ಮನೆ ಎಂದ ಮೇಲೆ ಹೆಣ್ಣು ಮಕ್ಕಳಿಗೆ ಸಾಕಷ್ಟು ಕೆಲಸ ಇರುತ್ತದೆ. ಅಡಿಗೆ ಮಾಡುವುದು, ಆ ಪಾತ್ರೆಗಳನ್ನು ಸ್ವಚ್ಛ ಮಾಡುವುದು, ಮನೆಯಲ್ಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಬಟ್ಟೆ ಒಣಗಿಸುವುದು ಅವುಗಳಲ್ಲಿ ಇರುವ ಸ್ಥಳದಲ್ಲಿ ನೀಟಾಗಿ ಜೋಡಿಸುವುದು, ಮನೆಗೆ ಬೇಕಾದ ವಸ್ತುಗಳನ್ನು ಇಲ್ಲ ಶಾಪಿಂಗ್ ಮಾಡಿ ತರುವುದು, ಈ ಪಟ್ಟಿ ಮುಗಿಯುವುದೇ ಇಲ್ಲ.
ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಅಥವಾ ಚಿಕ್ಕ ಮಕ್ಕಳು ಮನೆಯಲ್ಲಿರುವ ಕುಟುಂಬದ ಸ್ತ್ರೀಯರಿಗೆ ಸಮಯ ಸಾಲುವುದೇ ಇಲ್ಲ, ಆದರೆ ಕೂಡ ಎಲ್ಲವನ್ನು ಸಂಭಾಳಿಸಿಕೊಂಡು ಅಚ್ಚುಕಟ್ಟಾಗಿ ಅವರ ಕೆಲಸವನ್ನು ಬೇಗ ಬೇಗ ಮುಗಿಸಬೇಕಾಗುತ್ತದೆ. ಅಂತಹ ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಅಡುಗೆ ಮನೆ ಕೆಲಸ ಸುಲಭ ಮಾಡುವ ಕೇಲ ಟಿಪ್ ಗಳನ್ನು ನೀಡುತ್ತಿದ್ದೇವೆ.
ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!
● ಹಾಲನ್ನು ಸ್ವಚ್ಛವಾದ ಮಡಿಕೆಯಲ್ಲಿ ಇಟ್ಟರೆ ಎರಡು ದಿನಗಳಾದರೂ ಕೂಡ ಹಾಲು ಕೆಡುವುದಿಲ್ಲ
● ತರಕಾರಿಗಳನ್ನು ಬೇಯಿಸುವಾಗ ಅದರ ಜೊತೆಗೆ ಒಂದು ಚಿಟಿಕೆ ಅಡಿಗೆ ಸೋಡಾ ಹಾಕುವುದರಿಂದ ತರಕಾರಿಗಳ ಬಣ್ಣ ಬದಲಾಗುವುದಿಲ್ಲ
● ಚಪಾತಿಯು ಮೃದುವಾಗಿ ಆಗಬೇಕು ಎಂದರೆ ಹಿಟ್ಟು ಕಲಸುವಾಗ ಹಾಲು ಅಥವಾ ಬಿಸಿನೀರನ್ನು ಸೇರಿಸಿ, ಚಪಾತಿಗೆ ನೀರು ಹೆಚ್ಚಾದರೆ ಅದು ಬೇಯುವುದಿಲ್ಲ. ನೀರು ಕಡಿಮೆ ಆದರೆ ಗಟ್ಟಿಯಾಗುತ್ತದೆ. ಹಾಗಾಗಿ ಚಪಾತಿ ಚೆನ್ನಾಗಿ ಬರಬೇಕು ಎಂದರೆ ಹಿಟ್ಟನ್ನು ಕಲಸುವಾಗಲೇ ಸರಿಯಾದ ಹದಕ್ಕೆ ಕಲಸಬೇಕು.
● ಸಕ್ಕರೆ ಡಬ್ಬಕ್ಕೆ ಇರುವೆಗಳು ಬರಬಾರದು ಎಂದರೆ ಸಕ್ಕರೆಯ ಜೊತೆ ಎರಡು ಮೂರು ಲವಂಗವನ್ನು ಡಬ್ಬದಲ್ಲಿ ಹಾಕಿ ಇಡಬೇಕು
● ಕುಕ್ಕರ್ ನಲ್ಲಿ ಆವಿಯಾಗಲು ಇಡುವ ನೀರಿನಲ್ಲಿ ನಿಂಬೆಹಣ್ಣಿನ ತುಂಡನ್ನು ಸೇರಿಸಿ ಇಡುವುದರಿಂದ ತಳದಲ್ಲಿ ಬಣ್ಣ ಬದಲಾಗುವುದಿಲ್ಲ, ಹಳೆ ಕಲೆಗಳು ಇದ್ದರೂ ಕೂಡ ಸ್ವಚ್ಛವಾಗುತ್ತದೆ
● ಸೀಸೆ ಅಥವಾ ಉಪ್ಪಿನಕಾಯಿ ಜಾಡಿಯಲ್ಲಿ ಇಟ್ಟಿರುವ ಉಪ್ಪಿನ ಕಾಯಿಯನ್ನು ತೆಗೆಯಲು ಪ್ಲಾಸ್ಟಿಕ್ ಅಥವಾ ಇಂಡಾಲಿಯಂ ಚಮಚ ಬಳಸುವುದರ ಬದಲು ಮರದ ಚಮಚವನ್ನು ಉಪಯೋಗಿಸಿ ಇದರಿಂದ ಉಪ್ಪಿನಕಾಯಿ ಕೆಡುವುದಿಲ್ಲ ಜಾಸ್ತಿ ದಿನ ಬರುತ್ತದೆ.
