Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಲವ್ ನಲ್ಲಿ ಯಾವುದೇ ಸುಖವಿಲ್ಲ 24 ವರ್ಷದ ಹ್ಯಾಂಡ್ಸಮ್ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಬೇಡಿಕೆ ಇಟ್ಟ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ.

Posted on September 12, 2022September 12, 2022 By Kannada Trend News No Comments on ಲವ್ ನಲ್ಲಿ ಯಾವುದೇ ಸುಖವಿಲ್ಲ 24 ವರ್ಷದ ಹ್ಯಾಂಡ್ಸಮ್ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಬೇಡಿಕೆ ಇಟ್ಟ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ.

ಬಿಗ್ ಬಾಸ್ ನಲ್ಲಿ ಹೆಚ್ಚು ಸದ್ದು ಮಾಡಿರುವಂತಹ ಜೋಡಿ ಅಂದರೆ ಅದು ಸೋನು ಗೌಡ ಮತ್ತು ರಾಕೇಶ್ ಅಡಿಗ ಅಂತಾನೆ ಹೇಳಬಹುದು ರಾಕೇಶ್ ಅಡಿಗ ಅವರಿಗಿಂತ ಸೋನು ಗೌಡ ಅವರೇ ಮನೆಯಲ್ಲಿ ಹೆಚ್ಚು ಕಾಂಟ್ರವರ್ಸಿಗೆ ಒಳಗಾಗಿರುವುದು ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಾರೆ. ಸದ್ಯಕ್ಕೆ ಸೋನು ಗೌಡ ಅವರು ಮತ್ತೊಂದು ವಿಚಾರಕ್ಕೆ ಟ್ರೋಲ್ ಆಗಿದ್ದಾರೆ ಹೌದು ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಗೆ ವಿಶೇಷವಾದ ಮನವಿ ಒಂದನ್ನು ಮಾಡಿದ್ದಾರೆ. ಅದೇನೆಂದರೆ ದೇವರೇ ನನಗೆ 24 ವರ್ಷದ ಹ್ಯಾಂಡ್ಸಮ್ ಹುಡುಗನನ್ನು ಕಳಿಸಿಕೊಡು ಎಂಬ ವಿಶೇಷವಾದ ಮನವಿಯನ್ನು ಇಟ್ಟಿದ್ದಾರೆ.

ಈ ವಿಚಾರವನ್ನು ಬಹಿರಂಗವಾಗಿ ಹೇಳಿರುವುದರಿಂದ ಇದೀಗ ಸಾಕಷ್ಟು ಕಾಂಟ್ರವರ್ಸಿಗೆ ಗುರಿಯಾಗಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸೋನು ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅಷ್ಟೇ ಅಲ್ಲದೆ ಕಳೆದ ವರ್ಷ ಅವರ ಖಾಸಗಿ ವಿಡಿಯೋ ಲೀಕ್ ಆಗಿದ್ದು ಈ ವಿಡಿಯೋ ಮೂಲಕ ಇವರು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. ಸೋನು ಗೌಡ ಅಂದರೆ ಸಾಕು ಆ ಖಾಸಗಿ ವಿಡಿಯೋ ವೈರಲ್ ಆದ ವಿಚಾರವೇ ಎದುರಾಗುತ್ತಿತ್ತು ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದ ಕಾರಣ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಗಿಟ್ಟಿಸಿಕೊಂಡರು.

ಬಿಗ್ ಬಾಸ್ ಮನೆಗೆ ಬಂದ ನಂತರ ತಮ್ಮ ಪ್ರೇಮಿ ತಮಗೆ ಮೋಸ ಮಾಡಿ ಅವರ ಖಾಸಗಿ ವಿಡಿಯೋವನ್ನು ವೈರಲ್ ಮಾಡಿದ್ದರ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಈ ಸಮಯದಲ್ಲಿ ರಾಕೇಶ್ ಅವರು ಸೋನು ಅವರನ್ನು ಸಂತೈಸಿದರು ಅಷ್ಟೇ ಅಲ್ಲದೆ ಈ ಪ್ರಕರಣ ನಡೆದ ನಂತರ ಇಬ್ಬರೂ ಕೂಡ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲವು ಮಂದಿ ಇವರಿಬ್ಬರ ಒಡನಾಟವನ್ನು ನೋಡಿ ರಾಕೇಶ್ ಮತ್ತು ಸೋನು ಗೌಡ ಇಬ್ಬರು ಪರಸ್ಪರ ಪ್ರೀತಿಸುತ್ತಿರಬಹುದು ಅಂತ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿದರು.

