ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!


ಉದ್ಯೋಗ ಮಾಡುವವನು ಕಡೆ ತನಕ ಕೂಡ ನೌಕರನಾಗಿ ಇರುತ್ತಾನೆ, ಆದರೆ ಉದ್ಯಮ ಮಾಡುವವನು ಎಷ್ಟು ದುಡಿದರು ರಾಜನಂತೆ ಬದುಕುತ್ತಾನೆ ಎನ್ನುವ ಲೋಕೋಕ್ತಿ ಇದೆ. ಇದರ ಅರ್ಥ ಇಷ್ಟೇ, ಉದ್ಯೋಗ ಹಾಗೂ ಉದ್ಯಮ ಇವೆರಡರ ಹಿಂದೆ ಇರುವುದೇ ಹಣವೇ ಹಾಗೆಯೇ ಎರಡೂ ಕಡೆ ಕೂಡ ತಮ್ಮ ಸಮಯ ಹಾಗೂ ಶ್ರಮವನ್ನು ಹಾಕಬೇಕು.

ಆದರೆ ಉದ್ಯೋಗ ಮಾಡುವವನು ಕಡೇ ತನಕ ಆ ಉದ್ಯೋಗದಲ್ಲಿಯೇ ಆತನ ಆಯುಷ್ಯದ ಬಹುಭಾಗವನ್ನು ಒಂದು ಕಂಪನಿಗೆ ಅಥವಾ ಒಂದು ಕಚೇರಿಗೆ ಅಥವಾ ಒಂದು ಕೆಲಸಕ್ಕೆ ಮೀಸಲಿಟ್ಟು ಕಳೆದುಬಿಡುತ್ತಾನೆ. ಪ್ರತಿ ವರ್ಷವೂ ಕೂಡ ಸಂಬಳ ಹೆಚ್ಚಾದರೂ ಅದು ನಿರೀಕ್ಷೆ ಮಟ್ಟದಲ್ಲೇ ಇರುತ್ತದೆ ಹೊರತು ಒಂದೇ ಬಾರಿಗೆ ಅಂತಹ ದೊಡ್ಡ ಬಡ್ತಿಯೇನು ಸಿಗುವುದಿಲ್ಲ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

ಆದರೆ ಉದ್ಯಮ ಹಾಗಲ್ಲ ಒಮ್ಮೆ ಕ್ಲಿಕ್ ಆದರೆ 10 ವರ್ಷ ಉದ್ಯೋಗದಲ್ಲಿ ದುಡಿಯುವುದನ್ನು ಒಂದೇ ತಿಂಗಳಲ್ಲಿ ಅಥವಾ ಒಂದೇ ವರ್ಷದಲ್ಲಿ ಗಳಿಸಿಕೊಂಡವರು ಕೂಡ ಇದ್ದಾರೆ. ಹಾಗಾಗಿಯೇ ಇತ್ತೀಚಿಗೆ ಸ್ವಂತ ಉದ್ಯಮ ಆರಂಭಿಸುವುದಕ್ಕೆ ಅನೇಕರು ತವಕಿಸುತ್ತಿದ್ದಾರೆ. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಿಂದ ಪೋಷಕರ ಮನಸ್ಥಿತಿ ಹೇಗಾಗಿದೆ ಎಂದರೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಯಾವುದಾದರೂ ಒಳ್ಳೆ ಕಡೆ ಕೆಲಸಕ್ಕೆ ಸೇರಿಕೊಂಡು ಕೈತುಂಬಾ ಸಂಪಾದನೆ ಮಾಡಿದರೆ ಸಾಕು ಎಂದುಕೊಳ್ಳುತ್ತಾರೆ.

ಹಾಗೆ ಚೆನ್ನಾಗಿ ಓದಿ ಬುದ್ದಿವಂತರಾದವರಿಗೆ ಅವರ ಟ್ಯಾಲೆಂಟ್ ಗೆ ತಕ್ಕ ಪ್ಯಾಕೇಜ್ ಕೂಡ ಸಿಗುತ್ತದೆ ಎನ್ನುವುದು ನಿಜವಾಗಿದ್ದರೂ ಕೂಡ ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿದೆಯೇ ಎನ್ನುವುದು ಯಕ್ಷಪ್ರಶ್ನೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಒಂದು ವರ್ಷಕ್ಕೆ ಸೃಷ್ಟಿಯಾಗುವ ಒಟ್ಟು ಉದ್ಯೋಗ ಹಾಗೂ ಪ್ರತಿ ವರ್ಷ ಶಿಕ್ಷಣ ಮುಗಿಸಿ ಆಚೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಂಪೇರ್ ಮಾಡಿ ನೋಡಿದರೆ ಅದು 50% ಕೂಡ ತುಂಬಲಾರದು.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