● ಚಪಾತಿ ಹಿಟ್ಟು ಕಲಸುವಾಗ ಅದರ ಜೊತೆ ಸ್ವಲ್ಪ ಹರಳಣ್ಣೆ ಮಿಕ್ಸ್ ಮಾಡಿಕೊಂಡರೆ ಚಪಾತಿ ಬಹಳ ಮೃದುವಾಗಿ ಬರುತ್ತದೆ
● ಅಕ್ಕಿ ಬೇಳೆ ಈ ರೀತಿ ಯಾವುದೇ ಧಾನ್ಯಗಳಿಗಾದರೂ ಅವುಗಳನ್ನು ಇಡುವ ಡಬ್ಬದಲ್ಲಿ ಸ್ವಲ್ಪ ಮೆಣಸಿನಕಾಯಿಯನ್ನು ಹಾಕಿ ಇಡುವುದರಿಂದ ಇರುವೆ, ಕೀಟ ಇವುಗಳು ಹತ್ತುವುದಿಲ್ಲ
● ಎಣ್ಣೆ ಕಾಯಲು ಇಟ್ಟಾಗ ಅದು ಕಾದ ಮೇಲೆ ಉಕ್ಕುತ್ತದೆ. ಈ ರೀತಿ ಉಕ್ಕಿ ಸುರಿಯಬಾರದು ಎಂದರೆ ಎಣ್ಣೆಯನ್ನು ಕಾಯಲು ಇಡುವ ಮುನ್ನವೇ ಎರಡು ಮೂರು ಸೀಬೆ ಎಳೆಯಲು ಅದಕ್ಕೆ ಅದ್ದಿ ಹೊರ ತೆಗೆಯಬೇಕು. ಈ ರೀತಿ ಮಾಡಿ ಕುದಿಸಿದರೆ ಎಣ್ಣೆ ಉಕ್ಕುವುದಿಲ್ಲ.
● ಮಾಂಸವನ್ನು ಫ್ರಿಡ್ಜ್ ನಲ್ಲಿ ಇಟ್ಟು ನಂತರ ಅಡುಗೆ ಮಾಡಲು ಉಪಯೋಗಿಸಿದರೆ ಅಡುಗೆಗೆ ಬಳಸುವ ಮುನ್ನ ಅದನ್ನು ಚೆನ್ನಾಗಿ ತೊಳೆಯಬೇಕು
● ಮೊಟ್ಟೆಯನ್ನು ಬೇಯಲು ಇಟ್ಟಾಗ ಕೆಲವೊಮ್ಮೆ ಅದು ಒಡೆಯುತ್ತದೆ. ಈ ರೀತಿ ಆಗಬಾರದು ಎಂದರೆ ಅವುಗಳ ಮೇಲೆ ಸ್ವಲ್ಪ ನಿಂಬೆ ರಸವನ್ನು ಚಿಮ್ಮಿಸಿ ಇರಗಬೇಕು, ಆಗ ಒಡೆಯುವುದಿಲ್ಲ.
● ಹೆಸರುಬೇಳೆ ಚೆನ್ನಾಗಿ ಬೇಯಬೇಕು ಎಂದರೆ ಬೇಯಲು ಇಡುವಾಗಲೇ ಒಂದು ಚೂರು ತೆಂಗಿನಕಾಯಿ ಚೂರನ್ನು ಹಾಕಿ ಇಡಬೇಕು ಆಗ ಚೆನ್ನಾಗಿ ಬೇಯುತ್ತದೆ.
● ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಚಹಾ ಪುಡಿಗೆ ಮಿಕ್ಸ್ ಮಾಡಿದರೆ ಇದರಿಂದ ಮಾಡುವ ಚಹಾಗೆ ವಿಶೇಷ ರುಚಿ ಬರುತ್ತದೆ
● ಬೇಳೆ ಅಥವಾ ಇನ್ಯಾವುದೇ ಕಾಳುಗಳನ್ನು ಅಥವಾ ತರಕಾರಿಯನ್ನು ಬೇಯಲು ಇಡುವಾಗ ಚೆನ್ನಾಗಿ ಬೇಯಬೇಕು ಎಂದರೆ ಅದಕ್ಕೆ ಒಂದೆರಡು ಹನಿ ಹರಳೆಣ್ಣೆಯನ್ನು ಸೇರಿಸಬೇಕು.
● ಹಾಲು ಕಾಯಲು ಇಡುವಾಗ ಅದು ಉಕ್ಕಬಾರದು ಎಂದರೆ ಹಾಲಿನ ಮಟ್ಟಕ್ಕಿಂತ ಮೇಲೆ ಬರುವಂತೆ ಸ್ಟೀಲ್ ಚಮಚವನ್ನು ಅದರಲ್ಲಿ ಹಾಕಬೇಕು. ಆಗ ಹಾಲು ಉಕ್ಕುವುದಿಲ್ಲ.