.
ಸುಧಾರಾಣಿ ತಮ್ಮ ಮುಗ್ಧ ಮುಖ, ಅಮೋಘ ಅಭಿನಯದ ಕಾರಣದಿಂದ ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ವಜ್ರೇಶ್ವರಿ ಕಂಬೈನ್ಡ್ಸ್ ಮೂಲಕ ಪಾರ್ವತಮ್ಮ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಳುವಳಿಯಾಗಿ ಕೊಟ್ಟ ನಾಯಕಿಯರ ಪಟ್ಟಿಯಲ್ಲಿ ಸುಧಾರಾಣಿ ಅವರು ಕೂಡ ಇದ್ದಾರೆ.
ಆನಂದ್ ಎನ್ನುವ ಸಿನಿಮಾದ ಮೂಲಕ ಶಿವಣ್ಣ ಅವರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡ ಸುಧಾರಾಣಿಯವರು ಶಿವಣ್ಣನ ಜೊತೆ ಯಶಸ್ವಿ ಜೋಡಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ನಟರೊಡನೆ ಅಭಿನಯಿಸಿ ಇಂದಿಗೂ ಕೂಡ ಪೋಷಕ ಪಾತ್ರಗಳಿಗೆ ಹಾಗೂ ಕಿರುತೆರೆ ಧಾರಾವಾಹಿಗಳ ಕಥೆಗಳ ಮುಖ್ಯ ಪಾತ್ರಕ್ಕೆ ಬೇಡಿಕೆಯಲ್ಲಿರುವ ನಟಿ.
ಸಿನಿಮಾ ರಂಗದಲ್ಲಿ ನಾಯಕ ನಟಿಯಾಗಿ ತನ್ನ ಜರ್ನಿ ಶುರು ಮಾಡಿದವರು ಈಗ ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇದುವರೆಗೆ ಕಾವ್ಯ, ರಥಸಪ್ತಮಿ, ಜೊತೆ ಜೊತೆಯಲಿ ಇನ್ನು ಮುಂತಾದ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿಯವರು ಈಗ ಸದ್ಯಕ್ಕೇ ಜೀ ಕನ್ನಡ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ತುಳಸಿ ಪಾತ್ರ ಮಾಡುತ್ತಿದ್ದಾರೆ.
ಈ ಧಾರಾವಾಹಿಯನ್ನು ತುಳಸಿ ಹಾಗೂ ಮಾಧವ ಎನ್ನುವ ಪಾತ್ರದ ಸುತ್ತ ಕಟ್ಟಲಾಗಿದೆ. ಇವುಗಳ ಜೊತೆ ಉಳಿದ ಪಾತ್ರಗಳು ಕೂಡ ವಿಭಿನ್ನವಾಗಿ ನಿರ್ಮಾಣವಾಗಿದ್ದರು. ಈ ಧಾರಾವಾಹಿಯಲ್ಲಿ ಅಮ್ಮನಂತಿರುವ ಅತ್ತೆಯಾಗಿ, ತಾಯಿಯಂತಿರುವ ಸ್ನೇಹಿತೆಯಾಗಿ, ಮಗಳಂತಿರುವ ಸೊಸೆಯಾಗಿ ಉಳಿದ ಎಲ್ಲರಿಗಿಂತಲೂ ತುಳಸಿ ಪಾತ್ರದ ಸುಧಾರಣೆಯವರು ಎಲ್ಲರ ಗಮನ ಸೆಳೆದಿದ್ದಾರೆ.