ಆದರೆ ಉದ್ಯಮ ಶುರು ಮಾಡಿದವರು ಅವರ ಆದಾಯ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೇ ಕುಟುಂಬದ ಪರಿಸ್ಥಿತಿ ಸುಧಾರಿಸಿ, ಕ್ಲಿಕ್ ಆದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯನ್ನು ಕೂಡ ಮಾಡುತ್ತಾರೆ. ಹಾಗಾಗಿ ಹೊಸದಾಗಿ ಉದ್ಯಮ ಆರಂಭಿಸುವುದನ್ನು ಅಲ್ಲಗಳೆಯುವಂತಿಲ್ಲ. ಒಬ್ಬ ಉದ್ಯೋಗಸ್ಥನಿಗೆ ಎಷ್ಟು ಒತ್ತಡ ಇರುತ್ತದೆಯೋ ಅಷ್ಟೇ ಪ್ರಮಾಣದ ಒಮ್ಮೊಮ್ಮೆ ಅದಕ್ಕಿಂತಲೂ ಹೆಚ್ಚಿನ ಮಾನಸಿಕ ಒತ್ತಡ ಹಾಗೂ ಜಂಜಾಟಗಳು ಉದ್ಯಮದಾರರಿಗೂ ಕೂಡ ಇರುತ್ತದೆ.

ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ಇತ್ತೀಚಿಗೆ ಸರ್ಕಾರಗಳು ಕೆಲವು ಖಾಸಗಿ ಸಂಸ್ಥೆಗಳು ಕೂಡ ಸ್ವಂತವಾಗಿ ಉದ್ಯಮ ಆರಂಭಿಸುವವರಿಗೆ ಸಬ್ಸಿಡಿ ಲೋನ್ ಗಳನ್ನು ಕೊಡುವುದು ಸಾಲಗಳನ್ನು ಕೊಡುವುದು ಉಚಿತ ತರಬೇತಿಗಳನ್ನು ಕೊಡುವ ಮೂಲಕ ನೆರವಾಗುತ್ತಿದೆ. ಬಿಜಿನೆಸ್ ಆರಂಭಿಸುವವರಿಗೆ ಉದಾಹರಣೆಯಾಗಿ ಬೆಂಗಳೂರಿನಲ್ಲಿ ಒಬ್ಬ ಮಹಿಳೆ ಸಿಗುತ್ತಾರೆ ಇವರು ಸದ್ಯಕ್ಕೆ ಮೆಜೆಸ್ಟಿಕ್ ನಲ್ಲಿ ಟೀ ಬೆಂಚ್ ಎನ್ನುವ ಟೀ ಅಂಗಡಿ ಇಟ್ಟಿದ್ದಾರೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!

ಆದರೆ ಇವರು ಓದಿರುವ ವಿದ್ಯೆ ಸಿವಿಲ್ ಇಂಜಿನಿಯರಿಂಗ್ ಹುದ್ದೆಗೆ ತಕ್ಕ ಹಾಗೆ ಕೆಲಸಕ್ಕೆ ಕೈ ತುಂಬಾ ದುಡಿಯುತ್ತಿದ್ದರು, ಆದರೆ ಈಗ ಬಿಸಿನೆಸ್ ಗೆ ಇಳಿದು ಯಶಸ್ವಿಯಾಗಿ ತಿಂಗಳಿಗೆ 3,00,000 ಆದಾಯವನ್ನು ಗಳಿಸಿ ಇತರರಿಗೆ ಸ್ಪೂರ್ತಿ ಆಗಿದ್ದಾರೆ. ಅವರ ಈ ಯಶೋಗಾಥೆಯ ಬಗ್ಗೆ ಅವರ ಬಾಯಿಂದಲೇ ಕೇಳಲು ಮತ್ತು ಬಿಸಿನೆಸ್ ಗೆ ಬೇಕಾದ ಕೆಲ ಮುಖ್ಯ ವಿಷಯಗಳನ್ನು ಅರಿತುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ತಪ್ಪದೆ ಹಂಚಿಕೊಳ್ಳಿ.

Leave a Comment