Home Useful Information ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

0
ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪೂಜೆ ಮಾಡುವ ವಿಧಾನಕ್ಕೆ ಪದ್ಧತಿಗಳಿವೆ. ಮನೆಯಲ್ಲಿ ದೇವರನ್ನು ಪೂಜಿಸುವ ಕುರಿತು, ಮನೆಯಲ್ಲಿ ದೇವರ ಕೋಣೆಯನ್ನು ಇಟ್ಟುಕೊಳ್ಳುವುದರ ಕುರಿತು ಹಾಗೂ ದೇವಸ್ಥಾನಗಳಿಗೆ ಹೋಗುವಾಗ ಪಾಲಿಸಬೇಕಾದ ನಿಯಮಗಳು ಕುರಿತು ಅಲ್ಲಿ ನಡೆದುಕೊಳ್ಳಬೇಕಾದರೆ ರೀತಿ ಹಾಗೂ ಹಿಂದೂ ದೇವತೆಗಳಿಗೆ ಆಯಾ ದಿನದ ಪ್ರಕಾರವಾಗಿ ಯಾವ ಯಾವ ದೇವತೆಗಳಿಗೆ ಪೂಜೆ ಮಾಡಬೇಕು.

ಯಾವ ರೀತಿ ಪೂಜೆ ವಿಧಾನ ಇದೆ, ಆ ದೇವರುಗಳಿಗೆ ಇಷ್ಟವಾದ ಪುಷ್ಪ ಹಾಗೂ ನೈವೇದ್ಯ ಯಾವುದು ಎನ್ನುವುದರ ಬಗ್ಗೆ ವಿವರವಾಗಿ ಪುರಾಣಗಳಲ್ಲಿ ಹಾಗೂ ಗ್ರಂಥಗಳಲ್ಲಿ ತಿಳಿಸಲಾಗಿದೆ. ಪೂಜೆ ಮಾಡುವಾಗ ನಾವು ಅನುಸರಿಸುವ ಈ ಕ್ರಮಗಳ ಆಧಾರದ ಮೇಲೆ ನಮ್ಮ ಪೂಜೆಗೆ ತಕ್ಕ ಫಲಗಳು ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ ಹಾಗಾಗಿ ಇದರಲ್ಲಿ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

● ಯಾವುದೇ ದೇವಸ್ಥಾನಕ್ಕೆ ಹೋಗುವಾಗ ಯಾವಾಗಲೂ ಮೊದಲು ಬಲಗಾಲಿಟ್ಟು ದೇವಾಲಯದ ಒಳಗೆ ಪ್ರವೇಶ ಮಾಡಬೇಕು. ಹಾಗೆಯೇ ದರ್ಶನ ಪಡೆದು ಹೊರಗೆ ಬರುವಾಗ ಎಡಗಾಲಿಟ್ಟು ಹೊರಕ್ಕೆ ಬರಬೇಕು.
● ಎಲ್ಲ ದೇವಸ್ಥಾನಗಳಲ್ಲೂ ಕೂಡ ಗಂಟೆಯನ್ನು ಕಟ್ಟಿರುತ್ತಾರೆ. ನಾವು ದೇವಸ್ಥಾನದ ಪ್ರವೇಶ ಮಾಡಿದಾಗ ಅದನ್ನು ಬಾರಿಸಬೇಕು, ಆದರೆ ಯಾವುದೇ ಕಾರಣಕ್ಕೂ ದೇವರ ದರ್ಶನ ಮಾಡಿ ಹಿಂತಿರುಗುವಾಗ ದೇವಸ್ಥಾನಗಳಲ್ಲಿ ಗಂಟೆಯನ್ನು ಹೊಡೆದು ಬರಬಾರದು.

● ತೀರ್ಥ ಪ್ರಸಾದಗಳನ್ನು ಭಕ್ತಿಯಿಂದ ಸ್ವೀಕರಿಸಬೇಕು. ತೀರ್ಥ ಕುಡಿದ ನಂತರ ಕೈಗಳನ್ನು ತಲೆಗೆ ಒರೆಸಿಕೊಳ್ಳಬಾರದು ಅದರ ಬದಲು ಕಣ್ಣುಗಳಿಗೆ ಒತ್ತುಕೊಳ್ಳಬೇಕು.
● ದೇವಸ್ಥಾನಕ್ಕೆ ಹೋಗುವಾಗ ಮಡಿವಂತಿಕೆಯಿಂದ ಹೋಗಬೇಕು, ಮೈಲಿಗೆ ಬಟ್ಟೆಗಳನ್ನು ಹಾಕಿಕೊಂಡು ದೇವಸ್ಥಾನಕ್ಕೆ ಹೋಗಬಾರದು, ಈ ರೀತಿ ಮಾಡಿದರೆ ಮುಂದೆ ಆ ಪಾಪವನ್ನು ಬಹಳ ಕೆಟ್ಟ ರೀತಿಯಲ್ಲಿ ಅನುಭವಿಸಬೇಕಾಗುತ್ತದೆ.

ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

● ದೇವರ ಮಂಗಳಾರತಿ ನೀಡಿದಾಗ ಒಂದೇ ಕೈಯಿಂದ ಯಾವುದೇ ಕಾರಣಕ್ಕೂ ಮಂಗಳಾರತಿ ಸ್ವೀಕರಿಸಬಾರದು. ಎರಡು ಕೈಗಳಿಂದ ಭಕ್ತಿಯಾಗಿ ಪಡೆದುಕೊಳ್ಳಬೇಕು.
● ದೇವರ ತೀರ್ಥದ ಒಂದು ಹನಿ ಕೂಡ ಕೆಳಗೆ ಬೀಳಿಸಬಾರದು. ತೀರ್ಥವು ಬಹಳ ಪವಿತ್ರವಾದದ್ದು ನಿಮ್ಮ ಕೈಯಿಂದ ಅದು ಕೆಳಗೆ ಬೀಳದಂತೆ ನೋಡಿಕೊಳ್ಳಿ ಅಥವಾ ತೀರ್ಥ ಸ್ವೀಕರಿಸುವಾಗ ಕೈ ಕೆಳಗೆ ಕರವಸ್ತ್ರವನ್ನು ಇಟ್ಟುಕೊಳ್ಳಿ.

● ಗರ್ಭಿಣಿಯರು ಶಿವಲಿಂಗವನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಬಾರದು ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
● ಅನೇಕರು ದೇವಾಲಯಗಳಲ್ಲಿ ದೇವರ ಮುಂದೆ ದೀಪವನ್ನು ಹಚ್ಚುತ್ತಾರೆ. ಇದಕ್ಕಾಗಿ ಹರಕೆಗಳನ್ನು ಕೂಡ ಮಾಡಿಕೊಂಡಿರುತ್ತಾರೆ. ಈ ರೀತಿಯಾಗಿ ಹರಕೆ ತಿಳಿಸುವಾಗ ಅಥವಾ ಭಕ್ತಿಯಿಂದ ದೀಪ ಹಚ್ಚುವಾಗ ನೀವು ಹಚ್ಚಬೇಕಾದ ದೀಪವನ್ನು ಈಗಾಗಲೇ ಬೇರೆಯವರು ಹಚ್ಚಿ ಇಟ್ಟಿರುವ ದೀಪದಿಂದ ಹಚ್ಚಿಕೊಳ್ಳಬೇಡಿ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!

● ದೇವರ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಶಂಖಗಳು ಇರಬಾರದು ಎನ್ನುವ ನಿಯಮ ಕೂಡ ಇದೆ.
● ಕುಟುಂಬದಲ್ಲಿ ಯಾವುದಾದರೂ ಸೂತಕ ಇದ್ದಾಗ ಅದನ್ನು ಕಳೆಯುವ ತನಕ ಮನೆಯಲ್ಲಿ ದೇವರ ಪೂಜೆ ಮಾಡಬಾರದು, ದೇವಸ್ಥಾನಗಳಿಗೂ ಹೋಗಬಾರದು. ದೇವರ ವಿಗ್ರಹಗಳನ್ನು ಕೂಡ ಸ್ಪರ್ಶಿಸಬಾರದು.

● ಸ್ತ್ರೀಯರು ಹನುಮಂತ ಹಾಗೂ ಶನಿ ದೇವರ ವಿಗ್ರಹಗಳನ್ನು ಮುಟ್ಟಿ ನಮಸ್ಕರಿಸಬಾರದು. ದೇವಸ್ಥಾನಗಳಲ್ಲಿರುವ ವಿಗ್ರಹಗಳನ್ನು ಮುಟ್ಟದೆ ಕೈ ಮುಗಿಯುವುದು ಬಹಳ ಒಳ್ಳೆಯದು.
● ಸಂಕಷ್ಟಹರ ಚತುರ್ಥಿ ದಿನದಂದು ಗಣಪತಿಗೆ ಇಷ್ಟವಾದ ಗರಿಕೆ ಹುಲ್ಲನ್ನು ಅರ್ಪಿಸಿ ಪೂಜೆ ಮಾಡಬೇಕು.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

● ಏಕಾದಶಿ ದಿನದಂದು ವಿಷ್ಣುವಿಗೆ ತಪ್ಪದೆ ತುಳಸಿಯನ್ನು ಅರ್ಪಿಸಿ ಪೂಜಿಸಬೇಕು.
● ವಿಷ್ಣುವಿನ ಅವತಾರದ ಎಲ್ಲಾ ದೇವತೆಗಳ ಪೂಜೆ ಮಾಡುವಾಗಲೂ ಕೂಡ ಅರ್ಪಿಸುವ ನೈವೇದ್ಯದ ಮೇಲೆ ಒಂದು ತುಳಸಿಯನ್ನು ಇಟ್ಟು ನಂತರ ಅರ್ಪಿಸಬೇಕು ಇಲ್ಲವಾದಲ್ಲಿ ಅದು ಅಪೂರ್ಣವಾದಂತೆ.

LEAVE A REPLY

Please enter your comment!
Please enter your name here