Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentBigBoss: ಬಿಗ್ ಬಾಸ್ ಮನೆಯ ಮತ್ತೊಂದು ವಿಡಿಯೋ ವೈರಲ್, ಲಿಪ್ ಟು ಲಿಪ್ ಕಿಸ್ ಮಾಡಿ...

BigBoss: ಬಿಗ್ ಬಾಸ್ ಮನೆಯ ಮತ್ತೊಂದು ವಿಡಿಯೋ ವೈರಲ್, ಲಿಪ್ ಟು ಲಿಪ್ ಕಿಸ್ ಮಾಡಿ ವಿವಾದ ಸೃಷ್ಟಿಸಿಕೊಂಡ ಸೆಲೆಬ್ರಿಟಿಗಳು.

ಬಿಗ್ ಬಾಸ್ ರಿಯಾಲಿಟಿ ಶೋ

ಎಲ್ಲಾ ರಿಯಾಲಿಟಿ ಶೋಗಳ ದೊಡ್ಡಣ್ಣ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವು ವಿಶ್ವದಾದ್ಯಂತ ಹೆಸರುವಾಸಿ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಸಲಾಗುತ್ತದೆ. ವರ್ಷಕೊಂದು ಬಾರಿ ನಡೆಯುವ ಈ ಸೀಸನ್ ನೋಡಲು ವರ್ಷಪೂರ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಹಾಗೂ ತಮ್ಮ ನೆಚ್ಚಿನ ನಟ ನಟಿಯರು ಅಥವಾ ಕಲಾವಿದರು, ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ. ಜನ ಸಾಮಾನ್ಯರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ನೀಡಲಾಗುತ್ತಿದ್ದು ಆ ರೀತಿ ಅವಕಾಶ ಇದ್ದ ಸೀಸನ್ ಅಲ್ಲಿ ಆಸಕ್ತರು ಸಹ ಬಿಗ್ ಬಾಸ್ ಮನೆಗೆ ಹೋಗಲು ಮುಗಿ ಬೀಳುತ್ತಾರೆ.

ಕೆಲವರು ಹೊರಗಿನಿಂದ ಪ್ರೇಕ್ಷಕರಂತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿಕೊಂಡೆ ಖುಷಿಪಡುತ್ತಾರೆ. ಹೀಗೆ ಆಡುವವರಿಗೆ ಮತ್ತು ನೋಡುವವರಿಗೆ ಎಲ್ಲರಿಗೂ ಒಂದು ಬೃಹತ್ ಪಾಠಶಾಲೆ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವು ಇಂತಹ ಹತ್ತು ಹಲವು ವಿಶೇಷತೆಗಳಿಂದ ಹೆಸರುವಾಸಿ ಆಗಿದೆ.

ಸದ್ಯಕ್ಕೆ ವ್ಯಕ್ತಿತ್ವಗಳ ಅನಾವರಣ ಎಂದು ಹೆಸರುವಾಸಿ ಆಗಿದ್ದ ಬಿಗ್ ಬಾಸ್ ಕಾರ್ಯಕ್ರಮವು ಒಂದು ರೀತಿ ಲವರ್ಸ್ ಸ್ಪಾಟ್ ಆಗಿಬಿಟ್ಟಿದೆ. ದಿನದ 24 ಗಂಟೆಗಳ ಕಾಲ ತೀರ ಹತ್ತಿರದಿಂದ ಒಬ್ಬರ ಜೊತೆ ಒಬ್ಬರು ಸಮಯ ಕಳೆಯುವುದರಿಂದ ಸಹಜವಾಗಿ ಒಬ್ಬರ ಮೇಲೆ ಒಬ್ಬರಿಗೆ ಫೀಲಿಂಗ್ ಬೆಳೆಯುತ್ತಿದೆ. ಅದರಲ್ಲಿ ಹಲವರು ಅದನ್ನು ಗಟ್ಟಿಯಾಗಿ ಇಟ್ಟುಕೊಂಡು ಹೊರಬಂದ ಬಳಿಕ ರಿಲೇಶನ್ ಶಿಪ್ ಮುಂದುವರೆಸಿ ಜೀವನದಲ್ಲೂ ಜೊತೆಯಾಗಿದ್ದರೆ.