ಸದ್ಯಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳ ಜನಪ್ರಿಯತೆ ಪೈಕಿ ಈ ಧಾರಾವಾಹಿ ಶುರುವಾದ ದಿನದಿಂದಲೂ ಕೂಡ ಅಗ್ರಗಣ್ಯ ಸ್ಥಾನದಲ್ಲಿದೆ. ಸುಧಾರಾಣಿಯವರು ಒಂದಲ್ಲ ಒಂದು ಕಾರಣಕ್ಕಾಗಿ ಜನರಿಗೆ ಹತ್ತಿರವಾಗಿಯೇ ಇರುತ್ತಾರೆ. ಹಿಂದೆ ಸಿನಿಮಾಗಳಲ್ಲಿ ರಂಜಿಸಿದರು, ಈಗ ಒಂದು ಹೆಚ್ಚು ಮುಂದೆ ಹೋಗಿ ಪ್ರತಿದಿನ ಕೂಡ ಟಿವಿ ಪರದೆ ಮೂಲಕ ಪ್ರೇಕ್ಷಕರನ್ನು ಭೇಟಿಯಾಗುತ್ತಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಆಗಲಿ, ಕಿರುತೆರೆ ಇಂಡಸ್ಟ್ರೀಗೆ ಆಗಲಿ ಹೊಸ ಪ್ರತಿಭೆಗಳಿಗೇನು ಕಡಿಮೆ ಇಲ್ಲ. ವರ್ಷಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಬರುತ್ತಲೇ ಇರುತ್ತಾರೆ. ಮೊದಲ ಅವಕಾಶ ಸಿಕ್ಕರೆ ಸಾಕು ಸಂಭಾವನೆಯೇ ಬೇಡ ಎಂದು ಕ್ಯೂ ನಿಲ್ಲುವ ಜನರು ಇದ್ದಾರೆ. ಇದೆಲ್ಲದರಲ್ಲೂ ಗೆದ್ದು ಇಂದಿಗೂ ಸಹ ತನ್ನ ಮಾರ್ಕೆಟನ್ನು ಹಾಗೆ ಉಳಿಸಿಕೊಂಡಿರುವ ಸುಧಾರಾಣಿಯವರು ತಮ್ಮ ಧಾರಾವಾಹಿಗಳಿಗೂ ಸಹ ಯಾವುದೇ ಸಿನಿಮಾಗೂ ಕಡಿಮೆ ಇಲ್ಲದಂತೆ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನುವ ಮಾತುಗಳು ಇವೆ.
ಇದೇ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಸುಧಾರಾಣಿಯವರು ಸಿನಿಮಾದಲ್ಲಿ ನಾಯಕನಟಿಯಾಗಿದ್ದ ಸಮಯದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆಗ ಅವರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದರು ಎಂದು ಜನ ಕುತೂಹಲ ತೋರುತ್ತಿದ್ದಾರೆ.
ಈ ವಿಷಯದ ಬಗ್ಗೆ ಹೇಳುವುದಾದರೆ ಮೊಟ್ಟಮೊದಲಿಗೆ ನಾಯಕನಟಿಯಾಗಿ ಕಾಣಿಸಿಕೊಂಡ ಆನಂದ್ ಚಿತ್ರಕ್ಕೆ ಅವರು ಬರೋಬ್ಬರಿ 30,000 ರೂಗಳ ಚೆಕ್ಕನ್ನು ಶಿವಣ್ಣ ಅವರ ಕೈಯಿಂದಲೇ ತೆಗೆದುಕೊಂಡಿದ್ದರು. ಆ ಫೋಟೋ ಇನ್ನು ಸಹ ಹಾಗೆ ಇಟ್ಟುಕೊಂಡಿದ್ದಾರೆ. ಅದನ್ನು ಹಿಂದೊಮ್ಮೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದರು.
ಆ ಸಮಯದಲ್ಲಿ ಮೊದಲ ಸಿನಿಮಾಗೆ ಅಷ್ಟು ಸಂಭಾವನೆ ತೆಗೆದುಕೊಳ್ಳುವುದು ಬಹಳ ದೊಡ್ಡ ವಿಚಾರವಾಗಿತ್ತು, ಆ ದಿನಕ್ಕೆ ಅದು ದೊಡ್ಡ ಮೊತ್ತವಾಗಿತ್ತು. ಸುಧಾರಾಣಿ ಅವರು ಆಗಿನಿಂದ ಈವರಿಗೆ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಯಾವ ಸಿನಿಮಾದ ಪಾತ್ರ ನಿಮಗೆ ಅಚ್ಚುಮೆಚ್ಚು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.