ನಾವು ಸಾಮಾನ್ಯವಾಗಿ ಮಾತನಾಡುವಾಗ ಇದು ಅವರ ಹಣೆಬರಹ ಆಗಿತ್ತು, ಇದೇ ಅವರ ಹಣೆಯಲ್ಲಿ ಬರೆದಿತ್ತು, ಅವರ ಹಣೆಯಲ್ಲಿ ಬರೆದ ರೀತಿ ಆಗಿದೆ, ಹಣೆಬರಹ ತಪ್ಪಿಸಿಕೊಳ್ಳಲು ಆಗುವುದಿಲ್ಲ ಈ ರೀತಿ ಎಲ್ಲ ಮಾತನಾಡುವುದನ್ನು ನಾವು ಕೇಳಿರುತ್ತೇವೆ. ಹಾಗಾದರೆ ಈ ಹಣೆಬರಹ ಎಂದರೆ ಏನು ಇದು ನಿಜಕ್ಕೂ ಅಷ್ಟು ಸತ್ಯವಾಗಿರುತ್ತದೆಯೇ, ಹಣೆಬರಹದಲ್ಲಿ ಏನೆಲ್ಲಾ ಬರೆದಿದೆ ಎನ್ನುವುದು ಎಂದಿಗೂ ಕೂಡ ಕುತೂಹಲ ಉಳಿಸಿಕೊಳ್ಳುವ ವಿಷಯ.
ಈಗಿನ 21ನೇ ಶತಮಾನದಲ್ಲೂ ಕೂಡ ಈ ಮಾತು ಎಷ್ಟೊಂದು ವಿಶ್ವಾಸ ಉಳಿಸಿಕೊಂಡಿದೆ ಎಂದರೆ ಒಪ್ಪಿ ನಿಟ್ಟಿಸಿರು ಬಿಟ್ಟರೆ ಇದು ಮುಂದೆ ಇರುವ ದಾರಿ ಸ್ಪಷ್ಟವಾಗಿ ಕಂಡಂತೆ, ಅದೆಷ್ಟೋ ಬೇಡದ ನೆಗೆಟಿವ್ ಥಿಂಕಿಂಗ್ ಮನಸ್ಸಿನಿಂದ ಆಚೆ ಹೋದಂತೆ.
ಹಾಗಾಗಿ ಪುರಾಣ ಕಾಲದಿಂದ ಕಲಿಯುಗದವರೆಗೂ ಕೂಡ ಈ ಹಣೆಬರಹ ಎನ್ನುವ ವಿಚಾರವನ್ನು ಪೂರ್ವ ನಿರ್ಣಯ ಎಂದು ಶೇಕಡವಾರು ಹೆಚ್ಚಿನ ಮಂದಿ ನಂಬಿ ಬದುಕಿದ್ದಾರೆ. ಈ ಪ್ರಕಾರವಾಗಿ ಯಾವುದೆಲ್ಲ ವಿಷಯಗಳು ಮನುಷ್ಯನ ಹುಟ್ಟಿದಾಗಲೇ ಪೂರ್ವ ನಿರ್ದಿತವಾಗಿವೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
1. ಮನುಷ್ಯನ ಹುಟ್ಟು:- ಒಂದು ಮಗುವಿನ ಜನನವು ಯಾವ ಕುಟುಂಬದಲ್ಲಿ ಆಗಬೇಕು ಹಾಗೂ ಯಾರಿಗೆ ಮಕ್ಕಳಾಗಿ ಹುಟ್ಟಬೇಕು ಎನ್ನುವುದು ಹುಟ್ಟುವ ವ್ಯಕ್ತಿಯ ನಿರ್ಧಾರ ಆಗಿರುವುದಿಲ್ಲ, ಒಂದು ವೇಳೆ ಈ ರೀತಿ ಇದ್ದಿದ್ದರೆ ಎಲ್ಲರೂ ಶ್ರೀಮಂತರ ಅಥವಾ ತಮಗೆ ಇಷ್ಟವಾದವರ ಕುಟುಂಬದಲ್ಲಿ ಜನಿಸಬೇಕು ಎಂದು ಕೇಳಿಕೊಳ್ಳುತ್ತಿದ್ದರು. ಆದರೆ ಬ್ರಹ್ಮ ಹುಟ್ಟುವುದಕ್ಕೂ ಮೊದಲೇ ಯಾರ ಮನೆಯಲ್ಲಿ ಹುಟ್ಟಬೇಕು ಎನ್ನುವುದನ್ನು ಅವರ ಹಿಂದಿನ ಜನ್ಮದ ಪಾಪ ಹಾಗೂ ಪುಣ್ಯಗಳ ಫಲಾನುಫಲದ ಮೇಲೆ ನಿರ್ಧಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ.
2. ಶಿಕ್ಷಣ:- ಒಬ್ಬ ಗುರು ತನ್ನ ನೂರು ಜನ ಶಿಷ್ಯರಿಗೆ ಒಂದೇ ರೀತಿಯ ಪಾಠ ಮಾಡುತ್ತಾರೆ ಆದರೆ ಎಲ್ಲರೂ ಒಂದೇ ರೀತಿಯ ಜ್ಞಾನಾರ್ಜನೆ ಮಾಡುವುದಿಲ್ಲ ಮತ್ತು ಎಲ್ಲರ ಶಿಕ್ಷಣ ಮಟ್ಟವು ಒಂದೊಂದು ಹಂತದಲ್ಲಿ ಮುಗಿಯುತ್ತದೆ ಅಥವಾ ಮುಂದುವರಿಯುತ್ತದೆ. ಹೀಗಾಗಿ ಅದು ಕೂಡ ಅವರ ಋಣದಲ್ಲಿ ಇದ್ದದ್ದು ಅಂದರೆ ಹಣೆಬರಹದಲ್ಲಿ ಪಡೆದುಕೊಂಡಷ್ಟೇ ಮಾತ್ರ ಎಂದು ಹೇಳಲಾಗುತ್ತದೆ.
