ಟ್ಯಾಟೂ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಕ್ರೇಜ್ ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ಸಾಮಾನ್ಯ ಜನರಿಗಿಂತ ನಟ ನಟಿಯರಿಗೆ ಈ ಟ್ಯಾಟು ಮೇಲೆ ಇರುವಂತಹ ಒಲವು ಹೆಚ್ಚು ಅಂತಾನೆ ಹೇಳಬಹುದು. ಕೆಲವು ನಟಿಯರು ಈ ಟ್ಯಾಟೋ ಅನ್ನು ಫ್ಯಾಷನ್ ಗಾಗಿ ಹಾಕಿಸಿಕೊಳ್ಳುತ್ತಾರೆ ಇನ್ನು ಕೆಲವು ನಟಿಯರು ತಮ್ಮ ಜೀವನದಲ್ಲಿ ಇರುವಂತಹ ವಿಶೇಷ ವ್ಯಕ್ತಿಗಳ ನೆನಪಿಗಾಗಿಸಿ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ. ಹಾಗಾಗಿ ಇಂದು ದಕ್ಷಿಣ ಭಾರತದಲ್ಲಿ ಇರುವಂತಹ ಖ್ಯಾತ ನಟಿಯರು ಯಾವ ರೀತಿಯ ಹಾಕಿಸಿಕೊಂಡಿದ್ದಾರೆ ಹಾಗೂ ಈ ಟ್ಯಾಟೋದ ಹಿಂದಿರುವ ಅರ್ಥವಾದರೂ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.
ಮೊದಲನೇದಾಗಿ ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದನ್ನು ಗಿಟ್ಟಿಸಿಕೊಂಡಿರುವ ನಯನತಾರಾ ಅವರು ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದಂತಹ ವಿಚಾರ ನಿಮಗೆ ತಿಳಿದೇ ಇದೆ. ತಮ್ಮ ಪ್ರೀತಿಯ ಸಂಕೇತವಾಗಿ ಅವರು ತಮ್ಮ ಕೈನ ಮೇಲೆ ಪ್ರಭು ಎಂಬ ಹೆಸರನ್ನು ಟಾಟಾ ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರ ನಡುವೆ ಉಂಟಾದಂತಹ ಬಿರುಕಿನ ಕಾರಣ ಪ್ರಭು ಎಂಬ ಟ್ಯಾಟೋವನ್ನು ಇದೀಗ ಪೊಸಿಟಿವಿಟಿ ಎಂದು ಬದಲಾಯಿಸಿಕೊಂಡಿದ್ದಾರೆ. ಎರಡನೆಯದಾಗಿ ನಟಿ ಪ್ರಿಯಾಮಣಿ ಇವರು ದಕ್ಷಿಣ ಭಾರತದ ಎಲ್ಲಾ ಸಿನಿಮಾ ರಂಗದಲ್ಲಿಯೂ ಕೂಡ ನಟನೆ ಮಾಡಿದ್ದಾರೆ ಇನ್ನು ಪ್ರಿಯಾಮಣಿ ಅವರಿಗೆ ಅವರ ತಂದೆ ಎಂದರೆ ಬಹಳಾನೇ ಪ್ರೀತಿ ಈ ಕಾರಣಕ್ಕಾಗಿಯೇ ತಮ್ಮ ಕೈನ ಮೇಲೆ ಡ್ಯಾಡಿಸ್ ಗರ್ಲ್ ಎಂಬ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ.
ಮೂರನೆಯದಾಗಿ ಮೇಘನಾ ರಾಜ್ ಇವರು ತಮ್ಮ ಪತಿಯ ಅ.ಗ.ಲಿ.ಕೆಯ ನಂತರ ತಮ್ಮ ಪತಿಯ ಹೆಸರನ್ನು ಹಾಗೂ ತಮ್ಮ ಮುದ್ದು ಮಗನ ಹೆಸರನ್ನು ಇತ್ತೀಚಿಗಷ್ಟೇ ಕೈನ ಮೇಲೆ ಚಿರು ರಾಯನ್ ಎಂಬ ಟ್ಯಾಟನ್ನು ಹಾಕಿಸಿಕೊಂಡಿದ್ದಾರೆ. ಸೌತ್ ಇಂಡಿಯಾ ಆಕ್ಟರ್ಸ್ ಆದಂತಹ ತ್ರಿಷಾ ಕೃಷ್ಣ ಅವರು ಡಿಸ್ನಿ ಕ್ಯಾರೆಕ್ಟರ್ ನೇಮೋ ಎಂಬ ಮೀನಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಬಲಗೈನ ಅಂಗೈನ ಮೇಲೆ ತಮ್ಮ ಜನ್ಮ ರಾಶಿ ಆದಂತಹ ವೃಷಭ ರಾಶಿಯ ಗುರುತಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಬಲ ಭುಜದ ಮೇಲೆ ಸಿನಿಮಾದ ಕ್ಯಾಮೆರಾವನ್ನು ಹಾಕಿಸಿಕೊಂಡಿದ್ದಾರೆ.
ಇನ್ನು ಕಮಲ್ ಹಾಸನ್ ಪುತ್ರಿ ಶೃತಿ ಹಾಸನವರು ತಮ್ಮ ದೇಹದ ಇತರೆ ಭಾಗಗಳಲ್ಲಿ ಒಟ್ಟು ಐದು ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ ಅದರ ಪೈಕಿ ಕಿವಿಯ ಹಿಂಭಾಗದಲ್ಲಿ ಮ್ಯೂಸಿಕ್ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ತಮ್ಮ ಬೆನ್ನಿನ ಹಿಂದೆ ತಮ್ಮದೇ ಹೆಸರಿನ ಟ್ಯಾಟೋ ಹಾಕಿಸಿಕೊಂಡಿದ್ದಾರೆ ಇನ್ನು ತಮ್ಮ ಪಾದದಲ್ಲಿ ಹಾಗೂ ಒಕ್ಕಲಿನ ಕೆಳಗೆ ಇನ್ನೆರಡು ಟ್ಯಾಟೋ ಹಾಕಿಸಿಕೊಂಡರೆ ತಮ್ಮ ಮಣಿ ಕಟ್ಟಿನ ಮೇಲೆ ಗುಲಾಬಿ ಹೂವಿನ ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ. ನಟಿ ನಮಿತಾ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಬೆನ್ನಿನ ಮೇಲೆ ಸುಮಾರು 27 ಸ್ಟಾರ್ ಸಿಂಬಲ್ ಇರುವ ಟ್ಯಾಟನ್ನು ಹಾಕಿಸಿಕೊಂಡಿದ್ದಾರೆ ತದನಂತರ ತಮ್ಮ ಅಂಗೈನ ಮೇಲೆ ಮತ್ತೊಂದು ಟ್ಯಾಟು ಹಾಕಿಸಿಕೊಂಡಿದ್ದಾರೆ.
ಮಯೂರಿ ಅವರು ತಮ್ಮ ಬಲತೋಳಿನ ಮೇಲೆ ನವಿಲುಗರಿಯ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ ಇದು ಕೃಷ್ಣನ ಮೇಲೆ ಆಕೆಗೆ ಇರುವಂತಹ ಭಕ್ತಿ ಹಾಗೂ ನವಿಲಿನ ಬಗ್ಗೆ ಇರುವಂತಹ ಒಲವನ್ನು ತೋರ್ಪಡಿಸುತ್ತದೆ. ಇನ್ನು ನಟಿ ಸಂಜನಾ ಗರ್ಲಾನಿ ಅವರು ತಮ್ಮ ಬಲಗೈನ ಮೇಲೆ ನೆವರ್ ಗೀವ್ ಅಪ್ ಎಂಬ ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ. ಹೆಸರುವಾಸಿ ಆದಂತಹ ರಶ್ಮಿಕಾ ಮದ್ದಣ್ಣ ಅವರು ತಮ್ಮ ಬಲಗೈನ ಮೇಲೆ ಇರ್ರಿಸೇಬಲ್ ಎಂಬ ಟ್ಯಾಟೋ ಹಾಕಿಸಿಕೊಂಡಿದ್ದಾರೆ ಇದರ ಅರ್ಥ ಯಾರು ಕೂಡ ಬದಲಾಯಿಸಲಾಗದ ಭಾವನೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಬಹುಶಃ ಇದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸುತ್ತಿರುವಾಗ ಹಾಕಿಸಿಕೊಂಡಂತಹ ಟ್ಯಾಟೋ ಹಾಗೂ ಅವರ ಪ್ರೀತಿಯನ್ನು ಯಾರಿಂದಲೂ ತುಂಬಲು ಸಾಧ್ಯವಾಗುವುದಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಇನ್ನಷ್ಟು ನಟಿಮಣಿಯರ ಟ್ಯಾಟೋ ಹಾಗೂ ಅದರ ಹಿಂದಿರುವ ಅರ್ಥವನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ.