ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತವೆ. ಆದರೆ ಬದುಕಿನ ಎಲ್ಲಾ ಕಷ್ಟಗಳಿಗೂ ಕೂಡ ಪರಿಹಾರ ಎನ್ನುವುದು ಇದ್ದೇ ಇರುತ್ತದೆ. ಜೀವನದಲ್ಲಿ ಯಾವ ಕಷ್ಟವನ್ನು ಬೇಕಾದರೂ ಎದುರಿಸಬಹುದು ಆದರೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರಬೇಕು. ಒಂದು ಕುಟುಂಬ ನೆಮ್ಮದಿಯಾಗಿ ಇರಬೇಕು ಎಂದರೆ ಆ ಕುಟುಂಬಕ್ಕೆ ಅದೃಷ್ಟ ಹಾಗೂ ದುರಾದೃಷ್ಟ ಬರುವುದು ಮನೆಯ ಮುಖ್ಯದ್ವಾರದಿಂದಲೇ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಮನೆಯ ವಾತಾವರಣ ನೆಮ್ಮದಿಯಾಗಿ ಇರುವುದಿಲ್ಲ.
ಮನೆಗೆ ಜೇಷ್ಠ ದೇವಿ ಬಂದು ನೆಲೆಸಿದರೆ ಆ ಮನೆಯಲ್ಲಿ ದಟ್ಟ ದಾರಿದ್ರ್ಯ ತಪ್ಪುವುದಿಲ್ಲ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಪ್ರತಿನಿತ್ಯವೂ ಮನೆಯಲ್ಲಿ ಕಲಹ ಜಗಳ ತಪ್ಪುವುದಿಲ್ಲ. ಹಾಗಾಗಿ ಜೇಷ್ಠಾ ದೇವಿ ಮನೆಗೆ ಬರಬಾರದು ಎಂದರೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಪ್ರಮುಖ ವಿಷಯವನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಇದರ ಜೊತೆಗೆ ಪ್ರತಿನಿತ್ಯವೂ ಕೂಡ ಮನೆಯ ಮುಖ್ಯದ್ವಾರದ ಹೊಸ್ತಿಲ ಬಳಿ ಕುಳಿತುಕೊಂಡು ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗಿ ಸುಖ ಶಾಂತಿ ನೆಮ್ಮದಿ ಜೊತೆಗೆ ಅಷ್ಟೈಶ್ವರ್ಯಗಳು ಕೂಡ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಸಿಗುವಂತೆ ಆಗುತ್ತದೆ ಆ ಒಂದು ವಿಶೇಷವಾದ ಮಂತ್ರದ ಬಗ್ಗೆ ಕೂಡ ತಿಳಿಸಿಕೊಡುತ್ತಿದ್ದೇವೆ, ತಪ್ಪದೆ ಕೊನೆಯವರೆಗೂ ಓದಿ.
● ಮನೆಯಲ್ಲಿ ಪೂಜೆ ವ್ರತ ಹಬ್ಬ ಆಚರಣೆಗಳನ್ನು ನಿಯಮಿತವಾಗಿ ಆಚರಿಸಿಕೊಂಡು ಬರುವ ಮನೆಗಳಲ್ಲಿ ಜ್ಯೇಷ್ಠಾದೇವಿ ನೆಲೆಸುವುದಿಲ್ಲ.
● ತಂದೆ ತಾಯಿಗೆ ಗೌರವ ಕೊಡುವ ಹಿರಿಯ ಸೇವೆ ಮಾಡುವ ಮನೆಗೂ ಕೂಡ ಜೇಷ್ಠದೇವಿ ಬರುವುದಿಲ್ಲ.
● ಗಂಡ ಹೆಂಡತಿ ಯಾವಾಗಲು ಜಗಳವಾಡುತ್ತಲೇ ಇದ್ದರೆ ಆ ಮನೆಗೆ ದಾರಿದ್ರ್ಯ ತಟ್ಟುತ್ತದೆ.
● ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ಅಲಕ್ಷ್ಮಿಗೆ ಆಹ್ವಾನ ಕೊಟ್ಟಂತೆ, ಹಾಗಾಗಿ ಮನೆ ಯಾವಾಗಲೂ ಕ್ಲೀನ್ ಆಗಿರಬೇಕು.
