ಮನುಷ್ಯನಿಗೆ ಮಾನವ ಸಹಜ ನೂರೆಂಟು ಬಗೆಯ ಸಮಸ್ಯೆ ಬರುತ್ತದೆ. ಆತ ಈ ಸಮಸ್ಯೆಗಳನ್ನೆಲ್ಲ ಪರಿಹರಿಸಿಕೊಂಡು ಸಂತೋಷವಾಗಿ ಬದುಕಬೇಕು ಎಂದೇ ಇಚ್ಛೆ ಪಡುತ್ತಾನೆ ಆದರೂ ಇವೆಲ್ಲವೂ ಆತನನ್ನು ಮಾನಸಿಕವಾಗಿ ಚಿಂತೆಗೀಡು ಮಾಡಿ ದೈಹಿಕ ಆರೋಗ್ಯ ಕೆಡಿಸುತ್ತವೆ. ಈ ರೀತಿ ಆತನ ಕೈಮೀರಿ ಹೋದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆತ ಶತ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಯದೆ ಇದ್ದಾಗ ಖಂಡಿತವಾಗಿಯೂ ಇರುವ ಒಂದೇ ಒಂದು ಬೆಳಕು ಎಂದರೆ ಅದು ಭಗವಂತನ ಅನುಗ್ರಹ.
ಯಾಕೆಂದರೆ ದೇವರು ಕಣ್ತೆರದು ನೋಡಿದರೆ ಮಾತ್ರ ಕೊರಡು ಕೊನರಾಗುವುದು, ಬರಡು ಹಯನಾಗುವುದು ಇಂತಹ ಸಮಯದಲ್ಲಿ ಹಿರಿಯರ ಅಣತಿ ಮೇರೆಗೆ ಕುಲದೇವರ ಗ್ರಾಮದೇವರ ಸೇವೆ ಮಾಡುತ್ತಾನೆ. ಇದೆಲ್ಲದರ ಜೊತೆಗೆ ವಿಶೇಷವಾದ ಶಕ್ತಿ ದೇವತೆಗಳ ಅನುಗ್ರಹಕ್ಕಾಗಿ ಹೋಮ ಹವನ ವ್ರತಾಚರಣೆ ಮಾಡಿ ಪ್ರಾರ್ಥಿಸುವ ರೂಢಿಯು ಇದೆ.
ಇನ್ನು ಕೆಲವು ಸಮಯದಲ್ಲಿ ಗುರುಗಳು ಪುಣ್ಯಕ್ಷೇತ್ರಗಳ ಯಾತ್ರೆ ಕೈಕೊಂಡು ಕೆಲವು ದೇವರಗಳ ದರ್ಶನ ಪಡೆಯಲು ಮತ್ತು ಆ ಸನ್ನಿಧಿಯಲ್ಲಿ ಕೆಲಸಮಯ ಕಳೆಯಲು ಸೂಚಿಸುತ್ತಾರೆ. ಆಗ ಖಂಡಿತ ಸಮಸ್ಯೆ ಬಗೆ ಹರಿದು ನೆಮ್ಮದಿ ದೊರೆಯುತ್ತದೆ. ಇನ್ನು ಕೆಲವರು ಈ ರೀತಿ ಯಾರು ಏನು ಹೇಳಿದರೂ ಎಲ್ಲವನ್ನು ಮಾಡಿದರು ನಮಗೆ ಯಾವುದೇ ಫಲ ದೊರೆಯಲಿಲ್ಲ ಕಷ್ಟ ಕೊನೆ ಆಗಲಿಲ್ಲ ನಮ್ಮ ಮೇಲೆ ಯಾವ ದೇವರು ಕಾರಣ ತೋರುವುದಿಲ್ಲ ಎಂದು ಕ’ಣ್ಣೀ’ರಿಡುತ್ತಾರೆ.