ಇವರಿಬ್ಬರ ಸಂಬಂಧ ಇನ್ನೇನು ಮುಂದುವರಿಯಬೇಕು ಅನ್ನುವಷ್ಟೆ ಒಳಗೆ ಇದೀಗ ರಾಕೇಶ್ ಅಡಿಗ ಅವರು ಸ್ವಲ್ಪ ಸೋನು ಗೌಡ ಅವರ ವಿಚಾರದಲ್ಲಿ ಬದಲಾಗಿದ್ದಾರೆ ಅಂತ ಹೇಳಬಹುದು. ಏಕೆಂದರೆ ಮೊದಲೆಲ್ಲ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ರಾಕೇಶ್ ಅವರು ಇದೀಗ ಸೋನು ಗೌಡ ಅವರಿಂದ ದೂರಾಗಿದ್ದಾರೆ. ಅಷ್ಟೇ ಅಲ್ಲದೆ ರಾಕೇಶ್ ಗೌಡ ಅವರು ಸೋನುಗೆ ಬಹುಚನದಿಂದ ಮರ್ಯಾದೆ ಕೊಟ್ಟು ಮಾತನಾಡಿಸುತ್ತಿದ್ದಾರೆ. ಇವೆಲ್ಲವನ್ನೂ ನೋಡಿದಂತಹ ಸೋನು ಗೌಡ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಪರವಾಗಿಲ್ಲಾ ನನಗೆ ಟೈಮ್ ಪಾಸ್ ಪ್ರೀತಿ ಮಾಡುವುದಕ್ಕೆ ಬರುವುದಿಲ್ಲ ಹಾಗೆಯೇ ಟೈಂಪಾಸ್ ಗಾಗಿ ಪ್ರೀತಿ ಮಾಡುವಂತಹ ವ್ಯಕ್ತಿಯು ಕೂಡ ನನಗೆ ಬೇಕಾಗಿಲ್ಲ ಎಂದು ಹೇಳಿದ್ದಾರೆ ತದನಂತರ

ಅಪ್ಪ ದೇವರೇ ನೀನು ಇರುವುದೇ ನಿಜವಾದರೆ ನನಗೆ ಈಗ 22 ವರ್ಷ, ಸಖತ್ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಸೋನು ಗೌಡ ಅವರು ಬೇಡಿಕೊಂಡರು. ಎದುರಲ್ಲೇ ಇದ್ದಾನಲ್ಲ ಎಂದು ಜಶ್ವಂತ್ ಕಡೆಗೆ ರಾಕೇಶ್ ಕೈ ತೋರಿಸಿದರು. ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ ಅಂತ ಸೋನು ಹೇಳಿದರು. ನಾನು ಯಂಗೇಜ್ಡ್ ಅಲ್ಲ, ಕಮಿಟೆಡ್ ಎಂದರು ಜಶ್ವಂತ್ ಉತ್ತರಿಸಿದ್ದಾರೆ ನನಗೆ ಲವ್ ಅಂದರೆ ಅಸಹ್ಯ. ಆದರೆ ಪಾರ್ಟ್ನರ್ ಬೇಕು. ಇಬ್ಬರೂ ಪರಸ್ಪರ ಕೇರ್ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ ಎಂದು ಸೋನು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Big Boss OTT, Sonu Srinivas Gowda
WhatsApp Group Join Now
Telegram Group Join Now

Post navigation

Previous Post: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಕಾರನ್ನು ಅಲಿಯೇ ಬಿಟ್ಟು 3km ಓಡಿ ಹೋಗಿ ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ ವೈದ್ಯ ಈ ವಿಡಿಯೋ ನೋಡಿ ನಿಜಕ್ಕೂ ಗ್ರೇಟ್ ಅನಿಸುತ್ತೆ.
Next Post: ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore