ಕೆಲವರಿಗೆ ಜೀವನದಲ್ಲಿ ಬಹಳ ಕ’ಷ್ಟ ಇರುತ್ತದೆ. ದೇವರು ನಮ್ಮ ಮೇಲೆ ಕಣ್ಣು ಬಿಡುತ್ತಿಲ್ಲ, ದೇವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಎಂದು ಹೇಳುವುದನ್ನು ನಾವು ಕೇಳಿರಬಹುದು. ಈ ರೀತಿ ದೇವರ ಅನುಗ್ರಹ ಇಲ್ಲದಿದ್ದರೆ ಜೀವನದಲ್ಲಿ ಕಷ್ಟ ಅನುಭವಿಸುವುದು ಕಟ್ಟಿಟ್ಟ ಬುತ್ತಿ. ವಿಪರೀತ ಸಾಲ ಆಗುತ್ತದೆ, ಉದ್ಯೋಗದಲ್ಲಿ ಸಮಸ್ಯೆ ಆಗುತ್ತದೆ, ಆರೋಗ್ಯ ಕೆಡುತ್ತದೆ, ಮನೆಯಲ್ಲಿ ಶಾಂತಿಯ ವಾತಾವರಣ ಇರುವುದಿಲ್ಲ.
ಮನೆಯ ಸದಸ್ಯರ ನಡುವೆ ಮ’ನ’ಸ್ತಾ’ಪ, ಮಾನಸಿಕ ಕಿರಿಕಿರಿ ಇನ್ನು ಮುಂತಾದ ಎಷ್ಟೋ ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ. ಇದೆಲ್ಲದರ ನಿವಾರಣೆ ಆಗಬೇಕು ಎಂದರೆ ನಮ್ಮ ಬಳಿ ಎಷ್ಟೇ ಹಣವಿದ್ದರೆ ಕೂಡ ಅದಕ್ಕಿಂತ ಹೆಚ್ಚಾಗಿ ದೈವ ಬಲ ಇರಬೇಕು. ಈ ರೀತಿ ದೈವ ಬಲ ಕಡಿಮೆ ಆಗುವುದಕ್ಕೂ ಕಾರಣಗಳು ಇರುತ್ತವೆ.
ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!
ಮೊದಲಿಗೆ ನಾವು ದೇವರಿಗೆ ತಪ್ಪಾಗಿ ನಡೆದುಕೊಂಡಿರುವುದು, ದೇವರಿಗೆ ಕಟ್ಟಿಕೊಂಡ ಹರಕೆಗಳನ್ನು ಮರೆಯುವುದು ಅಥವಾ ಮನೆಯಲ್ಲಿ ಹಿರಿಯರು ಪಾಲಿಸಿಕೊಂಡಿದ್ದ ದೈವ ಪೂಜೆಗಳನ್ನು ಮರೆತು ನಿರ್ಲಕ್ಷ ಮಾಡಿರುವುದು ಹೀಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಅನೇಕ ಪಾಪಗಳಿಂದಾಗಿ ದೇವರ ಅನುಗ್ರಹ ನಮ್ಮ ಮೇಲೆ ಆಗುವುದು ಕಡಿಮೆ ಆಗಿರುತ್ತದೆ. ಆಗ ನೀವು ಮತ್ತೆ ನಿಮ್ಮ ಕುಲದೇವರನ್ನು ಹಾಗೂ ಇಷ್ಟ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಈ ರೀತಿ ಮಾಡಲು ಹೆಚ್ಚೇನು ಶ್ರಮ ಪಡುವ ಅಗತ್ಯ ಇಲ್ಲ, ಕಠಿಣ ವ್ರತ ಮಾಡುವ ಅನುಕೂಲತೆ ಇಲ್ಲದಿದ್ದವರು ಸಣ್ಣದಾದ ಈ ಒಂದು ತಂತ್ರವನ್ನು ಮಾಡಿದರೆ ಸಾಕು. ಈಗ ನಾವು ಹೇಳುವ ಈ ತಂತ್ರವನ್ನು ಅನುಸರಿಸಿ ಸಮಸ್ಯೆ ಇಂದ ಹೊರಬಂದ ಸಾಕಷ್ಟು ಜನರ ಉದಾಹರಣೆಗಳು ಇವೆ. ಈ ತಂತ್ರವನ್ನು ಮಾಡಲು ನಿಮಗೆ ಬೇಕಾಗಿರೋದು ಐದು ರೂಪಾಯಿ ನಾಣ್ಯ ಹಾಗೂ ಉಗುರು ಭೂತಾಳೆ ಕಾಯಿ.
ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!
ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಇದು ಸಿಗುತ್ತದೆ. ಕೆಲವೊಂದು ಪ್ರಾಂತ್ಯಗಳಲ್ಲಿ ಇದನ್ನು ಚೋಳೆಕಾಯಿ ಗರುಡ ಕಾಯಿ ಎಂದು ಕೂಡ ಕರೆಯುತ್ತಾರೆ. ಇದನ್ನು ಮನೆಗೆ ತನ್ನಿ, ಒಂದು ದಿನ ನಿಮ್ಮ ಮನೆಯನ್ನು ಶುದ್ಧ ಮಾಡಿಕೊಂಡು ಮನೆದೇವರ ಹೆಸರು ಹೇಳಿ ಮನೆಯಲ್ಲಿ ಪೂಜೆ ಮಾಡಿ ನಂತರ ಒಂದು ಮುಷ್ಟಿಯಷ್ಟು ನಿಮ್ಮ ಕೈಯಲ್ಲಿ ಉಗುರು ಭೂತಾಳೆ ಕಾಯಿ ತೆಗೆದುಕೊಂಡು ಒಂದು ಕೆಂಪು ಬಟ್ಟೆಯಲ್ಲಿ ಹಾಕಿ ಅದಕ್ಕೆ ಐದು ಐದು ರೂಪಾಯಿ ನಾಣ್ಯಗಳನ್ನು ಹಾಕಿ ಒಂದು ದಿನ ಪೂರ್ತಿ ನಿಮ್ಮ ದೇವರ ಕೋಣೆಯಲ್ಲಿ ಇಡಿ.
ನಂತರ ಮರುದಿನ ನಿಮ್ಮ ಇಷ್ಟದೈವದ ದೇವಸ್ಥಾನಕ್ಕೆ ಅಥವಾ ಕುಲದೇವರ ದೇವಸ್ಥಾನಕ್ಕೆ ಹೋಗಿ ಸಾಧ್ಯವಾಗದಿದ್ದರೆ ನಿಮ್ಮ ಮನೆಯ ಅಕ್ಕಪಕ್ಕ ಇರುವ ಯಾವುದೇ ದೇವಾಲಯಕ್ಕೆ ಹೋಗಿ ನೀವು ಹಾಕಿರುವ ನಾಣ್ಯಗಳನ್ನು ಹಾಗೂ ಐದು ಉಗುರು ಭೂತಾಳೆ ಕಾಯಿಯನ್ನು ಅರ್ಪಿಸಿ ಉಳಿದದ್ದನ್ನು ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ.
ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ವರ್ಷಗಳ ಕಾಲ ಇಟ್ಟುಕೊಳ್ಳಬೇಕು. ಹಾಗೂ ಪ್ರತಿನಿತ್ಯ ಮನೆಯಲ್ಲಿ ದೇವರ ಪೂಜೆ ಮಾಡುವಾಗ ಇದಕ್ಕೂ ಕೂಡ ಪೂಜೆ ಮಾಡಿ ಆಗ ನಿಧಾನವಾಗಿ ನೀವು ಮಾಡಿಕೊಂಡಿದ್ದ ಹರಕೆಗಳು ನೆನಪಿಗೆ ಬರುತ್ತದೆ, ತ’ಪ್ಪುಗಳ ಮನವರಿಕೆಯಾಗುತ್ತದೆ. ದೇವರ ಅನುಗ್ರಹ ಕೂಡ ನಿಮ್ಮ ಮೇಲೆ ಆಗಲು ಶುರು ಆಗುತ್ತದೆ. ನಿಮ್ಮ ಯಾವುದೇ ದೋಷಗಳು ಇದ್ದರೂ ಕೂಡ ಅದೆಲ್ಲಾ ಪರಿಹಾರವಾಗಿ ನಿಮ್ಮ ಗ್ರಹಚಾರವು ಕಡಿಮೆ ಆಗುತ್ತದೆ ಮತ್ತು ಜೀವನದಲ್ಲಿ ಒಳ್ಳೆ ರೀತಿಯ ಬದಲಾವಣೆಗಳು ಕಂಡುಬರುತ್ತವೆ.