ಮನೆಯಲ್ಲಿರುವ ಗೃಹಿಣಿ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ ಅಡುಗೆ ಮನೆಯನ್ನು ಸರಿಯಾಗಿ ನಿರ್ವಹಿಸುವ ಮನೆ ಮಂದಿಯ ಆರೋಗ್ಯ ಕಾಳಜಿ ಮಾಡುವ, ಮನೆಯನ್ನು ಕ್ಲೀನ್ ಆಗಿ ಆಕರ್ಷಕವಾಗಿ ಇಟ್ಟುಕೊಳ್ಳುವ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಇದರ ಗಡಿಬಿಡಿಯಲ್ಲಿ ಅನೇಕ ಬಾರಿ ಸಣ್ಣ ಪುಟ್ಟ ಎಡಗಟ್ಟಿನಿಂದ ಅನೇಕ ನ’ಷ್ಟಗಳನ್ನು ಮಾಡಿಕೊಳ್ಳುತ್ತೇವೆ.
ಅದರಲ್ಲೂ ಅಡುಗೆ ಮನೆ ವಿಷಯದಲ್ಲಿ ಕೆಲಸ ಕಡಿಮೆ ಮಾಡಿ, ಪದಾರ್ಥಗಳು ಹಾಳಾಗುವುದನ್ನು ತಪ್ಪಿಸಲು ಎಷ್ಟು ಉಪಾಯ ಮಾಡಿದರೂ ಸಾಲದು. ಹಾಗಾಗಿ ಈ ಅಂಕಣದಲ್ಲಿಯೂ ಕೂಡ ಕೆಲ ಪ್ರಮುಖ ಟಿಪ್ಸ್ ಗಳನ್ನು ನೀಡುತ್ತಿದ್ದೇವೆ, ಇನ್ನು ಮುಂದೆ ಇವುಗಳನ್ನು ಕೂಡ ಪಾಲಿಸಿ.
* ಅಕ್ಕಿಯನ್ನು ತಂದು ಕ್ಲೀನ್ ಮಾಡಿ ಇಡುತ್ತೇವೆ, ಆದರೆ ಕೆಲ ದಿನಗಳಾದ ಮೇಲೆ ಬೂಸ್ಟ್ ಬಂದಿರುತ್ತದೆ ಹೀಗಾಗಬಾರದೆಂದರೆ ಅಕ್ಕಿ ಡಬ್ಬದಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಇಡಿ
* ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಗೆ ಹಾಕದಿರುವಂತೆ ಮಾಡಲು ಏನೆಲ್ಲ ಟ್ರಿಕ್ಸ್ ಮಾಡಿ ಸೋತಿರುತ್ತೇವೆ, ಇನ್ನು ಮುಂದೆ ನಾಲ್ಕೈದು ಲವಂಗಗಳನ್ನು ಸಕ್ಕರೆ ಡಬ್ಬಕ್ಕೆ ಹಾಕಿ ಇಡಿ ಈ ಸಮಸ್ಯೆ ತಪ್ಪುತ್ತದೆ
* ಹಸಿಮೆಣಸಿನಕಾಯಿ ಹಚ್ಚಿದಾಗ ಕೈ ಉರಿ ಬರುತ್ತದೆ. ಆ ಕೈ ಉರಿ ವಾಸಿ ಮಾಡಿಕೊಳ್ಳುವುದಕ್ಕೆ ನಮಗೆ ಹೆಚ್ಚು ಸಮಯ ಬೇಕು ಮತ್ತು ಅದಕ್ಕಾಗಿ ಏನೇನೋ ಮುಲಾಮು ಕೂಡ ಹಚ್ಚಬೇಕು. ಈ ಕಷ್ಟ ತಪ್ಪಿಸಿಕೊಳ್ಳಲು ಇನ್ನು ಮುಂದೆ ಹಸಿಮೆಣಸಿಕಾಯಿಯನ್ನು ಕತ್ತರಿಸಲು ಚಾಕುವಿನ ಬದಲು ಕತ್ತರಿಯನ್ನು ಬಳಸಿ
* ಕರಿಬೇವಿನ ಎಲೆಗಳನ್ನು ಬಿಡಿಸಿ ಒಂದು ಗಾಜಿನ ಕಂಟೈನರ್ ನಲ್ಲಿ ಹಾಕಿ ಫ್ರಿಡ್ಜ್ ಗೆ ಇಡಿ ಈ ರೀತಿ ಮಾಡಿದರೆ ತಿಂಗಳಾದರೂ ಅವು ಫ್ರೆಶ್ ಆಗಿರುತ್ತವೆ.
* ಏಲಕ್ಕಿ ಬಿಡಿಸಿದ ಮೇಲೆ ಅದರ ಸಿಪ್ಪೆಗಳನ್ನು ಬಿಸಾಕಬೇಡಿ. ಇದನ್ನು ಒಣಗಿಸಿ ಪುಡಿ ಮಾಡಿ ಚಹಾ ಪುಡಿಗೆ ಹಾಕಿ ಇಡಿ ಇದರಿಂದ ಚಹಾ ಮಾಡಿದಾಗ ಅದರ ರುಚಿ ಹೆಚ್ಚಾಗುತ್ತದೆ, ಪರಿಮಳದಿಂದ ಕೂಡಿರುತ್ತದೆ.
