ಧಾರಾವಾಹಿಗಳನ್ನು ನೋಡುವುದರಿಂದ ಏನು ಪ್ರಯೋಜನ ಇಲ್ಲ ಅವುಗಳ ಸುಮ್ಮನೆ ಟೈಮ್ ವೇಸ್ಟ್ ಮಾಡುವುದರ ಜೊತೆಗೆ ತಲೆಬುಡ ಇಲ್ಲದ ಕಥೆಗಳನ್ನು ಎಳೆದುಕೊಂಡು ಹೋಗಿ ಕಿರಿಕಿರಿ ಉಂಟು ಮಾಡುತ್ತವೆ ಎನ್ನುವುದು ಎಲ್ಲಾ ಗಂಡಸರ ವಾದ ಆದರೂ ಕೂಡ ನಮ್ಮ ಹೆಣ್ಣು ಮಕ್ಕಳಿಗೆ ಧಾರಾವಾಹಿಗಳು ಹಾಗೂ ಅದರಲ್ಲಿ ಬರುವ ಪಾತ್ರಗಳನ್ನು ನೋಡಿದರೆ ತಮ್ಮ ಪಕ್ಕದ ಮನೆಯವರೇ ಇವರು ಎನ್ನುವಷ್ಟು ಪ್ರೀತಿ. ಒಂದು ಬಾರಿ ಇವುಗಳಿಗೆ ಅಡಿಕ್ಟ್ ಆಗಿಬಿಟ್ಟರೆ ಅದರ ಕೊನೆ ಎಪಿಸೋಡ್ ವರೆಗೂ ತಪ್ಪದೇ ಅದನ್ನು ಫಾಲೋ ಮಾಡುತ್ತಾರೆ ಹೆಂಗಸರು.
ಆದರೆ ಇದರಿಂದ ಕಲಿಯುವುದು ಏನು ಇಲ್ಲ ಎಂದು ದೂರುತ್ತಿದ್ದ ಜನರಿಗೆ ಇದೀಗ ಸತ್ಯ ಧಾರವಾಹಿ ನೋಡಿ ಗಂಡಸರು ಕಲಿಯಿರಿ ಎಂದು ತಿರುಗೇಟು ಸಹ ನೀಡಿದ್ದಾರೆ. ಇದಕ್ಕೆಲ್ಲ ಕಾರಣ ಮೊನ್ನೆ ಅಷ್ಟೇ ಸತ್ಯ ಧಾರವಾಹಿಯಲ್ಲಿ ನಡೆದ ಒಂದು ಘಟನೆ ಸತ್ಯ ಧಾರಾವಾಹಿಯು ಜೀ ಕನ್ನಡ ವಾಹಿನಿಯಲ್ಲಿ ಕಳೆದ ಒಂದು ವರ್ಷದಿಂದ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು ಕಥೆ ಇಲ್ಲಿಯವರೆಗೂ ರೌಡಿ ಬೇಬಿ ಸತ್ಯ, ಕಾರ್ತಿಕ್ ಹಾಗೂ ಅವನ ತಾಯಿಗೆ ಇಷ್ಟ ಇಲ್ಲದಿದ್ದರೂ ಕೂಡ ಕಾರ್ತಿಕ್ ಅನ್ನು ಮದುವೆ ಆಗಿ ಮನೆ ಸೇರಿದ್ದಾಳೆ.
ರೌಡಿ ಬೇಬಿ ತರಹ ಹುಡುಗನ ಹಾಗೆ ವರ್ತನೆ ಮಾಡುವ ಸಂಸ್ಕಾರ ಸಂಪ್ರದಾಯಗಳ ಬಗ್ಗೆ ಅರಿವೇ ಇಲ್ಲದ ಗ್ಯಾರೇಜ್ ಅಲ್ಲಿ ಕೆಲಸ ಮಾಡುವ ಈ ಹುಡುಗಿ ನನಗೆ ಸೊಸೆ ಆಗಿರುವುದು ಒಪ್ಪಿಗೆ ಇಲ್ಲ ಎಂದು ಅತ್ತೆ ಸೀತಾ ಯಾವಾಗಲೂ ಹೇಳುತ್ತಿರುತ್ತಾರೆ. ಕಾರ್ತಿಕ್ ಕೂಡ ಸತ್ಯಳಾ ಅಕ್ಕ ದಿವ್ಯ ಅವರನ್ನು ಮದುವೆ ಆಗಬೇಕಿತ್ತು ಆದರೆ ದಿವ್ಯ ದುರಾಸೆಗೆ ಬಿದ್ದು ಬಾಲ ನ ಜೊತೆ ಓಡಿ ಹೋಗಿರುವುದರಿಂದ ಅದೇ ಮಂಟಪದಲ್ಲಿ ವಿಧಿ ಇಲ್ಲದೆ ಅಪ್ಪನ ಮಾತಿನಂತೆ ಸತ್ಯಳ ಕೊರಳಿಗೆ ತಾಳಿ ಕಟ್ಟಬೇಕಾಯಿತು.
ಹೀಗಾಗಿ ಮದುವೆಯಾಗಿ ಗಂಡನ ಮನೆ ಸೇರಿರುವ ಸತ್ಯ ತನ್ನ ಅತ್ತೆ ಹಾಗೂ ಗಂಡನ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಲೇ ಇದ್ದಾಳೆ. ಅದಕ್ಕೆ ತನ್ನ ಅಜ್ಜಿ ಗಿರಿಜಮ್ಮನ ಸಹಾಯ ಹಾಗು ಸಲಹೆಗಳನ್ನು ಆಗಾಗ ಕೇಳುತ್ತಿರುತ್ತಾಳೆ. ಆದರೂ ಕೂಡ ಕಾರ್ತಿಕ್ ಯಾವಾಗಲೂ ಸತ್ಯಳ ಮೇಲೆ ಕೋಪ ಮಾಡಿಕೊಳ್ಳುತ್ತಲೇ ಇರುತ್ತಾನೆ. ಈ ಮುಂಚೆ ಸತ್ಯ ಹಾಗೂ ಕಾರ್ತಿಕ್ ಮೇಲೆ ಇದ್ದ ಸ್ನೇಹ ಸಂಬಂಧ ಕೂಡ ಈಗ ಹಾಳಾಗಿ ಹೋಗಿದೆ. ಇತ್ತ ಅತ್ತೆ ಬಲವಂತವಾಗಿ ಸತ್ಯಳ ಕೈಯಿಂದ ಡಿವರ್ಸ್ ಪೇಪರ್ ಗೆ ಸಹಿ ಹಾಕಿಸಿದ್ದಾರೆ.
ಇದು ತಿಳಿದ ಮೇಲೆ ಕಾರ್ತಿಕ್ ಸತ್ಯಳ ಮೇಲೆ ಸಾಫ್ಟ್ ಕಾರ್ನರ್ ತೋರುತ್ತಿದ್ದಾನೆ ಸತ್ಯ ಮಾತ್ರ ತಾನು ಪ್ರೀತ್ಸಿದ್ದು ಕಾರ್ತಿಕ್ ಅನ್ನೇ ಹೇಗಾದರೂ ಮಾಡಿ ಅವನ ಮನಸ್ಸನ್ನು ಗೆಲ್ಲಲೇ ಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದಾಳೆ. ಮೊನ್ನೆ ಎಪಿಸೋಡ್ ಅಲ್ಲಿ ಸತ್ಯ ಬೆನ್ನು ನೋವು ಹೊಟ್ಟೆ ನೋವು ಇಂದ ಬಳಲುತ್ತಿರುತ್ತಾಳೆ, ಅದರಿಂದ ಗಾಬರಿಗೊಂಡ ಕಾರ್ತಿಕ್ ಆಸ್ಪತ್ರೆಗೆ ಹೋಗೋಣ ಎಂದು ಬಲವಂತ ಮಾಡುತ್ತಾನೆ ನಂತರ ಅವನಿಗೆ ತಿಳಿಯುತ್ತದೆ
ಸತ್ಯ ಪಿರಿಯಡ್ಸ್ ಆಗಿದ್ದಾಳೆ ಎಂದು ತಕ್ಷಣ ಆತನು ಅವಳಿಗೆ ಸಾಲಿಟರಿ ಪ್ಯಾಡ್ಸ್ ತಂದು ಕೊಡುತ್ತಾನೆ ಹಾಗೂ ಟಿಫನ್ ಪಾರ್ಸೆಲ್ ತರುತ್ತೇನೆ ಇಬ್ಬರು ಒಟ್ಟಿಗೆ ಊಟ ಮಾಡೋಣ ಎನ್ನುತ್ತಾನೆ. ಇದರಿಂದ ಸತ್ಯಳಿಗೆ ಖುಷಿಯಾಗಿ ಧನ್ಯವಾದಗಳನ್ನು ಹೇಳುತ್ತಾಳೆ. ಅವಳಿಗೆ ಮುಜುಗರ ಆಗಿದೆ ಎನ್ನುವುದನ್ನು ತಿಳಿದ ಕಾರ್ತಿಕ್ ಸತ್ಯಾಳಿಗೆ ಸಮಾಧಾನ ಮಾಡುತ್ತಾನೆ. ಇದು ಒಂದು ಸಹಜಕ್ರಿಯೆ, ನಾನು ಕೂಡ ಅಕ್ಕತಂಗಿ ಜೊತೆ ಬೆಳೆದಿದ್ದೇನೆ ಹೆಣ್ಣು ಮಕ್ಕಳ ಕಷ್ಟ ನನಗೆ ಅರ್ಥ ಆಗುತ್ತದೆ. ನಿನಗೆ ಏನೇ ಬೇಕಿದರೂ ನನ್ನನ್ನು ಕೇಳು ಎಂದು ಹೇಳುತ್ತಾನೆ.
ಇದನ್ನು ನೋಡಿದ ಹೆಣ್ಣು ಮಕ್ಕಳು ಕಾರ್ತಿಕ್ ನೋಡಿ ಎಲ್ಲಾ ಗಂಡಸರು ಕಲಿಯಿರಿ ಎಂದು ಬುದ್ಧಿ ಹೇಳುತ್ತಿದ್ದಾರೆ. ಧಾರವಾಹಿಗಳಲ್ಲಿ ಕೇವಲ ಮನೆ ಹಾಳು ಮಾಡುವಂತಹ ದೃಶ್ಯಗಳನ್ನು ಮಾತ್ರ ತೋರಿಸುವುದಿಲ್ಲ ಕೆಲವೊಮ್ಮೆ ಸಂಸಾರಕ್ಕೆ ಸಂಬಂಧಪಟ್ಟಂತಹ ಮತ್ತು ಗಂಡು ಮಕ್ಕಳು ಕೂಡ ಮನವರಿಕೆ ಮಾಡಬೇಕಾದ ಸನ್ನಿವೇಶಗಳನ್ನು ಕೂಡ ತೋರಿಸಲಾಗುತ್ತದೆ ಎಂಬುದನ್ನು ಈ ಧಾರಾವಾಹಿಯ ಮೂಲಕ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