ಹೀಗೆ ಅನುಮಾನ ಪಡದೆ ಇಂದು ನಾವು ಹೇಳುವ ಈ ಒಂದು ವಿಶೇಷ ದೇವಸ್ಥಾನಕ್ಕೆ ನಂಬಿಕೆಯಿಂದ ಭೇಟಿ ಕೊಡಿ ನಂತರ ನಡೆಯುವ ಚಮತ್ಕಾರ ನಿಮ್ಮ ಬದುಕನ್ನು ಬದಲಾಯಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ವಡಂಬೈಲು ಪದ್ಮಾವತಿ ಸನ್ನಿಧಾನವಿದೆ. ಸ್ಥಳ ಹಿನ್ನೆಲೆ ಹೇಳುವುದಾದರೆ ಈ ಭಾಗದಲ್ಲಿ ಅನೇಕ ಶಿವಾಲಯಗಳು ಹಾಗೂ ಶಕ್ತಿ ಪೀಠಗಳು ಇವೆ.
ಈ ಮದ್ಯೆ ತನ್ನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದು ಕನಸಿನಲ್ಲಿ ಬಂದು ಹೇಳಿ ತನ್ನ ಇಚ್ಛೆಯಿಂದ ದೇವಾಲಯವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ವಡಂಬೈಲು ಪದ್ಮಾವತಿ. ಈ ದೇವಸ್ಥಾನದಲ್ಲಿ ವಡಂಬೈಲು ಪದ್ಮಾವತಿ ದೇವಿಯ ಪೂಜೆ ಹಾಗೂ ಆರಾಧನೆ ಪ್ರತಿನಿತ್ಯವೂ ನಡೆಯುತ್ತದೆ. ಈ ಸ್ಥಳದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿ ಹೋಗಿ ಪೂಜೆ ಮಾಡಿದರೆ ಸರ್ಪ ದೋಷ ಪರಿಹಾರ ಆಗುತ್ತದೆ ಎನ್ನುವ ಖ್ಯಾತಿ ಇದೆ.
ಈ ದೇವಸ್ಥಾನದಲ್ಲಿ ನಾಗರ ದೋಷವನ್ನು ಪರಿಹಾರ ಮಾಡುವ ಏಳು ತಲೆಯ ಸರ್ಪ ಹೆಡೆ ಬಿಚ್ಚಿದೆ ಮೂರ್ತಿ ಕೂಡ ಪ್ರತಿಷ್ಠಾಪನೆಯಾಗಿದೆ. ಈ ದೇವಸ್ಥಾನ ನಿರ್ಮಾಣ ಆದ ದಿನದಿಂದಲೂ ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಗೆ ಬಂದು ತಮ್ಮ ಇಚ್ಚೆಯನುಸಾರ ಕಷ್ಟದ ಅನುಗುಣವಾಗಿ ಹರಕೆಯನ್ನು ಕಟ್ಟಿಕೊಂಡರೆ ತಮ್ಮ ಸಮಸ್ಯೆ ಇಷ್ಟೇ ದಿನದಲ್ಲಿ ಬಗೆ ಹರಿಯಲಿದೆ ಎಂದು ತಿಳಿಸಿ ಇಲ್ಲಿ ಹುತ್ತದ ಮಣ್ಣನ್ನು ನೀಡುತ್ತಾರೆ.
ಅದನ್ನು ನೀವು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾ ಬಂದಲ್ಲಿ ನಿಮ್ಮ ಕ’ಷ್ಟಗಳೆಲ್ಲ ಅವರು ಕೊಟ್ಟ ವಾಯಿದೆಯೊಳಗೆ ಪರಿಹಾರವಾಗಲಿದೆ. ದೇವಸ್ಥಾನಕ್ಕೆ ಬಂದ ಯಾರೇ ಆದರೂ ಅಲ್ಲೇ ಇರಬೇಕು, ಎನ್ನುವ ರೀತಿ ಇದೆ ದೇವಸ್ಥಾನದ ವಾತಾವರಣ. ಭಕ್ತಾದಿಗಳಿಗೆ ಅನುಕೂಲವಾಗಲು ಅನ್ನ ಸಂತರ್ಪಣೆ ವ್ಯವಸ್ಥೆ ಕೂಡ ಮಾಡಲಾಗಿದೆ. ವಡಂಬೈಲು ಪದ್ಮಾವತಿ ಮತ್ತು ನಾಗದೇವರ ಆಶೀರ್ವಾದದಿಂದ ಖಂಡಿತವಾಗಿಯೂ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಹರಿಯಲಿದೆ ನಂಬಿಕೆಯಿಂದ ಹೋಗಿ ಬನ್ನಿ.