Saturday, April 26, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeUseful Informationಈ 5 ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಮಾಡಿಯೇ ತೀರುತ್ತಾರೆ.!

ಈ 5 ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಮಾಡಿಯೇ ತೀರುತ್ತಾರೆ.!

 

ಸ್ವಂತ ಮನೆ ಹೊಂದುವ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಜೊತೆಗೆ ಅವರ ಹಣೆ ಬರಹದಲ್ಲೂ ಬರೆದಿರಬೇಕು. ಇದನ್ನೇ ಜಾತಕ ಫಲ ಎನ್ನುತ್ತಾರೆ. ಒಬ್ಬ ವ್ಯಕ್ತಿ ತನ್ನ ಕರ್ಮಾನುಸಾರ ಆತನ ಜೀವಿತಾವಧಿಯಲ್ಲಿ ಎಲ್ಲವನ್ನು ಪಡೆಯುತ್ತಾ ಪ್ರತಿಯೊಂದನ್ನು ಅನುಭವಿಸಿಯೇ ಹೋಗುತ್ತಾನೆ.

ಅಂತೆಯೇ ಸ್ವಂತ ಮನೆ ಕಟ್ಟಿಕೊಳ್ಳುವ ಅಥವಾ ಹೊಂದುವ ಅದೃಷ್ಟ ಕೂಡ ಕೇವಲ ಕೆಲವರಿಗೆ ಮಾತ್ರ ಮೀಸಲಾಗಿರುತ್ತದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು 2024 ಮುಗಿಯುವುದರೊಳಗಾಗಿ ತಮ್ಮ ಬಹುದಿನದ ಸ್ವಂತ ಮನೆಯ ಕನಸನ್ನು ನನಸಾಗಿಸಿ ಕೊಳ್ಳುತ್ತಾರೆ ನೋಡೋಣ ಬನ್ನಿ.

* ವೃಷಭ ರಾಶಿ :- ವೃಷಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಬಹಳ ಬುದ್ಧಿವಂತರು. ಇವರು ಎಂದಿಗೂ ತಾವು ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರದಿರಲಿ ಎಂದು ಮುಂದಿನ ಭವಿಷ್ಯಕ್ಕಾಗಿ ಮೊದಲೇ ಹಣವನ್ನು ಜೋಪಾನ ಮಾಡುತ್ತಾರೆ.

ಹೀಗಾಗಿ ಸ್ಥಿರ ಆರ್ಥಿಕತೆಯಲ್ಲಿ ವೃಷಭ ರಾಶಿಯವರು ಮುಂದಿದ್ದಾರೆ ಚಂದ್ರನ ಲೋಕ ಎನ್ನಬಹುದು. ಉತ್ತಮ ಆರ್ಥಿಕ ಜವಾಬ್ದಾರಿ ಹೊಂದಿರುವ ವೃಷಭ ರಾಶಿಯವರು ಒಂದು ವೇಳೆ ಈ ಬಾರಿ ಸ್ವಂತ ಮನೆಯನ್ನು ಖರೀದಿಸಬೇಕು ಎಂದು ಕೊಂಡರೆ ಅದಕ್ಕೆ 2024 ತುಂಬಾ ಪ್ರಶಸ್ತವಾಗಿದೆ.

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯವರು ತಮ್ಮ ಕುಟುಂಬವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ನೋಡಿಕೊಳ್ಳುವ ಮನಸ್ಥಿತಿಯಲ್ಲಿ ಕರ್ಕಾಟಕ ರಾಶಿಯವರು ತುಂಬಾ ಫೇಮಸ್. ತಮ್ಮ ಕುಟುಂಬಕ್ಕೋಸ್ಕರ ಯಾವುದೇ ಗಟ್ಟಿ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳುವ ಸಾಮರ್ಥ್ಯ ಇವರಲ್ಲಿದೆ. ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ನಿರ್ಧಾರವನ್ನು ತೆಗೆದು ಕೊಂಡು ಸಮತೋಲನವಾದ ಬದುಕು ನಡೆಸಿ ಸ್ವಂತ ಮನೆಯನ್ನು ಹೊಂದುವ ಕನಸನ್ನು ಇವರು 2024 ರಲ್ಲಿ ನನಸು ಮಾಡಿಕೊಳ್ಳಲಿದ್ದಾರೆ.

* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯವರಿಗೆ ಹಣದ ಕೊರತೆ ಸಮಸ್ಯೆಯನ್ನು ಎದುರಿಸುವ ಸಂಭವ ಮೊದಲಿನಿಂದಲೂ ಕಡಿಮೆ ಎಂದು ಹೇಳಬಹುದು. ಏಕೆಂದರೆ ಇವರು ಸಂಪನ್ಮೂಲಭರಿತರು ಮತ್ತು ತಮ್ಮ ಜೀವನಕ್ಕಾಗಿ ದೃಢ ನಿರ್ಧಾರವನ್ನು ಕೈಗೊಳ್ಳುವವರು.

ಯಾವುದೇ ಗುರಿಯನ್ನು ತಲುಪಲು ಎದುರಾಗುವ ಯಾವುದೇ ಬಗೆಯ ಅಡೆತಡೆಗಳನ್ನು ಮೀರಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಇವರು ಕಠಿಣ ಪರಿಶ್ರಮದಿಂದ ದುಡಿಯುತ್ತಾರೆ. 2024 ರಲ್ಲಿ ಸ್ವಂತ ಮನೆ ಹೊಂದುವ ಯೋಗ ವೃಶ್ಚಿಕ ರಾಶಿಯವರಿಗೆ ಇದೆ ಎಂದು ಗ್ರಹಗತಿಗಳು ಹೇಳುತ್ತಿವೆ.

* ಮಕರ ರಾಶಿ :- ಮಕರ ರಾಶಿಯವರು ತಮ್ಮದೇ ಆದ ಕನಸು ಮತ್ತು ಗುರಿಯನ್ನು ಹೊಂದಿರುವ ಜನರು ಹಾಗೂ ಅದಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ದೂರದೃಷ್ಟಿ ಜಾಸ್ತಿ ಇವರಿಗೆ. ಸಾಧ್ಯವಾದಷ್ಟು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಂಬಲ. ಗ್ರಹಗತಿಗಳ ಆಧಾರದ ಮೇಲೆ ಹೇಳುವುದಾದರೆ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಇವರ ಕನಸಿಗೆ 2024 ಮುನ್ನುಡಿ ಬರೆಯಲಿದೆ.

* ಕುಂಭ ರಾಶಿ :- ಹೊರಗಡೆ ಜನರ ಬಳಿ ಹೆಚ್ಚು ಮಾತನಾಡದಿದ್ದರೂ ಭವಿಷ್ಯಕ್ಕೆ ಸಂಬಂಧಪಟ್ಟಂತೆ ಆಲೋಚನೆಗಳನ್ನು ಮತ್ತು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರಿಲ್ಲ. ಇನ್ನೊಬ್ಬರ ಹಂಗಿನಲ್ಲಿ ಎಂದಿಗೂ ಇರಬಾರದು ಎನ್ನುವ ಭಾವನೆ ಇವರಿಗೆ ಸ್ವಲ್ಪ ಜಾಸ್ತಿ. ಹಾಗಾಗಿ ನಾವು ಕೂಡ ನಮ್ಮದೇ ಆದ ಒಂದು ಸುಂದರ ಮನೆಯನ್ನು ಹೊಂದಬೇಕು ಎನ್ನುವ ಆಸೆ ಆಕಾಂಕ್ಷೆ ಇವರಿಗೆ ಮೊದಲಿನಿಂದಲೂ ಇರುತ್ತದೆ. ಇಷ್ಟು ವರ್ಷಗಳ ಇವರ ಬಯಕೆ 2024 ರಲ್ಲಿ ಪೂರ್ಣಗೊಳ್ಳಲಿದೆ.