ಗೊರಕೆ ಸಮಸ್ಯೆ, ಮೂಗಿನಲ್ಲಿ ಹುಣ್ಣು ಇನ್ನಿತರ ಸಮಸ್ಯೆಗಳಿಗೆ ಪರಿಹಾರ.!

ಚಳಿಗಾಲದ ಸಮಯದಲ್ಲಿ ಮೂಗಿಗೆ ಸಂಬಂಧಿಸಿದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೌದು ಚಳಿಗಾಲದ ಸಮಯದಲ್ಲಿ ನಮ್ಮ ಚರ್ಮವು ಹೇಗೆ ತನ್ನ ತೇವಾಂಶವನ್ನು ಕಳೆದುಕೊಳ್ಳುತ್ತದೆಯೋ ಅದೇ ರೀತಿಯಾಗಿ ನಮ್ಮ ಮೂಗಿನ ತೇವಾಂಶವು ಸಹ ಹೋಗಿ ಮೂಗಿನಲ್ಲಿ ಕೆಲವೊಂದಷ್ಟು ತೊಂದರೆಗಳು ಉಂಟಾಗುತ್ತದೆ.

ಆದ್ದರಿಂದ ನಮ್ಮ ಮೂಗಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದೇ ಹೇಳಬಹುದು. ಹೌದು ಮೂಗಿಗೆ ಸಂಬಂಧಿಸಿದ ಹಲವಾರು ತೊಂದರೆಗಳು ಸ್ವಲ್ಪ ಎನಿಸಿದರು ಮುಂದಿನ ದಿನದಲ್ಲಿ ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಆದ್ದರಿಂದ ಸಣ್ಣಪುಟ್ಟ ತೊಂದರೆ ಇದ್ದರೂ ಸಹ ಅದರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರು ಗಮನ ಹರಿಸುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ನಮ್ಮ ಮೂಗಿಗೆ ಸಂಬಂಧಿಸಿದೆ ಯಾವುದೇ ತೊಂದರೆ ಇದ್ದರೂ ಅದನ್ನು ಹೇಗೆ ನೈಸರ್ಗಿಕವಾಗಿ ಸರಿಪಡಿಸಿಕೊಳ್ಳಬಹುದು ಹಾಗೂ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಮನೆಯಲ್ಲಿಯೇ ಇರುವ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ನಮ್ಮ ಮೂಗಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ನೆಗಡಿ ನಿವಾರಣೆಗೆ ನಿತ್ಯ ತಲೆ ಸ್ನಾನ ಮಾಡಬೇಕು ಹಾಗೂ ಪ್ರತಿದಿನ ಬೆಳಗ್ಗೆ 1 ಲೋಟ ಬಿಸಿ ನೀರಿಗೆ ಒಂದು ಚಮಚ ಬೆಲ್ಲ ಅರ್ಧ ಚಮಚ ಅರಿಷಿಣ ಸೇರಿಸಿ ಸೇವಿಸಿ. ಈ ರೀತಿ ಮಾಡುವುದರಿಂದ ಪದೇ ಪದೇ ಕಾಣಿಸಿಕೊಳ್ಳುವಂತಹ ನೆಗಡಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗುತ್ತಾ ಬರುತ್ತದೆ.

* ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಆಕಳ ತುಪ್ಪವನ್ನು 3 ಹನಿ ಹಾಕಬೇಕು. ಅಥವಾ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಆ ವ್ಯಕ್ತಿಯನ್ನು ತಕ್ಷಣವೇ ಅಂಗಲಾಚಿ ಮಲಗಿಸಿ ಆ ವ್ಯಕ್ತಿಯ ತಲೆ ಭಾಗಕ್ಕೆ ನೀರನ್ನು ಹಾಕಿ 5 ರಿಂದ 10 ನಿಮಿಷ ಹಾಗೆ ಮಲಗಲು ಬಿಡಬೇಕು ಈ ರೀತಿ ಮಾಡುವುದರಿಂದ ಮೂಗಿನಲ್ಲಿ ಬರುವ ರಕ್ತವನ್ನು ತಡೆಯಬಹುದು.