ಕೆಲವರು ಕಾರ್ಯಕ್ರಮದಲ್ಲಿ ಹಲವು ದಿನಗಳ ಕಾಲ ಉಳಿದುಕೊಳ್ಳಲು ಇದನ್ನೇ ಒಂದು ಸ್ಟಾಟರ್ರ್ಜಿ ಆಗಿ ಮಾಡಿಕೊಂಡು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಈ ರೀತಿಯ ಒಂದು ಆರೋಪ ಕನ್ನಡ ಮಾತ್ರವಲ್ಲದೆ ಎಲ್ಲ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮಗಳನ್ನು ಕೂಡ ಇದೆ. ಈಗ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕ್ಯಾಮರಗಳ ಎದುರೇ ನಟಿಯೊಬ್ಬರು ಲಿಪ್ ಟು ಲಿಪ್ ಕಿಸ್ ಮಾಡಿ ಸಂಚಲನ ಸೃಷ್ಟಿ ಮಾಡಿದ್ದಾರೆ.

ಸಿರಿ ಎನ್ನುವ ಕಳೆದ ಸೀಸನ್ ಬಿಗ್ ಬಾಸ್ ಕಂಟೆಸ್ಟೆಂಟ್ ತನ್ನ ಗೆಳೆಯ ಶ್ರೀಹಾನ್ ಎನ್ನುವರು ಈ ಬಾರಿಯ ಕಂಟೆಸ್ಟೆಂಟ್ ಆಗಿರುವುದರಿಂದ ಮನೆ ಒಳಗೆ ಬಂದಿದ್ದು, ಇಷ್ಟು ಕಾಲ ಅಗಲಿಕೆ ವಿರಹದಲ್ಲಿದ್ದ ಶ್ರೀಹಾನ್ ಗೆ ಲಿಪ್ ಲಾಕ್ ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸಿರಿ ಅವರು ಕಳೆದ ಸೀಸನ್ ಅಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

ಆ ಸಮಯದಲ್ಲಿ ಶನ್ನು ಅವರೊಂದಿಗೆ ಹೆಚ್ಚು ಜಗಳ ಮಾಡುವ ಮೂಲಕ ಆಗಾಗ ಅಪ್ಪುಗೆ ಕೊಡುವ ಮೂಲಕ ಸುದ್ದಿಯಲ್ಲಿದ್ದರು. ಒಂದು ಬಾರಿ ಹಾಸಿಗೆ ವಿಷಯಕ್ಕೆ ಜಗಳವಾಗಿ ಶನ್ನು ಕಪಾಳಕ್ಕೆ ಸಿರಿ ಬಾರಿಸಿದ್ದರು ಅದಾದ ಬಳಿಕ ಶನ್ನು ಬದುಕಿನಲ್ಲಿ ಅಲ್ಲೋಲ ಕಲ್ಲೋಲ ನಡೆದು ಅವರ ಗರ್ಲ್ ಫ್ರೆಂಡ್ ದೀಪ್ತಿ ಸುನೈನ ಶನ್ನು ಜೊತೆ ಬ್ರೇಕಪ್ ಮಾಡಿಕೊಳ್ಳಲು ಸಿರಿ ಕಾರಣವಾಗಿದ್ದರು.

ಇಷ್ಟಾದ ಬಳಿಕ ಸಿರಿ ಮತ್ತು ಷನ್ನು ನಡುವೆ ಪ್ರೀತಿ ಚಿಗುರೊಡೆದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಮನೆಯೊಳಕ್ಕೆ ಬಂದ ಸಿರಿ ಅವರು ಶ್ರೀಹನ್ ಗೆ ಕಿಸ್ ಮಾಡಿದ್ದರಿಂದ ಎಲ್ಲರೂ ಬಹಳ ಕನ್ಫ್ಯೂಸ್ ಆಗಿಬಿಟ್ಟಿದ್ದಾರೆ. ಸದ್ಯಕ್ಕೆ ಈಗ ಎಲ್ಲರ ಮನಸ್ಸಲ್ಲಿ ಓಡುತ್ತಿರುವ ಪ್ರಶ್ನೆಗಳಿಗೆ ಸಿರಿ ಅವರೇ ಉತ್ತರ ಕೊಟ್ಟು ಕನ್ಫ್ಯೂಷನ್ ಗಳನ್ನು ಸಾಲ್ವ್ ಮಾಡಬೇಕಿದೆ.

ಯಾಕೆಂದರೆ ಶನ್ನು ಜೊತೆಗೆ ಕೂಡ ಸಿರಿ ಹಿಂದೆ ಕಿಸ್ ಮಾಡಿದ್ದರು. ಹಾಗಾಗಿ ಇದನ್ನು ಕಾಮನೆಂದು ತೆಗೆದುಕೊಳ್ಳಬೇಕೆ ಅಥವಾ ವಿಶೇಷ ಎಂದು ಕೊಳ್ಳಬೇಕೆ ಎಂದು ಶ್ರೀಹಾನ್ಗಿಂತ ಪ್ರೇಕ್ಷಕರೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.