ಶಕ್ತಿಪ್ರಸಾದ್ ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಎನ್ನುವ ಗ್ರಾಮದಲ್ಲಿ. ಇವರ ತಂದೆ ಹೆಸರು ಚಿಕ್ಕಣ್ಣ. 1929ರಲ್ಲಿ ಮಾರ್ಚ್ 13 ರಂದು ಶಕ್ತಿ ಪ್ರಸಾದ್ ಅವರು ಜನಿಸುತ್ತಾರೆ, ಇವರಿಗೆ ರಾಮಸ್ವಾಮಿ ಎಂದು ಮೊದಲಿಗೆ ಹೆಸರಿಡಲಾಗಿರುತ್ತದೆ. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರಿಗಿಂತ ಒಂದು ತಿಂಗಳು ಹಿರಿಯರು ಅಷ್ಟೇ. ಮಧುಗಿರಿ ಎನ್ನುವ ಬೆಟ್ಟ ಗುಡ್ಡಗಳಿಂದ ಕೂಡಿದ ಆ ಪ್ರದೇಶದಲ್ಲಿ ಎಲ್ಲ ಮನೆಯ ಮಕ್ಕಳು ಶಾಲಾ ವಿದ್ಯಾಭ್ಯಾಸದ ಜೊತೆ ದೊಣ್ಣೆ ವರೆಸೆ ಕಲಿಯುತ್ತಿರುತ್ತಾರೆ.
ಶಕ್ತಿಪ್ರಸಾದ್ ಅಲಿಯಾಸ್ ರಾಮಸ್ವಾಮಿ ಅವರು ಸಹ ಈ ದೊಣ್ಣೆ ವರೆಸಿ ಕಲಿಯುತ್ತಿರುತ್ತಾರೆ ಜೊತೆಗೆ ಅಲ್ಲಿಯ ಭಾಗದ ಜನರು ವ್ಯಾಯಾಮ ಶಾಲೆಗೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರಿಂದ ಇವರೂ ಕೂಡ ಅವರ ಜೊತೆ ವ್ಯಾಯಾಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾ ದೇಹ ಹುರಿಗೊಳಿಸಿಕೊಳ್ಳುತ್ತಾರೆ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನ ಆರ್ಸಿ ಕಾಲೇಜಿನಲ್ಲಿ ಬಿಕಾಂ ಮಾಡುತ್ತಾರೆ. ಪದವಿದರದ ಇವರಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸ ಸಿಗುತ್ತದೆ.
ಚಾಮರಾಜಪೇಟೆಯ ಫೋರ್ಟ್ ಹೈಸ್ಕೂಲಿನಲ್ಲಿ ವಾಣಿಜ್ಯ ಶಿಕ್ಷಕರಾಗಿ ನೇಮಕಗೊಂಡರು ಕೂಡ ಎಲ್ಲರೂ ಇವರನ್ನು ಪಿ.ಟಿ ಮಾಸ್ಟರ್ ಎಂದಂ ಭಾವಿಸಿರುತ್ತಾರೆ. ಯಾಕೆಂದರೆ ಬಿಡುವಿನ ಸಮಯದಲ್ಲಿ ತಾವು ಕಲಿತಿದ್ದ ವ್ಯಾಯಾಮಗಳನ್ನು ಹಾಗೂ ಆ ಶಾಲೆಯ ಮಕ್ಕಳಿಗೂ ಕಲಿಸುತ್ತಿರುತ್ತಾರೆ. ಶಾಲೆಗಳಲ್ಲಿ ಗುರುಗಳನ್ನು ಇನಿಷಿಯಲ್ ಇಂದ ಕರೆಯುವುದು ಪ್ರತೀತಿ ಹಾಗಾಗಿ ಇವರನ್ನು ಎಲ್ಲರೂ ಜೆಸಿಆರ್ ಮೇಷ್ಟು ಎನ್ನುತ್ತಿರುತ್ತಾರೆ. ಜೆ ಸಿ ಆರ್ ಎಂದರೆ ಜಕ್ಕೇನಹಳ್ಳಿ ಚಿಕ್ಕಣ್ಣನವರ ಮಗ ರಾಮಸ್ವಾಮಿ. ಆದರೆ ಆನಂತರ ಜೆಸಿಆರ್ ಮೇಷ್ಟ್ರು ಶಕ್ತಿಪ್ರಸಾದ್ ಆದ ಕಥೆಯ ರೋಚಕ.
ಶಕ್ತಿಪ್ರಸಾದ್ ಅವರ ತಂದೆ ಪಟೇಲರಾಗಿರುತ್ತಾರೆ ಹಾಗಾಗಿ ಇವರಿಗೆ ನಾಟಕಗಳ ಅಭಿರುಚಿ ಇರುತ್ತದೆ. ಶಕ್ತಿಪ್ರಸಾದ್ ಅವರ ತಂದೆಯೇ ಇವರಿಗೆ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಪ್ರೋತ್ಸಾಹ ಮಾಡುತ್ತಾರೆ. ಬಿ ಎ ಅರಸುಕುಮಾರ್ ಅವರ ಒಡನಾಟದಲ್ಲಿ ಅನೇಕ ನಾಟಕಗಳಿಗೆ ಬಣ್ಣವನ್ನು ಹಚ್ಚುತ್ತಾರೆ. ನಂತರ ಕನ್ನಡ ಕಲಾಕ್ಷೇತ್ರ ಎನ್ನುವ ತಮ್ಮದೇ ಆದ ಸಂಸ್ಥೆ ಕಟ್ಟಿ ಅಲ್ಲೂ ಅನೇಕ ನಾಟಕಗಳನ್ನು ಮಾಡುತ್ತಾರೆ. ಟಿಪ್ಪು ಸುಲ್ತಾನ್ ನಾಟಕದಲ್ಲಿ ಟಿಪ್ಪು ಪಾತ್ರದಲ್ಲಿ ಇವರನ್ನು ನೋಡಿದ ಕೂರಾ ಸೀತಾರಾಮಶಾಸ್ತ್ರಿ ಅವರು ಇವರನ್ನು ಮದ್ರಾಸಿಗೆ ಕರೆದುಕೊಂಡು ಹೋಗುತ್ತಾರೆ.
ಆ ದಿನಗಳಲ್ಲಿ ಕರಗಶಕ್ತಿ ಎನ್ನುವ ಒಂದು ಸಿನಿಮಾ ನಿರ್ಮಾಣ ಆಗುತ್ತಿರುತ್ತದೆ ಆ ಸಿನಿಮಾದಲ್ಲಿ ಶಕ್ತಿ ಪ್ರಸಾದ್ ಅವರಿಗೆ ಒಂದು ಅವಕಾಶ ಸಿಗುತ್ತದೆ. ಆ ಸಿನಿಮಾ ಕಾರಣಾಂತರಗಳಿಂದ ಪೂರ್ತಿ ಆಗುವುದಿಲ್ಲ ಆದರೆ ಆ ಸಿನಿಮಾದಿಂದ ಪ್ರಭಾವಿತರಾದ ಶಕ್ತಿಪ್ರಸಾದ್ ಅವರು ಕೂರಾ ಸೀತಾರಾಮ ಶಾಸ್ತ್ರಿ ಅವರ ಬಳಿ ಹೋಗಿ ನಮ್ಮ ಮನೆ ದೇವರು ಚೌಡೇಶ್ವರಿ ಅವರ ಪ್ರಸಾದ ಹಾಗೂ ತಾಯಿಯ ಶಕ್ತಿ ಎರಡು ಸೇರಿ ಶಕ್ತಿ ಪ್ರಸಾದ್ ಎಂದು ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ಕೇಳುತ್ತಾರೆ.
ಹೆಸರು ಚೆನ್ನಾಗಿದ್ದ ಕಾರಣ ಸೀತಾರಾಮ ಶಾಸ್ತ್ರಿ ಅವರು ಸಹ ಬೇಡ ಎನ್ನುವುದಿಲ್ಲ ಅಂದಿನಿಂದ ಶಕ್ತಿಪ್ರಸಾದ್ ಎಂದೇ ಸಿನಿಮಾ ರಂಗದಲ್ಲಿ ಖ್ಯಾತಿಯಾಗಿ ಸುಮಾರು 150ಕ್ಕಿಂತ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ 25 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ಐತಿಹಾಸಿಕ ಸಿನಿಮಾಗಳು, ಪೌರಾಣಿಕ ಸಿನಿಮಾಗಳಲ್ಲೂ ಕೂಡ ಪಾತ್ರ ಮಾಡಿ ನ್ಯಾಯ ದಕ್ಕಿಸಿದ್ದಾರೆ.
ಶಕ್ತಿಪ್ರಸಾದ್ ಅವರ ಪೂರ್ವಿಕರು ಪಾಳೇಗಾರ ಸರ್ಜನಾಯಕನ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದರು ಎನ್ನುವ ವಿಷಯ ಶಕ್ತಿಪ್ರಸಾದ್ ಅವರಿಗೆ ತಿಳಿದ ಬಳಿಕ ಆ ಹೆಸರನ್ನು ಉಳಿಸಿಕೊಳ್ಳುವ ಇಚ್ಛೆಯಿಂದ ಅವರ ಇಬ್ಬರು ಗಂಡು ಮಕ್ಕಳಿಗೆ ಅದೇ ಹೆಸರಿಡುತ್ತಾರೆ. ಅರ್ಜುನ್ ಸರ್ಜಾ ಮತ್ತು ಕಿಶೋರ್ ಅರ್ಜಾ ಅವರಿಗೆ ಅದೇ ಸರ್ ನೇಮ್ ಆಗಿ ಬರುತ್ತದೆ ಮತ್ತು ಹೆಣ್ಣುಮಗಳಾದ ಲಕ್ಷ್ಮೀ ದೇವಮ್ಮಣ್ಣಿ ಅವರ ಮಕ್ಕಳಾದ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅವರಿಗೂ ಅದೇ ಉಪನಾಮ ಮುಂದುವರೆಯುತ್ತದೆ.