
ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಧನುಶ್ರೀ.
ಟಿಕ್ ಟಾಕ್ ಎನ್ನುವ ಜನಪ್ರಿಯ ಮನೋರಂಜನ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಅನೇಕ ಜನರಿಗೆ ಸೆಲೆಬ್ರಿಟಿ ಪಟ್ಟ ತಂದು ಕೊಟ್ಟಿತ್ತು. ಈ ಸಾಲಿನಲ್ಲಿ ನಿಖಿಲ್ ನಿಕಿತಾ, ಅಲ್ಲು ರಘು, ಸುಶ್ಮಿತಾ, ಸೋನು ಶ್ರೀನಿವಾಸ್ ಗೌಡ, ಭೂಮಿಕ ಬಸವರಾಜು, ಶಮಂತ್ ಬ್ರೋ, ಧನುಶ್ರೀ ಇನ್ನೂ ಅನೇಕರು ಇದ್ದಾರೆ.
ಕರ್ನಾಟಕದ ಅನೇಕ ಟಿಕ್ ಟಾಕ್ ಪ್ರತಿಭೆಗಳಿಗೆ ಕಿರುತೆರೆ ಕಾರ್ಯಕ್ರಮಗಳು, ಧಾರಾವಾಹಿಗಳು ಹಾಗೂ ಸಿನಿಮಾಗಳನ್ನು ಅಭಿನಯಿಸುವ ಅವಕಾಶ ದೊರಕಿದ್ದು ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂಬರ್ ಒನ್ ಸೀರಿಯಲ್ ಜೊತೆ ಜೊತೆಯಲಿ ಖ್ಯಾತಿಯ ನಾಯಕಿ ಮೇಘ ಶೆಟ್ಟಿ ಕೂಡ ಹೀಗೆ ಅವಕಾಶ ಪಡೆದವರು ಎಂದು ಉದಾಹರಿಸಬಹುದು.
ಮತ್ತು ರಿಯಾಲಿಟಿ ಶೋಗಳ ಬಿಗ್ ಶೋ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಟಿಕ್ ಟಾಕ್ ಸ್ಟಾರ್ ಗಳಿಗೆ ಅವಕಾಶ ಕೊಡಲಾಗಿದ್ದು ಈ ಕೋಟಾದಲ್ಲಿ ಶಮಂತ್ ಮತ್ತು ಧನಶ್ರೀ ಅವರು ಕಳೆದ ಸೀಸನ್ ನಲ್ಲಿ ಕಂಟೆಸ್ಟೆಂಟ್ ಆಗಿ ಭಾಗಿಯಾಗಿದ್ದರು. ಟಿಕ್ ಟಾಕ್ ಬ್ಯಾನ್ ಆದ ಮೇಲೆ ಎಲ್ಲರೂ ಕೂಡ ಬೇರೆ ಆಪ್ ಗಳ ಮೂಲಕ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.
ಅದರಲ್ಲಿ ಇನ್ಸ್ಟಾಗ್ರಾಮ್ ಎನ್ನುವ ಆಪ್ ಎಲ್ಲರಿಗೂ ಇಷ್ಟವಾಗಿದ್ದು ಅದರಲ್ಲೂ ಸಹ ರೀಲ್ಸ್ ಮತ್ತು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಈಗ ಇದೇ ಟಿಕ್ ಟಾಕ್ ಪ್ರತಿಭೆ ಧನುಶ್ರೀ ಅವರ ಇನ್ಸ್ಟಾಗ್ರಾಂ ಖಾತೆಯಿಂದ ಹೊಸಬಗೆಯ ವಿಡಿಯೋ ಒಂದು ಪೋಸ್ಟ್ ಆಗಿದೆ. ಕೆಲವು ಕಹಿ ಘಟನೆಗಳ ಫೋಟೋಗಳನ್ನು ವೀಡಿಯೋ ಮಾಡಿ ಅದಕ್ಕೆ ಹಾಡು ಮತ್ತು ಆ ಸಂದರ್ಭವನ್ನು ನೆನಪನ್ನು ಸೇರಿಸಿ ಬರೆದು ಹಂಚಿಕೊಂಡಿದ್ದಾರೆ.
ಅವರು ಬರೆದಿರುವ ಸಾಲುಗಳು ಈ ರೀತಿ ಇವೆ. ನಾನು ಈ ರೀತಿಯ ಪೋಸ್ಟ್ ಹಾಕುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಬಹಳ ದಿನಗಳಿಂದ ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಹಾಳಾಗಿದೆ ಇಂತಹ ದಿನಗಳಲ್ಲಿ ನನಗೆ ಕರೆ ಮಾಡಿ ಸಂದೇಶ ಕಳುಹಿಸಿ ವಿಚಾರಿಸಿಕೊಂಡ ಎಲ್ಲರಿಗೂ ಧನ್ಯವಾದಗಳು. ಮುಖ್ಯವಾಗಿ ನನ್ನ ಕುಟುಂಬದ ಎಲ್ಲರಿಗೂ ಬಹಳ ಧನ್ಯವಾದಗಳು.
