Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?

ಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?

 

ಕಾಂತಾರದ ಲೀಲಾ ನಟಿ ಸಪ್ತಮಿ ಗೌಡ ಈಗ ಪಾನ್ ಇಂಡಿಯಾ ತಾರೆ. ಕಾಂತರಾ ಸಿನಿಮಾದ ಸಕ್ಸಸ್ ಆಕೆಯನ್ನು ಬಾಲಿವುಡ್ ಅಂಗಳದಕ್ಕೂ ಕರೆದೊಯ್ದಿದೆ. ಕಾಂತರಾ ಸಿನಿಮಾ ಆದಮೇಲೆ ವಿಶ್ವದಾದ್ಯಂತ ಎಲ್ಲರೂ ಕೂಡ ಸಪ್ತಮಿ ಗೌಡ ಅವರನ್ನು ಗುರುತಿಸುತ್ತಿದ್ದಾರೆ. ಆದರೆ ಕಾಂತರಾ ಸಿನಿಮಾ ಮಾಡುವ ಮುಂಚೆ ಸಪ್ತಮಿ ಗೌಡ ಕಮರ್ಷಿಯಲ್ ಸಿನಿಮಾ ಒಂದರಲ್ಲಿ ಭಜಾರಿ ಹೆಂಡ್ತಿ ಪಾತ್ರ ಮಾಡಿದ್ದರು ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ.

ಡಾಲಿಗೆ ಎರಡನೇ ಬಾರಿ ಬ್ರೇಕ್ ಕೊಟ್ಟ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಮಂಕಿ ಸೀನನ ಹೆಂಡತಿ ಗಿರಿಜಾ ಪಾತ್ರವನ್ನು ಸಪ್ತಮಿ ಗೌಡ ಮಾಡಿ ಫೇಮಸ್ ಆಗಿದ್ದರು. ಬೀಪ್ ಸೌಂಡ್ ಬೈಗುಳಗಳನ್ನು ಮನಸಾರೆ ಬಯ್ಯುತ್ತಾ ಪಡ್ಡೆ ಹೈಕಳಿಗೆಲ್ಲ ಸಿಕ್ಕರೆ ಇಂಥ ಹೆಂಡ್ತಿ ಸಿಗಲಿ ಎಂದು ಆಸೆ ಆಗುವಂತೆ ಮಾಡಿದ್ದರು.

ಆ ಸಿನಿಮಾದಿಂದಲೂ ಕೂಡ ಸಪ್ತಮಿ ಗೌಡ ಹಾಗೂ ಡಾಲಿ ಧನಂಜಯ್ ಅವರಿಗೆ ಸ್ನೇಹವಿದೆ. ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಡಾಲಿ ಧನಂಜಯ್ ಅವರ ಬದುಕಿನ ಭಾಗವಾದ ಹಲವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಧನಂಜಯ್ ಅವರ ಕುಟುಂಬಸ್ಥರುಗಳು, ಸ್ನೇಹಿತರು, ಚಿತ್ರರಂಗದ ಸ್ನೇಹಿತರು ಎಲ್ಲರೂ ಆಗಮಿಸಿದ್ದರು.

ಸಪ್ತಮಿ ಗೌಡ ಕೂಡ ಬಂದಿದ್ದು ಸ್ವತಃ ಡಾಲಿಗೆ ಆಶ್ಚರ್ಯವಾಗಿತ್ತು ಮೊದಲಿಗೆ ಸಪ್ತಮಿ ಗೌಡ ಅವರು ಡಾಲಿ ಅವರ ಗುಣಗಳ ಬಗ್ಗೆ ಗುಣಗಾನ ಮಾಡಿ ಅವರ ಕುರಿತಂತೆ ಅನೇಕ ವಿಷಯಗಳನ್ನು ಹೇಳಿಕೊಂಡು ಕೊನೆಗೆ ಅವರ ಹೆಸರನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎನ್ನುವುದನ್ನು ಕೂಡ ತಿಳಿಸಿದ್ದಾರೆ. ಸಪ್ತಮಿ ಗೌಡ ಅವರು ತುಂಬಾ ಸ್ಪೆಷಲ್ ಆದ ಹೆಸರನ್ನೇ ಇಟ್ಟಿದ್ದಾರೆ ಡಾಲಿಗೆ.

