈಗ ಸ್ವತಂತ್ರ ಹಕ್ಕಿಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಇವರ ಈ ನಡುವಳಿಕೆಯ ಕಾರಣದಿಂದ ಆಗಾಗ ತೀವ್ರವಾಗಿ ಟ್ರೋಲ್ ಗೂ ಕೂಡ ಒಳಗಾಗುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಕಾಮೆಂಟ್ ಮುಖಾಂತರ ತಿಳಿಸಿ