Sunday, May 28, 2023
HomeUseful Informationಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಜೂನ್ 1ರಿಂದಲೇ...

ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಜೂನ್ 1ರಿಂದಲೇ ಈ ನಿಯಮ ಅನ್ವಯ.!

 

ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕಾಗಿ ಇನ್ನು ಮುಂದೆ ಅಗತ್ಯ ದಾಖಲೆಯಾಗಿ ಆಧಾರ್ ಅನ್ನು ಬಳಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಆಧಾರ್ ಕಾರ್ಡ್ ಬಳಕೆ ಈಗ ದೇಶದಲ್ಲಿ ಎಷ್ಟು ಅಗತ್ಯ ಹಾಗೂ ಅವಶ್ಯಕ ಮತ್ತು ಇದು ಎಷ್ಟು ಯೂನಿಕ್ ಆಗಿದೆ ಎನ್ನುವುದನ್ನು ಮನಗಂಡಿರುವ ರಾಜ್ಯ ಸರ್ಕಾರವು ಇಂತಹದೊಂದು ಮಹತ್ತರ ಆದೇಶಕ್ಕೆ ಮುಂದಾಗಿದೆ.

ಯಾಕೆಂದರೆ ಒಬ್ಬ ವ್ಯಕ್ತಿಯ ನಿಖರ ಮಾಹಿತಿಯನ್ನು ಯಾವುದೇ ವಂಚನೆ ಇಲ್ಲದೆ ಆಧಾರ್ ಕಾರ್ಡ್ ಮಾಹಿತಿ ಮೂಲಕ ಸುಲಭವಾಗಿ ತಿಳಿಯಬಹುದು. ಹಾಗಾಗಿ ಇಂತಹ ಒಂದು ದಾಖಲೆಯನ್ನೇ ನೋಂದಣಿ ಪ್ರಕ್ರಿಯೆಯಲ್ಲಿ ಕಡ್ಡಾಯಗೊಳಿಸುವುದರಿಂದ ಆಸ್ತಿ ಮಾರಾಟ ಮತ್ತು ಖರೀದಿ ವೇಳೆಯಲ್ಲಿ ಆಗುತ್ತಿರುವ ಅನೇಕ ವಂಚನೆಗಳನ್ನು ತಡೆಗಟ್ಟಬಹುದು ಎನ್ನುವ ನಿರ್ಧಾರದಿಂದ ಸರ್ಕಾರ ಇಂತಹದೊಂದು ನಿಯಮ ಮಾಡಿದೆ.

ಕೇಂದ್ರ ಸರ್ಕಾರವು ಏಪ್ರಿಲ್ ತಿಂಗಳಲ್ಲಿಯೇ ಇದ.ಕ್ಕೆ ಆದೇಶ ಹೊರಡಿಸಿತ್ತು. ಈಗ ಮೇ 18ರಿಂದ ರಾಜ್ಯದ್ಯಂತ ಆಧಾರ್ ಬಳಕೆಯನ್ನು ಆಸ್ತಿ ಮಾರಾಟ ಮತ್ತು ಖರೀದಿ ಮಾಡುವ ಸಮಯದಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವಾಗ ಕಡ್ಡಾಯ ದಾಖಲೆಯಾಗಿ ಕೊಡಲೇಬೇಕು ಎನ್ನುವಂತಹ ನಿಯಮವನ್ನು ಪಾಲಿಸಲಾಗುತ್ತದೆ.

ಸದ್ಯಕ್ಕೆ ನೋಂದಣಿ ಹಾಗೂ ಮುದ್ರಾಂಕ ತಂತ್ರಾಂಶವನ್ನು ಇದಕ್ಕೆ ಅನ್ವಯವಾಗುವಂತೆ ಬದಲಾಯಿಸುತ್ತಿರುವ ಕಾರಣ ಜೂನ್ 1ರಿಂದಲೇ ರಾಜ್ಯದ್ಯಂತ ಇದು ಜಾರಿಗೆ ಬರಲಿದೆ. ಸರ್ಕಾರದ ಈ ನಿಯಮದ ಹಿಂದಿರುವ ಮುಖ್ಯ ಉದ್ದೇಶ ಏನೆಂದರೆ, ಈ ರೀತಿ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಇವುಗಳಲ್ಲಿ ಜಾರಿಗೆ ತರುವುದರಿಂದ ಆಸ್ತಿಯ ಮಾಲೀಕನ ಗುರುತು ಸರಿಯಾಗಿ ಸಿಗುತ್ತದೆ. ಹೀಗಾಗಿ ಬೇರೆಯವರ ಆಸ್ತಿಯನ್ನು ವಂಚನೆ ಮಾಡಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸರ್ಕಾರದ ನಿಲುವು.

