ಈ ತಾಯಿ ಮಕ್ಕಳ ಸಂಬಂಧವೇ ಹಾಗೆ. ಪ್ರಪಂಚದ ಉಳಿದೆಲ್ಲಾ ಅನುಬಂಧಗಳಿಗಿಂತ ಬಹಳ ಶ್ರೇಷ್ಠವಾದದ್ದು, ಇತರರಿಗೆ ಜೀವಿಯೊಂದರ ಪರಿಚಯ ಆತನ ಜನ್ಮದ ನಂತರ ಆದರೆ ತಾಯಿ ಜೊತೆ ಗರ್ಭದಿಂದಲೂ ಒಡನಾಟ ಶುರುವಾಗಿರುತ್ತದೆ, ಮಗುವಿನ ಹಂಬಲದಲ್ಲಿರುವ ತಾಯಿಗೆ ಅದು ಹೊಟ್ಟೆಗೆ ಬೀಳುವ ಮುನ್ನವೇ ಕಲ್ಪನೆಯಲ್ಲೂ ಕೂಡ ಅದು ಜೀವಂತವಾಗಿರುತ್ತದೆ ಎಂದರು ತಪ್ಪಾಗಲಾರದು.
ಈ ರೀತಿ ಮಗುವಿನ ಮೇಲೆ ಇಷ್ಟು ಕಾಳಜಿ, ಮಮಕಾರ, ವಾತ್ಸಲ್ಯ ಒಟ್ಟಿನಲ್ಲಿ ಅನ್ ಕಂಡಿಷನಲ್ ಲವ್ ಹೊಂದುವುದು ತಾಯಿ ಮಾತ್ರ. ಹಾಗಾಗಿ ಕರುಳಿನ ಸಂಬಂಧ ಎಂದು ತಾಯಿ ಹಾಗೂ ಮಗುವಿನ ಸಂಬಂಧವನ್ನು ಕರೆಯುತ್ತಾರೆ. ಕರುಳನ್ನೇ ತೊಟ್ಟಿಲು ಮಾಡಿ ಕಂದನನ್ನು ತೂಗುವ ಈಕೆಯ ಋಣ ಹಾಗೂ ನಿಸ್ವಾರ್ಥಕ್ಕೆ ಸರಿದೂಗಬಲ್ಲ ಸಮನಾದ ಪ್ರೀತಿಯನ್ನು ಹುಡುಕಲು ಆಗದು.
ಬಟ್ಟೆ ಒಗೆಯುವಾಗ ಇದನ್ನು ಸೇರಿಸಿ ನೋಡಿ ಮ್ಯಾಜಿಕ್ ತರ ಎಲ್ಲ ಕೊಳೆ ಮಾಯವಾಗುತ್ತದೆ.!
ಇದಕ್ಕೆ ಸಾಕ್ಷಿಯಾಗುವಂತಹ ಅದೆಷ್ಟೋ ನಿದರ್ಶನಗಳನ್ನು ನಾವು ನೇರವಾಗಿ ಹಾಗೂ ಸೋಶಿಯಲ್ ಮೀಡಿಯಾ ವಿಡಿಯೋಗಳಲ್ಲಿ ಕಂಡಿದ್ದೇವೆ. ಅದೇ ರೀತಿಯ ಮತ್ತೊಂದು ಸನ್ನಿವೇಶ ಉಡುಪಿಯಲ್ಲಿ ಸೃಷ್ಟಿಯಾಗಿದ್ದು ಇದರ ಸಂಬಂಧಿತ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉಳಿದವರು ಕಂಡಂತೆ ಸಿನಿಮಾದ ತಾರಾ ಹಾಗೂ ರಿಷಬ್ ಶೆಟ್ಟಿ ನಿರ್ವಹಿಸಿದ ಪಾತ್ರವನ್ನು ಹೋಲುವಂತಹ ಸನ್ನಿವೇಶವೇ ಇಲ್ಲಿ ಸೃಷ್ಟಿಯಾಗಿದ್ದರು ಸ್ವಲ್ಪ ಕಥೆ ಚೇಂಜ್ ಆಗಿದೆ ಎಂದು ಹೇಳಬಹುದು. ಅದೇನೆಂದರೆ ರೋಹಿತ್ ಎನ್ನುವ ಉಡುಪಿ ಮೂಲದ ಒಬ್ಬ ಯುವಕ ಮೂರು ವರ್ಷಗಳ ಹಿಂದೆ ದುಬೈಗೆ ಕೆಲಸಕ್ಕೆಂದು ಹೋಗಿದ್ದ. ಆತ ತನ್ನ ತಾಯ್ನಾಡಿಗೆ ಮರಳುವುದನ್ನು ಕುಟುಂಬದವರು ಸ್ನೇಹಿತರು ಎಲ್ಲರಿಗಿಂತ ಹೆಚ್ಚಾಗಿ ಆಕೆಯ ತಾಯಿ ಕಾಯುತ್ತಿದ್ದರು.
