ಶನಿ ದೇವರು ಎಂದರೆ ಖಂಡಿತವಾಗಿ ಒಂದು ಕ್ಷಣ ಎಲ್ಲರೂ ಹೆದರುತ್ತಾರೆ. ಶನಿ ಕಾಟ, ಶನಿಪ್ರಭಾವ, ಶನಿಯ ವಕ್ರದೃಷ್ಟಿ, ಸಾಡೇಸಾತಿ ರಾಶಿಯಲ್ಲಿ ಇದ್ದರೆ ಅಥವಾ ಜನ್ಮ ಶನಿ, ಪಂಚಮ ಶನಿ, ಅಷ್ಟಮ ಶನಿ ನಡೆಯುತ್ತಿದ್ದರೆ ಕ’ಣ್ಣೀ’ರಿನಲ್ಲಿ ಕೈ ತೊಳೆಯಬೇಕೇನೋ ಎಂದು ಹೆದರುತ್ತಾರೆ ಆದರೆ ಅಸಲಿ ವಿಚಾರ ಬೇರೆ ಇದೆ.
ಶನಿ ದೇವರು ಹೀಗೆ ರಾಶಿಯಲ್ಲಿ ಪ್ರವೇಶ ಮಾಡಿ ಸಮಸ್ಯೆ ಕೊಡುತ್ತಿದ್ದಾರೆ ಎಂದುಕೊಳ್ಳುವುದು ತಪ್ಪು ಯಾಕೆಂದರೆ ಅವರು ನಮ್ಮ ಬದುಕಲು ಸರಿಪಡಿಸುತ್ತಿದ್ದಾರೆ ಎಂದು ಕೊಳ್ಳಬಹುದು. ನಾವು ಈ ಸಮಯದಲ್ಲಿ ಏನೆಲ್ಲ ಕಷ್ಟಗಳನ್ನು ಪಡುತ್ತೇವೆ ಅದೆಲ್ಲವೂ ಕೂಡ ನಮ್ಮ ಬದುಕಿನಲ್ಲಿ ನಡೆಯುವ ನಿಜವಾದ ಸಮಯ, ನಿಜವಾದ ಹೋರಾಟ.
ಈ ಸಮಯದಲ್ಲಿ ನಮ್ಮ ಬದುಕಿನಲ್ಲಿ ನಾವು ನಿರೀಕ್ಷೆ ಮಾಡದಷ್ಟು ಬದಲಾವಣೆಗಳು ನಡೆಯುತ್ತವೆ ಅವೆಲ್ಲವೂ ಕೂಡ ಒಳ್ಳೆಯದಕ್ಕೆ ಆಯಿತು ಎಂದು ಈ ಸಮಯ ಮುಗಿದ ಮೇಲೆ ನಮಗೆ ನಿಜವಾಗಿಯೂ ಮನವರಿಕೆ ಆಗುತ್ತದೆ.
ಈ ಸುದ್ದಿ ಓದಿ:- ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!
ಶನಿಯ ಪ್ರಭಾವಕ್ಕೆ ಒಳಗಾದವರು ಆ ಸಮಯದಲ್ಲಿ ನಾನಾ ರೀತಿಯ ನೋವುಗಳನ್ನು ಕೊಟ್ಟರು ಸಮಸ್ಯೆಗಳನ್ನು ಎದುರಿಸಿದರು ನಂತರದ ಜೀವನ ಮಾತ್ರ ನಿಜವಾದ ಜೀವನ ಎನ್ನುವ ರೀತಿ ಹೊಸ ಬದುಕನ್ನು ಆರಂಭಿಸುತ್ತಾರೆ. ಶನಿ ಕಾಟ ಮುಗಿದ ನಂತರ ಅವರ ಅರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಬಗೆಹರಿಯುವುದು ಮಾತ್ರವಲ್ಲದೆ ಅವರಿಗೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ಅರ್ಥವಾಗುತ್ತದೆ.
ಯಾರು ಒಳ್ಳೆಯವರು, ಯಾರು ಕೆಟ್ಟವರು ಎನ್ನುವುದೆಲ್ಲವೂ ಸರಿಯಾಗಿ ಅರ್ಥ ಆಗುತ್ತದೆ. ಒಂದರ್ಥದಲ್ಲಿ ಬದುಕು ಎನ್ನುವುದು ಏನು ಎಂದು ಶನಿಯು ಅರ್ಥ ಮಾಡಿಸಿರುತ್ತಾರೆ ಎಂದೇ ಹೇಳಬಹುದು. ಶನಿಯ ಪ್ರಭಾವವು ಯಾರನ್ನು ಕೂಡ ಬಿಡುವುದಿಲ್ಲ, ಇಷ್ಟಪಡುವ ರಾಶಿಗಳಿಗೂ ಕೂಡ ಶನಿಯ ಕಾಟ ತಪ್ಪುವುದಿಲ್ಲ. ಶನಿಗೆ ಬಹಳ ಇಷ್ಟವಾದ ರಾಶಿಗಳು ಯಾವವು? ಹೇಗೆ ಇವರು ಜೀವನದಲ್ಲಿ ಎಲ್ಲವನ್ನು ಎದುರಿಸುತ್ತಾರೆ ಗೊತ್ತಾ?
