ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಒಂದೇ ಕಾಲ ಘಟ್ಟದವರು ಒಂದೇ ಕಾಲ ಘಟ್ಟದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಹೌದು 2000 ಇಸವಿಯಲ್ಲಿ ಸ್ಯಾಂಡಲ್ವುಡ್ ಆಳುವಂತಹ ದಿಗ್ಗಜ ನಟರು ಇರಲಿಲ್ಲ. ಆ ಸಮಯದಲ್ಲಿ ಮೆಜೆಸ್ಟಿಕ್ ಸಿನಿಮಾದ ಮೂಲಕ ದರ್ಶನ್ ಅವರು ಸ್ಪರ್ಶ ಸಿನಿಮಾದ ಮೂಲಕ ಸುದೀಪ ಅವರು ಕಾಲಿಟ್ಟರು. ಇವರಿಬ್ಬರಿಗೂ ಕೂಡ ಈ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಹಿಟ್ ತಂದುಕೊಟ್ಟಿತು ತದನಂತರ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡಿದ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಬೆಳೆದು ಬಂದರು.
ಇನ್ನು ಚಿತ್ರರಂಗದಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಇಬ್ಬರನ್ನು ಕೂಡ ನಾವು ಕುಚಿಕೋ ಗೆಳೆಯರು ಅಂತ ಕರೆಯುತ್ತೇವೆ ಅಂಬರೀಶ್ ಅವರು ಮುಂಗೋಪಿ ಆದರೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶಗಳನ್ನು ಇಟ್ಟುಕೊಳ್ಳುವುದಿಲ್ಲ. ನೇರ ನುಡಿಯನ್ನು ಆಡುತ್ತಾರೆ ಇನ್ನು ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಒಬ್ಬರಿಗೆ ಒಂದು ಬಾರಿ ಸ್ನೇಹಿತನ ಪಟ್ಟವನ್ನು ಕೊಟ್ಟರೆ ಕೊನೆಯವರೆಗೂ ಆ ಪಟ್ಟವನ್ನು ಹಾಗೆಯೇ ಉಳಿಸಿಕೊಂಡು ಹೋಗುತ್ತಾರೆ.
ವಿಷ್ಣುವರ್ಧನ್ ಅವರು ಮೃದು ಸ್ವಭಾವದವರು ಸರಳತೆ ಸಜ್ಜನಿಕೆಗೆ ಹೆಸರಾದವರು ಇವರಿಬ್ಬರನ್ನು ಚಿತ್ರರಂಗದ ಮಾದರಿ ಗೆಳೆಯರು ಅಂತಾನೆ ಕರೆಯುತ್ತಾರೆ. ಇವರಿಬ್ಬರನ್ನು ಹೊರತು ಪಡಿಸಿದರೆ ಆ ಸ್ಥಾನಕ್ಕೆ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಬಂದು ನಿಲ್ಲುತ್ತಾರೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ 2018 ರ ವರೆಗೂ ಕೂಡ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರಿಗೂ ಕೂಡ ಅಂಬರೀಶ್ ಮತ್ತು ವಿಷ್ಣುವರ್ಧನ್ ಮಾದರಿಯಲ್ಲೇ ಇದ್ದರೂ.
ದರ್ಶನ್ ಅವರಿಗೂ ಕೂಡ ಬಹಳಾನೇ ಕೋಪ ಮುಂಗೋಪಿ ಇದ್ದ ವಿಚಾರವನ್ನು ನೇರವಾಗಿ ಹೇಳಿ ಬಿಡುತ್ತಾರೆ ಯಾರ ಮುಖಮೂತಿಯೂ ಕೂಡ ನೋಡುವುದಿಲ್ಲ. ಸುದೀಪ್ ಅವರು ಹಾಗಲ್ಲ ಯಾವುದೇ ವಿಚಾರ ಮಾತನಾಡುವುದಕ್ಕಿಂತ ಮುಂಚೆ ಯೋಚನೆ ಮಾಡುತ್ತಾರೆ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಮನಗೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮುಂದೆ ಇರುವಂತಹ ವ್ಯಕ್ತಿಗೆ ಆ ವಿಚಾರವನ್ನು ಯಾವ ರೀತಿಯಾಗಿ ಮನವೊಲಿಸಬೇಕು ಎಂಬ ವಿಚಾರವನ್ನು ಚರ್ಚೆ ಮಾಡುತ್ತಾರೆ.
