ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಕಾಲಿ ಇಡುವುದರಿಂದ ಹಣದ ಸಮಸ್ಯೆ ದುರಾದೃಷ್ಟ ನಕಾರಾತ್ಮಕತೆ ಕೆಡುಕು ಉಂಟಾಗುತ್ತದೆ ಎಂದು ನಮ್ಮ ಮನೆಯಲ್ಲಿ ಆಗಾಗ ಹಿರಿಯರು ಹೇಳುತ್ತಿರುತ್ತಾರೆ. ಆದರೆ ಚಿಕ್ಕವರಾದ ನಮಗೆ ಅದರ ಬಗ್ಗೆ ಸ್ವಲ್ಪವೂ ತಿಳಿಯದೆ ಉಡಾಫೆಯಿಂದ ನಾವು ಅದೇ ತಪ್ಪನ್ನೇ ಮಾಡುತ್ತಿರುತ್ತೇವೆ. ತಿಳಿದು ತಿಳಿಯದೆ ಮಾಡುವ ಈ ಸಣ್ಣ ಪುಟ್ಟ ತಪ್ಪುಗಳಿಂದಲೇ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭ ವಾಗುತ್ತವೆ.
ಪ್ರತಿಯೊಬ್ಬರು ಕಷ್ಟಪಟ್ಟು ದುಡಿದು ಜೀವನ ಸಾಗಿಸುವುದು ನಮ್ಮ ಕುಟುಂಬದ ಸದಸ್ಯರು ಸುಖ ಸಂತೋಷದಿಂದ ಬಾಳ್ವೆ ಮಾಡ ಬೇಕೆಂದು. ನಾವು ಮಾಡುವ ಕೆಲಸದಲ್ಲೇ ಸ್ವಲ್ಪ ಬದಲಾವಣೆ ಮಾಡಿ ಕೊಂಡರೆ ಜೀವನದಲ್ಲಿ ಕೆಲವೊಂದು ಕಷ್ಟಗಳು ಪರಿಹಾರವಾಗುತ್ತದೆ.
* ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಇದ್ದಕ್ಕಿದ್ದಂತೆ ಕೆಟ್ಟ ದಿನಗಳಿಗೆ ತಿರುಗಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿರುವ ವಸ್ತುಗಳ ಬಗ್ಗೆ ಗಮನ ಕೊಡಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಖಾಲಿ ವಸ್ತು ಗಳು ನಿಮ್ಮ ಪ್ರಗತಿಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಮನೆಯ ಐಶ್ವರ್ಯ ದೂರವಾಗುತ್ತದೆ ಮತ್ತು ಬಡತನ ಜಾಸ್ತಿಯಾಗುತ್ತದೆ.
ಈ ಸುದ್ದಿ ಓದಿ:- ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ
* ಅಡುಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳು ಸಂಪತ್ತನ್ನು ಕೆಲವೊಂದು ಗ್ರಹಗಳನ್ನು ಪ್ರತಿನಿಧಿಸುತ್ತವೆ. ಆ ವಸ್ತುಗಳು ಎಂದಿಗೂ ಖಾಲಿಯಾಗಬಾರದು. ಖಾಲಿಯಾಗುವ ಮೊದಲೇ ಆ ವಸ್ತುಗಳನ್ನು ತಂದಿರಿಸಬೇಕು.
* ಮನೆಯ ಅತ್ಯಂತ ಮಹತ್ವದ ಅಂಶವೆಂದರೆ ಅದು ಆ ಮನೆಯ ದೇವರ ಕೋಣೆ. ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಳಶವನ್ನು ಇಡಬಾರದೆಂದು ಶಾಸ್ತ್ರಗಳು ಹೇಳುತ್ತವೆ. ಇದು ಅಶುಭದ ಸಂಕೇತ ಕಲಶದಲ್ಲಿ ಸ್ವಲ್ಪ ನೀರನ್ನು ಹಾಕಿಡಿ ನೀರಿನ ಪಾತ್ರೆಯಲ್ಲಿ ಯಾವಾಗಲೂ ಸ್ವಲ್ಪ ನೀರು ಗಂಗಾಜಲ ಮತ್ತು ತುಳಸಿ ಎಲೆಗಳು ಇರಬೇಕು. ಇದರಿಂದ ನಿಮ್ಮ ಕುಟುಂಬದ ಮೇಲೆ ದೇವರ ಅನುಗ್ರಹವಿರುತ್ತದೆ. ಮನೆಯಲ್ಲಿ ಸುಖ ಸಮೃದ್ಧಿಯು ನೆಲೆಸುತ್ತದೆ.
