ಒಂದು ಕಡೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ಅವರಿಗೆ ಮೋಸ ಮಾಡಿ ತೆಲುಗಿನ ಖ್ಯಾತ ಕಲಾ ಕಲಾವಿದ ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಆದರೆ ಸುಚೇಂದ್ರ ಪ್ರಸಾದ್ ಮಾತ್ರ ಇನ್ನೂ ಕೂಡ ತಮ್ಮ ಮಡದಿ ಬಗ್ಗೆ ಅಷ್ಟೇ ಪ್ರೀತಿ ಮತ್ತು ಒಲವನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಸುಚೇಂದ್ರ ಪ್ರಸಾದ್ ಅವರು ಕನ್ನಡ ಚಿತ್ರರಂಗದ ಒಬ್ಬ ಅದ್ಬುತ ಕಲಾವಿದ ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿದ್ದ ಇವರು ಚಿತ್ರಗಳಲ್ಲಿ ಕಿತುತೆರೆಯಲ್ಲಿ ನಿರ್ದೇಶನ, ನೃತ್ಯ ಸಂಯೋಜನೆ ಮಾಡುವುದರ ಜೊತೆಗೆ ನಾಟಕಗಳನ್ನು ರಚಿಸುತ್ತಿದ್ದರು. 1999 ರಲ್ಲಿ ಕುವೆಂಪುರವರ ಜನಪ್ರಿಯ ಕಾದಂಬರಿ `ಕಾನೂರು ಹೆಗ್ಗಡತಿ’ ಚಿತ್ರರೂಪಕ್ಕೆ ಬಂದಾಗ ,ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸುಚೇಂದ್ರರು ಜನಪ್ರಿಯರಾದರು. ಮುಂದೆ `ಬೇರು’, `ತುತ್ತೂರಿ’, `ಬೆಟ್ಟದ ಜೀವ’ದಂತಹ ಸಾಕಷ್ಟು ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ ಇವರು ಕನ್ನಡದ ಕಲಾಲೋಕದ ಅದ್ಭುತ
ಪ್ರತಿಭೆಯಾಗಿ ಬೆಳೆದರು.
ಇವರು 2007 ರಲ್ಲಿ ಕನ್ನಡದ ಖ್ಯಾತ ಕಲಾವಿದೆ `ಪವಿತ್ರಾ ಲೋಕೇಶ್’ ಅವರನ್ನು ವಿವಾಹವಾಗಿದ್ದಾರೆ. ಕಾರ್ಯಕ್ರಮವೋಂದರಲ್ಲಿ ತಮ್ಮ ಪತ್ನಿಯ ಬಗ್ಗೆ ಹಾಗು ಸಂಸಾರದ ಬಗ್ಗೆ ಹೇಳಿರುವುದರ ಬಗ್ಗೆ ಇಲ್ಲಿ ತಿಳಿಯೋಣ. ತನ್ನ ಪತ್ನಿ ಅವರಾದ ಪವಿತ್ರ ಲೋಕೇಶ್ ಅವರು ಒಬ್ಬ ಸಹಜ ಹೆಣ್ಣು ಮಗಳಾಗಿದ್ದು ಸುಂದರವಾಗಿ ಇದ್ದಾರೆ ಅವರು ಯಾವಾಗಲೂ ಸಹಜವಾಗಿಯೇ ಇರುತ್ತಾರೆ. ಆದರೆ ದೊಡ್ಡ ಹೊರೆಯನ್ನು ನಾನು ಹೋತ್ತಿಕೊಂಡೆ ತಿರುಗುತ್ತೇನೆ ಆದ್ದರಿಂದ ನನಗೆ, ನನ್ನ ಮನಸ್ಸಿಗೆ, ನನ್ನ ಪ್ರಯಾಣಕ್ಕೆ ತುಂಬಾ ಹೊರೆ ಎಂದು ಅನ್ನಿಸುತ್ತದೆ. ದಾಂಪತ್ಯ ಮತ್ತು ಸಂಸಾರದಲ್ಲಿ ಹೊಂದಾಣಿಕೆ ಆಗಬೇಕೆಂದರೆ ಯಾವುದೇ ಒಂದು ವಿಚಾರವನ್ನು ನೀವು ಹೇಗೆ ದಕ್ಕಿಸಿಕೊಳ್ಳುತ್ತೀರಿ, ಹೇಗೆ ನೋಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ ಬಹಳ ಜನರು ಇನ್ನೊಬ್ಬರ ಮನೆಯ ಮೇಲಿನ ಕುತೂಹಲಕ್ಕಾಗಿ ತಮ್ಮ ದಾಂಪತ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇರುತ್ತಾರೆ.
ಪ್ರತಿ ಒಬ್ಬರ ಬದುಕು ಕೂಡ ಅವರವರು ಪಡೆದು ಬಂದಿರುವ ಯೋಗ್ಯತೆ ಮತ್ತು ಅದೃಷ್ಟ ಆಗಿರುತ್ತದೆ ಎಲ್ಲರ ಕುಟುಂಬಗಳಲ್ಲೊಯೂ ಅವರವರದ್ದೆ ಆದ ಕೊರತೆಗಳು ಹೊರೆಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಮಾತನಾಡದೆ ಮೌನವಾಗಿರುವುದು ಇನ್ನು ಕೆಲವೊಮ್ಮೆ ಮಾತಾಡಿ ಮೌನವಾಗಿರುವುದು ಆಯಾಯ ಸಂದರ್ಭಕ್ಕೆ ಅನುಗುಣವಾಗಿ ಒಳ್ಳೆಯ ಪರಿಣಾಮ ಬೀರುತ್ತವೆ. ಆದ್ದರಿಂದ ಅವರವರ ಬದುಕು ಅವರದು ಯಾರಲ್ಲಿಯೂ ಸಮಾನತೆಯನ್ನು ಬಯಸಲು ಸಾಧ್ಯವಿಲ್ಲ. ಪವಿತ್ರಾ ಲೋಕೇಶ್ ಅವರು ಕಷ್ಟಪಟ್ಟು ತಮ್ಮ ಬಾಲ್ಯದಿಂದಲೂ ತಮ್ಮ ಬದುಕನ್ನು ತಮ್ಮ ವೃತ್ತಿಯನ್ನು ನಿರತಗೊಳಿಸಿಕೊಂಡಿದ್ದಾರೆ. ಅವರು ಒಬ್ಬ ಸಾಧಿತ, ಸ್ಥಾಪಿತ, ಹಾಗೂ ತುಂಬಾ ಪರಿಶ್ರಮದಿಂದ ಮೇಲೆ ಬಂದಿರುವ ಹೆಣ್ಣು ಮಗಳಾಗಿದ್ದಾರೆ ಇದರಲ್ಲಿ ನನ್ನ ಪಾತ್ರ, ಕೊಡುಗೆ ಯಾವುದು ಇಲ್ಲ. ನಾನು ಒಬ್ಬ ವಿಚಾರವಾದಿ, ಅದನ್ನು ವ್ಯಕ್ತ ಪಡಿಸಿ ಒಬ್ಬ ದೊಡ್ಡ ವ್ಯಕ್ತಿ ಆಗಿರಬಹುದು ಆದರೆ ಪವಿತ್ರ ಲೋಕೇಶ್ ಅವರು ಕೂಡ ವಿಚಾರವಾದಿ ಆಗಿರಬಹುದು ಅದನ್ನು ಅವರು ಎಲ್ಲಿಯು ಚರ್ಚೆ ಮಾಡದೆ ಬಹಿರಂಗ ಮಾಡದೆ ಇರುವುದರಿಂದ ಅವರು ವಿಚಾರವಾದಿ ಎಂದು ಕಾಣಿಸಬಹುದು ಅಷ್ಟೆ.
ನನಗೆ ಎಷ್ಟೋ ವಿಚಾರಗಳಲ್ಲಿ ಪವಿತ್ರ ಅವರೆ ತುಂಬಾ ಸ್ಪೂರ್ತಿ. ಅವರು ಎಷ್ಟೊ ಬಾರಿ ಹೇಳುತ್ತಾರೆ ನೀನು ವಿಚಾರವಾದಿಯಾಗಿ ನಿನ್ನ ಮಾತಿನಿಂದ ಎಲ್ಲರನ್ನು ಮೋಡಿ ಮಾಡಬಹುದು ಎಂದು. ನಾನು ಮಾತನಾಡಿ ವಿಚಾರಗಳನ್ನು ಪ್ರಚಾರ ಮಾಡಿ ದೊಡ್ಡವನಾದರೆ ಅವರು ಮಾತನಾಡದೆ ವಿಚಾರಗಳನ್ನು ತಿಳಿದು ಒಬ್ಬ ಶ್ರೀಮಂತರು ಆಗಬಹುದು. ಅವರವರ ಬದುಕು ಅವರು ರೂಢಿಸಿಕೊಂಡು ಬಂದ ಹಾಗೆ ಇರುತ್ತದೆ. ಅವೆಲ್ಲವೂ ಅವರನ್ನು ಎತ್ತರಕ್ಕೆ ಕೊಂಡ್ಯೊಯ್ಯಬಹುದು. ಅವರು ಕೂಡ ಸಾಧಕರಾಗಿ ತಮ್ಮ ಬದುಕಿನ ಪಯಣವನ್ನು ತುಂಬಾ ಮೇರು ಸದೃಶವಾಗಿ ಕಳೆಯುತ್ತಾ ಇರಬಹುದು. ಅವುಗಳನ್ನು ಗ್ರಹಿಸದೆ ಆ ವ್ಯಕ್ತಿಯನ್ನು ಅವಿಚಾರವಾದಿ ಎನ್ನುವುದು ಸರಿಯಲ್ಲ. ಹೀಗೆ ತಮ್ಮ ಮಡದಿಯ ಬಗ್ಗೆ ಹಾಗು ಸಂಸಾರ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ವಿವರಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.