3. ಮದುವೆ:- ವಿವಾಹ ಎನ್ನುವುದು ಜೀವನದ ಬಹಳ ಮುಖ್ಯವಾದ ಘಟ್ಟ ಅದೆಷ್ಟೋ ಜನರು ಮದುವೆಗೂ ಮುಂಚೆ ತಾವು ಇಂಥವರನ್ನೇ ಮದುವೆ ಆಗಬೇಕು ಎಂದು ಇಚ್ಛೆಪಟ್ಟಿರುತ್ತಾರೆ. ಕೆಲವರು ಮಾತುಕೊಟ್ಟು ಒಪ್ಪಿಕೊಂಡಿರುತ್ತಾರೆ, ಆದರೆ ಮದುವೆ ಸಂದರ್ಭದಲ್ಲಿ ಎಷ್ಟೋ ಬಾರಿ ಇದು ಅನೇಕರಿಗೆ ತಮ್ಮ ಇಚ್ಛೆಯ ವಿರುದ್ಧವಾಗಿ ಆಗಿರುತ್ತದೆ. ಅದೆಷ್ಟೇ ಪ್ರಯತ್ನ ಪಟ್ಟರು ಕೂಡ ಅದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಯಾರು ಯಾರನ್ನು ವರಿಸಬೇಕು ಎನ್ನುವುದು ಪೂರ್ವ ನಿರ್ಧರಿತ ಅದು ಬ್ರಹ್ಮ ಲಿಖಿತ ಹಾಗಾಗಿಯೇ ಮದುವೆಗಳು ಸ್ವರ್ಗದಲ್ಲಿ ಭೂಮಿ ಮೇಲೆ ನಡೆಯುತ್ತದೆ ಎನ್ನುವ ಮಾತನ್ನು ಸಹ ಹೇಳಲಾಗುತ್ತದೆ.
4. ಸಿರಿತನ:- ಒಬ್ಬ ವ್ಯಕ್ತಿಯು ಏನು ಕ’ಷ್ಟ ಪಡದೆ ಧನವಂತನಾಗುತ್ತಾನೆ. ಕೆಲವರಿಗೆ ಅವರ ಪೂರ್ವಜರ ಆಸ್ತಿಯಾಗಿ ಸಂಪತ್ತು ಐಶ್ವರ್ಯ ಬಳುವಳಿಯಾಗಿ ಬರುತ್ತದೆ. ಇನ್ನು ಕೆಲವರಿಗೆ ಎಷ್ಟೇ ಕ’ಷ್ಟಪಟ್ಟರು ಕೂಡ ಅವರ ಸಿಲ ತೀರುವುದಿಲ್ಲ, ಹಣವು ಕೂಡ ನ’ಷ್ಟವಾಗಿ ತೊಂದರೆಗೆ ಸಿಲುಕುತ್ತಾರೆ. ಕೆಲವರಿಗೆ ಗುಪ್ತನಿಧಿಗಳ ಮೂಲಕ ಹಣ ಸಿಗುತ್ತದೆ. ಹೀಗೆ ಯಾರಿಗೆ ಎಷ್ಟು ಸಿಗಬೇಕು ಎನ್ನುವುದು ಕೂಡ ಈಗಾಗಲೇ ನಿರ್ಧಾರವಾಗಿದೆ ಎನ್ನುವುದನ್ನು ನಂಬಲಾಗುತ್ತದೆ.
5. ಮ’ರ’ಣ:- ಮ’ರ’ಣ ಎನ್ನುವುದು ಕೂಡ ನಮ್ಮ ಬೆನ್ನ ಹಿಂದೆಯೇ ಇರುವ ನೆರಳಿನಂತೆ ಇದನ್ನು ಯಾರು ಊಹಿಸುವುದಕ್ಕೆ ಆಗುವುದಿಲ್ಲ. ಅ’ಪ’ಘಾ’ತ, ಆ’ತ್ಮ’ಹ’ತ್ಯೆ, ಅ’ನಾ’ರೋ’ಗ್ಯ ಇವೆಲ್ಲ ನೆಪ ಆಗಿರಬಹುದು. 25 ವರ್ಷಗಳಿಂದ ಹಾಸಿಗೆ ಹಿಡಿದವರು ಕೂಡ ಉಸಿರು ಹಿಡಿದುಕೊಂಡು ಬದುಕುತ್ತಾರೆ ಆದರೆ ಯಾವುದೇ ಕಾಯಿಲೆ ಇಲ್ಲದ 30 ವರ್ಷದ ವ್ಯಕ್ತಿ ದಿಢೀರ್ ಎಂದು ಸ’ತ್ತು ಹೋಗುತ್ತಾನೆ ಹಾಗಾಗಿ ಅವನ ಆಯಸ್ಸು ಅವನ ಹಣೆಯಲ್ಲಿ ಬರೆಯಲಾಗಿರುತ್ತದೆ ಎನ್ನುವುದನ್ನು ಒಪ್ಪಲೇ ಬೇಕಾಗುತ್ತದೆ.