* ಅರಿಶಿಣ ಮಂಗಳಕರ ಸಂಕೇತವಿರುವ ವಸ್ತು ಹಾಗಾಗಿ ಮನೆಯಲ್ಲಿ ಎಂದಿಗೂ ಅರಿಶಿನ ಖಾಲಿಯಾಗಬಾರದು, ಅಡುಗೆಗೆ ಪೂಜೆಗೆ ಅರಿಶಿನವನ್ನು ಬಳಸಲಾಗುತ್ತದೆ ಅರಿಶಿಣ ಗುರುಗ್ರಹಕ್ಕೆ ಸಂಬಂಧಿಸಿದೆ. ಅರಿಶಿಣ ಕಾಲಿಯಾದರೆ ಗುರುವಿನ ದೋಷದಿಂದ ನಿಮಗೆ ಹಣದ ಕೊರತೆ ಶುರುವಾಗುತ್ತದೆ ಮತ್ತು ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ.
ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ ಕಾಣುತ್ತದೆ.!
ಅರಿಶಿನ ಖಾಲಿಯಾಗುತ್ತಿದೆ ಎಂದಾದಲ್ಲಿ ಅದಕ್ಕೂ ಮುನ್ನ ಹೊಸ ಅರಿಶಿನದ ಒಂದು ಅರಿಶಿಣದ ಡಬ್ಬ ತುಂಬಿಸಿ ಮನೆಯಲ್ಲಿ ಅರಿಶಿಣದ ಕೊರತೆಯು ಸಂಪತ್ತು ಮತ್ತು ಹಣದ ಕೊರತೆಯನ್ನು ಶುಭ ಕಾರ್ಯಗಳಲ್ಲಿ ಅಡ ಚಣೆಯನ್ನು ಸೂಚಿಸುತ್ತದೆ. ಅರಿಶಿಣವನ್ನು ಯಾರಿಂದಲೂ ಕೇಳಬೇಡಿ ಅಥವಾ ಯಾರಿಗೂ ಕೊಡಬಾರದು ಎನ್ನುವುದನ್ನು ನೆನಪಿನಲ್ಲಿಡಿ.
* ಅನ್ನಪೂರ್ಣ ದೇವಿಯು ಅಡುಗೆ ಮನೆಯಲ್ಲಿ ಇರಿಸಲಾಗಿರುವ ಅಕ್ಕಿ ಧಾನ್ಯಗಳ ಮೇಲೆ ತನ್ನ ಆಶೀರ್ವಾದವನ್ನು ನೀಡಿರುತ್ತಾಳಂತೆ ಅಕ್ಕಿಯನ್ನು ಅಡುಗೆ ಮನೆಯಲ್ಲಿ ಬಳಕೆಗಷ್ಟೇ ಇಟ್ಟು ಖಾಲಿಯಾದ ನಂತರ ಹೊಸ ಅಕ್ಕಿ ತುಂಬುತ್ತಾರೆ. ಇದನ್ನು ಮಾಡಬೇಡಿ ಅಕ್ಕಿ ಡಬ್ಬ ಕಾಲಿಯಾ ದರೆ ಆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು.
ಅಕ್ಕಿಯು ಶುಕ್ರನಿಗೆ ಸಂಬಂಧಿಸಿದೆ ಮತ್ತು ಶುಕ್ರನನ್ನು ಸಂಪತ್ತು ಬೆಳವಣಿಗೆ ಮತ್ತು ಬೌದ್ಧಿಕ ಸಂತೋಷಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಅಕ್ಕಿಯ ಅಂತ್ಯವೂ ಶುಕ್ರನ ದೋಷವನ್ನು ತೋರಿಸುತ್ತದೆ. ಇದರಿಂದ ಪತಿ-ಪತ್ನಿಯರ ಸಂಬಂಧವು ಕಹಿಯಾಗುತ್ತದೆ.
* ಕುಂಕುಮ ಹೆಣ್ಣಿನ ಸೌಭಾಗ್ಯದ ಸಂಕೇತ. ಹಾಗಾಗಿ ಕುಂಕುಮ ಎಂದಿಗೂ ಖಾಲಿಯಾಗಬಾರದು. ಮನೆಯಲ್ಲಿ ಸದಾ ಅರಿಶಿನ ಕುಂಕುಮ ಇರುವುದು ಸಕಾರಾತ್ಮಕತೆಯ ಮಂಗಳಕರವಾದ ಸಂಕೇತ.
ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!
* ಮನೆಯಲ್ಲಿ ಹಣ ಇಡುವ ಜಾಗ ತಿಜೋರಿ ಅಥವಾ ಪರ್ಸ್ ಯಾವಾ ಗಲೂ ಖಾಲಿಯಾಗಿರಬಾರದು. ಇದು ಬಡತನಕ್ಕೆ ಕಾರಣವಾಗುತ್ತದೆ ಅದಕ್ಕಾಗಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇರಿಸಿ ಶಾಸ್ತ್ರದ ಪ್ರಕಾರ ಸಂಪೂರ್ಣವಾಗಿ ಖಾಲಿಯಾಗಿದ್ದರೆ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಇದಲ್ಲದೆ ಅವುಗಳ ಜೊತೆ ಗೋಮತಿ ಚಕ್ರ ಶಂಕ ಇಡುವುದರಿಂದ ನಿಮ್ಮ ಶ್ರೇಯಸ್ಸು ಹೆಚ್ಚುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.