ರೇಷನ್ ಕಾರ್ಡ್ (Ration Card) ಎನ್ನುವುದು ಸರ್ಕಾರ ನೀಡುತ್ತಿರುವ ಒಂದು ಅಧಿಕೃತ ಗುರುತಿನ ಚೀಟಿ (POI). ಇದೊಂದು ಆದಾಯ ಮಾಪನ ಪ್ರಮಾಣ ಪತ್ರ ಎಂದರೂ ಕೂಡ ತಪ್ಪಾಗಲಾರದು. ಯಾಕೆಂದರೆ, ರೇಷನ್ ಕಾರ್ಡ್ ಮೂಲಕ ಬಡತನ ರೇಖೆಗಿಂತ ಕೆಳಗಿರುವವರು (Below Poverty Line) ಹಾಗೂ ಬಡತನ ರೇಖೆಗಿಂತ ಮೇಲೆ ಇರುವವರು (Above Poverty Line) ಎಂದು ಸುಲಭವಾಗಿ ಗುರುತಿಸಬಹುದು.
ಸರ್ಕಾರದ ಅನೇಕ ಯೋಜನೆಗಳ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಜಾರಿಯಾಗಿರುವ ಗೃಹಲಕ್ಷ್ಮಿ (Gruhalakshmi) ಮತ್ತು ಅನ್ನಭಾಗ್ಯ (Annabhagya) ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ನಮ್ಮ ದೇಶದಲ್ಲಿ APL ಕಾರ್ಡ್ ಹೊಂದಿರುವವರನ್ನು ಬಡತನ ರೇಖೆಗಿಂತ ಮೇಲೆ ಇರುವವರು ಹಾಗೂ BPL ಕಾರ್ಡ್ ಹೊಂದಿರುವವರನ್ನು ಬಡತನ ರೇಖೆಗಿಂತ ಕೆಳಗಿರುವವರು ಎಂದು ಗುರುತಿಸಲಾಗಿದೆ.
ಈ ಬ್ಲಡ್ ಗ್ರೂಪ್ ನವರಿಗೆ ಹೃದಯ-ಘಾ-ತ ಆಗುವ ಸಂಭವ ಹೆಚ್ಚು.! ಸಂಶೋಧನೆ ಮೂಲಕ ಬೆಳಕಿಗೆ ಬಂದ ಸತ್ಯಾಂಶ.!
ಇದರಲ್ಲಿ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇವರಿಗೆ ಉಚಿತ ಪಡಿತರ ಅಥವಾ ಕಡಿಮೆ ದರದಲ್ಲಿ ಪಡಿತರದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು, ಶೈಕ್ಷಣಿಕ ವೆಚ್ಚ ಸೇರಿದಂತೆ ಇನ್ನೂ ಅನೇಕ ವಿಚಾರಗಳಲ್ಲಿ ರಿಯಾಯಿತಿ ಇದೆ. ಆದರೆ ಆರ್ಥಿಕವಾಗಿ ಸದೃಢವಾಗಿರುವವರು ಕೂಡ BPL ಕಾರ್ಡ್ ಹೊಂದಿರುವವರಿಗೆ ಇರುವ ಪ್ರಯೋಜನಗಳನ್ನು ಪಡೆದುಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಥವಾ ಸರ್ಕಾರಕ್ಕೆ ಮಾಹಿತಿಯನ್ನು ಮರೆಮಾಚಿ BPL ಕಾರ್ಡ್ ಪಡೆದಿರುತ್ತಾರೆ.
ಇದು ಆಹಾರ ಇಲಾಖೆಯ (Food and Civil Supply departmnet) ಗಮನಕ್ಕೂ ಕೂಡ ಬಂದಿದೆ. ಈಗ ನಾನಾ ಕಾರಣದಿಂದಾಗಿ ಕೆಲವು ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ (Cancel) ಹಾಗೂ ಕೆಲವನ್ನು ತಿರಸ್ಕೃತಗೊಳಿಸಿದೆ(Suspend). ಅವುಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ನೀವು ನಿಮ್ಮ ಮೊಬೈಲ್ ಮೂಲಕವೇ ಯಾರ ಕಾರ್ಡ್ ಗಳು ರದ್ದಾಗಿವೆ ಅಥವಾ ತಿರಸ್ಕೃತಗೊಂಡಿವೆ ಎಂದು ಚೆಕ್ ಮಾಡಿಕೊಳ್ಳಬಹುದು.
1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!
● ನಿಮ್ಮ ಮೊಬೈಲ್ ನಲ್ಲಿ Google ಗೆ ಹೋಗಿ www.ahara.kar.nic.in ಗೆ ಸರ್ಚ್ ಕೊಡಿ.
● ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ. ಮುಖಪುಟದಲ್ಲಿ ಇ-ಸೇವೆಗಳು ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಎಡಭಾಗದಲ್ಲಿ ಮೂರು ಚಿಕ್ಕ ಗೆರೆಗಳು ಇರುತ್ತವೆ, ಅದನ್ನು ಕ್ಲಿಕ್ ಮಾಡಿ.
● ಭಾಷೆ ಬದಲಾಯಿಸಿಕೊಳ್ಳಲು ಆಯ್ಕೆ ಇದೆ, ಕನ್ನಡ ಅಥವಾ ಇಂಗ್ಲಿಷ್ ಭಾಷೆ ಸೆಲೆಕ್ಟ್ ಮಾಡಿಕೊಂಡು ಮುಂದುವರಿಯಬಹುದು.
● ಎಡಭಾಗದ ಮೆನುಬಾರ್ ನಲ್ಲಿ ಇ-ಪಡಿತರ ಚೀಟಿ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, ಅದರ ಕೊನೆ ಸಾಲಿನಲ್ಲಿ ರದ್ದು ಮಾಡಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಪಟ್ಟಿ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!
● ಓಪನ್ ಆದ ಪೇಜ್ ಮೇಲೆ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಹಾಗೂ ವರ್ಷವನ್ನು ಸೆಲೆಕ್ಟ್ ಮಾಡಲು ಆಪ್ಷನ್ ತೋರಿಸುತ್ತದೆ ಎಲ್ಲಾ ಸೆಲೆಕ್ಟ್ ಆದಮೇಲೆ GO ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಆಗ ನಿಮಗೆ ನಿಮ್ಮ ತಾಲೂಕಿನಲ್ಲಿ ನೀವು ಸೆಲೆಕ್ಟ್ ಮಾಡಿದ ತಿಂಗಳಿನಲ್ಲಿ ಕ್ಯಾನ್ಸಲ್ ಆಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು. ಪಡಿತರ ಚೀಟಿ ಸಂಖ್ಯೆ ಇರುತ್ತದೆ ಅದರ ಮುಂದೆಯೇ ಯಾವ ಕಾರಣಕ್ಕಾಗಿ ರದ್ದಾಗಿದೆ ಅಥವಾ ತಡೆಹಿಡಿಯಲಾಗಿದೆ ಎನ್ನುವ ವಿವರ ಕೂಡ ಇರುತ್ತದೆ.