ಹಾಗಾಗಿ ಈ ಇಬ್ಬರು ನಟರನ್ನು ಅಂಬರೀಶ್ ಮತ್ತು ವಿಷ್ಣುವರ್ಧನ್ ಗೆ ಹೋಲಿಕೆ ಮಾಡಿದ್ದಾರೆ ಇಬ್ಬರೂ ಕೂಡ ಬಹಳ ಆತ್ಮೀಯರಾಗಿದ್ದರು ಎಲ್ಲೆ ಹೋದರು ಬಂದರೂ ಕೂಡ ದರ್ಶನ್ ಮತ್ತು ಸುದೀಪ್ ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಇನ್ನು ಕೆಲವು ಚಿತ್ರರಂಗದಲ್ಲಿ ಇರುವಂತಹ ನಟರು ಇವರಿಬ್ಬರನ್ನು ನೋಡಿ ಸಂಘ ಕಟ್ಟಿಕೊಂಡಿದ್ದಾರೆ ಇವರಿಬ್ಬರದ ಬಳಗವಿದೆ ಎಂದು ಮಾತನಾಡಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಾಮ ಲಕ್ಷ್ಮಣರಂತೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಕಾಲ ಕಳೆಯುತ್ತಾರೆ.
ಆದರೆ ಇವರಿಬ್ಬರ ಸಂಬಂಧಕ್ಕೆ ಅದು ಯಾರೋ ಕೆಟ್ಟ ದೃಷ್ಟಿ ಬಿತ್ತೋ ಏನೋ ತಿಳಿಯಲಿಲ್ಲ ಅಷ್ಟು ಆತ್ಮೀಯ ಸ್ನೇಹಿತರಾಗಿದ್ದಂತಹ ಕಿಚ್ಚ ಸುದೀಪ್ ಮತ್ತು ದರ್ಶನ್ ಇದೀಗ ಬೇರೆ ಬೇರೆ ಯಾಗಿದ್ದಾರೆ. ಒಬ್ಬರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ಮತ್ತೊಬ್ಬರು ಪಾಲ್ಗೊಳ್ಳುವುದಿಲ್ಲ ಇದು ನಿಜಕ್ಕೂ ಕೂಡ ಬೇಸರದೆ ಸಂಗತಿ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಕೂಡ ಸುದೀಪ ಅವರು ಯಾವುದೇ ಕಾರ್ಯಕ್ರಮ ಇರಲಿ ಅಥವಾ ಯಾವುದೇ ಮಾಧ್ಯಮದ ಮುಂದೆ ಇರಬಹುದು ಎಲ್ಲಿಯೂ ಕೂಡ ಒಂದು ಬಾರಿಯೂ ದರ್ಶನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ.
ಯಾವಾಗಲೂ ಕೂಡ ಆತ ನನ್ನ ಜೀವದ ಗೆಳೆಯ ಕೊನೆಯವರೆಗೂ ಆ ಸ್ಥಾನವನ್ನು ಆತನಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿಯೂ ಕೂಡ ಸುದೀಪ್ ಅವರು ದರ್ಶನ್ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಕಿಚ್ಚ ಸುದೀಪ್ ಅವರಿಗೆ ದರ್ಶನ್ ಜೊತೆಗಿರುವ ಫೋಟೋವನ್ನು ಪ್ರೊಮೋದಲ್ಲಿ ಹಾಕಿ ತೋರಿಸಲಾಗುತ್ತದೆ. ಸಮಯದಲ್ಲಿ ಈ ಫೋಟೋ ನೋಡಿದಂತಹ ಸುದೀಪ ಅವರು ಜೊತೆಗೆ ಇಲ್ಲ ಒಟ್ಟಾಗಿ ಇಲ್ಲ ಮಾತನಾಡುತ್ತಿಲ್ಲ ಎಂಬ ಮಾತ್ರಕ್ಕೆ ಆತ ನನ್ನ ಸ್ನೇಹಿತ ಅಂತ ಹೇಳಲು ಅಸಾಧ್ಯ.
ಆತ ಎಂದಿಗೂ ಕೂಡ ನನ್ನ ಸ್ನೇಹಿತನೇ, ಅವನಿಗೆ ಎಂದಿಗೂ ಕೂಡ ನಾನು ಕೆಟ್ಟದ್ದು ಬಯಸಿಲ್ಲ ಬಯಸುವುದು ಇಲ್ಲ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಆದಷ್ಟು ಬೇಗ ಸುದೀಪ್ ಮತ್ತು ದರ್ಶನ್ ಒಂದಾಗಿ ಎಂದು ಹಾರೈಸುತ್ತಿದ್ದಾರೆ. ಆದರೆ ದರ್ಶನ್ ಅವರೇ ಯಾಕೋ ಇನ್ನೂ ಕೂಡ ಮನಸ್ಸು ಕೊಡುತ್ತಿಲ್ಲ ಈ ವಿಚಾರದ ಬಗ್ಗೆ ಸ್ವಲ್ಪ ಸಾಫ್ಟ್ ಕಾರ್ನರ್ ಹೊಂದಿದ್ದರೆ ಖಂಡಿತವಾಗಿಯೂ ಕೂಡ ಇವರಿಬ್ಬರು ಅತಿ ಶೀಘ್ರದಲ್ಲಿ ಒಂದಾಗುತ್ತಾರೆ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.