* ಮೂಗಿನಲ್ಲಿ ಹುಣ್ಣಾದರೆ ಜಲನೇತಿ ಮಾಡಬೇಕು ಹಾಗೂ 3 ಹನಿ ಆಕಳ ತುಪ್ಪ ಹಾಕಬೇಕು ಪರಿಮಳದ ಅರಿವು ಮೂಗಿಗೆ ಬಾರದೆ ಹೋದರೆ, ಶ್ರೀಗಂಧದ ರಸವನ್ನು ಹಲವು ದಿನ ಮೂಗಿನ ಹೊರಳೆಗೆ ಹಚ್ಚಿಕೊಳ್ಳುವುದು. ಹೌದು ಶ್ರೀಗಂಧವು ಬಹಳ ಪರಿಮಳವನ್ನು ಹೊಂದಿರುವಂತಹ ಮರದ ಭಾಗವಾಗಿದ್ದು ಇದನ್ನು ಮೂಗಿನ ಹೊರಳಿಗೆ ಹಚ್ಚುವುದರಿಂದ ಮೂಗಿಗೆ ಬಾರದೆ ಇರುವಂತಹ ಪರಿಮಳವನ್ನು ಅದು ಸರಿಪಡಿಸುತ್ತದೆ ಅಂದರೆ ಪ್ರತಿಯೊಂದು ಪರಿಮಳವು ನಮ್ಮ ಮೂಗಿಗೆ ತಿಳಿಯುವ ಹಾಗೆ ಮಾಡುತ್ತದೆ.

* ಹೆಚ್ಚು ಸೀನು ಬರುತ್ತಿದ್ದರೆ ಶುಂಟಿ, ಮೆಣಸು, ಸಣ್ಣ ಹಿಪ್ಪಿ, ಇಷ್ಟನ್ನು ಸಮ ಪ್ರಮಾಣ ಸೇರಿಸಿ ಪುಡಿ ಮಾಡಿ ಕಷಾಯ ತಯಾರಿಸಿಕೊಂಡು ದಿನಾಲು ಬೆಳಿಗ್ಗೆ 1 ಕಪ್ ಸೇವಿಸಬೇಕು. ಇದರಲ್ಲಿರುವಂತಹ ಪ್ರತಿಯೊಂದು ಅಂಶವು ಕೂಡ ಶೀತದ ಅಂಶವನ್ನು ತೆಗೆಯುವ ಗುಣ ಹೊಂದಿದ್ದು ಇದನ್ನು ಕಷಾಯದ ರೂಪದಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.

* ಶುಂಟಿ ಹಾಗು ತುಳಸಿ ಕಷಾಯ ನೆಗಡಿಗೆ ಒಳ್ಳೆಯದು. ನಮ್ಮ ಪ್ರಾಚೀನ ಕಾಲದಿಂದಲೂ ಕೂಡ ಶುಂಠಿಯನ್ನು ಹಲವಾರು ರೀತಿಯ ಆಯುರ್ವೇದ ಔಷಧಿಯಲ್ಲಿ ಉಪಯೋಗಿಸುತ್ತಾರೆ. ಹೌದು ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ ಅದರ ಜೊತೆ ಮೂಗಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದರಲ್ಲೂ ನೆಗಡಿ ಇಂತಹ ಸಮಸ್ಯೆ ಇದ್ದರೆ ಶುಂಠಿ ಕಷಾಯ ತುಂಬಾ ಒಳ್ಳೆಯದು.

* ಮೂಗು ಕಟ್ಟಿದರೆ ಅರಿಷಿಣ ತುಂಡನ್ನು ಸುಟ್ಟು ಹೊಗೆ ಸೇವಿಸುವುದು.
* ಗೊರಕೆ ಬರುತ್ತಿದ್ದರೆ, ಮೈ ತೂಕವಿದ್ದರೆ, ತೂಕ ಇಳಿಸಬೇಕು ಹಾಗೂ ಜಲನೇತಿ ಮಾಡಬೇಕು.

Leave a Comment

WhatsApp Group Join Now
Telegram Group Join Now