* ಅನ್ನ ಉದುರುದುರಾಗಿ ಬೆಳ್ಳಗೆ ಬರಬೇಕು ಎಂದರೆ ಅನ್ನ ಬೇಯುವಾಗ ಒಂದೆರಡು ಹನಿ ನಿಂಬೆರಸ ಹಾಕಿದರೆ ಅನ್ನ ಬೆಳ್ಳಗಾಗುತ್ತದೆ ಮತ್ತು ಹೆಚ್ಚು ರುಚಿಯಿಂದ ಕೂಡಿರುತ್ತದೆ ಹಾಗೂ ಬೇಗ ಬೇಯುತ್ತದೆ
* ಉಪ್ಪಿನ ಡಬ್ಬದಲ್ಲಿ ಉಪ್ಪು ಕಂದು ಹೋಗಿ ನೀರು ಬಿಟ್ಟುಕೊಳ್ಳುವುದನ್ನು ನಾವೆಲ್ಲ ನೋಡಿ ಸುಮ್ಮನಾಗಿರುತ್ತೇವೆ, ಇದನ್ನು ತಪ್ಪಿಸಲು ಆ ಉಪ್ಪಿನ ಡಬ್ಬಕ್ಕೆ ಎರಡು ಒಣ ಮೆಣಸಿನಕಾಯಿ ಹಾಕಿ ಇಡಿ
* ತೆಂಗಿನಕಾಯಿ ಒಡೆದ ಮೇಲೆ ಅದು ಹೆಚ್ಚಿಗೆ ದಿನ ಬಾಳಿಕೆ ಬರಬೇಕು ಎಂದರೆ ಅವುಗಳಿಗೆ ಸ್ವಲ್ಪ ಉಪ್ಪು ಸವರಿ ಇಡಿ ಆಗ ಬೇಗ ಕೆಡುವುದಿಲ್ಲ
* ನೀರನ್ನು ಕುಡಿಸಬೇಕಾದಾಗ ಪ್ಲೇಟ್ ಮುಚ್ಚಿಟ್ಟರೆ ನೀರು ಬೇಗ ಬಿಸಿಯಾಗುತ್ತದೆ
* ಮಾವಿನಕಾಯಿ ಉಪ್ಪಿನಕಾಯಿ ಬೇಗ ಕೆಡುತ್ತದೆ ಮತ್ತು ಅದರ ರುಚಿ ಹೋಗುತ್ತದೆ ಹಾಗೆ ಆಗಬಾರದು ಎಂದರೆ ಅದಕ್ಕೆ ಚೂರು ಬೇಕಿಂಗ್ ಸೋಡಾ ಹಾಕಿ ಇಡಿ
* ಓಂ ಕಾಳು ಹಾಗೆ ತಿನ್ನುವ ಅಭ್ಯಾಸ ಇರುವವರು ಅದರ ಘಾಟಿನಿಂದ ಸಮಸ್ಯೆಪಡುತ್ತಿದ್ದರೆ ಮೊದಲಿಗೆ ಅದನ್ನು ನೀರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ, ಈ ರೀತಿ ಮಾಡಿ ಬಳಸಿದರೆ ಘಾಟಾಗುವುದಿಲ್ಲ. ಓಂ ಕಾಳು ಬೇಯಿಸಲು ಬಹಳ ಸಮಯ ಬೇಕು ಅವುಗಳನ್ನು ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ.
* ಮೆಣಸಿಕಾಯಿಗೆ ಎಣ್ಣೆ ಮತ್ತು ಉಪ್ಪನ್ನು ಸವರಿ ಇಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ
* ಬಿಸ್ಕೆಟ್, ಚಕ್ಕುಲಿ ನಿಪ್ಪಟ್ಟು ಇವುಗಳನ್ನು ಇಡುವ ಡಬ್ಬದಲ್ಲಿ ಹೀರುವ ಕಾಗದ ಹಾಕಿ ಇಟ್ಟರೆ, ಇವು ಬೇಗ ಮೆತ್ತಗೆ ಆಗುವುದಿಲ್ಲ
* ಅಡುಗೆಗೆ ಬಳಸುವ ಇಂಗು ಬಹಳ ಬೇಗ ಗಟ್ಟಿಯಾಗಿ ಬಿಡುತ್ತದೆ. ಹಾಗಾಗಿ ಒಂದು ಒಣಮೆಣಸಿನ ಕಾಯಿಯನ್ನು ಹಾಕಿ ಇಟ್ಟರೆ ಅದು ಮೆತ್ತಗಾಗುವುದಿಲ್ಲ ಮತ್ತು ಹೊಸದರಂತೆ ಇರುತ್ತದೆ.
* ಮಾಂಸವನ್ನು ಬೇಯಿಸುವಾಗ ಸ್ವಲ್ಪ ಅರಿಶಿನ ಹಾಕಿ ಬೇಯಿಸಿದರೆ, ಮಾಂಸದ ಹಸಿವಾಸನೆ ಹೋಗುತ್ತದೆ.
* ತೆಂಗಿನಕಾಯಿ ಸ್ವಲ್ಪ ಚೂರನ್ನು ಮೊಸರಿಗೆ ಹಾಕಿ ಇಟ್ಟರೆ ಮೊಸರು ಬೇಗ ಕೆಡುವುದಿಲ್ಲ.