ಆರೋಗ್ಯಯುತ ಜೀವನಕ್ಕೆ 30 ಸರಳ ವಿಷಯಗಳು ಹಾಗೂ ಅವುಗಳ ಅದ್ಭುತ ಫಲಿತಾಂಶಗಳು.!
● ದಾರಿದ್ರ್ಯ ದೇವಿಗೆ ಹುಳಿ ಒಗರು ಖಾರ ಎಂದರೆ ತುಂಬಾ ಇಷ್ಟ ಹಾಗಾಗಿ ನಿಂಬೆಹಣ್ಣು ಹಾಗೂ ಮೆಣಸಿನ ಕಾಯಿಯನ್ನು ಮನೆಯ ಮುಖ್ಯದ್ವಾರದ ಮೇಲೆ ಜಂಟಿಯಾಗಿ ಕಟ್ಟಿ ನೇತು ಹಾಕಬೇಕು. ದಾರಿದ್ರ್ಯದೇವತೆ ಮನೆಯ ಮುಖ್ಯ ದ್ವಾರಕ್ಕೆ ಬಂದಾಗ ಇವುಗಳನ್ನು ನೋಡಿ ಅಲ್ಲೇ ಉಳಿಯುತ್ತಾರೆ, ಒಳಗೆ ಬರುವುದಿಲ್ಲ ಎನ್ನುವುದು ನಂಬಿಕೆ. ಮಂಗಳವಾರದಂದು ಈ ರೀತಿ ನಿಂಬೆಹಣ್ಣು ಹಾಗೂ ಮೆಣಸಿನ ಕಾಯಿಯನ್ನು ಕಟ್ಟುವುದರಿಂದ ಇನ್ನೂ ವಿಶೇಷ ಫಲ ಸಿಗುತ್ತದೆ.
● ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಇಲ್ಲ ಎಂದರೆ ಒಂದು ಚೊಂಬಿನ ಪೂರ್ತಿ ನೀರು ತೆಗೆದುಕೊಂಡು ಅದಕ್ಕೆ ಶುದ್ಧ ಅರಿಶಿಣ ಮಿಕ್ಸ್ ಮಾಡಿ ಅದನ್ನು ಮನೆಯ ಎಲ್ಲಾ ಗೋಡೆಗಳಿಗೂ ಎರಚುತ್ತಾ ಬರಬೇಕು, ಆಗ ಅಲಕ್ಷ್ಮಿ ನೆಲೆಸಿದ್ದರೆ ಮನೆಯನ್ನು ಬಿಟ್ಟು ಹೋಗುತ್ತಾರೆ ನಂತರ ಮನೆಯ ವಾತಾವರಣವೇ ಬದಲಾಗುತ್ತದೆ.
● ಸಂಜೆ ಸಮಯದಲ್ಲಿ ಗೃಹಿಣಿಯು ಕೈಕಾಲು ಮುಖ ತೊಳೆದುಕೊಂಡು ಹಣೆಗೆ ಕುಂಕುಮ ಇಟ್ಟು ದೇವರಿಗೆ ದೀಪ ಬೆಳಗಿ ಮನೆಯ ಮುಖ್ಯ ದ್ವಾರದ ಹೊಸ್ತಿಲಿಗೂ ಕೂಡ ನೀರು ಇಟ್ಟು ರಂಗೋಲಿ ಹಾಕಿ ಅರಿಶಿಣ ಕುಂಕುಮ ಇಟ್ಟು ಸಂಧ್ಯಾ ದೀಪ ಬೆಳಗಬೇಕು. ಈ ರೀತಿ ಮಾಡಿದಾಗ ದಾರಿದ್ರ್ಯ ಲಕ್ಷ್ಮಿ ಹೊರಟು ಹೋಗುತ್ತಾರೆ.
● ಇದರ ಜೊತೆಗೆ ಮನೆಯ ಹೊರಭಾಗದಲ್ಲಿ ಕುಳಿತುಕೊಂಡು 9 ಬಾರಿ ಐಂ ಹ್ರೀಂ ಶ್ರೀಂ ಜ್ಯೇಷ್ಠಲಕ್ಷ್ಮಿ ಸ್ವಯಂಭವೇ ಹೀಂ ಜ್ಯೇಷ್ಠಾಯೇ ನಮ: ಈ ಮಂತ್ರವನ್ನು ಜಪಿಸಬೇಕು.