ನಾನು ನನ್ನ ಫೋನ್ ನಲ್ಲಿ ದಕ್ಷಿಣ ಪಥೇಶ್ವರ್ ಎಂದು ಧನಂಜಯ್ ಹೆಸರನ್ನು ಸೇವ್ ಮಾಡಿಕೊಂಡಿದ್ದೇನೆ. ಇದಕ್ಕೆ ಕಾರಣ ಇತ್ತೀಚಿಗೆ ಅವರು ದಕ್ಷಿಣ ಭಾರತದ ಎಲ್ಲಾ ಸಿನಿಮಾ ಇಂಡಸ್ಟ್ರಿಯನ್ನು ಆಳಲು ಹೆಜ್ಜೆ ಇಡುತ್ತಿದ್ದಾರೆ ಎನ್ನುವುದು ಎಂದು ಅದಕ್ಕೆ ಕಾರಣವನ್ನು ರಿವೀಲ್ ಮಾಡಿದ್ದಾರೆ. ಇದರೊಂದಿಗೆ ಧನಂಜಯ್ ಅವರ ಕುರಿತ ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಧನಂಜಯ್ ಅವರು ಬಹಳ ಮುಗ್ಧ ನೋಡಲು ಅಮಾಯಕ ಎಂದು ಎಲ್ಲರೂ ಹೇಳುತ್ತಾರೆ ಆದರೆ ಅವರು ಬಹಳ ಪೋಲಿ. ನಾನು ಅವರ ಜೋಕ್ ಗಳನ್ನು ಕೇಳಿದ್ದೇನೆ, ಅವರ ಸುತ್ತ ಇರುವವರು ಯಾವಾಗಲು ನಗುತ್ತಲೆ ಇರುತ್ತಾರೆ ಆ ರೀತಿ ನೋಡಿಕೊಳ್ಳುತ್ತಾರೆ ಧನಂಜಯ್ ಎಂದು ಹೇಳಿದ್ದಾರೆ. ಅವರ ಇನ್ನೊಂದು ಗುಣ ನಮ್ಮೆಲ್ಲರಿಗೂ ಬಹಳ ಇಷ್ಟ. ಏನೆಂದರೆ, ತಮ್ಮ ಸಿನಿಮಾ ತಂಡವನ್ನು ಕುಟುಂಬದಂತೆ ನೋಡುತ್ತಾರೆ ಇವರು, ಒಂದು ಇನ್ಸಿಡೆಂಟ್ ಬಗ್ಗೆ ಹೇಳಬೇಕು ಎಂದರೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆದಾಗ ನಾನು ಯಾರಿಗೂ ಪರಿಚಯ ಇರಲಿಲ್ಲ.

ಸಿನಿಮಾ ನೋಡಲು ಬಂದವರು ಅವರ ಇಂಟರ್ವ್ಯೂ ಮಾಡ್ತಿದ್ದರು ಅವರ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದರು ಆದರೂ ಅವರೇ ನನ್ನನ್ನು ಕರೆದು ಎಲ್ಲರಿಗೂ ಪರಿಚಯಿಸಿದರು. ಅವರ ಡಾಲಿ ಪಿಕ್ಚರ್ಸ್ ಧ್ಯೇಯ ಕೂಡ ಇದೇ ಇದೆ. ತಾವು ಬೆಳೆದು ಜೊತೆಗಿರೋರನ್ನು ಕೂಡ ಬೆಳೆಸುವ ದೊಡ್ಡ ಗುಣ ಅವರದು ಎಂದು ಹೇಳಿದ್ದಾರೆ. ಡಾಲಿ ಅವರು ಸಹ ಸಪ್ತಮಿ ಗೌಡ ಅವರ ಬಗ್ಗೆ ತಮ್ಮ ನೆನಪುಗಳಲ್ಲಿ ಇರುವುದನ್ನು ಹೇಳಿ ಕೊಂಡಿದ್ದಾರೆ.