Sunday, June 4, 2023
HomeEntertainmentಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ...

ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

 

ಒಂದು ಸಿನಿಮಾ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬೇಕು ಎಂದರೆ ನಿರ್ದೇಶಕನ ಪಾತ್ರವೂ ಬಹಳ ಉತ್ತಮವಾಗಿರಬೇಕು, ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಎಸ್ ಮಹೇಂದರ್ ಅವರು ಕೂಡ ಒಬ್ಬರು. ಇವರು ಭಾರತೀಯ ಹಾಗೂ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಇವರದೆ ಆದ ಹೆಸರನ್ನು ಮಾಡಿದ್ದಾರೆ.

ಇವರ ವಿಭಿನ್ನವಾದ ನಿರ್ದೇಶನದ ಶೈಲಿಯಿಂದ ಚಿತ್ರವನ್ನು ಬಹಳ ವಿಶೇಷವಾಗಿ ಮಾಡುತ್ತಿದ್ದರು ಜೊತೆಗೆ ಇವರ ನಿರ್ದೇಶನದಲ್ಲಿ ಹೆಚ್ಚು ಪ್ರಾಕೃತಿಯ ಸೌಂದರ್ಯಕ್ಕೆ ಹಾಗೂ ಹಳ್ಳಿ ಸೊಗಡಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಇವರ ಚಿತ್ರಗಳಲ್ಲಿ ಸ್ವಾಭಾವಿಕ ಉತ್ತಮ ಶೈಲಿಯ ನಟನೆಯನ್ನು ತಂದಿದ್ದಾರೆ. ಇವರು ನಿರ್ದೇಶಕರಲ್ಲದೆ ನಟನೆಯಲ್ಲೂ ಕೂಡ ಉತ್ತಮರು ಎಂದು ಹೇಳಬಹುದು.

ಇವರು ಈಗಾಗಲೇ ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇವರು ಮೂಲತಃ ಕರ್ನಾಟಕದ ಕೊಳ್ಳೇಗಾಲದ ಬಳಿ ಇರುವ ಒಂದು ಗ್ರಾಮದಿಂದ ಬಂದವರು. ಇವರು ಈಗಾಗಲೇ ಕೆಲವು ಬಾರಿ ಬಿಜೆಪಿಯಿಂದ ರಾಜಕೀಯದಲ್ಲಿ ಸ್ಪರ್ಧಿಸಿದ್ದಾರೆ. ಇವರು ಮೊದಲು ಪ್ರಣಯ ಪಕ್ಷಿಗಳು ಎಂಬ ಕನ್ನಡ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆಯನ್ನು ಮಾಡಿದ್ದಾರೆ.

ಇವರು ಇವರದೇ ಆದ ನಿರ್ದೇಶನ ಮಾಡಿರುವ ಗಟ್ಟಿಮೇಳ ಚಿತ್ರದಲ್ಲಿ ನಾಯಕ ನಟರಾಗಿ ಪಾತ್ರವನ್ನು ಮಾಡಿದ್ದಾರೆ, ಹಾಗೂ ಕರ್ಪೂರದ ಗೊಂಬೆ, ಶೃಂಗಾರ ಕಾವ್ಯ, ಅಕ್ಕ ತಂಗಿ, ಪ್ರಣಯ ಪಪಕ್ಷಿಗಳು ಸ್ನೇಹಲೋಕ, ವಾಲಿ, ಅಸುರ, ಕೊಡಗಿನ ಕಾವೇರಿ ಇನ್ನು ಹಲವು ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಇವರು 90ರ ದಶಕದ ಜನರ ಮೆಚ್ಚಿನ ನಿರ್ದೇಶಕರು ಎಂದು ಹೇಳಬಹುದು ಇವರು ಸಂಸಾರ, ಹೆಣ್ಣು ಮಕ್ಕಳ ವ್ಯತೆಗಳ ಬಗ್ಗೆ, ಹಳ್ಳಿ ಸೊಗಡು ಇವಲ್ಲದೆ ಆಧುನಿಕ ಕಥೆಗಳು ಹಾಗೂ ಲವ್ ಸ್ಟೋರಿಗಳಂತಹ ಚಿತ್ರಗಳಿಗೆ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಇವರ ಸಿನಿಮಾ ಚಿತ್ರಗಳಿಗೆ ಹಿಂದೆಯಿಂದಲೂ ಪ್ರೇಕ್ಷಕರು ಹೆಚ್ಚು ಇದ್ದಾರೆ ಅದಲ್ಲದೆ ಇವರ ನಿರ್ದೇಶನಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇದೆ.

ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಶ್ರುತಿಯವರನ್ನು ಮದುವೆಯಾಗಿದ್ದರು, ಶ್ರುತಿಯವರು ಮಹೇಂದರ್ರವರ ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ, ಇದಾದ ಬಳಿಕ ಇವರಿಬ್ಬರ ಪ್ರೀತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಇವರ ಮುದ್ದಾದ ಸಂಸಾರ ತುಂಬಾ ದಿನಗಳವರೆಗೆ ಇರಲಿಲ್ಲ. ಶ್ರುತಿ ಹಾಗೂ ಎಸ್ ಮಹೇಂದರ್ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳಿಂದ ಇವರಿಬ್ಬರ ಸಂಬಂಧವು ಮುರಿದು ಬಿತ್ತು.

ಈ ಬಗ್ಗೆ ಹೆಚ್ಚಿನ ಚರ್ಚೆಗಳು ಕೂಡ ಪತ್ರಿಕೆಗಳಲ್ಲಿ ಹರಿದಾಡುತ್ತಿದ್ದವು, ಇನ್ನು 2009 ರಲ್ಲಿ ಇವರಿಬ್ಬರಿಗೂ ಅಧಿಕೃತವಾಗಿ ಡೈ.ವೋ‌.ರ್ಸ್ ದೊರೆಯಿತು. ಸದ್ಯ ನಟಿ ಶ್ರುತಿಯವರು ತಮ್ಮ ಮಗಳು ಗೌರಿಯೊಂದಿಗೆ ಬೇರೆ ಮನೆಯಲ್ಲಿ ಇದ್ದಾರೆ. ಇತ್ತ ಮಹೇಂದರ್ ಅವರು ಮೂರು ವರ್ಷಗಳ ಕಾಲ ಸುಮ್ಮನಿದ್ದು 2012 ರಲ್ಲಿ ಮೈಸೂರಿನವರಾದ ಯಶೋಧ ಎಂಬವರನ್ನು ವಿವಾಹವಾದರೂ. ಸದ್ಯ ಅವರಿಗೆ ಒಬ್ಬ ಮುದ್ದಾದ ಮಗನು ಇದ್ದಾನೆ.

ಮಹೇಂದರ್ ಅವರ ಸಂಸಾರವು ಈಗ ತುಂಬಾ ಚೆನ್ನಾಗಿದೆ, ವಿಷಯವೇನೆಂದರೆ ತುಂಬಾ ವರ್ಷಗಳ ಬಳಿಕ ಮಹೇಂದರ್ ಕನ್ನಡ ಚಿತ್ರರಂಗಕ್ಕೇ ಹಿಂತಿರುಗಲಿದ್ದಾರೆ ಎಂದು ಹೇಳಬಹುದು. ಇವರ ಸಿನಿಮಾಗಾಗಿ ಎಸ್ ಮಹೇಂದರ್ ಅವರ ಅಭಿಮಾನಿಗಳು ಕಾಯುತ್ತಿರುವುದು ಸುಳ್ಳಲ್ಲ, ಹೌದು ಸ್ನೇಹಿತರೆ ಮಹೇಂದರ್ ಅವರು ಹೊಸ ಚಿತ್ರದೊಂದಿಗೆ ಸಿನಿಮಾ ಚಿತ್ರರಂಗಕ್ಕೆ ಮತ್ತೊಮ್ಮೆ ಬರಲಿದ್ದಾರೆ ಈ ವಿಷಯವು ಸದ್ಯಕ್ಕೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿದೆ.