ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯವೂ ಕೂಡ ಪ್ರಸ್ತಾಪವಾಗುತ್ತಿರುವ ಸಾಮಾನ್ಯ ವಿಚಾರ ಎಂದರೆ ಅದು ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಕುರಿತು. ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ, ಕಾಂಗ್ರೆಸ್ ಪಕ್ಷವು (Congress) ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡಿದರೆ.

ರಾಜ್ಯದ ಜನತೆಗಾಗಿ ಬಡತನ ನಿರ್ಮೂಲನೆಗಾಗಿ, ನಿರುದ್ಯೋಗ ನಿರ್ಮಾಲನೆ ಮತ್ತು ಲಿಂಗ ಸಮಾನತೆ ಹಾಗೂ ಮಹಿಳೆಯರ ಆರ್ಥಿಕ ಸಮನತೆ ಕಾಯ್ದುಕೊಂಡು, ಕತ್ತಲೆ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಸಲುವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪೋಷಿಸಿತ್ತು. ಅದೇ ಪ್ರಕಾರವಾಗಿ ಬಹುಮತ ಬೆಂಬಲದೊಂದಿಗೆ ಗೆದ್ದು ಸರ್ಕಾರ ಸ್ಥಾಪನೆ ಮಾಡಿದ ಮೇಲೆ ಅನ್ನಭಾಗ್ಯ ಯೋಜನೆಯಡಿ (Annabhagya) ಪಡಿತರವನ್ನು 10 ಕೆಜಿಗೆ ಏರಿಸಿದೆ.

ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!

ಶಕ್ತಿ ಯೋಜನೆಯಡಿ (Shakthi yojane) ಮಹಿಳೆಯರಿಗೆ ರಾಜ್ಯಾದಾದ್ಯಂತ KSRTC ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ, ಗೃಹಜ್ಯೋತಿ (Gruhajyothi) ಯೋಜನೆಯಡಿ ಪ್ರತಿ ಕುಟುಂಬಕ್ಕೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿ ಗೃಹಲಕ್ಷ್ಮೀ (Gruhalakshmi) ಯೋಜನೆಗೆ ಕುಟುಂಬ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ಸಹಾಯಧನವನ್ನು ನೀಡುತ್ತಿದೆ.

ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಜನತೆಗೆ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುವುದರ ಜೊತೆಗೆ ಯುವನಿಧಿ (Yuvanidhi) ಯೋಜನೆಯಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ 3000ರೂ. ಡಿಪ್ಲೋಮೋ ಪದವಿ ಪಡೆದ ವಿದ್ಯಾರ್ಥಿಗಳಿಗೆ 1500ರೂ. ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳವರೆಗೆ ನೀಡುವುದಾಗಿ ಹೇಳಿದೆ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ಈ ಯುವನಿಧಿ ಯೋಜನೆಯು ಡಿಸೆಂಬರ್ ನಲ್ಲಿ ಜಾರಿಗೆ ಬರುತ್ತದೆ ಎನ್ನುವ ಸೂಚನೆಯನ್ನು ಸಹ ಸರ್ಕಾರ ನೀಡಿದೆ ಈ ಯೋಜನೆಗಳಿಗೆ ಇಂದಿಗೂ ಕೂಡ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಸರ್ಕಾರದ ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಜನಸಾಮಾನ್ಯರು ಮುಗಿ ಬೀಳುತ್ತಿದ್ದಾರೆ.

ಈ ಪ್ರಯೋಜನಗಳನ್ನು ಪಡೆಯಲು ಬೇಕಾಗಿರುವ ದಾಖಲೆಗಳಲ್ಲಿ ಆಗಿರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಲು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಬಹಳ ವಿಶೇಷವಾದ ಮತ್ತೊಂದು ವಿಚಾರವೇನೆಂದರೆ, ರಾಜ್ಯವು ಬಡ ಹಾಗೂ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತಂದರು ಕೂಡ ಈ ಹಿಂದಿನ ಯೋಜನೆಗಳಂತೆ ಈ ಗ್ಯಾರೆಂಟಿ ಯೋಜನೆಗಳಿಗೂ ಸಹ ಉಳ್ಳವರು ಕೈ ಚಾಚುತ್ತಿದ್ದಾರೆ.

ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

ಇದೆಲ್ಲದರ ನಡುವೆ ಇಂತಹವರಿಗೆ ಮಾದರಿಯಾಗುವಂತಹ ಕೆಲಸವನ್ನು ನಮ್ಮ ರಾಜ್ಯದ ವಯೋವೃದ್ಧೆಯೊಬ್ಬರು ಮಾಡಿದ್ದಾರೆ. ಈ ಅಜ್ಜಿ ಮಾಡಿರುವ ನಿರ್ಧಾರದಿಂದಾಗಿ ಇಂದು ಅವರು ಎಲ್ಲರ ಬಾಯಿಯಲ್ಲೂ ಕೂಡ ನಲಿದಾಡುವ ಹೆಸರಾಗಿದ್ದಾರೆ. ಕೊಪ್ಪಳ ಜಿಲ್ಲೆಯ (Koppala district) ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆ ಶಿವಮ್ಮ ಸಜ್ಜನ್ (Shivamma Sajjan) ಅವರು ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆ ಸಹಾಯಧನ ತಮಗೆ ಬೇಡ ಎಂದು ನಯನಾಗಿ ತಿರಸ್ಕರಿಸಿದ್ದಾರೆ(refused Gruhalakshmi Scheme amount).

ದೇವರು ನನಗೆ ಎಲ್ಲವನ್ನೂ ಕರುಣಿಸಿದ್ದಾನೆ. ಇರುವ ಸವಲತ್ತಿನಲ್ಲೇ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಹೀಗಾಗಿ ನನಗೆ ಸರ್ಕಾರದ ಗೃಹಲಕ್ಷ್ಮಿ 2 ಸಾವಿರ ರೂಪಾಯಿ ಬೇಡ ಎಂದು ಸ್ವಾಭಿಮಾನದ ನುಡಿಗಳನ್ನು ನುಡಿದಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ನಿರ್ಧಾರದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಸರಾಗಿದ್ದರು. ಅದುವರೆಗೂ ಕೂಡ ಕೂಡಿಟ್ಟಿದ್ದ ಹಣವನ್ನು ಗ್ರಾಮದ ಕೆರೆಯ ಜೀರ್ಣೋದ್ಧಾರಕ್ಕೆ ನೀಡಿ ಸಾಮಾಜಿಕ ಹೊಣೆಗಾರಿಕೆ ಮೆರೆದಿದ್ದರು.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಶಿವಮ್ಮ ಸಜ್ಜನ್ ನಿರ್ಧಾರವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸೆಪಡುವ ಶ್ರೀಮಂತ ವರ್ಗದವರ ನಡುವೆ ಕೈ ತುಂಬಾ ಸರ್ಕಾರದ ಸಂಬಳ ಇದ್ದರೂ ಲಂ’ಚಕ್ಕೆ ಆಸೆ ಪಡುವ ಅಧಿಕಾರಿಗಳ ನಡುವೆ ಅಜ್ಜಿಯ ಈ ನಿರ್ಧಾರ ಎಲ್ಲರೂ ಮೆಚ್ಚುವಂತಿದೆ.

Leave a Comment