ಒಂದು ಆಸ್ತಿಗೆ ಒಂದಕ್ಕಿಂತ ಹೆಚ್ಚಿನ ಮಾಲೀಕರು ಇದ್ದಾಗ ಅದನ್ನು ಸಹ ಗುರುತು ಹಿಡಿಯಲು ಆಧಾರ್ ಕಾರ್ಡ್ ಉಳಿದೆಲ್ಲಾ ಗುರುತಿನ ಚೀಟಿಗಿಂತ ಹೆಚ್ಚು ನಿಖರವಾಗಿ ಸಹಾಯಕ್ಕೆ ಬರುತ್ತದೆ ಎನ್ನುವುದು ಕೂಡ ಸತ್ಯ. ಇದಕ್ಕೂ ಹಿಂದೆ ಕೆಲವು ಗುರುತಿನ ಚೀಟಿ ಮತ್ತು ಸಹಿ ಪಡೆಯುವ ಮೂಲಕ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲಾಗುತ್ತಿತ್ತು. ಅದೇ ಮಾಹಿತಿಗಳ ಮೂಲಕ ಮಾಲೀಕರ ಗುರುತನ್ನು ಪತ್ತೆ ಮಾಡಲಾಗುತ್ತಿತ್ತು.

ಆದರೆ ಇನ್ನು ಮುಂದೆ ಈ ಪ್ರಕ್ರಿಯೆಗೆ ಆಧಾರ್ ಕಾರ್ಡನ್ನು ಕಡಾಕಂಡಿತವಾಗಿ ಬಳಸಲಾಗುತ್ತದೆ. ಇದರಿಂದ ಆಸ್ತಿ ಮಾಲೀಕತ್ವದಲ್ಲಿ ಸುಳ್ಳು ದಾಖಲೆ ಕೊಟ್ಟು ಮೋಸ ಮಾಡುವವರ ಹಾವಳಿ ಇನ್ನು ಮುಂದೆ ಸ್ವಲ್ಪ ತಗ್ಗಲಿದೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ಮಾಲೀಕರಿಗೂ ಕೂಡ ಅನ್ವಯವಾಗಲಿದ್ದು ಇನ್ನು ಮುಂದೆ ನೋಂದಣಿ ಕಚೇರಿಯಲ್ಲಿ ಸ್ಥಿರಾಸ್ತಿಯ ಕುರಿತು ಪರಭಾರೆ ಮಾಡುವಾಗ ಆಧಾರ್ ಕಾರ್ಡನ್ನು ಹೊಂದಿರಲೇಬೇಕಾಗುತ್ತದೆ.

ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ N. ಶ್ರೀಧರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ರಾಜ್ಯ ಸರ್ಕಾರವು ಮೇ 18ರಂದು ಇದಕ್ಕೆ ಆದೇಶ ಹೊರಡಿಸಿದೆ ಎನ್ನುವ ಸುದ್ದಿಯನ್ನು ಹೇಳಿ ಇನ್ನು ಮುಂದೆ ಸ್ಥಿರಾಸ್ತಿಗಳ ಮಾರಾಟ ಮತ್ತು ಖರೀದಿ ವೇಳೆ ಮಾಲೀಕರನ್ನು ಗುರುತಿಸಲು ಸಹಾಯವಾಗಲು ಆಧಾರ್ ತಂತ್ರಾಂಶವನ್ನು ಕಡ್ಡಾಯವಾಗಿ ಬಳಸಲಾಗುವುದು ಎನ್ನುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.