ಈ ರೀತಿ ಪೋಸ್ಟ್ ಮಾಡಲು ಕಾರಣ ಏನೆಂದರೆ, ಇದೇ ರೀತಿ ಅನೇಕರು ಅನೇಕ ರೀತಿಯ ಸಮಸ್ಯೆಗಳಲ್ಲಿ ಪ್ರತಿನಿತ್ಯ ಹೋರಾಡುತ್ತಲೇ ಇರುತ್ತದೆ. ಇವುಗಳನ್ನೆಲ್ಲ ಧೈರ್ಯದಿಂದ ದಾಟಬೇಕು ಎನ್ನುವ ಶಕ್ತಿ ಬರಲಿ ಎಂದು ಅಷ್ಟೇ ಎಂದು ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್ ಮಾಡಿದ ವಿಡಿಯೋಗಳಲ್ಲಿ ಅವರು ಹಾಸ್ಪಿಟಲೈಝ್ ಆಗಿರುವ ಫೋಟೋಗಳು, ಅವರ ಅಮ್ಮ ಪಕ್ಕದಲ್ಲಿ ಕುಳಿತು ಆರೈಕೆ ಮಾಡುತ್ತಿರುವ ಫೋಟೋಗಳಿವೆ.
ಆ ಫೋಟೋಗಳ ಜೊತೆ ನಾನು ಬದುಕೋದೇ ಇಲ್ಲವೇನೋ ಎನ್ನುವ ನಂಬಿಕೆಯನ್ನು ಕಳೆದುಕೊಂಡೆ ಎಂದು ಸಹ ಬರೆದಿದ್ದಾರೆ ಜೊತೆಗೆ ತನ್ನ ನೆಚ್ಚಿನ ಪೆಟ್ ಪೋಕೋ ಮಾನಸಿಕ ಆರೋಗ್ಯ ಸುಧಾರಿಸಿದ್ದು, ಇವೆಂಟ್ ಒಂದರಲ್ಲಿ ಬದಲಾವಣೆಗಾಗಿ ಭಾಗಿಯಾಗಿದ್ದು ಮತ್ತೆ ಲಿಪ್ಸ್ಟಿಕ್ ಹಚ್ಚಿ ನಗು ಚೆಲ್ಲಲು ಪ್ರಯತ್ನಿಸಿದ್ದು ಎಲ್ಲವನ್ನು ಸಹ ಬರೆದುಕೊಂಡಿದ್ದಾರೆ. ಧನುಶ್ರೀ ಅವರು ಸಾಮಾನ್ಯ ಕುಟುಂಬದ ಹುಡುಗಿ ಆಗಿದ್ದರೂ ಕೂಡ ಎಲ್ಲರಂತೆ ಸಾಮಾನ್ಯರಾಗಬಾರದು ಎಂದು ಎಂಎನ್ಸಿ ಉದ್ಯೋಗ ತೊರೆದು ಸ್ವಂತ ದುಡಿಮೆ ಮಾಡಬೇಕು ಎಂದುಕೊಂಡಾಗ ಸಿಕ್ಕಿದ್ದು ಈ ಟಿಕ್ ಟಾಕ್ ಎನ್ನುವ ವೇದಿಕೆ.
ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ವಿಶೇಷ ವಿಡಿಯೋಗಳಿಂದ ಅನೇಕ ಸಂಖ್ಯೆಯ ಪಾಲವರ್ಸ್ ಗಳನ್ನು ಪಡೆದಿದ್ದರು. ಇವರ ಅಭಿಮಾನಿಗಳು ಇವರನ್ನು ಕೋಟಿಗೊಬ್ಬ 2 ಸಿನಿಮಾ ಖ್ಯಾತಿಯ ನಿತ್ಯ ಅವರ ಜೊತೆ ಹೋಲಿಕೆ ಮಾಡುತ್ತಾರೆ. ಬ್ಯೂಟಿ ಜೊತೆ ಟ್ಯಾಲೆಂಟ್ ಕೂಡ ಹೊಂದಿರುವ ಇವರು ಆದಷ್ಟು ಬೇಗ ಸಮಸ್ಯೆಯಿಂದ ಹೊರ ಬರಲಿ ಅವರ ಆಸೆಯಂತೆ ಬಣ್ಣದ ಪ್ರಪಂಚಕ್ಕೆ ಆದಷ್ಟು ಬೇಗ ಕಾಲಿಡಲಿ ಎಂದು ಹರಸೋಣ.