ಮದುವೆಗೂ ಮುನ್ನ ಇದನ್ನು ತಪ್ಪದೆ ಎಲ್ಲರೂ ತಿಳಿದುಕೊಂಡಿರಬೇಕು.!
ಮೂರು ವರ್ಷಗಳಾದರೂ ಕೂಡ ಮಗನ ಮುಖವನ್ನು ನೋಡದ ತಾಯಿ ಬಹುತೇಕ ಮುದ್ದಿನ ಮಗನ ಗುಂಗಿನಲ್ಲಿಯೇ ಇರುತ್ತಿದ್ದರು. ಹೀಗಾಗಿ ಎಲ್ಲರಿಗೂ ಸರ್ಪ್ರೈಸ್ ಕೊಡುವ ಉದ್ದೇಶದಿಂದ ರೋಹಿತ್ ತಾನು ಭಾರತಕ್ಕೆ ಮರಳಿ ಬರುತ್ತಿರುವ ವಿಷಯವನ್ನು ಯಾರಿಗೂ ತಿಳಿಸದೇ ದುಬೈನಿಂದ ಭಾರತಕ್ಕೆ ಇಳಿದಿರುತ್ತಾನೆ.
ಊರಿಗೆ ಬಂದವರೇ ನೇರವಾಗಿ ಮನೆಗೆ ಹೋಗಿದ್ದಾರೆ ಆದರೆ ತಾಯಿ ಮನೆಯಲ್ಲಿ ಕಾಣುವುದಿಲ್ಲ, ಇದರಿಂದ ಬೇಸರಗೊಂಡ ಅವರು ಗಂಗೊಳ್ಳಿ ಮಾರುಕಟ್ಟೆಗೆ ಎಂದಿನಂತೆ ಮೀನು ಮಾರಲು ತಾಯಿ ಹೋಗಿರುವುದನ್ನು ತಿಳಿದು ಅವರನ್ನೇ ಹುಡುಕಿ ಮೀನು ಮಾರುತ್ತಿದ್ದ ಸ್ಥಳಕ್ಕೆ ಹೋಗಿದ್ದಾರೆ. ತಾಯಿಯನ್ನು ದೂರದಿಂದಲೇ ಕಂಡು ಆಕೆಯನ್ನು ಸ್ವಲ್ಪ ಆಟ ಆಡಿಸೋಣ ಎಂದು ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳು ಅಪರಿಚಿತರಂತೆ ವೇಶ ಹಾಕಿ ಮೀನು ಖರೀದಿಸಲು ಹೋಗಿದ್ದಾರೆ.
ತಾಯಿ ಮೊದಲಿಗೆ ಯಾರೋ ಮೀನು ತೆಗೆದುಕೊಳ್ಳಲು ಬಂದಿರುವವರು ಎಂದು ಆ ಕಡೆ ಗಮನ ಕೊಡದೆ ಅವರ ಕೆಲಸ ಮಾಡುತ್ತಿರುತ್ತಾರೆ. ಒಮ್ಮೆ ಮಗನ ಧ್ವನಿ ಕೇಳಿಸಿದ ತಕ್ಷಣ ಆಕೆಗೆ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕೂಲಿಂಗ್ ಗ್ಲಾಸ್ ಹಾಕಿರುವುದು ಮಗನೇ ಎನ್ನುವ ಅನುಮಾನ ಬಂದು ಅಪ್ಪಿಕೊಂಡಿದ್ದಾರೆ.
ತಾಯಿಯನ್ನು ಯಾಮಾರಿಸಲು ಹೋದ ಮಗನು ಅಮ್ಮನ ಆನಂದಬಾಷ್ಪಕ್ಕೆ ಕರಗಿ ಹೋಗಿದ್ದಾನೆ, ಅಮ್ಮ ಹಾಗೂ ಮಗನ ಆ ಅಪೂರ್ವ ಭೇಟಿಗೆ ಇಡೀ ಮಾರುಕಟ್ಟೆಯ ಸಾಕ್ಷಿಯಾಯಿತು. ಇದನ್ನೆಲ್ಲಾ ಅಲ್ಲೇ ಇದ್ದ ಮಗನ ಪರಿಚಿತರೊಬ್ಬರು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆ ವಿಡಿಯೋ ಈಗ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಾ ಎಲ್ಲರ ಕಣ್ಣಂಚನ್ನು ಒದ್ದೆ ಮಾಡುತ್ತಿದೆ. ಉಡುಪಿಯಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ನೀವು ಸಹ ಒಮ್ಮೆ ನೋಡಿ ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎನಿಸಿತು ಎಂದು ತಪ್ಪದೇ ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.