ಮನೆಯಲ್ಲಿರುವಂತಹ ಹಿರಿಯರು ಕೆಲವೊಂದಷ್ಟು ಮಾತುಗಳನ್ನು ನಮಗೆ ಯಾವಾಗಲೂ ಹೇಳುತ್ತಿರುತ್ತಾರೆ. ಹೌದು ನಾವು ಮನೆಯಲ್ಲಿ ಯಾವ ರೀತಿಯಾಗಿ ಇರಬೇಕು ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಹಾಗೂ ಯಾವ ವಸ್ತುವನ್ನು ಹೇಗೆ ಉಪಯೋಗಿಸಬೇಕು ಯಾವ ದಿನ ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು.
ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ನಮ್ಮ ಹಿರಿಯರು ಮಾಹಿತಿಗಳನ್ನು ಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಇಂತಹ ಯಾವುದೇ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದರೆ ಯಾರೂ ಕೂಡ ಅವರ ಮಾತನ್ನು ಕೇಳಿಸಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ಇರುವುದಿಲ್ಲ .ಅವರು ಹಿರಿಯರು ಅವರನ್ನು ಒಂದು ಮೂಲೆಯಲ್ಲಿ ಕೂರಿಸಿ ಅವರಿಗೆ ಊಟವನ್ನು ಹಾಕುವಂತಹ ಪರಿಸ್ಥಿತಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ.
ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಯಾವುದೇ ಮನೆಯಲ್ಲಿ ಒಂದು ಒಳ್ಳೆಯ ಕೆಲಸ ಒಂದು ಒಳ್ಳೆಯ ವಾತಾವರಣ ಇದೆ ಎಂದರೆ ಆ ಮನೆಯಲ್ಲಿ ಇರುವಂತಹ ಹಿರಿಯರೇ ಕಾರಣ. ಹೌದು ಅವರು ಹೇಳಿಕೊಡುವಂತಹ ಕೆಲವೊಂದು ಸಲಹೆಗಳು ನಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಾಗುತ್ತದೆ.
ಆದರೆ ಕೆಲವೊಂದಷ್ಟು ಜನ ಮನೆಯಲ್ಲಿರುವಂತಹ ಹಿರಿಯರ ಮಾತುಗಳನ್ನು ಕೇಳುವುದಿಲ್ಲ ಬದಲಿಗೆ ಅವರನ್ನು ಒಂದು ಮೂಲೆಯಲ್ಲಿ ಕೂರಿಸಿರುತ್ತಾರೆ. ಬಹಳ ಹಿಂದಿನ ದಿನಗಳಲ್ಲಿ ನೀವು ಗಮನಿಸಿರಬಹುದು ಮನೆಯಲ್ಲಿ ಒಂದು ಪೂಜೆ ಮಾಡಬೇಕು ಎಂದರೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಯಾವ ಆಹಾರವನ್ನು ಆ ಒಂದು ದಿನ ತಯಾರಿಸಬೇಕು ಹೀಗೆ ಪ್ರತಿಯೊಂದನ್ನೂ ಸಹ ಮನೆಯಲ್ಲಿರುವವರು ಹಿರಿಯರನ್ನು ಕೇಳಿ ಆನಂತರ ಕೆಲಸವನ್ನು ಪ್ರಾರಂಭಿಸುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಗಳ ಮಾತನ್ನೇ ಮಕ್ಕಳು ಕೇಳುವುದಿಲ್ಲ. ಇನ್ನು ಹಿರಿಯರ ಮಾತನ್ನು ಕೇಳುವುದು ಅಸಾಧ್ಯ. ಆದ್ದರಿಂದಲೇ ಅಂತಹ ಮನೆಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಏಳಿಗೆ ಪರಸ್ಪರ ಪ್ರೀತಿ ವಿಶ್ವಾಸ ಎನ್ನುವುದು ಇರುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿ ಜಗಳ ಒಬ್ಬರ ನಡುವೆ ಮತ್ತೊಬ್ಬರಲ್ಲಿ ಯಾವುದೇ ರೀತಿಯ ಭಾಂದವ್ಯ ಇಲ್ಲದೆ ಇರುವುದು.
ಹೀಗೆ ಒಂದಲ್ಲ ಒಂದು ರೀತಿಯ ಸಮಸ್ಯೆ ಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಾವು ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೆನಾದರು ಅನುಸರಿಸ ಲಿಲ್ಲ ಎಂದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಸೋಮವಾರ ತಲೆಗೆ ಎಣ್ಣೆ ಹಾಕ ಬೇಡ.
* ಒಂಟಿ ಕಾಲಿನಲ್ಲಿ ನಿಲ್ಲ ಬೇಡ.
* ಮಂಗಳವಾರ ತವರಿನಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ.
* ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ.
* ಇಡೀ ಕುಂಬಳಕಾಯಿ ಮನೆಗೆ ತರ ಬೇಡಿ.
* ಮನೆಯಲ್ಲಿ ಉಗುರು ತೆಗೆಯ ಬೇಡ.
* ಮಧ್ಯಾಹ್ನ ತುಳಸಿ ಕೊಯ್ಯ ಬೇಡ.
* ಹೊತ್ತು ಮುಳುಗಿದ ಮೇಲೆ ಕಸ ಕೂಡಿಸಬೇಡ.
* ಉಪ್ಪು ಮೊಸರು ಸಾಲ ಕೊಡುವುದು ಬೇಡ.
* ಬಿಸಿ ಅನ್ನಕ್ಕೆ ಮೊಸರು ಬೇಡ.
* ತಲೆ ಕೂದಲು ಒಳಗೆ ಹಾಕ ಬೇಡ.
* ಮನೆಯಿಂದ ಹೊರಗಡೆ ಹೋಗುವಾಗ ಕಸ ಗುಡಿಸುವುದು ಬೇಡ.
* ಹೊಸ್ತಿಲನ್ನು ತುಳಿದು ದಾಟ ಬೇಡ.
* ಗೋಡೆ ಮೇಲೆ ಕಾಲಿಟ್ಟು ಮಲಗ ಬೇಡ.
* ರಾತ್ರಿ ಹೊತ್ತಲ್ಲಿ ಬಟ್ಟೆ ಒಗೆಬೇಡ.
* ಒಡೆದ ಬಳೆ ಧರಿಸ ಬೇಡ.
* ಊಟ ಮಾಡಿದ ಮೇಲೆ ಕೈ ಒದಗಿಸ ಬೇಡ.
* ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಖಾಲಿ ಪಾತ್ರೆ ಇಡಬೇಡ.