ಜೀವನದಲ್ಲಿ ಧೈರ್ಯವಾಗಿ ಇರುವವರು, ಧರ್ಮ ಮಾರ್ಗದಲ್ಲಿ ನಡೆಯುವವರು, ತನಗೆ ಕೆಟ್ಟದ್ದನ್ನು ಬಯಸಿದವರಿಗೆ ತಾಳ್ಮೆಯಿಂದ ಉತ್ತರ ಕೊಡುವವರು, ಏನೇ ಆದರೂ ಸೋಲು ಒಪ್ಪದವರು, ಕೆಟ್ಟದು ನಡೆದಾಗ ಸುಳ್ಳು ಅಪವಾದ ಬಂದಾಗ ತಾಳ್ಮೆಯಿಂದ ಇದ್ದು ತಮಗೆ ಆದ ಅವಮಾನಕ್ಕೆ ಸಾಕ್ಷಿ ಸಮೇತ ತಿರುಗೇಟು ನೀಡುವವರು, ತಮಗೆ ಎಷ್ಟೇ ಅ’ನ್ಯಾ’ಯ ಆದರೂ ತಾವು ಮಾತ್ರ ಸನ್ಮಾರ್ದಲ್ಲಿ ನ್ಯಾಯ ನೀತಿಯಿಂದ ಬದುಕುವವರು.
ಈ ಸುದ್ದಿ ಓದಿ:- ಮಹಿಳೆಯರ ದೇಹದ ಈ ಐದು ಭಾಗ ದೊಡ್ಡದಾಗಿದ್ದರೆ ಅವರು ಬಹಳ ಅದೃಷ್ಟಶಾಲಿಗಳು.!
ಇತರರಿಗೂ ಕೂಡ ಅದೇ ರೀತಿ ಬದುಕಲು ಪ್ರೇರೇಪಿಸುವವರು, ನಂಬಿದವರಿಗೆ ಎಂದೂ ಕೂಡ ದ್ರೋ’ಹ ಮಾಡದೆ ಇರುವವರು, ಸೋಲು ಒಪ್ಪದವರು ಜೀವನದಲ್ಲಿ ಕಷ್ಟಪಡುವವರು, ಯಾರಿಗೂ ಯಾವುದೇ ದ್ರೋ’ಹ ಮಾಡದೆ ಇರುವವರು ಬೇರೆಯವರ ಕ’ಷ್ಟ’ಕ್ಕೆ ನೆರವಾಗುವವರು ಈ ರೀತಿ ಯಾವುದೇ ಫಲಾಪೇಕ್ಷೆ ಬಯಸದೆ ಇನ್ನೊಬ್ಬರ ಕಷ್ಟಕ್ಕೆ ಕೈಜೋಡಿಸುವವರು ಇಂತಹವರನ್ನು ಕಂಡರೆ ಶನಿ ದೇವರಿಗೆ ಬಹಳ ಇಷ್ಟ.
ದ್ವಾದಶ ರಾಶಿಯಲ್ಲಿ ವೃಷಭ ರಾಶಿ, ತುಲಾ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯವರಿಗೆ ಈ ಮೇಲೆ ತಿಳಿಸಿದಂತಹ ಗುಣಗಳಲ್ಲಿ ಬಹುತೇಕ ಗುಣಗಳು ಇವೆ. ಇವರು ಜೀವನದಲ್ಲಿ ಸಾಧನೆ ಮಾಡುವುದು ತಡವಾದರೂ ಕೂಡ ನಾನಾ ಕ’ಷ್ಟಗಳು ಇವರನ್ನು ಕಾಡಿದರು ಕೂಡ ಶನಿಯ ಪ್ರೀತಿಯನ್ನು ಅಪಾರವಾಗಿ ಪಡೆದಿರುತ್ತಾರೆ, ಆದರೂ ಕೂಡ ಶನಿಯ ಪ್ರಭಾವ ಎದುರಿಸದೆ ವಿಧಿ ಇಲ್ಲ.
ಈ ರಾಶಿಯವರು ತಮ್ಮ ಬೆನ್ನ ಹಿಂದೆ ಯಾವಾಗಲೂ ಶನೇಶ್ವರ ಸ್ವಾಮಿ ಇದ್ದಾನೇ ಎಂದುಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು. ಪ್ರತಿನಿತ್ಯವೂ ಕೂಡ ಶನೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯನ್ನು ನೆನೆಯಬೇಕು ಇದರಿಂದ ಇನ್ನು ಹೆಚ್ಚಿನ ಬದಲಾವಣೆಗಳು ಇವರ ಬದುಕಿನಲ್ಲಿ ನಡೆಯುತ್ತವೆ ಇನ್ನು ಹೆಚ್ಚಿಗೆ ಎಲ್ಲವೂ ಒಳ್ಳೆಯದಾಗುತ್ತದೆ.